ಸಖಿ ನಿನ್ನ ಊರು ನನಗೆ ಇಷ್ಟ…!

30 ಮೇ 11

(ಇನ್ನೊಂದು ಭಾವಾನುವಾದದ ಯತ್ನ)

ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಂದ್ ಇನ್ಮೇಲೆ, ನನ್ನೂರಿಗ್ ಇನ್ಮೇಲೆ,
ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ ನಿನ್ಮೇಲೆ

ನವಿಲಿನ ಕಾಲಿಗೆ ಗೆಜ್ಜೆಯ ತೊಡಿಸಿ ಕುಣಿಸೋ ಆಸೆಯು ನನಗೆ
ಕೋಗಿಲೆಗೊಂದು ಹೂವಿನ ಹಾರ ತೊಡಿಸೋ ಆಸೆಯು ನನಗೆ
ಹಕ್ಕಿಗಳು ಮನಸ್ಸು ಮಾಡಿ ಗಟ್ಟಿ, ತಮ್ಮ ಗೂಡು ಕಟ್ಟಿ, ಇರ್ತಾವ್ ಇಲ್ಲೇನೆ, ಇನ್ನು ಇರ್ತಾವ್ ಇಲ್ಲೇನೇ…

||ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಗ್ ಬಂದ್ಮೇಲೆ, ನನ್ನೂರಿಗಿನ್ಮೇಲೆ
ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ ನಿನ್ಮೇಲೆ||

ಬಣ್ಣ ಬಣ್ಣದ ನಗುತಿಹ ಹೂಗಳು ಹೂವಿನಾ ಹಾಗೆಯೇ ಜನರೂ
ಈ ನಿನ್ನ ಊರಿಗೆ ಬಂದರೆ ಸಾಕು, ಮರಳಿ ಹೋಗೋರು ಯಾರು
ಮನ ಸೂರೆ ಮಾಡುವಂತ ಝರಿಯು, ಹರಿಯುತಿಹ ನದಿಯು, ಈ ನೋಟ ಇನ್ನೆಲ್ಲಿ, ಈ ನೋಟ ಇನ್ನೆಲ್ಲಿ…

||ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಗ್ ಬಂದ್ಮೇಲೆ, ನನ್ನೂರಿಗಿನ್ಮೇಲೆ
ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ ನಿನ್ಮೇಲೆ||

ಪರಿಚಯ ಇಲ್ಲದ ಪರವೂರ ಜನರ ಪ್ರೀತಿಸೋದಿಲ್ಲಾ ಯಾರೂ
ಎಂದಿನದೋ ನಮ್ಮ ಈ ಅನುಬಂಧ ಅಪರಿಚಿತರಲ್ಲ ನಾವ್ಯಾರೂ
ಖುಷಿ ಖುಷಿ ಗುಂಗಿನಲ್ಲೇ ಜನರು, ಸದಾ ನುಡಿವರಿವರು, ಮನದ ಮಾತನ್ನೇ, ತಮ್ಮನದ ಮಾತನ್ನೇ…

||ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಗ್ ಬಂದ್ಮೇಲೆ, ನನ್ನೂರಿಗಿನ್ಮೇಲೆ
ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ ನಿನ್ಮೇಲೆ||
*********************

ಮೂಲ ಗೀತೆ:
ಚಿತ್ರ: ಚಿತ್ ಚೋರ್
ಗಾಯಕರು: ಜೇಸುದಾಸ್
||ಗೋರಿ ತೇರಾ ಗಾಂವ್ ಬಡಾ ಪ್ಯಾರಾ ಮೈ ತೋ ಗಯಾ ಮಾರಾ ಆಕೆ ಯಹಾಂ ರೇ ಆಕೆ ಯಹಾಂ ರೇ
ಉಸ್ ಪರ್ ರೂಪ್ ತೇರಾ ಸಾದಾ, ಚಂದ್ರಮಾ ಜೋ ಆದಾ, ಆದಾ ಜಂವಾ ರೇ||

ಜೀ ಕರ‍್ ತಾ ಹೈ, ಮೋರ್ ಕೇ ಪಾಂವ್ ಮೆ ಪಾಯಲಿಯಾಂ ಪೆಹ್‍ನಾ ದೂಂ
ಕುಹು ಕುಹು ಗಾತೀ ಕೋಯಲೆಯಾ ಕೋ ಫೂಲೋಂ ಕಾ ಗೆಹ್‍ನಾ ದೂಂ
ಯಂಹೀ ಘರ್ ಅಪ್ನ ಬನಾನೇ ಕೋ ಪಂಚಿ ಕರೇ ದೇಖೋ ತಿನ್‍ಕೇ ಜಮಾ ರೇ ತಿನ್‍ಕೇ ಜಮಾರೇ

||ಗೋರಿ ತೇರಾ ಗಾಂವ್ ಬಡಾ ಪ್ಯಾರಾ ಮೈ ತೋ ಗಯಾ ಮಾರಾ ಆಕೆ ಯಹಾಂ ರೇ ಆಕೆ ಯಹಾಂ ರೇ
ಉಸ್ ಪರ್ ರೂಪ್ ತೇರಾ ಸಾದಾ, ಚಂದ್ರಮಾ ಜೋ ಆದಾ, ಆದಾ ಜಂವಾ ರೇ||

ರಂಗ್ ಬಿರಂಗೀ ಫೂಲ್ ಖಿಲೇ ಹೈಂ ಲೋಗ್ ಭೀ ಫೂಲೋಂ ಜೈಸೇ
ಆಜಾಯೇ ಇಕ್ ಬಾರ್  ಯಹಾಂ ಜೋ ಜಾಯೇಗಾ ಫಿರ್  ಕೈಸೇ
ಝರ್ ಝರ್ ಝರ‍್ತೇ ಹುವೇ ಝರ್‍ನೇ ಮನ್ ಕೋ ಲಗೇ ಹರ‍್ನೇ
ಐಸಾ ಕಂಹಾ ರೇ ಐಸಾ ಕಂಹಾ ರೇ

||ಗೋರಿ ತೇರಾ ಗಾಂವ್ ಬಡಾ ಪ್ಯಾರಾ ಮೈ ತೋ ಗಯಾ ಮಾರಾ ಆಕೆ ಯಹಾಂ ರೇ ಆಕೆ ಯಹಾಂ ರೇ
ಉಸ್ ಪರ್ ರೂಪ್ ತೇರಾ ಸಾದಾ, ಚಂದ್ರಮಾ ಜೋ ಆದಾ, ಆದಾ ಜಂವಾ ರೇ||

ಪರ‍್ದೇಸೀ ಅಂಜಾನ್ ಕೋ ಐಸೇ ಕೋಯಿ ನಹೀಂ ಅಪ್‍ನಾತಾ
ತುಮ್ ಲೋಗೋಂ ಸೆ ಜುಡ್ ಗಯಾ ಜೈಸೇ ಜನಮ್ ಜನಮ್ ಕಾ ನಾತಾ
ಅಪ್ನಿ ಧುನ್ ಮೆ ಮಗನ್ ಡೊಲೇ ಲೋಗ್ ಯಹಾಂ ಬೋಲೇ ದಿಲ್ ಕೀ ಜುಬಾಂ ರೇ ದಿಲ್ ಕೀ ಜುಬಾಂ ರೇ

||ಗೋರಿ ತೇರಾ ಗಾಂವ್ ಬಡಾ ಪ್ಯಾರಾ ಮೈ ತೋ ಗಯಾ ಮಾರಾ ಆಕೆ ಯಹಾಂ ರೇ ಆಕೆ ಯಹಾಂ ರೇ
ಉಸ್ ಪರ್ ರೂಪ್ ತೇರಾ ಸಾದಾ, ಚಂದ್ರಮಾ ಜೋ ಆದಾ, ಆದಾ ಜಂವಾ ರೇ||


ಹಗಲೂ ಇರುಳೂ ಮರೆಯಲ್ಲಿ ನಿಂತು…!

27 ಮೇ 11

(ಇನ್ನೊಂದು ಭಾವಾನುವಾದದ ಯತ್ನ)

ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದೆಲ್ಲಾ ನೆನಪಿದೆ
ನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆ
ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆ

ಪರದೆಯ ಕೊನೆಯ ಹಿಡಿದು ಒಮ್ಮೆಗೇ ಜಗ್ಗಿ ಎಳೆದಾಡಿದುದೂ
ದುಪ್ಪಟ್ಟದಿಂದ ಮತ್ತಾ ಮುಖವ ಮುಚ್ಚಿಕೊಂಡಿದ್ದಿನ್ನೂ ನೆನಪಿದೆ
ನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆ
ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆ

ಉರಿಬಿಸಿಲಲ್ಲೂ ಬರೀ ನನ್ನ ಒಂದು ಕರೆಗೆ ಓಗೊಟ್ಟು ನೀನು
ಬರಿಗಾಲಿನಲ್ಲಿ ನಡೆದು ನನ್ನಲ್ಲಿಗೆ ಬರುತ್ತಿದ್ದುದಿನ್ನೂ ನೆನಪಿದೆ
ನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆ
ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆ

ಮೂಲ ಗೀತೆ:
ಚಿತ್ರ: ನಿಖಾಹ್
ಗಾಯಕ: ಗುಲಾಮ್ ಅಲಿ

ಚುಪ್ ಕೆ ಚುಪ್ ಕೇ ರಾತ್ ದಿನ್ ಆಂಸೂ ಬಹಾನಾ ಯಾದ್ ಹೈ
ಹಮ್‍ ಕೋ ಅಬ್ ತಕ್ ಆಶಿಖೀ ಕಾ ವೋ ಜಮಾನಾ ಯಾದ್ ಹೈ
ಚುಪ್ ಕೆ ಚುಪ್ ಕೇ ರಾತ್ ದಿನ್ ಆಂಸೂ ಬಹಾನಾ ಯಾದ್ ಹೈ

ಖೇಂಚ್ ಲೇನಾ ವೊ ಮೆರಾ ಪರ್ದೇ ಕ್ ಕೊನಾ ದಫತ್ತನ್
ಔರ್ ದುಪ್ಪಟ್ಟೇ ಸೇ ತೆರಾ ವೊ ಮುಹ್ ಚುಪಾನಾ ಯಾದ್ ಹೈ
ಹಮ್‍ ಕೋ ಅಬ್ ತಕ್ ಆಶಿಖೀ ಕಾ ವೋ ಜಮಾನಾ ಯಾದ್ ಹೈ
ಚುಪ್ ಕೆ ಚುಪ್ ಕೇ ರಾತ್ ದಿನ್ ಆಂಸೂ ಬಹಾನಾ ಯಾದ್ ಹೈ

ದೋ ಪಹರ್ ಕೀ ಧೂಪ್ ಮೆ ಮೇರೇ ಬುಲಾನೇ ಕೆ ಲಿಯೆ
ವೊ ತೆರಾ ಕೋಟೇ ಪೆ ನಂಗೇ ಪಾಂವ್ ಆನಾ ಯಾದ್ ಹೈ
ಹಮ್‍ ಕೋ ಅಬ್ ತಕ್ ಆಶಿಖೀ ಕಾ ವೋ ಜಮಾನಾ ಯಾದ್ ಹೈ
ಚುಪ್ ಕೆ ಚುಪ್ ಕೇ ರಾತ್ ದಿನ್ ಆಂಸೂ ಬಹಾನಾ ಯಾದ್ ಹೈ


ಮನದ ಬಯಕೆ ಅಶ್ರುವಾಗಿ ಹರಿದಿದೆ!

24 ಮೇ 11

(ಮತ್ತೊಂದು ಭಾವಾನುವಾದದ ಯತ್ನ)

ಮನದ ಬಯಕೆ ಅಶ್ರುವಾಗಿ ಹರಿದಿದೆ
ನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆ
ಮನದ ಬಯಕೆ ಅಶ್ರುವಾಗಿ ಹರಿದಿದೆ

ನನ್ನೀ ಬದುಕು ತೃಷೆಯಂತಾಗಿ ಉಳಿದಿದೆ
ನನ್ನೀ ಬದುಕು ತೃಷೆಯಂತಾಗಿ ಉಳಿದಿದೆ
ಒಲವಿನಾ ಕಥೆ ಅಪೂರ್ಣವಾಗಿ ಉಳಿದಿದೆ
ನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆ
ಮನದ ಬಯಕೆ ಅಶ್ರುವಾಗಿ ಹರಿದಿದೆ

ಬಹುಶಃ ಇದುವೆ ಕೊನೆಯ ನೋವು ಎಂದು ನಾ
ಬಹುಶಃ ಇದುವೆ ಕೊನೆಯ ನೋವು ಎಂದು ನಾ
ಪ್ರತೀ ನೋವ ಸಹಿಸುತಾ ನಾ ಬದುಕಿಹೆ
ನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆ
ಮನದ ಬಯಕೆ ಅಶ್ರುವಾಗಿ ಹರಿದಿದೆ

ನನ್ನನೇ ನಾ ಅಳಿಸಿ ಹಾಕಿ ನೋಡಿದೆ
ನನ್ನನೇ ನಾ ಅಳಿಸಿ ಹಾಕಿ ನೋಡಿದೆ
ಆದರಿನ್ನೂ ನಡುವಿನಂತರ ಉಳಿದಿದೆ
ನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆ
ಮನದ ಬಯಕೆ ಅಶ್ರುವಾಗಿ ಹರಿದಿದೆ
*************

ಮೂಲ ಗೀತೆ:

ಚಿತ್ರ: ನಿಖಾಹ್
ಗಾಯಕಿ: ಸಲ್ಮಾ ಆಘಾ

ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ

ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ
ಹಮ್ ವಫಾ ಕರ್ ಕೇ ಭೀ ತನ್ ಹಾ ರಹ್ ಗಯೇ
ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ

ಜಿಂದಗೀ ಎಕ್ ಪ್ಯಾಸ್ ಬನ್ ಕರ್ ರಹ್ ಗಯೀ
ಪ್ಯಾರ್ ಕೇ ಕಿಸ್ಸೇ ಅಧೂರೇ ರಹ್ ಗಯೇ
ಹಮ್ ವಫಾ ಕರ್ ಕೇ ಭೀ ತನ್ ಹಾ ರಹ್ ಗಯೇ
ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ

ಶಾಯದ್ ಉನ್ ಕಾ ಆಖ್ರೀ ಹೋ ಯೆಹ್ ಸಿತಮ್
ಹರ್ ಸಿತಮ್ ಯೆಹ್ ಸೋಛ್ ಕರ್ ಹಮ್ ಸಹ್ ಗಯೇ
ಹಮ್ ವಫಾ ಕರ್ ಕೇ ಭೀ ತನ್ ಹಾ ರಹ್ ಗಯೇ
ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ

ಖುದ್ ಕೋ ಭೀ ಹಮ್ ನೇ ಮಿಠಾ ಡಾಲಾ ಮಗರ್
ಫಾಸ್‍ಲೇ ಜೊ ಧರ್ಮಿಯಾಂ ಥೆ ರಹ್ ಗಯೇ
ಹಮ್ ವಫಾ ಕರ್ ಕೇ ಭೀ ತನ್ ಹಾ ರಹ್ ಗಯೇ
ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ


ಮನ ನೋಯಿಸಿಕೊಳ್ಳಬೇಕಾಗಿಲ್ಲ!

24 ಮೇ 11

 

ಎಷ್ಟೇ ಒಳ್ಳೆಯ ಅಡುಗೆ ಮಾಡಿ ಬಡಿಸಿದರೂ,
ಖುಷಿಯಲ್ಲಿ ಹೊಟ್ಟೆ ತುಂಬಾ ಉಂಡವರೆಲ್ಲರೂ,
ಮೆಚ್ಚುಗೆಯ ಮಾತನಾಡುವರು ಎಂಬ ಖಾತ್ರಿಯೂ ಇಲ್ಲ

ನಾವೆಷ್ಟೇ ಚಿಂತನೆ ಮಾಡಿ ನಮ್ಮ ಮಾತುಗಳನ್ನು
ಹೊರ ಹಾಕಿದರೂ, ಜನರು ಧ್ಯಾನದಿಂದ ಆಲಿಸಿ
ಅರ್ಥೈಸಿಕೊಂಡು, ಪ್ರತಿಸ್ಪಂದಿಸುವರು ಎಂದೇನೂ ಇಲ್ಲ

ನಮ್ಮ ಯತ್ನದಲ್ಲಿ ಇಲ್ಲವಾದರೆ ಕಿಂಚಿತ್ತೂ ಲೋಪ
ಮತ್ತು ಇಹುದಾದರೆ ನಮಗೆ ಸದಾ ಆತ್ಮತೃಪ್ತಿ,
ನಿಜವಾಗಿಯೂ ನಾವು ಮನ ನೋಯಿಸಿಕೊಳ್ಳಬೇಕಾಗಿಲ್ಲ!
*********************


ಆ ಭೂಮಿಯಿಂದ ಬರಲೊಂದು ಸೊಸೆ!

20 ಮೇ 11

 

ಅಲ್ಲೆಲ್ಲೋ ಇನ್ನೂ ಒಂದು ಭೂಮಿ ಇದೆಯೆಂಬ ಸುದ್ದಿ ಇದೆ
ಇಲ್ಲಿರುವಂತೆ, ಮಳೆ, ಗಾಳಿ,ಬೆಳೆ ಅಲ್ಲೂ ಇದ್ದಿರುವಂತಿದೆ

ಇದ್ದಿರಬಹುದೇನೋ ಹಿಂದೆ ಅಲ್ಲೂ ಆಡಮ್ಮ ಮತ್ತು ಈವ
ಅನುಭವಿಸಿರಬಹುದು ಅವರೀರ್ವರೂ ಕಾಮಜ್ವರದ ಕಾವ

ಹುಟ್ಟಿಕೊಂಡಿರಬಹುದು ನಮ್ಮ ನಿಮ್ಮಂತೆ ಅಲ್ಲಿ ಮಾನವರು
ರೈತ, ವೈದ್ಯ, ಸಾಹಿತಿ, ವಿಜ್ಞಾನಿ, ರಾಜಕೀಯ ನಾಯಕರು

ನನ್ನ ತಲೆಯಲಿಂದು ಹೊಸತೊಂದು ಯೋಚನೆ ಮೂಡುತಿದೆ
ಹೊಸ ಸಂಬಂಧ ಬೆಳೆಸುವತ್ತ ಎನ್ನ ಚಿತ್ತ ಮನ ಮಾಡುತಿದೆ

ರಾಹುಲ ಮದುವೆಯಾಗದೇ ಉಳಿದದ್ದು ಒಳ್ಳೆಯದೇ ಆಯ್ತು
ರಾಜೀವನಂತೇ ದೂರದೂರಿನ ಮದುಮಗಳ ತಂದರಾಯ್ತು

ರಾಜೀವನ ಹಿಂದೆ ಬಂದವಳು ಈ ದೇಶವನ್ನಾಳಲು ಕೂತಂತೆ
ಆ ಭೂಮಿಯಿಂದ ಬಂದವಳು ಈ ಭೂಮಿಯನೇ ಆಳಬಹುದಂತೆ
*********


ಜಾತ್ರೆಯಲೂ… ಏಕಾಂತದಲೂ…!

19 ಮೇ 11

 

(ಇನ್ನೊಂದು ಭಾವಾನುವಾದದ ಯತ್ನ)

ಜಾತ್ರೆಯಲೂ ಏಕಾಂತದಲೂ
ದಾಹತುಂಬಿದ ಮನದಾಳದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||

ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||

ನಿನ್ನ ಬಯಕೆಯಲೇ ನನ್ನೀ ಜೀವನವು
ಈ ಪ್ರೀತಿಯನೆಂದೂ ಮರೆಯಲಾಗದು
ಅದೆಷ್ಟು ಯತ್ನವ ನಾ ಮಾಡಿದರೂ
ನಿನ್ನ ನೆನಪ ನಾನು ಅಳಿಸಲಾಗದು||

ದಾಹತುಂಬಿದ ಮನದಾಳದಲೂ
ಜಾತ್ರೆಯಲೂ ಏಕಾಂತದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||

ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||

ಕನಸಲ್ಲೂ ನಾನೆಂದೂ ಯೋಚಿಸಿಲ್ಲ
ನೀನಿಲ್ಲದೇ ಬಾಳಬಲ್ಲೆನೆಂದು ನಾನು
ಬರುವೆ ನಾ ಎಲ್ಲರನೂ ಮರೆತು
ಒಂದು ಸನ್ನೆ ಮಾಡಿದರೆ ನೀನು||

ಕೇಶರಾಶಿಯ ಆ ಗುಂಗುರಿನಲೂ
ಜಾತ್ರೆಯಲೂ ಏಕಾಂತದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||

ಜಾತ್ರೆಯಲೂ ಏಕಾಂತದಲೂ
ದಾಹತುಂಬಿದ ಮನದಾಳದಲೂ
ನೋವಿನಲೂ ವಿರಹದಲೂ
ನನಗೆ ನಿನ್ನದೇ ನೆನಪಾಗುತಿದೆ||

ಗೀತೆಯಲೂ ಸಂಗೀತದಲೂ
ಕನಸಿನಲೂ ತಂಗಾಳಿಯಲೂ
ಬಿಸಿಲಿನಲೂ ನೆರಳಿನಲೂ
ನನಗೆ ನಿನ್ನದೇ ನೆನಪಾಗುತಿದೆ||
******
ಮೂಲ ಗೀತೆ:

ಚಿತ್ರ: ತುಮ್ ಸ ನಹೀಂ ದೇಖಾ
ಗಾಯಕರು: ಉದಿತ್ ನಾರಾಯಣ್ ಹಾಗೂ ಶ್ರೇಯಾ ಘೋಶಾಲ್

ಭೀಡ್ ಮೆ ತನ್‍ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ‍್ವಾಯೀ ಮೆ
ಧೂಪ್ ಮೆ ಪರ‍್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಭೀಡ್ ಮೆ ತನ್‍ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ತೇರೀ ಚಾಹತೇಂ ಮೇರಿ ಜಿಂದಗೀ
ತೇರೇ ಪ್ಯಾರ್ ಕೊ ಮೈ ಭುಲಾ ನ ಸಕೂ
ಕರೂಂ ಕೋಶಿಶ್ ಭಲೆ ರಾತ್ ದಿನ್
ತೇರೆ ಅಕ್ಸ ಕೊ ಮೈ ಮಿಟಾ ನಾ ಸಕೂ

ಪ್ಯಾಸ್ ಕೀ ಗೆಹರಾಯೀ ಮೆ
ಭೀಡ್ ಮೆ ತನ್‍ಹಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ‍್ವಾಯೀ ಮೆ
ಧೂಪ್ ಮೆ ಪರ‍್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಕಭೀ ಖ್ವಾಬ್ ಮೆ ಸೋಚಾ ನ ತಾ
ಜೀನಾ ಪಡೇಗಾ ತುಝೆ ಚೋಡ್ ಕೇ
ಸನಮ್ ಜೊ ತೇರಾ ಇಶಾರಾ ಮಿಲೆ
ಚಲಿ ಆವೂಂ ಸಾರಿ ಕಸಮ್ ತೋಡ್ ಕೇ||

ಝುಲ್ಫ್ ಕಿ ನನಾಯೀ ಮೆ
ಭೀಡ್ ಮೆ ತನ್‍ಹಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಭೀಡ್ ಮೆ ತನ್‍ಹಾಯೀ ಮೆ
ಪ್ಯಾಸ್ ಕೀ ಗೆಹರಾಯೀ ಮೆ
ದರ್ದ್ ಮೆ ರುಸ್‍ವಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||

ಗೀತ್ ಮೆ ಶೆಹನಾಯೀ ಮೆ
ಖ್ವಾಬ್ ಮೆ ಪುರ‍್ವಾಯೀ ಮೆ
ಧೂಪ್ ಮೆ ಪರ‍್ಚಾಯೀ ಮೆ
ಮುಝೆ ತುಮ್ ಯಾದ್ ಆತೇ ಹೋ||
ಮುಝೆ ತುಮ್ ಯಾದ್ ಆತೇ ಹೋ||


ಈ ಹೃದಯ ಕವಿಯಾಗಿ…!

17 ಮೇ 11

 

(ಮತ್ತೊಂದು ಭಾವಾನುವಾದದ ಯತ್ನ)

ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆ
ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆ
ಅವರಿವರ ಗೀತೆಗಳ ಕೇಳುತ್ತಾ ಇರುವವಳೇ, ನನ್ನನ್ನೂ ನೀ ಆಲಿಸೇ

ಒಮ್ಮೆ ನೀ ಬಂದು ನೋಡಿಲ್ಲಿ ನಿನಗಾಗಿ, ನಾ ಹೇಗೆ ಬಾಳುತ್ತಲಿರುವೆ
ಒಮ್ಮೆ ನೀ ಬಂದು ನೋಡಿಲ್ಲಿ ನಿನಗಾಗಿ, ನಾ ಹೇಗೆ ಬಾಳುತ್ತಲಿರುವೆ
ನೀ ಮಾಡಿ ಹೋದ ಘಾಯಗಳನ್ನೆಲ್ಲಾ, ಕಣ್ಣೀರಿಂದ ಹೊಲಿಯುತ್ತಿರುವೆ
ನಿನ್ನ ವಿರಹದ ನೋವ ಹಿಡಿದು ನಾನನ್ನ ಅದೃಷ್ಟದ ಜೊತೆಗೆ ಜೂಜಾಡಿದೆ
ಜಗವನ್ನು ಜಯಿಸಿ, ನಿನ್ನಿಂದ ಸೋತೆ, ನನ್ನ ಆಟ ಹೀಗಾಗಿದೆ

ನಾ ಪ್ರೀತಿ ಮಾಡಿದ್ದು ಹೇಗೆಂದು ಕೇಳಿದರೆ ಅದಕ್ಕಿಲ್ಲ ಉತ್ತರ ಏನೂ
ನಾ ಪ್ರೀತಿ ಮಾಡಿದ್ದು ಹೇಗೆಂದು ಕೇಳಿದರೆ ಅದಕ್ಕಿಲ್ಲ ಉತ್ತರ ಏನೂ
ಧೂಳ ಕಣವಾಗಿದ್ದ ನಾ ನಿನ್ನ ಜ್ವಾಲೆಯಲ್ಲಿ ಉರಿದು ಆಗಿಹೆನೀಗ ಭಾನು
ನನ್ನಿಂದಾಗಿಯೇ ಇಲ್ಲಿ ವಿಶ್ವಾಸ ಉಳಿದಿಹುದು, ನೀನಿರುವೆ ಜೀವಂತವಿನ್ನೂ
ನಾನಿಲ್ಲದಾಗ ಕಣ್ಣೀರು ಸುರಿಸಿ, ಜಗ ಹುಡುಕಬಹುದೆನ್ನ ಗುರುತು

ಈ ಪ್ರೀತಿ ಒಂದು ಆಟಿಕೆಯು ಅಲ್ಲ, ಯಾರಾದರೂ ಖರೀದಿಸಲು
ಈ ಪ್ರೀತಿ ಒಂದು ಆಟಿಕೆಯು ಅಲ್ಲ, ಯಾರಾದರೂ ಖರೀದಿಸಲು
ನನ್ನಂತೆ ಬಹಳಷ್ಟು ಪರಿತಪಿಸಿ ನೀವು, ಆಮೇಲೆ ಬನ್ನಿ ಪ್ರೀತಿಸಲು
ನಾ ಅಲೆಮಾರಿ, ಎಲ್ಲಿಯದೋ ಪಯಣ, ನಾನಂತೂ ಸಾಗಿ ಬಿಡುವೆ
ಆದರೂ ನಾನು ಕಟ್ಟಿರುವ ಬಾಜಿಯನು, ನಾ ಗೆದ್ದು ಬಂದೇ ಬರುವೆ
ನಾ ಗೆದ್ದು ಬಂದೇ ಬರುವೆ
ನಾ ಗೆದ್ದು ಬಂದೇ ಬರುವೆ
**********
 

ಮೂಲ ಗೀತೆ:
ಚಿತ್ರ: ಗ್ಯಾಂಬ್ಲರ್
ಗಾಯಕ: ಕಿಶೋರ್ ಕುಮಾರ್

ದಿಲ್ ಆಜ್ ಶಾಯರ್ ಹೈ ಗಮ್ ಆಜ್ ನಗ್ಮಾ ಹೈ ಶಬ್ ಯೆ ಘಝಲ್ ಹೈ ಸನಮ್
ದಿಲ್ ಆಜ್ ಶಾಯರ್ ಹೈ ಗಮ್ ಆಜ್ ನಗ್ಮಾ ಹೈ ಶಬ್ ಯೆ ಘಝಲ್ ಹೈ ಸನಮ್
ಗೈರೋಂ ಕೇ ಶೇರೋಂ ಕೊ ಓ ಸುನ್ ನೇ ವಾಲೇ ಹೋ ಇಸ್ ತರಫ್ ಭೀ ಕರಮ್

ಆಕೇ ಝರಾ ದೇಖ್ ತೋ ತೇರಿ ಖಾತಿರ್ ಹಮ್ ಕಿಸ್ ತರಹ್ ಸೇ ಜೀಯೆ
ಆಕೇ ಝರಾ ದೇಖ್ ತೋ ತೇರಿ ಖಾತಿರ್ ಹಮ್ ಕಿಸ್ ತರಹ್ ಸೇ ಜೀಯೆ
ಆಂಸೂ ಕೆ ದಾಗೇ ಸೇ ಸೀತೇ ರಹೇ ಹಮ್ ಜೊ ಜಖ್ಮ್ ತೂನೆ ದಿಯೇ
ಚಾಹತ್ ಕಿ ಮೆಹ್ ಫಿಲ್ ಮೆ ಗುಮ್ ತೆರಾ ಲೇಕರ್ ಕಿಸ್ಮತ್ ಸೆ ಖೇಲಾ ಜುಂವಾ
ದುನಿಯಾ ಸೇ ಜೀತೆ, ತುಜ್‍ಸೇ ಹಾರೆ, ಯು ಖೇಲ್ ಅಪ್ನಾ ಹುವಾ

ಹೈ ಪ್ಯಾರ್ ಹಮ್ನೇ ಕಿಯಾ ಕಿಸ್ ತರಹ್ ಸೆ, ಉಸ್ಕಾ ನಾ ಕೊಯೀ ಜವಾಬ್
ಹೈ ಪ್ಯಾರ್ ಹಮ್ನೇ ಕಿಯಾ ಕಿಸ್ ತರಹ್ ಸೆ, ಉಸ್ಕಾ ನಾ ಕೊಯೀ ಜವಾಬ್
ಝರ್ರತ್ ಹೈ ಲೇಕಿನ್ ತೇರಿ ಲವೂ ಮೆ ಜಲ್‍ಕರ್ ಹುಮ್ ಬನ್ ಗಯೇ ಅಫ್‍ತಾಬ್
ಹಮ್ ಸೆ ಹೈ ಜಿಂದಾ ವಫಾ ಔರ್ ಹಮೀ ಸೆ ಹೈ ತೆರಿ ಮೆಹಫಿಲ್ ಜವಾಂ
ಹುಮ್ ಜಬ್ ನ ಹೋಂಗೇ ತೊ ರೋ ರೋ ಕೆ ದುನಿಯಾ ಡೂಂಡೇಗೀ ಮೇರೆ ನಿಶಾನ್

ಎ ಪ್ಯಾರ್ ಕೊಯಿ ಖಿಲೋನಾ ನಹೀ ಹೈ ಹರ್ ಕೊಯಿ ಲೆ ಜೊ ಖರೀದ್
ಎ ಪ್ಯಾರ್ ಕೊಯಿ ಖಿಲೋನಾ ನಹೀ ಹೈ ಹರ್ ಕೊಯಿ ಲೆ ಜೊ ಖರೀದ್
ಮೇರಿ ತರಹ್ ಜಿಂದಗೀ ಭರ್ ತಡಪ್ ಲೊ ಫಿರ್ ಆನಾ ಉಸ್ ಕೆ ಖರೀಬ್
ಹುಮ್ ತೊ ಮುಸಾಫಿರ್ ಹೈಂ ಕೊಇ ಸಫರ್ ಹೋ ಹುಮ್ ತೊ ಗುಜರ್ ಜಾಯೇಂಗೇ ಹೀ
ಲೇಕಿನ್ ಲಗಾಯಾ ಹೈ ಜೊ ದಾಂವ್ ಹುಮ್ ನೇ ವೊ ಜೀತ್ ಕರ್ ಆಯೇಂಗೇ ಹೀ
ವೊ ಜೀತ್ ಕರ್ ಆಯೇಂಗೇ ಹೀ
ವೊ ಜೀತ್ ಕರ್ ಆಯೇಂಗೇ ಹೀ


ಸೂರ್ಯ-ಚಂದ್ರರ ನೀತಿ ಸಂದೇಶ!

11 ಮೇ 11

 
ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗ
ನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗ
ಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗ
ಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾಲೆಳೆಯುತ್ತಾ…

ಬಾನಿನಲ್ಲಿ ಬಾಡಿಗೆಯ ದೀಪಕ್ಕೆ ಕನ್ನಡಿ ಹಿಡಿದ ಚಂದ್ರ
ಹಂಗಿಸಿ ನಕ್ಕ, ಸುತ್ತ ಯಾರೂ ಇರ್ಲಿಲ್ಲ ನಾನು ಮಾತ್ರ
ಎಂದರಿತು ದಿಟ್ಟಿಸಿದರೆ ನೀತಿ ಸಾರುತ್ತಾ ಕೂತಿದ್ದ ಭದ್ರ
ಆತನ ಸಂದೇಶವನ್ನು ಸ್ವೀಕರಿಸಿ ಅರಿತೆ ನಾನಗುತ್ತಾ…

ಹಗಲಲ್ಲಿ ಬಾನಿಗೆ ಒಡೆಯನಾಗಿ ಇದ್ದು ರವಿ ಮರೆಯಾದ
ಹೋಪಾಗ ಶಶಿಯ ಬಾಳಿಗೊಂದು ಅರ್ಥ ನೀಡಿ ಹೋದ
ಮಾತಾಪಿತ ಗುರುಹಿರಿಯರು ಕಿರಿಯರಿಗೆ ರವಿಯಂದದಿ
ಪ್ರಭಾವ ಬೀರುವರು ಇವರ ಬಾಳನ್ನು ಸದಾ ಬೆಳಗುತ್ತಾ…

ನಾವು ಚಂದ್ರನಂತಿರಬೇಕು ನಮ್ಮ ಹಿರಿಯರ ಸಮ್ಮುಖದಲ್ಲಿ
ನಾವು ಸೂರ್ಯನಂತಿರಬೇಕು ನಮ್ಮ ಕಿರಿಯರ ಬಾಳಿನಲ್ಲಿ
ಹಿರಿಯರ ಪ್ರಭೆಯಿಂದ ಬೆಳೆಸಿಕೊಂಡರೆ ಪ್ರತಿಭೆ ನಮ್ಮಲ್ಲಿ
ಕಿರಿಯರು ಇರುತ್ತಾರೆ ನಮ್ಮ ಪ್ರಭೆಯನ್ನು ಪ್ರತಿಫಲಿಸುತ್ತಾ…
******************


ನಿನ್ನ ಒಲವಿಗೆ ನಾ ಅರ್ಹಳೆಂದು…!

09 ಮೇ 11

(ಮತ್ತೊಂದು ಭಾವಾನುವಾದದ ಯತ್ನ)

ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳು
ನನ್ನೆದೆಯ ಬಡಿತವೇ ನಿಲ್ಲು, ಗಮ್ಯ ತಲುಪಿವೆ ಕಾಲ್ಗಳು
ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳು

ನನಗೂ ಸ್ವೀಕೃತ ಪ್ರಿಯತಮ ನಿನ್ನದೀ ನಿರ್ಧಾರವೂ
ನನ್ನ ತನುಮನದಲಿ ಇದೆ ಅನನ್ಯ ಧನ್ಯತಾ ಭಾವವು
ದೊರೆತಿದೆ ಇಂದು ನನಗೆ ಎರಡೂ ಲೋಕದ ಭಾಗ್ಯವು

||ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳು||

ನಿನ್ನ ಗಮ್ಯವು ನಾನು ಸಖನೇ ನೀನೇ ನನ್ನ ಗಮ್ಯವು
ಹೆದರೆನು ಬಿರುಗಾಳಿಗೂ ನಾ ಇರಲು ನಿನ್ನಯ ಸಖ್ಯವು
ಸುದ್ದಿ ಕೊಡಿ ಬಿರುಗಾಳಿಗೂ ನಾವಿಕನಿರುವ ಈ ನೌಕೆಗೂ

||ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳು||

ನನ್ನ ಹೃದಯದ ಮೇಲೆ ನಿನ್ನ ಛಾಯೆ ಆವರಿಸಿದಂತಿದೆ
ಎಲ್ಲಾ ದಿಕ್ಕುಗಳಿಂದ ಈಗ ವಾದ್ಯ ಮೊಳಗಿರುವಂತಿದೆ
ನಗುನಗುತಲೇ ನನ್ನ ನೀನು ತನ್ನವಳನ್ನಾಗಿಸಿಯಾಗಿದೆ

||ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳು||

 

ಮೂಲ ಹಿಂದೀ ಗೀತೆ:

ಚಿತ್ರ: ಅನ್‍ಪಡ್
ಗಾಯಕಿ: ಲತಾ ಮಂಗೇಶ್ಕರ್

ಆಪ್ ಕೀ ನಝರೋ ನೆ ಸಮ್‍ ಜಾ ಪ್ಯಾರ್ ಕೇ ಕಾಬಿಲ್ ಮುಝೆ
ದಿಲ್ ಕೀ ದಡ್‍ಕನ್ ಥರ್ ಜಾ ಮಿಲ್ ಗಯೀ ಮಂಜಿಲ್ ಮುಝೆ
ಆಪ್ ಕೀ ನಝರೋ ನೆ

ಜೀ ಹಮೇ ಮಂಜೂರ್ ಹೈಂ ಆಪ್ ಕಾ ಯೆ ಫೈಸ್ ಲಾ
ಕಹ್ ರಹೀ ಹೈ ಹರ್ ನಝರ್ ಬಂದ ಪರ‍್ವರ್ ಶುಕ್ರಿಯಾ
ದೊ ಜಹಾಂ ಕೀ ಆಜ್ ಖುಷಿಯಾಂ ಹೊ ಗಯೀ ಹಾಸಿಲ್ ಮುಝೆ
ಆಪ್ ಕೀ ನಝರೋ ನೆ

ಆಪ್ ಕೀ ಮಂಜಿಲ್ ಹೂಂ ಮೆ, ಮೇರಿ ಮಂಜಿಲ್ ಆಪ್ ಹೈಂ
ಕ್ಯೋಮ್ ಮೈ ತೂಫಾನ್ ಸೇ ಡರೂ ಮೇರೆ ಸಾಹಿಲ್ ಆಪ್ ಹೈ
ಕೊಯಿ ತೂಫಾನ್ ಸೆ ಕಹ್ ದೇ ಮಿಲ್ ಗಯಾ ಸಾಹಿಲ್ ಮುಝೆ
ಆಪ್ ಕೀ ನಝರೋ ನೆ

ಪಡ್ ಗಯಿ ದಿಲ್ ಪರ್ ಮೆರಿ ಆಪ್ ಕೀ ಪರ್ ಚಾಯಿಯಾ
ಹರ್ ತರಫ್ ಬಜ್‍ ನೇ ಲಗೀ ಸೇಕ್‍ಡೋ ಶಹ್‍ನಾಯಿಯಾ
ಹಂಸ್ ಕೇ ಅಪ್ನೀ ಜಿಮ್ದಗೀ ಮೆ ಕರ್ ಲಿಯಾ ಶಾಮಿಲ್ ಮುಝೆ
ಆಪ್ ಕೀ ನಝರೋ ನೆ


ಅಸ್ತಮಿಸಿದ ನಂತರ…!

05 ಮೇ 11

 

 

ಇಲ್ಲಿ
ಇರುವಷ್ಟು
ದಿನವೂ
ಎಲ್ಲರೊಂದಿಗೆ
ಒಡನಾಟ
ಕಿತ್ತಾಟ
ಹಾರಾಟ

ಅನವಶ್ಯಕ
ಹೋರಾಟ
ನೀಕೀಳು
ತಾಮೇಲು
ಎಂದು
ಉಚ್ಚಸ್ತರದಲ್ಲಿ
ಕೂಗಾಟ

ಹಲವರ
ಮನಗಳಿಗೆ
ಪ್ರೀತಿಯ
ನೆರಳು
ಕೆಲವರ
ಮನಗಳಿಗೆ
ವೈರತ್ವದ
ಬಿಸಿಲು

ಮುಂದೊಂದು
ದಿನ ಥಟ್ಟನೇ
ಹೊರಟು
ಹೋದಮೇಲೆ
ಉಳಿದವರ
ಮನಗಳಲಿ
ಆಗದಿರಲಿ
ನೆನಪು
ಬರಿಯ
ಕತ್ತಲು

ಪಡುವಣದಿ
ಸೂರ್ಯ
ಮರೆಯಾದ
ಮೇಲೂ
ಆಗಸದಲಿ
ಕೆಂಪನೆಯ
ಪ್ರಭೆ
ಉಳಿದಿರುವಂತೆ

ನಾವಳಿದ
ಮೇಲೂ
ಉಳಿದವರ
ಮನಗಳಲಿ
ನಮ್ಮ
ಸವಿನೆನಪುಗಳ
ಪ್ರಭೆಯು
ಉಳಿದಿರಲಂತೆ!
*******

ಚಿತ್ರಕೃಪೆ: ಸುಮಾ ನಾಡಿಗ್