ಫೇಸ್‍ಬುಕ್ ಗೋಡೆ ಮೇಲೆ ಗೀಚಿದ್ದು!

19 Aug 13
********

ಮೆಚ್ಚುಗೆಯ ನುಡಿಗಳಿಂದ ಏರಿಸಬೇಡಿ ಕೊಡಿಮರದ ತುದಿಗೆ,
ಇಳಿಯಲರಿಯದೇ ನಾ ಬೊಬ್ಬಿಟ್ಟರೆ ಕೇಳಿಸೀತು ನಾಲ್ಕೂರಿಗೆ!

*****

ಒಂದು ಕತೆ ಬರೆಯುವಾಗ ಅದು ಹೇಗೆ ಬರೆಸಿಕೊಂಡು ಹೋಗುತ್ತದೋ, ತನ್ನನ್ನು ಹೇಗೆ ಮುಗಿಸಿಕೊಳ್ಳುತ್ತದೋ, ಅದು ಆ ಕತೆಗೆ ಬಿಟ್ಟ ವಿಚಾರ.

ಓದುಗರು ಓದಿದ ನಂತರ ಅವರಲ್ಲಿ ಹುಟ್ಟುವ ಸ್ಪಂದನಗಳಿಗೆ, ಪ್ರತಿಕ್ರಿಯೆಗಳಿಗೆ ಕತೆಗಾರ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಬಹುದೇ ವಿನಃ, ಅವರಿಚ್ಚೆಯಂತೆ ಕತೆಯನ್ನು ಬದಲಿಸಲಾಗದು.


ನಮ್ಮ ಮಗುವಿಗೆ ಇನ್ನಾರನ್ನೋ ತೋರಿಸಿ, ಅಗೋ ನಿನ್ನ ಅಪ್ಪ ಅಥವಾ ಅಮ್ಮ ಎಂದು ಹೇಳಲಾಗದು!

11 Aug 13
*****

“ನೀವೂ ಈ ಅಂಕಣಕ್ಕೆ ಬರೆಯಬಹುದು. ತಮ್ಮ ಬರಹಗಳನ್ನು ಈ ವಿಳಾಸಕ್ಕೆ ರವಾನಿಸಿ ಸಂಪಾದಕರು@ಪೇಪರ್”ಇದರ ಜೊತೆಗೆ, ಇನ್ನು ಸದ್ಯದಲ್ಲೇ ಈ ಕೆಳಗಿನ ಹೇಳಿಕೆ ಪ್ರಕಟಗೊಳ್ಳುವುದು ಕಡ್ಡಾಯವಾಗಲಿದೆ.

[ತಮ್ಮ ಬರಹ ಪ್ರಕಟವಾಗುವಾಗ ತಮಗೆ ಗುರುತು ಸಿಗದಷ್ಟು ಬದಲಾಗಿದ್ದರೆ ಅಥವಾ ತಮ್ಮ ಬರಹದ ಜೊತೆಗೆ ತಾಂತ್ರಿಕ ಕಾರಣಗಳಿಂದಾಗಿ ತಮ್ಮ ಹೆಸರಿನ ಬದಲಿಗೆ ಬೇರೆಯವರ ಹೆಸರು ಪ್ರಕಟವಾಗಿದ್ದರೆ ದಯವಿಟ್ಟು ಸಹಿಸಿಕೊಂಡು ನಮ್ಮನ್ನು ಸತತ ಪ್ರೋತ್ಸಾಹಿಸಬೇಕಾಗಿ ವಿನಂತಿ]
*****

10 Aug 2013

*****
ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ವೇದಿಕೆಗಳಲ್ಲೂ, ಗಂಡು-ಹೆಣ್ಣಿನ ನಡುವಣ ಸಮಾನತೆಯನ್ನು ಪ್ರತಿಪಾದಿಸುವವರೂ ಒಮ್ಮೊಮ್ಮೆ “ಒಂದು ಹೆಣ್ಣಿನ ಬಗ್ಗೆ” ಹೀಗೆಲ್ಲಾ ಮಾತಾಡಬಾರದಿತ್ತು ಅನ್ನುವಾಗ, ಸಮಾನತೆಯ ಕೂಗು ಈ ನಡುವೆ ಎಲ್ಲೋ ಮರೆಯಾದಂತೆ ಅನಿಸುತ್ತದೆ.

“ಒಂದು ಗಂಡಿನ ಬಗ್ಗೆ ಹೀಗೆಲ್ಲಾ ಮತನಾಡಬಾರದಿತ್ತು” ಅನ್ನುವುದನ್ನು ನಮ್ಮಲ್ಲಿ ಯಾರೂ ಎಂದೂ ಕೇಳಿರಲಿಕ್ಕಿಲ್ಲ .

*****

ಸಖೀ,
ನ್ಯಾಯದೇವತೆ
ಕಣ್ಣುಗಳನ್ನು
ಮುಚ್ಚಿಕೊಂಡಿದ್ದೂ
ನ್ಯಾಯದಾನ
ಮಾಡುತ್ತಿರುತ್ತಾಳೆ;

ಆದರೆ,
ನಮ್ಮ ಸರಕಾರ
ಕಣ್ಣುಗಳಿದ್ದೂ
ಕುರುಡಾಗಿರುವುದು
ಏಕೆ ಹೇಳೆ!

*****

9 Aug 2013

*****
ನಮ್ಮನ್ನೇ ನಕಲಿಸುವುದು ಅನ್ಯರನು ನಕಲಿಸಿದಷ್ಟು ಅಲ್ಲ ಸುಲಭ
ಈ ಜಗತ್ತಿನಲ್ಲಿ ನಮ್ಮಷ್ಟು ಅಸಲಿ ಇನ್ನೊಂದು ನಿಜವಾಗಿ ದುರ್ಲಭ!

*****

ಅನ್ಯರ ಮೇಲಿನ ನಮ್ಮ ನಂಬಿಕೆ, ನಮ್ಮ ಜೀವನದಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರಗಳನ್ನು ಅವಲಂಬಿಸಿರುತ್ತದೆ.

*****

ನಿರ್ಧರಿತ ಗೆರೆಗಳ ನಡುವೆಯೇ, ನಿರೀಕ್ಷಿತ ಹಾಗೂ ಅಪೇಕ್ಷಿತ ವಿಮರ್ಶೆ ಬರೆಯುವುದಕ್ಕಿಂತ ಓದಿರುವುದನ್ನು ಸೂಚಿಸಿ ಸುಮ್ಮನಿರುವುದೇ ಚೆನ್ನ

*****

ಸಖೀ,
ಕೆಲಸದಿಂದ ರಜೆ ಪಡೆಯಲು ಕಾರಣಗಳೇ ಇಲ್ಲದೇ,
ಸುಳ್ಳು ಕಾರಣಗಳನ್ನು ನೀಡಿ ರಜೆ ಪಡೆಯಲಾಗದೇ,
ಉಳಿದಾಗ “ಜ್ವರ” ಬರಿಸಿ ಕೂರಿಸುತ್ತಾನೆ ಮನೆಯಲ್ಲಿ!

*****

ಆ ಭಗವಂತನ ಅಳಿಯನಾಗಿ ಹುಟ್ಟಿದರೂ ವಿಧಿಲೀಲೆಯನ್ನು ಗೆಲ್ಲುವುದು ಸಾಧ್ಯವಾಗಲಿಲ್ಲ ಅಭಿಮನ್ಯುವಿಗೆ. ಇನ್ನು ನಾವು ಕೇವಲ ಹುಲುಮಾನವರು… ಭಗವಂತನಿಗೂ ಮಿಗಿಲೇ ಆ ವಿಧಿಯೆಂಬುದು?

*****

ಬಲವಂತದ ಸೃಜನ
ಬಲವಂತದ ನಮನ
ಎರಡೂ ಮೌಲ್ಯಹೀನ!

*****

8 Aug 2013

*****

ಸಖೀ,
ಹೆಸರನ್ನು ಮರೆಸಿ ತಾನದೆಷ್ಟೇ
ಬರೆದರೂ ಒಂದೊಮ್ಮೆ ಜನರ
ಮುಂದೆ ಹೇಳಿಕೊಳ್ಳಲೇ ಬೇಕು
ಮರೆಯಲ್ಲಿದ್ದವನು ತಾನೇ ಅಂತ,
ಈಗ ಎಲ್ಲರಿಗೂ ಗೊತ್ತು ಮೆಚ್ಚುಗೆ
ಬರಹಕ್ಕಿಂತ ಬರೆದವಗೆ ಹೆಚ್ಚಂತ!

*****

ಸಖೀ,
ನನಗೆ ನಮ್ಮಮ್ಮನ ಕನವರಿಕೆ
ನಿನಗೋ ನಿರಂತರ ಗೊರಕೆ

ಆ ಗೊರಕೆಯಲೂ ಇತ್ತು ಸಾಮ್ಯ
ಪಕ್ಕದಲಿ ಇದ್ದಂತಾಯ್ತು ನಮ್ಮಮ್ಮ!

*****

7 Aug 2013

*****

ಸಖೀ,

ಮನದೊಳಗೆ ಭಯವಿಹುದು
ಅಡಿಗಡಿಗೂ ಕಂಪನವಿಹುದು
ಸದಾ ದೃಢವಾದ ನಡೆಯಿದ್ದರೂ
ಕಂಡರಿಯದೇ ಮುಗ್ಗರಿಸಬಹುದು!

*****

ತಪ್ಪಾದ ಪದಬಳಕೆಯೆಂದರೆ ಒಂದು ತರಹದ ಶೋಷಣೆಯಂತೆ – ಪದ ಶೋಷಣೆ!

*****

5 Aug 2013

*****

ಸಖೀ,
ನಿನ್ನ ಹೆಸರಿನಿಂದಾಗಿಯೇ ನಾನು ಪ್ರಸಿದ್ಧಿ ಹೊಂದಿದೆ ಲೋಕದಲ್ಲಿ
ಮಾಡಲಾರೆ ನಾನಿನಗಪಮಾನ ಸಂಶಯ ಬೇಡ ನಿನ್ನ ಮನದಲ್ಲಿ!

*****
“ತಮಗೆ ನಾವು ಗೌರವ ನೀಡಿದ್ದೇವೆ. ದಯವಿಟ್ಟು ಅದನ್ನು ಉಳಿಸಿಕೊಳ್ಳಿ” ಎಂದನ್ನಬೇಕಾದ ಸನ್ನಿವೇಶ ಹುಟ್ಟಬಾರದು… ಹುಟ್ಟಿಸಿಕೊಳ್ಳಬಾರದು!
ಉತ್ತರಗಳಿವೆಯೇ?
**********

ಒಳ್ಳೆಯ ಗಂಡನನ್ನು ಪಡೆಯಲು ಹೆಣ್ಣುಮಕ್ಕಳಿಂದ ವಿಶೇಷ ಪೂಜೆ,
ತಮ್ಮ ಗಂಡಂದಿರ ಆರೋಗ್ಯ ಆಯುಷ್ಯಕ್ಕಾಗಿ ಹೆಂಗಸರಿಂದ ಪೂಜೆ,
ಸೋಮವಾರ, ಗುರುವಾರ, ಶನಿವಾರ ಪೂಜೆಗಳೆಲ್ಲಾ ಕೇವಲ
ಗಂಡಿಗಾಗಿ, ಗಂಡಿನೊಳಿತಿಗಾಗಿಯೇ ಇವೆ ಅಲ್ಲವೇ?

ಒಳ್ಳೆಯ ಹೆಣ್ಣು ಸಿಗಲೆಂದು ಗಂಡುಗಳು ಮಾಡುವ ಪೂಜೆ ಯಾವುದು?
ತಮ್ಮ ಪತ್ನಿಯರ ದೀರ್ಘಾಯುಷ್ಯಕ್ಕಾಗಿ ಗಂಡಸರು ಮಾಡಬೇಕಾದ ಪೂಜೆ ಯಾವುದು?

ಅಲ್ಲಾ, ಹೆಣ್ಣುಗಳೆಲ್ಲಾ ಒಳ್ಳೆಯವರೇ?
ಕೆಟ್ಟವರು ಇರುವುದು ಗಂಡುಗಳಲ್ಲಿ ಮಾತ್ರವೇ?
ಹೆಂಗಸರಿಗೆಲ್ಲಾ ದೀರ್ಘಾಯುಷ್ಯವೇ?

*****

4 Aug 2013

*****

ಸಖೀ,
ನಿನ್ನಿಂದಾದ ತಪ್ಪುಗಳನ್ನು
ನಿನಗೆ ಅರುಹಿದರೆ ನಿನ್ನ
ಮನನೋಯಬಹುದೆನ್ನುವ
ಅಂಜಿಕೆ ಕಣೇ, ನನ್ನಲ್ಲಿ!

*****

ಒಮ್ಮೆ ಹಾರದಿಂದ ಚದುರಿ ಹೋದ ಹೂಗಳನ್ನು ಮತ್ತೆ ಪೋಣಿಸುವುದು ಕಷ್ಟ
ಒಮ್ಮೆ ಮುರಿದುಹೋದ ಸ್ನೇಹವನ್ನು, ಮರಳಿ ಜೋಡಿಸುವುದೂ ಅಷ್ಟೇ ಕಷ್ಟ!

*****

ಆತನೆಂದ:

“ನನಗೆ ಸ್ನೇಹಿತರ ದಿನ ಅನ್ನುವುದರ ಮೇಲೆ ನಂಬಿಕೆಯೇ ಇಲ್ಲ”

ನಾನೆಂದೆ:

“ನನಗೆ ಸ್ನೇಹಿತರ ಮೇಲೇ ನಂಬಿಕೆ ಇಲ್ಲ”

ಆತ:

“ಯಾಕೋ ಹಾಗ್ಯಾಕೆ ಹೇಳ್ತಾ ಇದ್ದೀಯಾ? ನಂಬಿಕೆ ಇಲ್ಲ ಅಂದ್ರೆ ಹೇಗೆ?”

ನಾನು:

“ದೇವರ ಮೇಲೆ ನಂಬಿಕೆ, ಭೂತ ದೆವ್ವಗಳ ಮೇಲೆ ನಂಬಿಕೆ ಹಾಗೆಯೇ ಈಗ ಈ ಸ್ನೇಹಿತರ ಮೇಲೆ ನಂಬಿಕೆ. ಯಾಕೋ ಇದೆಲ್ಲಾ?

ಸ್ನೇಹ ಇದೆ ಅಥವಾ ಇಲ್ಲ. ಅಷ್ಟೇ.

ಸ್ನೇಹಿತರ ನಡುವೆ ಇರಬೇಕಾದದ್ದು ಸ್ನೇಹ ಅಷ್ಟೇ.

ಸಂಬಂಧಿಗಳ ನಡುವೆ ಇರಬೇಕು ‘some’ ಬಂಧ, ಸ್ನೇಹಿತರ ನಡುವೆ ಇರಬೇಕು ಸ್ನೇಹ”

3 Aug 2013

*****

ಯಾರು ಯಾರದೋ ಕಾಲುಹಿಡಿದು ಲೇಖನ, ಬರಹಗಳನ್ನು ದಕ್ಕಿಸಿಕೊಂಡು, ಯಾರು ಯಾರದೋ ಲೇಖನಗಳನ್ನು ಎಲ್ಲೆಲ್ಲಿಂದಲೋ ನಕಲು ಮಾಡಿ, ಅವಕ್ಕಿನ್ನಾರದೋ ಹೆಸರುಗಳನ್ನು ನೀಡಿ, ಮಧ್ಯರಾತ್ರಿಗೆ ಮೊದಲು, ತನಗೆ ನೀಡಿರುವ ಪುಟವನ್ನು ಹೇಗಾದರೂ ತುಂಬಿಸಿಕೊಡುವ ಕೆಲಸ ಮಾಡುವವರನ್ನೂ “ಕಾರ್ಯನಿರತ ಪತ್ರಕರ್ತರು” ಎನ್ನಲಾಗುತ್ತಿದೆ.

*****

ನಾವೂ ತರಗೆಲೆಯಂತೆಯೇ ಮುಂದೊಂದು ದಿನ…
ಆದರೆ ಹಸಿರೆಲೆಯಂತಿದ್ದಾಗ, ಬೀಸಿದ ಗಾಳಿಗೆ ಮೈಯೊಡ್ಡಿ ನಾವು ಆಡಿದ್ದೇ ಆಟ!

*****

ನಮ್ಮ ಚಿರಂಜೀವಿಗಳನ್ನು ಸರಿ ದಾರಿಗೆ ತರುವ ಯತ್ನದಲ್ಲಿ ನಾವು ಅವರನ್ನು ಬೀದಿಗೆ ತಂದು ನಿಲ್ಲಿಸಲಾಗುವುದಿಲ್ಲ.

ಅವರಿಗೆ ಬುದ್ಧಿಕಲಿಸುವ ಯತ್ನದಲ್ಲಿ, ಅವರನ್ನು ನಗ್ನಗೊಳಿಸುತ್ತಾ ಹೋದರೆ ನಾವೂ ನಗ್ನರಾಗುತ್ತಾ ಹೋಗುತ್ತೇವೆ.

ನಮ್ಮ ಸಮಸ್ಯೆಯ ಅಥವಾ ವಿಷಯದ ಕ್ಲಿಷ್ಟತೆಯನ್ನು ಏಕಮುಖವಾಗಿಯಷ್ಟೇ ಗ್ರಹಿಸಿಕೊಂಡು ಅನ್ಯರು ಯಾವ ನಿರ್ಣಯವನ್ನೂ, ಅಭಿಪ್ರಾಯಗಳನ್ನೂ, ಮಂಡಿಸಲಾಗುವುದಿಲ್ಲ. ಯಾವುದೇ ರೀತಿಯಲ್ಲೂ ಪರಿಹಾರಗಳನ್ನು ಸೂಚಿಸಲಾಗುವುದಿಲ್ಲ.

ಯಾವುದೇ ಒಂದು ಸಮಸ್ಯೆಗೆ, ಸಮಸ್ಯೆಯಲ್ಲಿ ಭಾಗಿಯಾದ ಎರಡೂ ಪಕ್ಷದವರ ಅನಿಸಿಕೆಗಳನ್ನು ಕೇಳಿ, ಅರಿತುಕೊಂಡು, ಸಲಹೆ, ಪರಿಹಾರ, ಸೂಚಿಸಬಹುದಷ್ಟೇ ವಿನಹ ಏಕಮುಖವಾಗಿ ಸಾಧ್ಯವಿಲ್ಲ.

ಅವರವರ ಸ್ಥಾನದಲ್ಲಿ ಎಲ್ಲರೂ ಸರಿ. ಎಲ್ಲರಲ್ಲೂ ಅವರ ನಡತೆಗಳಿಗೆ ಕಾರಣಗಳು, ಕಾರಣೀಭೂತವಾದ ಘಟನೆಗಳ ಹಿನ್ನೆಲೆಗಳು ಇದ್ದೇ ಇರುತ್ತವೆ.

ಅರಿತವರ, ಅನುಭವಿಗಳ ಸಲಹೆಗಳಿಗೆ ಸೂಕ್ತಸಮಯದಲ್ಲಿ ಕಿವಿಯಾಗಲಾದವರು, ತಾವು ಕೆಟ್ಟಮೇಲೆ, ತಮ್ಮವರೂ ಕೆಟ್ಟಮೇಲೆ, ಅದೆಷ್ಟು ಅಂಗಲಾಚಿದರೂ ಪ್ರಯೋಜನವಿಲ್ಲ, ಎಂದು ನನ್ನ ಅನಿಸಿಕೆ.

ಕೈಯಲ್ಲಿರುವ ಕಜ್ಜಿಗಳಿಂದ ತುರಿಕೆಜಾಸ್ತಿ ಆಗುತ್ತಿದೆಯೆಂದು, ಅದರಿಂದ ನಮ್ಮ ಮನಕ್ಕೆ ಕಿರಿಕಿರಿ ಆಗುತ್ತಿದೆಯೆಂದು, ಕೈಯನ್ನು ಕಡಿದುಬಿಡಲಾಗುವುದಿಲ್ಲ.

ತಾಳ್ಮೆ ಮತ್ತು ವಿವೇಕ ಇದ್ದರೆ ಕಾಲವೇ ಪರಿಹಾರ ಸೂಚಿಸಬಲ್ಲದು.

*****

ಕನ್ನಡಿಯನು ನೋಡಿದೆ
ಸಿಂಗರಿಸಿ ನಿಂತಾಗ ನೀನು
ಹೂವುಗಳನ್ನು ನೋಡಿದೆ
ಅವು ಅರಳಿ ನಕ್ಕಾಗ ನೀನು
ಅದೃಷ್ಟಹೀನ ಕಣೇ ನಾನು,
ನನ್ನೊಮ್ಮೆಯೂ ನೋಡಲಿಲ್ಲ ನೀನು !

*****

ಝಾನ್ಸಿರಾಣಿಯ ಕೈಯಲ್ಲಿ ಹುಕ್ಕಾ
ಕೊಡಬೇಡಿ ಮಕ್ಕಳ ಕೈಗಾ ಬುಕ್ಕಾ

*****

ರಾವುಲನ ಜೀವನಚರಿತ್ರೆ ಓದಿರಿ
ಉಂಡಾಡಿಗಳಾಗಿಯೇ ಬದುಕಿರಿ!

*****

Is it a good or a bad quality of human beings to try to understand the easier things in life after complicating them?
ಸುಲಭವಾಗಿ ಅರಿವಿಗೆ ಬರುವುದನ್ನು ಕ್ಲಿಷ್ಟಗೊಳಿಸಿ ಅರಿತುಕೊಳ್ಳಲು ಯತ್ನಿಸುವುದು ಮಾನವನ ಸುಗುಣವೋ ದುರ್ಗುಣವೋ?

*****

ನಿನ್ನಿಂದ ಇಂದು ದೂರವಾಗಿ ಹೀಗೆ
ಅಳುತ್ತಿತ್ತು ನನ್ನೊಲವು ಅರಿತೆಯಾನೀ
ಚಂದಿರನೂ ಅತ್ತ ನನ್ನ ಜೊತೆಜೊತೆಗೆ
ರಜನಿಯೂ ಅತ್ತಳೂ ಬಿಕ್ಕಿ ಬಿಕ್ಕಿ
ಚಂದಿರನೂ ಅತ್ತ ನನ್ನ ಜೊತೆಜೊತೆಗೆ

*****

ಬಾ ಮರಳಿ ಬಾ ನನ್ನ ಸಂಗಾತಿಯೇ
ನಿನ್ನನ್ನೆನ್ನ ಗೀತೆಗಳು ಕರೆಯುತಿವೆ
ನನ್ನ ಸಂಗೀತವೇ ಬರಡಾಗಿ ಕೂತಿದೆ
ನಿನ್ನನ್ನೆನ್ನ ಗೀತೆಗಳು ಕರೆಯುತಿವೆ
ಬಾ ಮರಳಿ ಬಾ ನನ್ನ ಸಂಗಾತಿಯೇ

*****

Understanding what is untold by you has always been easier for me than listening to what you say!

ನನಗೆ, ನೀನು ನುಡಿಯದೇ ಉಳಿದುದನ್ನು ಅರಿವುದು, ನೀನುಡಿವ ಮಾತುಗಳ ಅರ್ಥೈಸಿಕೊಳ್ಳುವುದಕ್ಕಿಂತ ಸದಾ ಸುಲಭವಾಗಿರುತ್ತದೆ!

*****

ನಾಯಿಮರಿಯ ಪದ್ಯ ಮತ್ತೊಮ್ಮೆ ಓದಿದೆ.
ಅದ್ಯಾಕೋ ಏನೋ, ಆ ನಾಯಿಮರಿಗಿರುವ ನಿಯತ್ತು ನಮ್ಮ ರಾಜಕಾರಣಿಗಳಿಗಿಲ್ಲವಲ್ಲಾ ಅಂತ ಅನಿಸಿತು.

*****
ದೀಪ ಬೆಳಗೋ ಹೊತ್ತಿನಲ್ಲಿ ನೀ ಬಂದುಬಿಡು
ಕತ್ತಲಾಗುತ್ತಿರುವ ಹೊತ್ತಿನಲ್ಲಿ ನೀ ಬಂದುಬಿಡು
ನಮ್ಮ ಭೇಟಿಯ ನಿಶಾನಿಯ ನೀ ಮರೆಯದಿರು
ನನ್ನ ಒಲವನ್ನು ನೀ ಎಂದಿಗೂ ತೊರೆಯದಿರು!

*****

28 July 2013

*****

ಊರು ಸೂರೆ ಹೋಗುವಾಗ ನೋಡುತ್ತಾ ಕೂತವರು, ಚಿಂತಿಸಲು, ಚರ್ಚಿಸಲು ಉತ್ತಮ ವಿಚಾರಗಳ ಹುಡುಕಾಟದಲ್ಲಿದ್ದಾರೆ!

*****

ಮೂಲೆದ ಹಳ್ಳಿಡ್ ಕುಟ್ಟಿ-ದೊಣ್ಣೆ ಗೊಬ್ಬುನಗ ಪಾತೆರುನ ಒಂಜೊಂಜಿ ಪಾತೆರಲಾ ಇಂಗ್ಲೀಷ್‍ಡ್ ಉಪ್ಪುಂಡ್!
ರೆಡಿ, ಟೇಕ್, ಕಾಚ್, ಕೌಂಟ್…
ಒರಿದಿನ ಪಾತೆರ ನಿಕುಲ್ ಪಣ್‍ಲೆ…
*****

ತುಳುವಿನಲ್ಲಿ, ಆಂಗ್ಲರ “Towel” ಬೈರಾಸ್ ಹಾಗೂ “Kerchief” ಟುವಾಲ್ ಎಂದು ಕರೆಯಲ್ಪಡುತ್ತವೆ!
“Towel” ಅನ್ನು ಟುವಾಲ್ ಅನ್ನೋಲ್ಲ!

*****

ಪದವಿ, ಪ್ರಶಸ್ತಿ, ಸನ್ಮಾನ, ಹಾರ, ಇವೆಲ್ಲಕ್ಕೂ ಹಾತೊರೆಯುತ್ತಾ, ಯಾರು ಯಾರನ್ನೋ ಹೊಗಳುತ್ತಾ, ಯಾರು ಯಾರದೋ ಕಾಲುಹಿಡಿಯುತ್ತಾ, “ಸಾಧನೆ”ಯ ಮೆಟ್ಟಲೇರಿ ನಿಂತವನಿಗೆ, ಮುಂದೊಮ್ಮೆ ಕೆಳಗೆ ನೋಡುವಾಗ (ಆ ಆಂತರಿಕ ದೃಷ್ಟಿ ಉಳಿದಿದ್ದರೆ) ಅಸಹನೀಯ ಎನಿಸದೇ ಇರದು!

*****

ನನ್ನ ಮಾತುಗಳಿಗಿಲ್ಲಿ ಪ್ರತಿಕ್ರಿಯಿಸದೇ ಇದ್ದರೂ, ಓದಿ ಹೋಗಿರುತ್ತಾರೆ ಅನ್ನುವುದನ್ನು ಮುಚ್ಚಿಡಲಾಗುವುದೇ ಇಲ್ಲ, ಕೆಲವರಿಂದ!
“ಐ ಲೈಕ್ ಇಟ್”

*****

ಸಖೀ,
ನಾನು ಎಲ್ಲಾ ಧರ್ಮಗಳ ಧರ್ಮಗ್ರಂಥಗಳನ್ನು ಓದಿದ್ದೇನೆ
ಎಲ್ಲವನ್ನೂ ನನಗೆ ಬೇಕಾದಹಾಗೆ ಅರ್ಥೈಸಿಕೊಂಡಿದ್ದೇನೆ
ಅನ್ನುವವರಿಗಿಂತ ಉತ್ತಮ ಅವ್ಯಾವುದನ್ನೂ ಓದದವನೇ!

*****

“ಮೊಲೆಹಾಲು ಕುಡಿಸಿದವರೆಲ್ಲಾ ತಾಯಿಯರು, ಹಾಗಾಗಿ ಆ ಪೂತನಿಯೂ ಕೃಷ್ಣನಿಗೆ ತಾಯಿಯಾದಳು” ಅನ್ನುವ ತರ್ಕ ನನ್ನಲ್ಲಿ ಅನುಕಂಪ ಮೂಡಿಸುತ್ತದೆ.
ಹಸಿದ ಮಗುವಿಗೆ ಹಾಲುಣಿಸುವವಳು ತಾಯಿಯಾಗುತ್ತಾಳೆ, ವಿಷವುಣಿಸುವವಳೂ ತಾಯಿಯಾಗ್ತಾಳೋ?
ವಿಷಪೂರಿತ ಮೊಲೆಹಾಲನ್ನುಣಿಸುವಾಗ ಆ ರಾಕ್ಷಸಿಯ ಮನದಲ್ಲಿ ಮಾತೆಯ ಮಮತೆ ಇದ್ದಿರಲೇ ಇಲ್ಲ.
ಭಾವನೆಯ ಹಿನ್ನಲೆಯೊಂದಿಗೆ ಸಂಬಂಧಗಳು ನಿರ್ಧಾರವಾಗುತ್ತವೆಯೇ ವಿನಃ, ಬರಿಯ ಕ್ರಿಯೆ-ಪ್ರತಿಕ್ರಿಯೆಗಳಿಂದಲ್ಲ!

*****

ನಾನು ಪೂತನಿಯೆಂದ ಆ ವಿದೇಶೀ ನಾರಿಯ
ಪರದೇಶಿಗಳು ತಮ್ಮ ತಾಯಿಯೆನ್ನುತಿಹರಿಲ್ಲಿ
ನಮ್ಮ ದೇಶ ಸರ್ವ ನಾಶವಾದರೂ ಚಿಂತಿಲ್ಲ
ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವವರಿಲ್ಲಿ!

*****

ಇತ್ತೆ ಉಂದು ಈಯೇ ತಿಲಿತಿನಾ?
ಚಂದ್ರಗ್ ಕನ್ನಡಿ ತೋಜಾಯಿನಾ?
ಈಯೇ ನಿನ್ನ ಕಣ್ಣ್ ಮಿಣ್‍ಕಾಯಿನಾ?
ಆ ಬಾನೊಡ್ ನಕ್ಷತ್ರೋ ಮಿಣ್ಕಿನಾ?

*****

BBMP staff too would get a chance to make money as Traffic Police now do. Catch people for throwing garbage in open and settle for 25% or 50% of the actual fine, without a receipt!

*****

There is no punishment yet for those corrupt politicians who fill filth in our society day in, day out . But, there will now be punishment guaranteed for those who throw garbage in the open!
*****

27 July 2013

*****

ಆನಂದಭಾಷ್ಪ ಸಿಹಿಯಂತೆ, ದುಃಖದ ಕಣ್ಣೀರು ಉಪ್ಪಂತೆ
ಕಣ್ಣೀರಿನ ತಯಾರಿಕೆಯಲ್ಲಿ ಭಾವನೆಗೂ ಕೆಲಸವಿದೆಯಂತೆ!

*****

26 July 2013

*****

ಮರೆಯಲ್ಲಿ ನಿಂತು ವಾಲಿಯನು ಕೊಂದ ಶ್ರೀರಾಮ
ಸತ್ಯ ಮರೆಮಾಚಿ ದ್ರೋಣಾಚಾರ್ಯನನು ಕೊಂದ ಶ್ರೀಕೃಷ್ಣ
ಇವರೀರ್ವರೂ ಇದೇ ಭರತಭೂಮಿಯಲಿ ಸಾಮಾನ್ಯರಂತೆ ಹುಟ್ಟಿ ದೇವರಾದವರು.

ಈ ಪೂತನಿಯ ಸಂತಾನವನ್ನು ನಾಶಗೊಳಿಸಿ, ಈ ಭರತಭೂಮಿಯನು ಮುಕ್ತಗೊಳಿಸಿ ದೇವರಾಗುವವರು ಯಾರೂ ಇಲ್ಲವೇ?

*****

25 July 2013

*****

ನಕಲಿಸುವ ಭರಾಟೆಯಲ್ಲಿ, ಗುಂಪಿನಲ್ಲಿದ್ದರೂ ಹಲವರ ಸ್ವಂತಿಕೆ ಕಳೆದುಹೋಯ್ತು
ಸ್ವಂತಿಕೆಯನ್ನು ಉಳಿಸಿಕೊಳ್ಳುವ ಛಲದಲ್ಲಿ ಕೆಲವರಿಗೆ ಒಂಟಿತನ ಜೊತೆಯಾಯ್ತು

*****

24 July 2013


*****

ಹಲವರೊಂದಿಗಿನ ಮಾತು ಸ್ಪೂರ್ತಿ ತುಂಬುತ್ತದೆ
ಕೆಲವರೊಂದಿಗಿನ ಮಾತು ಪೂರ್ತಿ ಕೆಡಿಸುತ್ತದೆ
ನನ್ನ ಮಾತಿಂದಲೂ ಕೆಲವರಿಗೆ ಸಿಕ್ಕರೂ ಸ್ಪೂರ್ತಿ
ಹಲವರ ತಲೆಗಳು ಕೆಟ್ಟುಬಿಡಬಹುದೇ ಪೂರ್ತಿ?

*****

ನಾನು ನನ್ನ ಕಣ್ಣು ಕಿವಿಗಳನದೆಷ್ಟು ತೆರೆದಿಟ್ಟುಕೊಂಡಿದ್ದರೂ
ಸ್ಪೂರ್ತಿ ನೀಡುವ ವಿಷಯವೊಂದೂ ಗ್ರಾಸವಾಗುವುದೇ ಇಲ್ಲ
ನನ್ನ ಸೃಜನಶೀಲತೆಯನು ಅದೆಷ್ಟು ಜಾಗೃತವಾಗಿರಿಸಿದರೂ
ನಾಲ್ಕು ಸಾಲು ಬರೆಯುವುದಕೂ ತ್ರಾಸವಾಗುತಿಹುದಲ್ಲಾ?

*****

23 July 2013

*****

ಓರ್ವ ನೃತ್ಯಗಾರ ಅಥವಾ ನೃತ್ಯಗಾತಿಯ ನೃತ್ಯದಲ್ಲಿ ಲೋಪ-ದೋಷಗಳಿದ್ದರೆ ಆ ನೃತ್ಯವು ಅಪೂರ್ಣವೆನಿಸುತ್ತದೆ ಹಾಗೂ ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತದೆ.
ಹಾಗೆಯೇ ದೋಷಪೂರಿತ ಸಾಹಿತ್ಯ ರಚನೆಗಳೂ ಅಪೂರ್ಣವೆನಿಸುತ್ತವೆ ಹಾಗೂ ಓದುಗರಿಗೆ ಕಿರಿಕಿರಿ ಉಂಟುಮಾಡುತ್ತವೆ.
ನೃತ್ಯಗಾರ ಅಥವಾ ನೃತ್ಯಗಾತಿಗೆ ತನ್ನ ನೃತ್ಯದಲ್ಲಿ ಇರುವಷ್ಟೇ ಶ್ರದ್ಧೆ ಓರ್ವ ಲೇಖಕ ಯಾ ಕವಿ ಯಾ ಸಾಹಿತಿ ಯಾ ಬರಹಗಾರನಿಗೆ ತನ್ನ ರಚನೆಗಳಲ್ಲಿ ಇರಬೇಕು.

*****

ಮಳೆಯಲ್ಲಿ ನೆನೆದರೂ ತಲ್ಲಣಿಸದ ಜೀವ
ನಿನ್ನ ನೆನೆನೆನೆದು ಉಣ್ಣುತಿದೆ ನೋವ!

*****

ಒಲವಿಂದ
ಉಸುರಿದ
ಮಾತುಗಳ
ಆಲಿಸದ
ಕಿವಿಗಳು;
ಕೋಪದಿಂದ
ನುಡಿದಂಥ
ಮಾತುಗಳ
ಆಲಿಸಿಯಾವೇ?

*****

22 July 2013

*****

ಇಲ್ಲಿ ಪರಸ್ಪರರ ವಿರುದ್ಧ ಏನೇ ಆಡಿಕೊಂಡು ಜಗಳವಾಡಿದರೂ ನಾವು ಯಾರ ಪರವನ್ನೂ ವಹಿಸದೇ ತಟಸ್ಥರಾಗಿರಬೇಕು. ಮುಂದೆ, ಅವರೀರ್ವರೂ ರಾಜಿಯಾದಾಗ ನಾವು ಈರ್ವರ ಪಾಲಿಗೂ ಇಲ್ಲ!

*****

ಮಾನವೀಯತೆಯನ್ನು ಮರೆತು, ತಮ್ಮ ಮತ, ಧರ್ಮ, ಪಂಗಡ, ವರ್ಗ, ಗುಂಪು ಇವುಗಳ ಬಗ್ಗೆಯೇ ಮಾತನಾಡುತ್ತಾ, ಬರೆಯುತ್ತಾ, ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಯತ್ನದಲ್ಲಿ ಇರುವವರೂ ನಿಧಾನವಾಗಿ ತಮ್ಮ ಕ್ರಿಯೆಗಳಿಂದಲೇ, ಸಮಾಜದಲ್ಲಿ ಒಂದು ಮೂಲೆಗೆ ತಳ್ಳಲ್ಪಟ್ಟು ಒಂಟಿಯಾಗಿ ನಿಲ್ಲಬೇಕಾಗುತ್ತದೆ!

*****

ನಮ್ಮ ಬದುಕನ್ನು ಮರುಭೂಮಿಯಾಗಿಸಿಕೊಂಡರೆ ಗೆಲುವು ಮರೀಚಿಕೆಯಾಗುತ್ತದೆ. ಬಾಳನ್ನು ಹಸನಾದ, ಫಲವತ್ತಾದ ಭೂಮಿಯನ್ನಾಗಿಸಿಕೊಂಡರೆ ಗೆಲುವು ತೊರೆಯ ನೀರಿನಂತೆದುರಾಗುತ್ತದೆ!

*****

ಜೀವನದಲಿ ಅಲ್ಪ-ಸ್ವಲ್ಪ ಪೈಪೋಟಿಯಿರಬೇಕಾಗಿತ್ತು, ಇದೀಗ ಪೈಪೋಟಿಯೇ ಜೀವನವಾಗುತ್ತಿದೆ!

*****

20 July 2013

ಅಕ್ಕ – ಪಕ್ಕದವರನ್ನೆಲ್ಲಾ ಒಟ್ಟು ಸೇರಿಸಿಕೊಂಡು ಯುದ್ಧಕ್ಕೆ ಹೊರಡುವವರು,
ಅದು ಹೇಗೋ ರಾಜಿಯಾದಾಗ, ಅವರಲ್ಲಿ ಯಾರಿಗೂ ಸುದ್ದಿಯನ್ನೇ ನೀಡರು!

*****

ಇಂದು:

ಮಗಳನ್ನು ಬಸ್ಸಿನಲ್ಲಿ ಕೂರಿಸಿ ಬಂದು, ಮನೆ ತಲುಪುವುದರೊಳಗೆ ಮೂರು ಸಲ ಕರೆ ಮಾಡಿ ವಿಚಾರಿಸುತ್ತೇವೆ.

ಬೆಂಗಳೂರು – ಮಂಗಳೂರು ನಡುವಣ ಎಂಟು ಗಂಟೆಗಳ ಪಯಣದ ನಡುವೆ ಆರೇಳು ಬಾರಿ ಕರೆ ಮಾಡಿ ಎಚ್ಚರಿಕೆ ನೀಡುತ್ತೇವೆ.

ಅಲ್ಲಿ ಬಸ್ಸಿನಿಂದ ಇಳಿದು ಮಗಳು ವಸತಿಗೃಹವನ್ನು ಸೇರುವ ತನಕ ಮೇಲಿಂದ ಮೇಲೆ ಸಂದೇಶ ಕಳುಹಿಸುತ್ತಾ ಇರುತ್ತೇವೆ.

ಮೂವತ್ತು ವರುಷಗಳ ಹಿಂದೆ:

ಮಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ನನ್ನನ್ನು ಪಠಾಣ್‍ಕೋಟ್ ಗೆ ಕಳುಹಿಸಿಕೊಡಲು ಬಂದಿದ್ದ ಅಪ್ಪಯ್ಯನವರಿಗೆ “ಟಾಟಾ” ಮಾಡುವಾಗ ಹೃದಯ ಭಾರ. ಅವರು ಮಂಗಳೂರಿನಿಂದ ಆತ್ರಾಡಿಗೆ ಯಾವಾಗ ಹೋಗಿ ತಲುಪಿದರೋ ಗೊತ್ತಾಗಲೇ ಇಲ್ಲ. ನಾನು ಮೂರು ರಾತ್ರಿ ಕಳೆದು ನಾಲ್ಕನೆಯ ದಿನ ಪಠಾಣ್‍ಕೋಟ್ ತಲುಪಿ, ತಂತಿ ಸಂದೇಶ ಕಳುಹಿಸಿ, ಅದು ಅವರ ಕೈಸೇರಿದ ಐದನೆಯ ದಿನದವರೆಗೂ ಈ ಮಗ ಹಾಗೂ ಆ ಮಾತಾಪಿತರ ನಡುವೆ ಸಂಪರ್ಕವೇ ಇಲ್ಲ.

ಬಂಧ, ಮಮತೆ, ವಾತ್ಸಲ್ಯ, ಪ್ರೀತಿ, ಭಾವ ಎಲ್ಲವೂ ಇಂದಿನಂತೆಯೇ ಅಂದೂ ಇತ್ತಲ್ಲವೇ?

ಅವರ ಮನಸ್ಸುಗಳಲ್ಲಿ ಅದೆಂತಹ ಕಷ್ಟದನುಭವವವಿದ್ದಿರಬಹುದು? ಎಷ್ಟು ಹಂಬಲಿಸುತ್ತಿದ್ದಿರಬಹುದು? ಎಷ್ಟು ಪ್ರಾರ್ಥಿಸುತ್ತಿದ್ದಿರಬಹುದು?

ವಾರಕ್ಕೆ ಎರಡು ಬಾರಿ (ಭಾನುವಾರ ಮತ್ತು ಬುಧವಾರ) ಪತ್ರಗಳನ್ನು ಬರೆಯುವ ಪರಿಪಾಠ ಮಾಡಿಕೊಂಡಿದ್ದೆ. ಮನೆಯಿಂದ ಪತ್ರ ಬಂದರೆ ಮರುತ್ತರ ಬೇರೆ. ಈಗ ಅದೂ ಕಡಿಮೆ ಆಗಿತ್ತು ಅಂತ ಅನಿಸುತ್ತಿದೆ.

ಆ ಬಾಳನ್ನು ಪೂರ್ತಿಯಾಗಿ ಮರಳಿ ಬಾಳುವ ಅವಕಾಶ ಈಗ ಸಿಕ್ಕಿದರೆ…

*****

Mandate from “The Family” to Diggy:

“Always keep the media engaged, so that none will talk about us and what we do”

*****

18 July 2013

*****
ಅದ್ಯಾವ ಹೊತ್ತಿನಲ್ಲಿ ನೀನು ನನ್ನ ಕಣ್ಣೆವೆಗಳ ನಡುವೆ ಕದ್ದು ಸೇರಿಕೊಂಡೆ
ನಿನ್ನ ಇರುವನ್ನು ಬಹಿರಂಗಗೊಳಿಸುವ ಈ ಪರಿಯ ನೀನೆಲ್ಲಿ ಕಲಿತುಕೊಂಡೆ
ನೀನು ನನ್ನೊಳಿರಲು ಈ ಜಗವೇ ಜೋಕಾಲಿಯಲಿ ತೂಗುತಿರುವಂತೆ ಕಣೇ
ನಿನ್ನ ನಶೆ ನನ್ನನ್ನಾವರಿಸಿರಲು ನನಗೀ ಜಗದ ಪರಿವೆಯೇ ಇಲ್ಲವಾಗಿದೆ ಕಣೇ
.

ನೀ ನಿದ್ರಾದೇವಿ!

ಶುಭರಾತ್ರಿ!

*****

ವ್ಯಂಗ್ಯಚಿತ್ರಕಾರರು
ಚಿತ್ರಿಸುವ ನಮ್ಮಯ
ರೇಖಾಚಿತ್ರಗಳು
ಇದೀಗ ಕ್ಷೌರ
ಮುಗಿಸಿಕೊಂಡು
ಬಂದಂತಹ
ಲುಕ್ ಕೊಡುತ್ತಾ
ಸದಾಕಾಲ “ಫ್ರೆಶ್”!

*****

ಸರಕಾರದ ಎಲ್ಲಾ ಇಲಾಖೆಗಳಿಗೆ ಮಠ, ಮಂದಿರ, ಮಸೀದಿ, ಗುರುದ್ವಾರ, ಇಗರ್ಜಿಗಳೆಂಬ ಭೇದಭಾವ ಇಲ್ಲದೇ ತಮ್ಮ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ಇರಬೇಕು.

ಆಗ ಮಾತ್ರ ಈ “ಸೆಕ್ಯುಲರಿಸಂ”ಗೆ ಅರ್ಥ ಬಂದೀತು!

*****.

ಮಠಗಳ ಮೇಲೆ ಆದಾಯ ಕರ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದರೆ ತಪ್ಪೇನು?

ಮಠಗಳಲ್ಲಾದರೂ ಸರಿಯಾದ ಲೆಕ್ಕ ಇಟ್ಟಿರಬಹುದೆಂಬ ನಿರೀಕ್ಷೆಯೂ ಸುಳ್ಳೇ?

ಈ ದಾಳಿ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ನುಡಿಯುತ್ತಿದ್ದಾರೆ.

ಬರಿಯ ದಾಳಿಯಿಂದ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ.

ಆ ದಾಳಿಯ ವೇಳೆ ಮಠಗಳಲ್ಲಿನ ಅಕ್ರಮ ಸಾಬೀತಾದರೆ, ಆ ಸಮುದಾಯದ ಭಾವನೆಗಳಿಗೆ ಧಕ್ಕೆಯಾದೀತು, ಮಠಗಳ ಮೇಲಿನ ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾದೀತು, ಅಷ್ಟೇ.

*****

Mid-day meal was started to attract children to school.
Now, children are forced to shun schools.

*****

I don’t remember what to remember, before I forget.

*****

ಸಖೀ,
ನಿನ್ನೆಯ ದಿನ ಕಷ್ಟವಾಗಿತ್ತು
ಬಿಡುವಿರದೇ, ನಿನ್ನೊಂದಿಗೆ ಮಾತಿರದೇ
ಇಂದಿನ ದಿನ ಇಷ್ಟವಾಗುತಿದೆ
ಮುಂಜಾನೆಯೇ ನೀ ಕರೆದೆ ಮಾತಿಗಿಳಿದೆ!

*****

ಸಖೀ,
ಕಾಲ ಕಾಯುವುದಿಲ್ಲ ನಿನಗಾಗಿ ನನಗಾಗಿ
ನಾವೇ ಓಡುತಿರಬೇಕು ಅದರ ಜೊತೆಗೆ
ಇದ್ದಷ್ಟು ದಿನ ಬಾಳೋಣ ನಮ್ಮವರಿಗಾಗಿ

*****

17 July 2013

*****

ಮಧ್ಯಾಹ್ನದ ಊಟದಲ್ಲಿ ವಿಷ ಬೆರೆಸಿ ಉಣಿಸಿದವರೇ
ರಾಜಕೀಯ ಅತಿಯಾಯ್ತು, ನೀವೇನು ರಾಕ್ಷಸರೇ?

*****

ಹಗಲೆಲ್ಲಾ ಉರಿಸಿದವನ ನೆನಪ ಮರೆಸಲು
ಚಂದಿರ ಬಂದಿಹ ತಂಪು ನೀಡಿ ಸಂತೈಸಲು
ನಿದ್ರಾದೇವಿ ಕರೆಯುತ್ತಿದ್ದಾಳೆನ್ನನು ಮಲಗಲು!

ಶುಭರಾತ್ರಿ!

*****

ಸಖೀ,
ಪಪ್ಪು ಪಪ್ಪಿಯರ ಗಲಾಟೆಯಲ್ಲಿ
ನಿನ್ನನ್ನೇ ಮರೆತಂತಿದ್ದೆ ನಾನಿಲ್ಲಿ
ಹೇಗಿದ್ದೀ ನೀ, ಏನ್ ಸಮಾಚಾರ?

*****

History repeats, but, never forgives, if we err again!

ಇತಿಹಾಸ ಮರುಕಳಿಸುವುದು ಸತ್ಯ, ಆದರೆ ನಮ್ಮ ಮರುತಪ್ಪನ್ನು ಅದು ಕ್ಷಮಿಸುವುದು ಮಿಥ್ಯ!

*****

I won’t be surprised if we have “FDI” by a Pakistani Industrialist in our Defence Sector!

*****

If we were going to invite foreigners to trade in India and indirectly rule over us, then, why did our ancestors fight for Independence?

ಪರದೇಶಿಗಳನ್ನು ನಮ್ಮ ನಾಡಿನಲ್ಲಿ ಮತ್ತೆ ವ್ಯಾಪಾರ ಮಾಡುವಂತೆ ಹಾಗೂ ಪರೋಕ್ಷವಾಗಿ ಅಧಿಕಾರ ಚಲಾಯಿಸುವಂತೆ ಆಹ್ವಾನಿಸುವುದೇ ಆಗಿದ್ದಿದ್ದಲ್ಲಿ, ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾದರೂ ಏಕೆ?

*****

ಇದುವರೆಗೆ ಮೂತ್ರ ಮಾಡಿದ್ದಕ್ಕೆ ಚಾರ್ಜ್… ಇನ್ನು ಮುಂದೆ ಮೂತ್ರದಿಂದ ಚಾರ್ಜ್!

*****

ಯಾರು ಯಾರು ಎಲ್ಲೆಲ್ಲಿ ಇರಬೇಕೋ, ಅಲ್ಲಲ್ಲೇ ಇದ್ದರೆ ಚೆನ್ನ!

****

16 July 2013

*****

At this rate, by 2014, there would be 100% FDI (Foreign Direct Investment) in General Elections too!

*****

ಯಾವ ಪ್ರಯೋಜನಕ್ಕೂ ಬಾರದ “ಪಪ್ಪು” ಅನಿಸಿಕೊಳ್ಳುವುದಕ್ಕಿಂತ “ಕೋಮುವಾದಿ” ಅನಿಸಿಕೊಳ್ಳುವುದು ಯೋಗ್ಯ!

*****

FDI in every sector was surely expected, when we are ruled by the party which has “FDI” in force!

*****

“ದೇಶದ ಸಮಸ್ಯೆಗಳ ಬಗ್ಗೆ, ಜನತೆಯ ಬಡತನದ ಬಗ್ಗೆ, ನಾಡಿನ ಅಭಿವೃದ್ದಿಯ ಬಗ್ಗೆ ನರೇಂದ್ರ ಮೋದಿ ಆಡಿದ 99 ಮಾತುಗಳ ಬಗ್ಗೆ ಚರ್ಚೆ ಬೇಕಾಗಿಲ್ಲ. ಆದರೆ, “ಜಾತ್ಯಾತೀತ ಬುರ್ಖಾ”ದ ಬಗ್ಗೆ ಆತ ಮಾತನಾಡಿದರೆ, ಇವರಿಗೆ ಚರ್ಚೆ ಬೇಕೇ ಬೇಕು” – ಭಾಜಪಾದ ನಿರ್ಮಲಾ ಸೀತಾರಾಮನ್!

*****

“ಮೋದಿ ದೊಡ್ಡ ಸುಳ್ಳುಗಾರ, ಮೋದಿ ದೊಡ್ಡ ಮೋಸಗಾರ, ಮೋದಿ ದೊಡ್ಡ ಮೋಡಿಗಾರ, ಆತನ ಮಾತನ್ನು ನಂಬಬೇಕಾಗಿಲ್ಲ, ಆತನ ಮಾತಿನಲ್ಲೇನೂ ಹುರುಳಿಲ್ಲ”

ಇದನ್ನು ಈ ನಾಡಿನ ಜನತೆಗೆ ತಿಳಿಸಲು, ಕಾಂಗ್ರೇಸಿನಲ್ಲಿ ಎಲ್ಲಾ ನಾಯಕರೂ ಸದಾ ಕಾರ್ಯನಿರತರು, ಹಾಗೆಯೇ ನಮ್ಮಲ್ಲಿರುವ ಕೆಲವು ಕಾರ್ಯನಿರತ ಪತ್ರಕರ್ತರು!

*****

ಬಹುಸಂಖ್ಯಾತರ ನಾಯಕರನ್ನು ಅಲ್ಪಸಂಖ್ಯಾತರು ದ್ವೇಷಿಸಿದಷ್ಟು ಗಾಢವಾಗಿ, ಅಲ್ಪಸಂಖ್ಯಾತರ ನಾಯಕರನ್ನು ಬಹುಸಂಖ್ಯಾತರು ದ್ವೇಷಿಸುತ್ತಿಲ್ಲ!

*****

15 July 2013

*****

ಕೈಕಾಲುಗಳನ್ನು ಎಸೆದು ಮಲಗಿದಾಗ
ಈ ಮೈಗೆ ತಂಪು ಸ್ಪರ್ಶವನ್ನು ನೀಡಿ
ಆ ಕೈಕಾಲುಗಳನ್ನು ಹೊದಿಕೆಯೊಳಗೆ
ಸೇರಿಸಿ ಬಿಡುವ ನಮ್ಮ ತಾಯಿಯಂತೆ
.
ಈ ನಿಶಾದೇವಿ!

ಶುಭರಾತ್ರಿ!

*****

ಆಟ ಆಡಿದ್ದೆಲ್ಲಾ ಈ ಜೀವನಕ್ಕೆ ಪಾಠವಾಯ್ತು
ಪಾಠ ಕಲಿತ ಮೇಲೆ ಅವೆಲ್ಲವೂ ಆಟವಾಯ್ತು!

*****

ನಾನಂದು ಮತ ಚಲಾಯಿಸಿದ ನಿಶಾನಿ ಕೈಬೆರಳಿಂದ ಕಾಣೆಯಾಗುತ್ತಿದೆ
ನಾ ಸ್ವಹಿತ ಸಾಧಿಸಿದ ನಿಶಾನಿಯೂ ನಾಳೆ ಜಗದಿಂದ ಕಾಣೆಯಾಗುತ್ತದೆ!

*****

ನಮ್ಮಲ್ಲಿ ಅದೆಷ್ಟು ಮಂದಿ “Alarm Clock ” ಅನ್ನು “ಅಲ್ರಾಮ್ ಗಡಿಯಾರ” ಎಂದೇ ಕರೆಯುತ್ತಿದ್ದೆವು?

*****

What happens if we use bathing soap for shaving, instead of shaving cream?

*****

Mr. Narendra Modi takes a class on a Sunday, and the “so called secular” leaders, will have their homeworks in the following week!

*****

The News channels should be thankful to NAMO for keeping their TRP very high throughout the year!

*****

13 July 2013

*****

The sleep shows us a life that is beyond our control;
We come back, only when it releases us from its control!

*****

You never said and I never asked,
I never said and you never asked,
Yet, we know what is in each other’s mind!

*****

The world had never been so beautiful, before I met you and after you left me!

*****

ಇನ್ನೂ ಹತ್ತು ಹಲವು ಇರಬೇಕಾದ ಕಡೆಗಳಲ್ಲಿ ನಾನಿರಲಾಗದಿರುವುದಕ್ಕೆ ಬೇಸರವಿದೆ
ಇನ್ನೂ ಹತ್ತು ಹಲವು ಮಾಡಲಾಗದೇ ಉಳಿದ ಕೆಲಸಗಳ ಪೂರೈಸುವ ಹಂಬಲವಿದೆ!

*****
 

*****
While smoking / Drinking is shown on full screen, a warning is shown in one corner and is always illegible!
*****
ನಮ್ಮ ಹೊಲಗಳಲ್ಲಿ ನಾಟಿ, ಕಟಾವಿನ ಕೂಲಿಕೆಲಸಗಳ ದಿನಚರಿಯ ನಡುವೆ, ತಮ್ಮ ಮನೆಗಳಲ್ಲಿ ಬಟ್ಟೆಯ ತೊಟ್ಟಿಲುಗಳಲ್ಲಿ ಬೆಚ್ಚಗೆ ನಿದ್ರಿಸುತಿದ್ದ ಮಕ್ಕಳಿಗೆ ಸಮಯ ಸಮಯಕ್ಕೆ ತಪ್ಪದೇ ಮೊಲೆ ಹಾಲನುಣಿಸಿ ಬರಲು ಮರೆಯದೇ ನೆನಪಿಸಿಕೊಳ್ಳುತ್ತಿದ್ದ ಆ ಮಹಿಳೆಯರಲ್ಲಿನ ಸಂಸ್ಕಾರದ ನೆನಪು!
*****
ಇಲ್ಲಿ ಎಲ್ಲರೂ ಸಮಾನ ಅರಿವಿನವರಾದರೆ ಈ ವಿಚಾರ, ಚರ್ಚೆ, ವಾದ, ವಿಮರ್ಶೆ ಇವುಗಳಿಗೆಲ್ಲಾ ಸ್ಥಾನವೇ ಇರುವುದಿಲ್ಲ!
*****
I am a born Hindu.
I am a nationalist.
Come, beat me up!
*****
12 July 2013
*****
ರಾತ್ರಿ ಕರೆಮಾಡಿ, ನಿದ್ದೆಯಿಂದ ಎಬ್ಬಿಸಿ, ಕೇಳ್ತಾರೆ “ನಿದ್ದೆ ಮಾಡಿದ್ರಾ?”
.
ತಾವ್ಯಾರೂ ಕರೆಮಾಡಬೇಡಿ.

ನಾನು ಉತ್ತರಿಸುವುದಿಲ್ಲ!
ಶುಭರಾತ್ರಿ!
*****
Why is there a Ministry of Minority Affairs in our SECULAR COUNTRY?
*****
The media is desperately trying to prove that Mr. Narendra Modi compared a particular community to a puppy during the course of that interview!
Now, who is the media belittling here, is it Mr. Narendra Modi or the particular Community?
*****
ಸಖೀ,
ನನ್ನಲ್ಲಿ ಇಲ್ಲದ ಒಳ್ಳೆಯತನವನ್ನು ಪ್ರದರ್ಶಿಸುತ್ತಿರುತ್ತೇನೆ ನಾನು ಈ ಗೋಡೆಯ ಮೇಲೆ
ನನ್ನಲ್ಲಿರುವೆಲ್ಲಾ ಕೆಟ್ಟತನವನ್ನು ತೋರಿಸಿಕೊಳ್ಳಲು ನನ್ನ ಜೊತೆಗೆ ನೀನು ಇರುವೆಯಲ್ಲೇ!
*****
11 July 2013
*****
The Supreme Court of India is bringing “Sweeping” changes in Indian politics!
Yesterday: Convicted representatives should be disqualified.
Today: Leaders in jails, can’t contest in elections!

*****
“ಗರೀಬಿ ಹಟಾವೋ” “ಗುಡಿಸಲು ಮುಕ್ತ ಭಾರತ”
ಇವು ಸಾವಿರದ ಒಂಬೈನೂರ ಎಪ್ಪತ್ತರ ದಶಕದಿಂದಲೂ
ವೇದಮಂತ್ರಗಳಾಗಿವೆ, ವೇದಮಂತ್ರಗಳಾಗಿಯೇ ಇರುತ್ತವೆ!
*****
ಕ್ರೂರ ವ್ಯಂಗ್ಯ!

ಉಳ್ಳವರ ಬಗ್ಗೆ,
ಬಲ್ಲವರ ಬಗ್ಗೆ,
ಜ್ಞಾನಿಗಳ ಬಗ್ಗೆ,
ವ್ಯಂಗ್ಯ ಮಾಡಿದಾಗ
ಅದು ಯಾವತ್ತೂ
“ಶೋಷಣೆ” ಅಂತ ಅನಿಸೋದಿಲ್ಲ
“ಕ್ರೂರ” ಅಂತ ಅನಿಸೋದಿಲ್ಲ!
*****
Lakhs of rupees spent in every district headquarters, to kick start the distribution programme of Re. 1 per KG rice.
*****
9 July 2013
*****
ನೀ ಬಾರದಾಗ ನಿನಗಾಗಿ ಪರದಾಡಿದ್ದೂ ಇದೆ
ನೀ ಬಂದಾಗ ನಿನ್ನನ್ನು ಹಿಂದಕ್ಕೆ ಅಟ್ಟಿದ್ದೂ ಇದೆ
ಇಂದು ನಿನ್ನನ್ನು ಬರಸೆಳೆದು ಅಪ್ಪಿಕೊಳ್ಳುವಾಸೆ
ಈ ಕಣ್ಣುಗಳೊಳಗೇ ನಿನ್ನನ್ನು ಇಳಿಸಿಕೊಂಬಾಸೆ.
.
ನೀ ನಿದ್ರಾರಾಣಿ!
ಶುಭರಾತ್ರಿ!
*****
ಸಖೀ,
ನಿನ್ನ ಮುಂದೆ ಮಂಡಿಯೂರಿ, ನೀನುಲಿವ ನುಡಿಗಳ ಆಲಿಸುವಾಸೆ
ನಿನಗೋ ನಿನ್ನೆಲ್ಲಾ ಸ್ನೇಹಿತರ ಮಾತುಗಳನಲ್ಲಿ ಹೆಕ್ಕಿಕೊಳ್ಳುವಾಸೆ!
*****
“ಉಗ್ರರ ಕೃತ್ಯ ನೋಡಿ ಬುದ್ಧ ನಕ್ಕ!” – ಬೆಂಗಳೂರಿನ ಓದುಗರಿಗಾಗಿ.
“ಬುದ್ಧಸಿದ್ಧ ಕ್ಷೇತ್ರಕ್ಕೆ ಬಾಂಬ್ ಬರಸಿಡಿಲು” – ದಕ್ಷಿಣ ಕನ್ನಡದ ಓದುಗರಿಗಾಗಿ.
ಎಲ್ಲಿಯ ಓದುಗರು ಅತಿ ಬುದ್ಧಿವಂತರೆಂದು ಈ ಪತ್ರಿಕೆಯವರು ತಿಳಿದಿದ್ದಾರೆ?
*****
ಸುದ್ದಿಪತ್ರಿಕೆಗಳಲ್ಲಿನ ತಲೆಬರಹಗಳು ಸುದ್ದಿಗಳನ್ನು ಬಿಂಬಿಸುವಂತಿರಬೇಕು, ಪ್ರತಿಯೊಬ್ಬ ಓದುಗನಿಗೂ ಅರ್ಥವಾಗುವಂತಿರಬೇಕು!
*****
Solar Energy in Gujarat – Solar Scam in Kerala!
*****
Breaking News:
“Reports suggest that Osama was in Pak for 9 years”.
Why so much hype on this aftre he is killed?
What are you doing with the every day news?
“Underworld Don Dawood is in Pakistan and LeT is funded from the Pak Govt Budget”.
*****
8 July 2013
*****
ನಾನು ಏನು ಅನ್ನುವುದರ ಅರಿವು ನಿನಗಿರುವಂತೆಯೇ ನನಗೂ ಇಹುದು ನಲ್ಲೇ
ಬರಿದೆ ಬೀಗುವೆಯೇಕೆ ನೀನು ಏನು ಅನ್ನುವುದನ್ನು ನೀನಷ್ಟೇ ಅಲ್ಲ ನಾನೂ ಬಲ್ಲೆ!
*****
ಕೆಲವರೊಂದಿಗೆ ವಾದಕ್ಕಿಳಿಯುವುದಕ್ಕಿಂತ, ಅವರ ವಾದವನ್ನು ಓದಿದ್ದೇನೆ ಅನ್ನುವುದರ ಸೂಚನೆ ನೀಡಿ (ಮೆಚ್ಚುಗೆ ಸೂಚಿಸಿ – “ಲೈಕ್” ನ ಲಾಭ ಇದು) ಸುಮ್ಮನಿರುವುದು ಒಳ್ಳೆಯದು.
ಅವರಿಗೂ ಖುಷಿ, ನಮಗೂ ನೆಮ್ಮದಿ!
*****
ಸೃಜನಶೀಲರು ತಮ್ಮ ಬೆಲೆ ಕಳೆದುಕೊಳ್ಳುವುದು,
ಅನ್ಯ ಸೃಜನಶೀಲರ ಅಶ್ಲೀಲ – ಅನೈತಿಕವಲ್ಲದ
ಸೃಜನಶೀಲ ರಚನೆಗಳನ್ನು ಖಂಡಿಸುವುದರಿಂದ!
*****
7 July 2013
*****
If, according to Congress man Digvijay Singh, the Bodhgaya blasts could be linked to Narendra Modi’s statements, then, Mrs. Indira Gandhi’s assassination could be declared as a suicide.
She too had spoken about “… the last drop of my blood…”, a day before her assassination at Bhuvaneshwar in Orissa
*****
ಮುರಿದ ಮನೆಯಲ್ಲಿನ ವಾಸ
ಮುರಿದ ಮನದ ಸಹವಾಸ
ವೈರಿಗಳು ನಮ್ಮನಶಾಂತಿಗೆ!
*****
ಸ್ವಲ್ಪ ನೋವಿರಲಿ, ಸ್ವಲ್ಪ ಒಲವಿರಲಿ
ಸ್ವಲ್ಪ ರಸಿಕತೆ, ಸ್ವಲ್ಪ ವಿರಹವಿರಲಿ
ಸ್ವಲ್ಪ ಪ್ರಕೃತಿ, ಸ್ವಲ್ಪ ಸ್ಪೂರ್ತಿಯಿರಲಿ
ಖುಷಿಯಿರಲಿ, ಕಷ್ಟ-ಸುಖವೂ ಇರಲಿ
ಸ್ವಲ್ಪ ಅರಿವು, ಸ್ವಲ್ಪ ಸಂದೇಶವಿರಲಿ
ಪ್ರತಿದಿನವೂ ಸಾಹಿತ್ಯಕೃಷಿಯಿರಲಿ!
*****
ಮತಾಂಧ ರಾಜಕಾರಣಿಗಳು ಉಗ್ರವಾದಿಗಳಿಗಿಂತ ಕೆಟ್ಟವರು.
ಉಗ್ರವಾದಿಗಳು ತಮ್ಮ ಬಹಿರಂಗಗೊಳಿಸಿ, ಕಾರ್ಯಕ್ರಮವನ್ನು ರೂಪಿಸಿಕೊಳ್ತಾರೆ.
ಈ ಮತಾಂಧ ರಾಜಕಾರಣಿಗಳು, ಹೇಳುವುದೊಂದು ಹಾಗೂ ಮಾಡುವುದೊಂದು!

 

6 July 2013

ಕತ್ತಲನ್ನು ಸೀಳಿಕೊಂಡು ಬರುವ ಮಿಂಚುಳಕ್ಕೂ ನೋಡು ತನ್ನದೇ ಆದ ಗತ್ತು ಇದೆ

ದಣಿವಿಲ್ಲದ ದಿನಚರಿಯ ನಡುವೆ ಬರುವ ನಿನ್ನ ನೆನಪಿಗೆ ತನ್ನದೇ ಆದ ಮತ್ತು ಇದೆ!

*****

ರಾತ್ರಿಯ ನೀರವತೆಯಲ್ಲಿ ನನ್ನ ಕಿವಿಗಳನ್ನು ತುಂಬುತ್ತವೆ ಜೀರುಂಡೆ, ಕಪ್ಪೆ, ಗೂಬೆಗಳ ಸದ್ದುಗಳು;
ಆದರೆ ಅವೆಲ್ಲವನ್ನೂ ಮೀರಿ ನನ್ನ ಮನಪಟಲದಲ್ಲಿ ಸದ್ದು ಮಾಡುವವು ಕೇವಲ ನಿನ್ನಯ ನೆನಪುಗಳು!

*****

While I am riding or driving on the road, do I have any right to curse the traffic density on the Bangalore roads?

ನಾನೂ ಒಂದು ವಾಹನ ಚಲಾಯಿಸುತ್ತಿರುವಾಗ, ಬೆಂಗಳೂರಿನ ರಸ್ತೆಗಳಲ್ಲಿನ ಸಂಚಾರ ದಟ್ಟಣೆಯನ್ನು ಶಪಿಸುವ ಹಕ್ಕು ನನಗಿದೆಯೇ?

*****

ಉಪಮೆ!

ಮ್ಲಾನವದನೆ
ಕರಿದ ಬದನೆ!

*****

ಸಾಯಂಕಾಲ…
ನೆತ್ತಿಯಿಂದ ಕೆಳಗಿಳಿದ ಸೂರ್ಯ ಕಂಕುಳಿಗೆ ಕಚಗುಳಿ ಇಡುವ ಸಮಯ
ನಿನ್ನ ನೆನಪು ನನ್ನ ಮನದಾಗಸದಲ್ಲಿ ಕಾಮನಬಿಲ್ಲು ಮೂಡಿಸುವ ಸಮಯ
*****
ಸ್ವತಂತ್ರ ಭಾರತದಲ್ಲಿ ಮುಂದೊಮ್ಮೆ ಈ ಜಾತಿ ಪದ್ಧತಿ ಕೊನೆಗೊಳ್ಳಬಹುದು ಎನ್ನುವ ಭಯದಿಂದ, ಅದನ್ನು ಉಳಿಸಿಕೊಳ್ಳುವ ದೂರಾಲೋಚನೆಯೊಂದಿಗೆ, ಜಾತ್ಯಾಧಾರಿತ ಮೀಸಾಲಾತಿ ಪದ್ಧತಿಯನ್ನು ಜಾರಿಗೊಳಿಸಿದ್ದಾರೆ ಹಾಗೂ ಇಂದಿಗೂ ಉಳಿಸಿಕೊಂಡಿದ್ದಾರೆ ಅಂತ ನನಗನಿಸಿದರೆ, ಅದು ನನ್ನ ಮೂಗಿನ ನೇರದ ಅನಿಸಿಕೆ, ಅಷ್ಟೇ.

ಯಾವುದೇ ಸರಕಾರ ನನ್ನ ಈ ಅನಿಸಿಕೆಗಳ ಮೇಲೆ ಕಾರ್ಯ ನಿರ್ವಹಿಸುತ್ತಿಲ್ಲ. ಈ ಜಾತಿ ಪದ್ಧತಿಗೆ ಬದ್ಧರಾಗಿರುವವರು ಎಳ್ಳಷ್ಟೂ ಭಯಪಡಬೇಕಾಗಿಲ್ಲ!
*****
MERE GHAR AAYI EK NANHI PARI,
CHANDINI KE HASEEN RATH PAR SAWAAR,
MERE GHAR AAYI EK NANHI PARI 🙂
*****
The CBI chargesheet on the Ishrat Jehan encounter will one day be buried in the grave being dug by the IB, NIA and Digvijay Singh by the Supreme Court of India.

5 July 2013ನನ್ನೊಳಗೊಂದಾಗಿ, ಬಂದು ನನ್ನ ಕಣ್ರೆಪ್ಪೆಗಳ ಮುಚ್ಚುವಾಟ
ಸೋಲದಿರಲಾರೆ ಅರಿತೂ, ಪ್ರತಿ ರಾತ್ರಿ ನಿನ್ನದೊಂದೇ ಕಾಟ!
.
ನೀ ನಿದ್ರಾರಾಣಿಶುಭರಾತ್ರಿ!
*****
ಅಲ್ಲೆಲ್ಲೋ ಯಾರನ್ನೋ ಕಂಡು ನಿನ್ನ ನಾ ನೆನಪಿಸಿಕೊಂಡೆ
ಆದರಿಲ್ಲೀಗ ನಿನ್ನ ಮೊಗದಲ್ಲಿ ಯಾರದೋ ನಗೆಯ ಕಂಡೆ!
*****
ಅಳುವಾಗ ನೀ ನನ್ನ ಇದಿರಿರಲೇ ಇಲ್ಲ
ನಗುವಾಗ ನಾ ನಿನ್ನ ಜೊತೆಗಿರಲಿಲ್ಲ!
*****
ನಿನ್ನ ಕಣ್ಣುಗಳ ಒಳಗಿನ ನನ್ನ ಬಿಂಬಕ್ಕೆ ಮುಸುಕು ಕವಿದಿತ್ತು ನಿನ್ನ ಕಣ್ಣೀರಿನಿಂದಾಗಿ
ನನ್ನ ಮುಂದಿರುವ ಮಾರ್ಗವೂ ಮಸುಕು ಮಸುಕಾಗಿದೆ ನಿನ್ನ ಜೊತೆಯಿಲ್ಲದಂತಾಗಿ
*****
ನಿನ್ನ ನಿರೀಕ್ಷೆಯಲ್ಲಿ ಕಳೆದ ನಿಮಿಷಗಳ ಲೆಕ್ಕವನ್ನೇ ಇಡದ ನಾನು
ನಿನ್ನೊಂದಿಗೆ ಕಳೆದ ಕ್ಷಣಗಳ ಲೆಕ್ಕ ಇಡುವೆನೆಂದುಕೊಂಡೆಯೇನು?
*****
When I air my views, some people pounce on me like the members in the opposition benches in the Lokasabha, as if the Govt would immediately bring out a bill based on my views.
*****
Most of the times, I understand and agree.
Some times, I understand and disagree.
Some times, I don’t understand and then need not bother to agree or disagree!
*****
ಕಷ್ಟ-ಸುಖಗಳ ಸಮ್ಮಿಶ್ರ ಬದುಕಿನಲ್ಲಿರುವ ಆನಂದ, ಬರೀ ಸುಖಮಯ ಜೀವನದಲ್ಲಿಲ್ಲ!A very happy life is not so interesting as a life mixed with happiness and sorrows is!4 July 2013The caste system will be alive as long as the reservation system is alive and vice versa!
🙂
*****
ಇದ್ದೂ ಇರದಂತಿರುವಲ್ಲಿ ಇರದಿರುವುದೇ ಉತ್ತಮ!
3 July 2013
*****
ಸಖೀ,
ಬೆಂಕಿ ಇರುವುದು ಆ ಸೂರ್ಯನಲ್ಲಿ
ಆದರೆ ಬಿಸಿಲ ಬೇಗೆ ಈ ಭೂಮಿಗೆ
ಒಲುಮೆ ಮೂಡುವುದು ನೋಟಗಳಲ್ಲಿ
ಆದರೆ ಪರಿತಪಿಸುವ ಕಷ್ಟ ಮನಸ್ಸಿಗೆ!
*****
ನಮ್ಮ ಮೊಬೈಲಿನಿಂದ ಕರೆ ಮಾಡಿದಾಗ ಯಾವಾಗಲೂ “ತಾವು ಕರೆಮಾಡಿದ ನಂಬರ್ ಸದ್ಯ ಬ್ಯುಸಿಯಾಗಿದೆ” ಎಂದು ಸಂದೇಶ ಬರುವ ಒಂದು ನಂಬರ್ ಯಾವುದು?
*****
ಸಖೀ,
ಭೋಜನ ಮಾಡುವುದೂ ಈಗೀಗ ಕರ್ತವ್ಯ ನಿರ್ವಹಣೆಯಂತಾಗಿದೆ
ಯಾಕೋ ಹಿಂದಿದ್ದ ಆಸಕ್ತಿ ಈಗೀಗ ಎಳ್ಳಷ್ಟೂ ಇಲ್ಲದಂತಾಗಿಬಿಟ್ಟಿದೆ!
*****
ಸಖೀ,
ನನ್ನಿದಿರು ಕೂತ ನಿನ್ನ ಕಂಗಳಲ್ಲಿನ ಬಯಕೆಗಳಂತೆ
ಪ್ರತಿ ಅಪರಾಹ್ನ ನನ್ನನ್ನು ಹಸಿವು ಕಾಡುವುದಂತೆ!
*****
ನೂರಾರು ಗುಂಪುಗಳಿಂದ ನನ್ನನ್ನೇ ನಾ ನೂಕುವೆನು ದೂರ,
ಮೂರ್ನಾಲ್ಕು ಗುಂಪುಗಳಿಗಿಂತ ಹೆಚ್ಚಾದರೆ ನಿಜಕೂ ಭಾರ!1 July 2013
*****
ನಾನದೆಲ್ಲೇ ಇದ್ದರೂ
ಸೆಳೆಯುವೆ ನೀನು
ಒಲ್ಲದ ಮನಸ್ಸಿನಿಂದ
ಬಳಿ ಬರುವೆ ನಾನು
ಮತ್ತೆ ಮುಂಜಾನೆಯ
ತನಕ ನೀನು-ನಾನು.ನೀ ನಿದ್ರಾ ರಾಣಿ!ಶುಭರಾತ್ರಿ!

*****
ತಮ್ಮ ಮನದ ಬಾಗಿಲನ್ನು ತೆರೆದಿಡಿ
ಸಹಮನಸ್ಕರು ಇಡುತ್ತಾರೆ ಒಳಗಡಿ!
*****
ಆತನಿಗೆ ಆ
“ಲಿಫ್ಟ್” ನಲ್ಲಿ
ಹದಿನೆಂಟನೇ
ಮಹಡಿಯಿಂದ
ನೆಲಮಹಡಿಗೆ
ಬರುವಷ್ಟರಲ್ಲಿ
“ಲವ್” ಆಗಿತ್ತಂತೆ,
ತನ್ನ ಜೊತೆಗೆ
ಕದ್ದೊಯ್ದೇ ಬಿಟ್ಟ
“ಲಿಫ್ಟ್”ನೊಳಗಿದ್ದ
.
ಆ ಹೊಸಾ ಫೋನನ್ನು!
*****
“ಸ್ಮಶಾನ ವೈರಾಗ್ಯ” ಅನ್ನುವ ಪದಗಳೂ ಅರ್ಥ ಕಳೆದುಕೊಂಡವು ಉತ್ತರಾಖಂಡದಲ್ಲಿ.
ಹೆಣಗಳ ಮುಂದೆಯೂ ವೈರಾಗ್ಯ ಕಾಡಲಿಲ್ಲ, ರಾಜಕಾರಣಿಗಳಿಗೆ!*****
ಸಖೀ,
ಮುಂಜಾವಿನಿಂದ
ಸಂಜೆಯ ತನಕ
ಕಾದು, ಕೊನೆಗೂ
ಕರೆ ಮಾಡಿದಾಗ
ವ್ಯಾಪ್ತಿ ಪ್ರದೇಶದ
ಹೊರಗಿರಬೇಕಿತ್ತೇ?
*****”Loudspeaker” ಅನ್ನು ಧ್ವನಿವರ್ಧಕ ಅನ್ನುವುದು ಸೂಕ್ತ.
ಆದರೆ “Microphone” ಅನ್ನೂ ಧ್ವನಿವರ್ಧಕ ಅನ್ನುವುದು ಸೂಕ್ತವೇ?[ಹುಡುಕು ಪದ: microphone
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
microphone ನಾಮಪದ
ಧ್ವನಿವರ್ಧಕ, ಧ್ವನಿಪ್ರಸಾರಿಣಿಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು
microphone ನಾಮಪದ
ಉಲಿಹೆಚ್ಚುಕ]ನಾನು ಅದನ್ನು ಧ್ವನಿಗ್ರಾಹಕ ಅನ್ನುತ್ತೇನೆ. ತಾವೇನಂತೀರಿ?
*****
ಧ್ವನಿಗ್ರಾಹಕದ ಪರೀಕ್ಷೆ ಮಾಡುವವರು “ಹಲೋ ೧, ೨, ೩, ೩, ೨, ೧” ಅಂತಾರೆ.
ಹಾಗೆಯೇ, ನನ್ನನ್ನು ಪರೀಕ್ಷೆ ಮಾಡುವವರೊಬ್ಬರು ಒಂದು ಸಂದೇಶ ಕಳುಹಿಸಿದರು. ನಾನು ಮರು ಸಂದೇಶ ಕಳುಹಿಸಿದೆ.
ಆ ನಂತರ ಅತ್ತಲಿಂದ ಸುದ್ದಿ ಇಲ್ಲ. ಮರುಸಂದೇಶ ಹೋದನಂತರವೂ ಸುಮ್ಮನುಳಿದುಬಿಟ್ಟಿದ್ದಾರೆ.
ನಾನು ಪರೀಕ್ಷೆಯಲ್ಲಿ ತೇಗಡೆ ಹೊಂದಿದ್ದೇನೋ, ಇಲ್ಲವೋ ತಿಳಿಯದಾಗಿದೆ! 🙂
*****
ನನ್ನ ಮನ ಮೆಚ್ಚುವ ಪ್ರತಿಕ್ರಿಯೆಯನು ಅನ್ಯರ ಮನ ಮೆಚ್ಚುವುದಿಲ್ಲ
ಅನ್ಯರ ಮನ ಮೆಚ್ಚುವ ಪ್ರತಿಕ್ರಿಯೆಯನು ನನ್ನ ಮನ ಮೆಚ್ಚುವುದಿಲ್ಲ
ಪ್ರತಿಕ್ರಿಯೆಗಳ ಸಹವಾಸವೇ ಬೇಡ ಎಂದರೆ ನನ್ನ ಮನ ಕೇಳುತ್ತಿಲ್ಲ
ಆದರೂ ಒಂದಷ್ಟು ದಿನ ನಾ ನನ್ನ ಮನದ ಮಾತನ್ನೇ ಕೇಳುವುದಿಲ್ಲ!30 June 2013*****

ಮೊದಲ ಮಾತು ನನ್ನದಿರಲಿ, ನನಗಿಲ್ಲ ಕಷ್ಟ
ಮಾತು ಮುಂದೂ ಸಾಗಲಿ ನಿನಗಿದ್ದರೆ ಇಷ್ಟ!

*****

ಮನೆ ಒಕ್ಕಲಾಗುವಾಗ, ಕೆಲವು ಮನಗಳೊಳಗೂ ಒಕ್ಕಲಾಗುತ್ತದೆ!

(ಅರಿಯದವರಿಗಾಗಿ: ಮನೆ ಒಕ್ಕಲು ಅಂದರೆ ಗೃಹಪ್ರವೇಶ)

 
*****

ಜೀವನ ಜೀವಂತವಾಗಿ ಇರದಿದ್ದರೂ ಜೀವಿಸುವುದು ಅನಿವಾರ್ಯ,
ಭಾವನೆ ಕ್ರಿಯಾಶೀಲವಾಗಿರದಿದ್ದರೂ ಭಾವಾಭಿವ್ಯಕ್ತಿ ಅನಿವಾರ್ಯು!

****

29 June 2013

ನಿನ್ನೆಯವರೆಗೆ ಅಕ್ಕಿ ಬೆಂದು ಅನ್ನವಾದದ್ದೂ, ಮೊಟ್ಟೆ ಆಮ್ಲೇಟ್ ಆದದ್ದೂ, ಸುದ್ದಿಯಾಗುತ್ತಿತ್ತು ಈ ಗೋಡೆಯ ಮೇಲೆ
ಇಂದು ಮಾತೇ ಇಲ್ಲ, ಏಕಾಂತದಲ್ಲಿದ್ದರೆ ಮಾತ್ರ ಹಂಚುವುದು, ಹಂಚಲೇನೂ ಉಳಿದಿಲ್ಲವೇ ಜೊತೆ ಸಿಕ್ಕ ಮೇಲೆ?

*****

“ಮುಕ್ತ” ಮತ್ತು “ಮುಕ್ತ ಮುಕ್ತ” ಧಾರಾವಾಹಿಗಳಿಂದಾಗಿ ಆದ ಸಾಮಾಜಿಕ ಬದಲಾವಣೆಯಿಂದಾಗಿ, ಸಿದ್ದರಾಮಯ್ಯನವರು ಈ ರಾಜ್ಯದ ಮುಖಮಂತ್ರಿ ಆದರು.

“ಮಹಾಪರ್ವ”ದಿಂದ ಇನ್ಯಾವ ಬದಲಾವಣೆ ಆಗಲಿದೆಯೋ, ಇನ್ನಾರು ಈ ನಾಡಿನ ಮುಖ್ಯಮಂತ್ರಿ ಆಗಲಿದ್ದಾರೋ…?

(ಈ ಬದಲಾವಣೆ ಆ ಧಾರಾವಾಹಿಗಳಿಂದಾಗಿ ಅಲ್ಲ ಅಂತ ಅನ್ನುತ್ತೀರಾ?
ಹಾಗಾದರೆ ಆ ಧಾರಾವಾಹಿಗಳು ಸಾಧಿಸಿದ್ದೇನು?)

*****

ಹಗಲಿಡೀ ಕುಣಿದೋ, ದುಡಿದೋ ದಣಿದ ಮಕ್ಕಳನ್ನು ಬೆಚ್ಚಗೆ ಮಲಗಿಸಿ
ಅವರ ದಣಿವಾರಿಸಿ ಕಾಪಾಡುವ ಮಮತಾಮಯಿ ತಾಯಿಯಂತೆ ನೀನು
ನಿನ್ನ ಕರೆಗೆ ಓಗೊಡದವರೇ ಇಲ್ಲ ಯಾರೂ, ಇದಕಪವಾದವಾಗಿಲ್ಲ ನಾನೂ,
.
ನೀನೇ ನಿದಿರಾದೇವಿ
ಶುಭರಾತ್ರಿ!

*****

ಕೆಚ್ಚೆದೆಯ ಬಿಚ್ಚುಮಾತು:

“1970ರ ದಶಕದವರೆಗೆ ಬಂದ ಮುಖ್ಯಮಂತ್ರಿಗಳೆಲ್ಲಾ ನಿಷ್ಠಾವಂತರಾಗಿದ್ದರು.

ದೇವರಾಜ ಅರಸು ಅವರೂ ಪ್ರಗತಿಪರ ಮುಖ್ಯಮಂತ್ರಿಗಳಾಗಿದ್ದರು.

ಸ್ವಾತಂತ್ರ್ಯಹೋರಾಟದ ಹಿನ್ನೆಲೆಯಿಂದ ಬಂದಿದ್ದ ರಾಮಕೃಷ್ಣ ಹೆಗಡೆಯವರೂ ಮೌಲ್ಯಾಧರಿತ ರಾಜಕಾರಣ ಮಾಡಿದವರು.

ಆದರೆ ಅವರ ನಂತರ ಬಂದ ಎಲ್ಲಾ ಮುಖ್ಯಮಂತ್ರಿಗಳೂ ಸ್ವಾರ್ಥಿಗಳು ಹಾಗೂ ಧನದಾಹಿಗಳಾಗಿದ್ದರು. ಅವರಲ್ಲಿ ಯಾರೂ ಒಳ್ಳೆಯ ರಾಜಕಾರಣಿಗಳು ಕಾಣಬರುವುದಿಲ್ಲ”.

– ಮಹಾಪರ್ವ ಧಾರಾವಾಹಿಯ ಉದ್ಘಾಟನಾ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು.

*****
ಸಖೀ,
ನಾನು ಬರೆದುದನ್ನೆಲ್ಲಾ ನೀನು ಅರಿತಿದ್ದಿ ಎಂಬ ನಂಬಿಕೆ ನನಗಿಲ್ಲ
ನನ್ನೆಲ್ಲಾ ಮಾತುಗಳ ನೀ ಅರಿಯಬೇಕೆಂಬ ಬಲವಂತವೂ ಇಲ್ಲ
ಖಂಡಿಸುವ ಮೊದಲು ಮಾತುಗಳ ಅರ್ಥ ನಿನಗಾದರಷ್ಟೇ ಸಾಕು
ಪಯಣದಲಿ ನನ್ನ ಸಾರಥಿ ನೀನಲ್ಲ, ನೀನು ಜೊತೆಗಿದ್ದರೆ ಸಾಕು!

*****

ಸಖೀ,
ನಿನ್ನ ಕ್ರಿಯೆಗೆ ನನ್ನ ಪ್ರತಿಕ್ರಿಯೆ
ನನ್ನ ಕ್ರಿಯೆಗೆ ನಿನ್ನ ಪ್ರತಿಕ್ರಿಯೆ
ಇಬ್ಬರಿಗೂ ಸ್ವಾತಂತ್ರ್ಯ ಸರಾಸರಿ;

ನೈತಿಕತೆಯ ಹದ್ದೆಂದೂ ಮೀರದ
ವಸ್ತು ವಿಷಯಗಳ ಪರಿಧಿ ದಾಟದ
ಪ್ರತಿಕ್ರಿಯೆಗಳ ಮೇಲಿಲ್ಲ ಸವಾರಿ!

*****

ಸಖೀ,
ಅವರಿವರಂತೆ ನೀನಿಲ್ಲ ಅನ್ನುವೆನ್ನ ಮಾತಿಗೆ ಸಿಟ್ಟಾಗುವ ನೀನು
ನಿನ್ನಂತೆ ಜಗದಲ್ಲಾರೂ ಇಲ್ಲ ಅನ್ನಲು ಪಡುವ ಈ ಹೆಮ್ಮೆಯೇನು?

*****

ಸಖೀ,
ಈಗ ಬೇಸರವಾದಾಗಲೆಲ್ಲಾ ನನಗೆ ನಿನ್ನ ನೆನಪು
ಬೇಸರ ಆಗದಿರಲೂ ಬೇಕೆನಗೆ ನಿನ್ನದೇ ನೆನಪು!

*****

ಸಖೀ,
ನಿನ್ನ ಕಂಗಳು ಮಾತನಾಡುತ್ತಿದ್ದವು
ನನ್ನ ತುಟಿಗಳು ಮೌನವನ್ನಪ್ಪಿದ್ದವು!

*****

ಸಖೀ,
ಕಳಚಿ ಹೋದ ಬಂಧಗಳ ಬಗ್ಗೆ ಎರಡು ಮಾತಿಲ್ಲ
ಇದ್ದ ಬಂಧಗಳ ನಡುವೆ ಎರಡು ಮಾತೂ ಇಲ್ಲ!

*****

ದಯವಿಟ್ಟು ಯಾವುದೇ ಆಟಕ್ಕೂ ಕರೆಯಬೇಡಿ ನನ್ನನ್ನು

ಹಾಗಂದ ಮಾತ್ರಕ್ಕೆ ಯಕ್ಷಗಾನ ಬಯಲಾಟಕ್ಕೆ ಕರೆಯದೇ ಉಳಿಯಬೇಡಿ!

“ಆನ್‍ಲೈನ್” ಆಟಗಳ ಬಗ್ಗೆ ಹೇಳುತ್ತಿರುವುದು ನಾನು!

*****

ಒಂದರ್ಧ ದಿನ ಫೇಸ್‍ಬುಕ್‍ನಿಂದ ನಾವು ಇದ್ದುಬಿಟ್ಟರೆ ಸಾಕು ದೂರ
ನಮ್ಮ ಸ್ನೇಹಿತರ ಮಾತುಗಳು ಹೋಗುತ್ತವೆ ನಮ್ಮ ಕಣ್ತಪ್ಪಿ ದೂರ!

*****

28 June 2013

ಸ್ಥಾನ ಪಲ್ಲಟ!
*******
ಸಖೀ,
ಕೂತಲ್ಲೇ ಕೂತಿದ್ದೆ
ಮನದೊಳಗೆ ನನ್ನನ್ನೇ ನಾ ಹೂತಿದ್ದೆ
ನೀ ಬರಲು ನಾನೆದ್ದೆ
ಅಲ್ಲಿಂದ ಈ ಮನದೊಳಗೆ ನೀನಿದ್ದೆ
ಪ್ರಶ್ನೆಯೊಂದು ಎದ್ದಿದೆ
ನೀನೇ ಹೇಳು ಎದ್ದ ನಾನು ಎಲ್ಲಿದ್ದೆ?

*****

Children should learn about love, devotion and cleanliness from their mothers and punctuality, discipline, dedication and social responsibility from their fathers!

Most of these are learnt more by looking at their life style than by their preaching.

*****

27 June 2013

*****

ಈ ಪರಿಯ ಹೊಟ್ಟೆಕಿಚ್ಚೇಕೆ
ನನ್ನತ್ತ ಅನುಮಾನದ ನೋಟವೇಕೆ?
ಹಗಲೆಲ್ಲಾ ಊರೂರು ಸುತ್ತಿ ಬಂದರೂ
ನೂರು ನೋಟಗಳ ನೋಡಿ ಬಂದರೂ
ರಾತ್ರಿ ನಾ ಮರಳುವುದು ನಿನ್ನ ಮಡಿಲಿಗೇ
ವಶಪಡಿಸಿಕೊಂಡು ಪರವಶಗೊಳಿಸು ನನ್ನ
ನೀನು ಈಗ ಒಮ್ಮಿಂದೊಮ್ಮೆಗೇ!
.
ನಿದ್ರಾರಾಣಿ!

ಶುಭರಾತ್ರಿ!

*****

ಡೂಬ್ ನೇ ವಾಲೇ ಕೋ ತಿನ್ ಕೇ ಕಾ ಸಹಾರಾ ಹೀ ಬಹುತ್!

ಮುಳುಗುವವನಿಗೆ ಹುಲ್ಲುಕಡ್ಡಿಯ ಆಸರೆಯೂ ದೊಡ್ಡದು

ಯಡ್ಡಿಗೆ ಬಿಜೆಪಿ ಬೇಕಾ… ಬಿಜೆಪಿಗೆ ಯಡ್ಡಿ ಬೇಕಾ?

ಹಮ್ ತೋ ಡೂಬೇಂಗೇ ಸನಮ್ ಅಪ್ ಕೋ ಭೀ ಸಾಥ್ ಲೇ ಡೂಬೇಂಗೇ!

ಯಾರು ಯಾರನ್ನು ಮುಳುಗಿಸುತ್ತಾರೋ ಆ ದೇವರೇ ಬಲ್ಲ!

*****

ಆಲಿಸುತ್ತಿರುವೆಯಲ್ಲಾ ನೀನು
ಅಳುತ್ತಿರುವೆ ಇಲ್ಲಿ ನಾನು
ಆಲಿಸುತ್ತಿರುವೆಯಲ್ಲಾ ನೀನು
ಏಕಳುತ್ತಿರುವೆ ಇಲ್ಲಿ ನಾನು!

*****

ನನ್ನೆಲ್ಲಾ ಬವಣೆಗಳಿಗೆ ನೀನೇ ಹೊಣೆ
ನನ್ನೆಲ್ಲಾ ಬವಣೆಗಳಿಗೆ ನೀನೇ ಹೊಣೆ
ನನ್ನೆಲ್ಲಾ ಬವಣೆಗಳಿಗೆ ನೀನೇ ಹೊಣೆ
.
.
ಅಂತ ಈಗೀಗ ಪದೇ ಪದೇ ನೀನು
ಹೇಳುತ್ತಾ ಇರೋದು ನಿಜಾ ಕಣೇ!

*****
ಯಡ್ಡಿ ಮತ್ತೆ “ಚಡ್ಡಿ” ಹಾಕ್ತಾರಾ?

*****

ಸಖೀ,
ನನ್ನ ನಿಧನವಾರ್ತೆಯನ್ನು ಈ ಲೋಕಕ್ಕೇ ನಾನೇ ಮುಟ್ಟಿಸಬೇಕೆಂಬ ಆಸೆ
ನಿಧನಾನಂತರದ ಆಗುಹೋಗುಗಳನ್ನು ನಾನೇ ದಾಖಲಿಸಿಡಬೇಕೆಂಬ ಆಸೆ!

*****

ಸಖೀ,
ನಿರ್ಲಿಪ್ತಭಾವದೊಂದಿಗೆ ಜೀವಿಸತೊಡಗಿದ ಮೇಲೆ ಯಾರಿಗೂ ಅಂಟಿಕೊಂಡಿಲ್ಲ ನಿಜ
ಆದರೆ, ಈಗೀಗ ಜೀವನವನ್ನೇ ಪ್ರೀತಿಸತೊಡಗಿರುವೆ ಆ ಸಾವಿನ ಬಗ್ಗೆ ಭಯ ಸಹಜ!

*****

ಸಖೀ,
ಅವರಿವರಂತೆ ನೀನಿಲ್ಲ ಅನ್ನುತ್ತಿದ್ದೆ ನೀನು ಇದುವರೆಗೆ
ಹೌದು ಅವರಿವರಂತೆ ನಾನಿರಲಾರೆ ನೀನಿರುವವರೆಗೆ!

*****

ಸಖೀ,
ನಿನ್ನ ಮಾತುಗಳಲ್ಲಿ ನಾನು ನಿನ್ನನ್ನು ಹುಡುಕುತ್ತಿದ್ದೆ
ಕೊನೆಗೂ ಸಿಕ್ಕಾಗ ನೀನು ಮೌನದಲ್ಲಿ ಹುದುಗಿದ್ದೆ!

*****

“ಖಾನೇಷುಮಾರಿ”
ಈ ಪದವನ್ನು ಯಾರಾದರೂ ಕೇಳಿದ್ದೀರಾ? ಬಳಸಿದ್ದೀರಾ?
ಬಾಲ್ಯದಲ್ಲಿ ನನ್ನಲ್ಲಿ ಬಹಳಷ್ಟು ಆಶ್ಚರ್ಯ ಮೂಡಿಸಿದ್ದ ಪದ ಇದು.

26 June 2013

*****

ನಿನ್ನ ಜೊತೆಯಲ್ಲಿ ಕಳೆದ ಅ ರಾತ್ರಿಗಳು ಅದೆಷ್ಟು ಹಳತೆನಿಸಿದರೂ ನೀನೆಂದೂ ಹಳತೆನಿಸುವುದಿಲ್ಲ
ಮತ್ತದೇ ಚಿರನೂತನ ನಶೆಯೊಂದಿಗೆ ನನ್ನನ್ನು ಆವರಿಸಿ ತನ್ನೆಡೆಗೆ ಸದ್ದಿಲ್ಲದೇ ಸೆಳೆಯುವೆಯಲ್ಲಾ?
.
.

ನೀ
ನೀನೇ
ನಿದ್ರಾದೇವಿ!

ಶುಭರಾತ್ರಿ!
*****

ಸಖೀ,
ಒಂದಷ್ಟು ಚುಕ್ಕಿಗಳು, ಪೂರ್ಣವಿರಾಮಗಳು, ಅಲ್ಪವಿರಾಮಗಳ ನಡುವೆ ಇಷ್ಟೇ ಇಷ್ಟು ಪದಗಳು
ಚಿಹ್ನೆಗಳಿಗೋ ಪದಗಳಿಗೋ ಎಂದರಿಯದೇ ಉಳಿದುಬಿಟ್ಟವು ನಾ ಕೊಡಲೆತ್ನಿಸಿದ ಅರ್ಥಗಳು!

*****

ಸಖೀ,
ಜಾಹೀರಾತುಗಳ ನಡುವೆ ಸುದ್ದಿ ಹುಡುಕುತ್ತಿದ್ದೆವು
ಈಗ ದಿನಪತ್ರಿಕೆಯನ್ನೇ ಖರೀದಿಸುತ್ತಿಲ್ಲ, ಗೆದ್ದೆವು

*****

While the CM of a neighbouring state was stopped, the brokers are left free in Uttarakhand, to make money by offering to rescue the stranded people by private choppers!

*****

ಸಖೀ,
ಅತ್ತಿತ್ತಲಿಂದ ತಂದು ರಾಶಿ ಹಾಕಿಟ್ಟಿದ್ದೆ ಸ್ಪೂರ್ತಿ ಹೊಂದೋಣ ಎಂದು
ಈ ಮನದ ಮಾತುಗಳ ಮುಂದೆ ಕೆಲಸಕ್ಕೆ ಬರಲಿಲ್ಲ ಯಾವುದೊಂದೂ!

*****

ಸಖೀ,
ನನ್ನ ಇರುವಿಕೆಯ ಅರಿವು ನನ್ನ ಈ ನನ್ನ ಮಾತುಗಳ ಮೂಲಕ
ಆದರೆ ನನ್ನ ಮಾತುಗಳಲ್ಲ ಕೇವಲ ನನ್ನ ಇರುವಿಕೆಯ ಸೂಚಕ!

*****

ಸಖೀ,
ಒಂದರೆ ದಿನ ಸಂಪರ್ಕ ಕಡಿತವಾದರೆ ಸಾಕು
ಈ ಪರಿ ಕಾಡುವ ತುಡಿತ, ಇದ್ಯಾರಿಗೆ ಬೇಕು?

*****

ಕೆಲವು ನನ್ನದಲ್ಲದ ದಿನಗಳು,
ಕೆಲವು ನನ್ನದಾಗದ ದಿನಗಳು
ಆದರೂ ಹಲವು ನನ್ನ ದಿನಗಳು,
ಒಲವೂ ಛಲವೂ ತುಂಬುವಂತಹ ದಿನಗಳು!

*****

ಸತ್ತವರಿಗಾಗಿ ಪರಿತಪಿಸುವ ನಾಟಕವಾಡುತ್ತಾ, ಇಲ್ಲಿದ್ದವರ ಓಲೈಸುತ್ತಾರೆ
ದುರಂತಗಳ ತಡೆಯಲು ಕ್ರಮಗಳಿಲ್ಲ, ಆ ನಂತರ ಜೊತೆಗೂಡಿ ಅಳುತ್ತಾರೆ
ಸಹಾಯ ಮಾಡುವವರೂ ಕ್ಯಾಮಾರಾಗಳಿಗೆ ಮುಖಕೊಟ್ಟು ನಗುತ್ತಿರುತಾರೆ
ಸದಾ ಅನ್ಯರ ನೋವಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ಇರುತ್ತಾರೆ!

*****

ನಿನ್ನ ಬಂಧನದಿಂದ ಬಿಡಿಸಿಕೊಳ್ಳುವುದು ಕಷ್ಟ
ನಿನ್ನೊಂದಿಗೇ ಸದಾ ಇದ್ದುಬಿಡುವುದು ನನಗಿಷ್ಟ
ನನ್ನಿಷ್ಟಗಳನ್ನೇ ಪರಿಗಣಿಸಿದರೆ ಬಾಳು ಸಾಗದು
ನಿದ್ರಾದೇವಿ ನಾ ಮತ್ತೆ ಸಿಗುವೆ ರಾತ್ರಿ ನಮ್ಮದು!

25 June 2013
*****

ನೀನು ಬರುತ್ತಿರುವ ಸುದ್ದಿ ಸಿಕ್ಕಿಹುದು
ನಾನು ಇನ್ನಿಲ್ಲಿಂದ ಹೊರಡಲೇಬೇಕು
ನಾನು ಇಲ್ಲೇ ನಿನ್ನ ವಶವಾಗಿಬಿಟ್ಟರೆ
ಲ್ಯಾಪ್‍ಟಾಪ್ ಮುಚ್ಚುವವರು ಬೇಕು!

ನಿದ್ದೆ.

ಶುಭರಾತ್ರಿ!

*****

Italians could come and kill Indian fishermen, but, Indians can’t help fellow citizens. For helping the fellow citizens, we need special permission from Italians!

*****

Narendra Modi has become the talk of town.

One day SHE would definitely read from the written text

“aaj is desh ko chalane ke liye Narendra Modi jaise yuva netaon ki zaroorat hai…”

“… no no no Madam… sorry sorry … please read it as Raul jaisa Raul jaisa… While preparing this speech I was watching news on TV and on every channel Narendra Modi was on… hence his name came in the text erroneously”
*****

ಚಿಕ್ಕ ಚಿಕ್ಕ ನಾಲೆಗಳಂತೆ ನನ್ನ ಚುಟುಕಗಳು
ತುಂಬಿ ಹರಿವ ನದಿಯಂತೆ ನಿನ್ನ ಕಾವ್ಯಧಾರೆ
ನದಿಯಲ್ಲಿ ಮಿಂದೇಳುವವರಿಗೆ ನಾಲೆಯೇತಕೆ
ನಾಲೆಯಲಿ ಮುಳುಗೇಳುವವರಿಗೆ ನಾ ಸಾಕೆ!

*****

If your eyes spoke the truth, then, I would not have believed you
Since your eyes told lies, I had to believe you!

*****

It is learnt that the Congress Help Package was ready in Delhi last week itself, but they delayed sending it, only to be flagged off by Raul!

… and they blame Narendra Modi for political agenda!

*****

With deaths hidden in the clouds hovering overhead, the nature deceives the mankind, who spend billions to search water on moon and mars!

*****

How many disasters have been avoided by our Remote Sensing Weather Satellites? How far have been benefited by these?

*****

Someone said, “Facebook is a beautiful stupidity”.

“Yes”, I say, “some are BEAUTIFUL and many are STUPIDS!”

*****

ಚಂದ್ರ ಹತ್ತಿರ ಬಂದು ಹೋದ!
******************

ಆತ ಮೊನ್ನೆ ಸ್ವಲ್ಪ ಹತ್ತಿರಕ್ಕೆ ಬಂದು ನಕ್ಕು ಹೋದ
ಮೈಮನದಲ್ಲಿ ಎತ್ತರೆತ್ತರದ ಅಲೆಗಳಿಗೆ ಕಾರಣನಾದ
ಇವಳಿಗಷ್ಟೇ ದಕ್ಕಿದ್ದು ಮನದೊಳಗೆ ನೂರು ನಿನಾದ
ಮತ್ತೀಗಾತನೆಲ್ಲೋ ಆದರೂ ಈಕೆಯದೇನಿಲ್ಲ ವಾದ!

*****

ಅಪರಾತ್ರಿಯಲ್ಲಿ
ನಾನೆದ್ದಿದ್ದೆ
ನನ್ನ ಸವಿನಿದ್ದೆಯ
ನೀಕದ್ದಿದ್ದೆ;

ಮತ್ತೆ ನೀನೂ
ಇಲ್ಲ
ನನಗೆ ನಿದ್ದೆಯೂ
ಇಲ್ಲ!

*****

24 June 2013

*****

ಈಗ ಕರ್ನಾಟಕದಲ್ಲಿ ಕಾಂಗ್ರೇಸ್ ಸರಕಾರ ಇರುವುದರಿಂದ, ಕೇಂದ್ರದಲ್ಲಿ ವೀರಪ್ಪ ಮೊಯ್ಲಿಯಂಥ ಧುರೀಣರು ಇರುವುದರಿಂದ, ಕಾವೇರಿಯ ಒಂದು ಹನಿ ನೀರೂ ತಮಿಳುನಾಡಿಗೆ ಹೋಗದಂತೆ, ಪ್ರಬಲವಾದ ವಾದ ಮಂಡಿಸುವುದು ಖಾತ್ರಿ!

*****

ತಲೆ
ದಿಂಬಿಗೆ
ತಾಕಿದಾಕ್ಷಣ
ನಿದ್ದೆ

ಬಂದ
ಪ್ರತಿದಿನ
ನಾನು
ಗೆದ್ದೆ!

*****
ನೆರೆಮನೆಯವಳಿಗೆ ಚಾಡಿ ಹೇಳುವ ಅಭ್ಯಾಸ ಇದೆಯೆಂದು, ಈಕೆ ತನ್ನ ನೆರೆಹೊರೆಯ ಎಲ್ಲರಿಗೂ ಹೇಳಿ, ಹೇಳಲು ಉಳಿದದ್ದು ಆ ನೆರೆಮನೆಯವಳಲ್ಲಿ ಮಾತ್ರ!

*****

ಬರಬೇಡ
ಬರಬೇಡ
ಬರಬೇಡ
.
.
.
.
.
.
.
.
.
.
.
ನಿಜ ಕಣ್ರೀ
ಬರ ಬೇಡ
ಯಾರಿಗೂ ಬೇಡ
ಮಳೆ ಬೇಕು!

*****

ಬಸ್ಸು ಸಾಗುತ್ತಿತ್ತು
ನಿನ್ನ ಜೊತೆಯಿತ್ತು
ಆ ಪಯಣ ಮುಗಿದಿದೆ
ನೀನೂ ಬೇರಾದೆ;

ಹೊಸ ಪಯಣವಿದೆ
ಬೇರೆಯದೇ ಬಸ್ಸಿದೆ
ಹೊಸ ಜೊತೆಯಿದೆ!

*****

ಸಖೀ,
ಇದೆ ನಂಬಿಕೆ
ನನ್ನ ಮೇಲೆನಗೆ;
ಹಾಗಾಗಿಯೇ, 
ಇಲ್ಲ ಅನುಮಾನ 
ನಿನ್ನ ಮೇಲೆನಗೆ!

23 June 2013

The creativity will be at its best, when one doesn’t have to earn his living from it.

*****

It is always important to preserve enough respect to oneself, before giving to others. 🙂

*****

ನಿನ್ನ ಕಣ್ಣೊಳಗೆ
ಬಿಂಬಿತವಾದ
ನನ್ನ ಕಣ್ಣೊಳಗೆ
ಬಿಂಬಿತಳಾದ
ನಿನ್ನ ನಾ ಕಂಡೆ!

*****

ಹಂಗಿಗೆ ಬಿದ್ದರೆ ಬೆಚ್ಚಿಬೀಳಿಸುವವರಿಗೆ ಬಹು ಲಾಭ!
ಹಂಗಿಗೆ ಬೀಳದಿದ್ದರೆ, ಕಳಚಿಕೊಳ್ಳುವುದು ಸುಲಭ!

*****

ಉತ್ತರಾಖಂಡ ಹಿಂದೀಯಿಂದ ಆಂಗ್ಲಕ್ಕೆ ಹೋಗಿ, ಆಂಗ್ಲದಿಂದ ಕನ್ನಡಕ್ಕೆ ಬರುವಾಗ “ಉತ್ತರಕಾಂಡ” ಆಗಿದೆ, “ಕರಸೇವೆ” ಆಂಗ್ಲಕ್ಕೆ ಹೋಗಿ ಮರಳುವಾಗ “ಕಾರ್ ಸೇವೆ” ಆದ ಹಾಗೆ!

*****

“ಕೃತಕ ಉಸಿರಾಟಕ್ಕಾಗಿ ಅಳವಡಿಸಲಾಗಿರುವ ಕೊಳವೆಗಳನ್ನೆಲ್ಲಾ ತೆಗೆದುಹಾಕುವಂತೆ ಅನುಮತಿ ಪತ್ರಕ್ಕೆ ಸಹಿ ಮಾಡಿಕೊಡುತ್ತೇನೆ, ಎಂದು ಸತತವಾಗಿ ಐದನೇ ದಿನವಾದ ಇಂದೂ ಆಕೆ ಗಟ್ಟಿಯಾದ ಮನಸ್ಸಿನಿಂದ ನಿರ್ಧಾರ ಮಾಡಿಕೊಂಡು, ಆತ ಚಿಕಿತ್ಸೆಪಡೆಯುತ್ತಿರುವ ಆಸ್ಪತ್ರೆಯತ್ತ ಸಾಗುತ್ತಾಳೆ…”

ಹೊಸ ಕತೆ ಶುರು ಆಗಿದೆ. ಸಾಯಂಕಾಲ ಮುಗಿಯಬಹುದು.

*****
22 June 2013

*****

ಸಖೀ,
ಒಟ್ಟಿಗೆ ಉಂಡು ಬೆಳೆದ ತಮ್ಮ ಒಡಹುಟ್ಟಿದವರ ಅರಿತುಕೊಳ್ಳಲಾಗದವರು,
ಆದರ್ಶದಂಪತಿ ಎಂಬ ಪ್ರಶಸ್ತಿ ಗಿಟ್ಟಿಸಿಕೊಂಡು ನನ್ನಲ್ಲಿ ನಗು ಮೂಡಿಸಿದರು!

*****

ನಮ್ಮ ಅರಿವಿನ
ಒಳ ಹರಿವಿನತ್ತ,
ಒಳ ಅರಿವಿನತ್ತ,
ದೃಷ್ಟಿ ನೆಟ್ಟಿರಲಿ!

*****

ಭಾವಚಿತ್ರದಲಿ ನನ್ನ ಕಣ್ಣುಗಳನ್ನು ನೋಡಿ ಅವರೆನ್ನ ಮನದಾಳವನೂ ಅಳೆದರಂತೆ;
ಹಣೆಯಮೇಲಿನ ಗೆರೆಗಳನ್ನು ಅಳೆದು ನನ್ನ ಹಣೆಬರಹವನೂ ತಿಳಿಸಬಾರದೇಕಂತೆ?

*****

ನಾವಾಡಿದ ಮಾತುಗಳನ್ನೆಲ್ಲಾ ಉಳಿಸಿಕೊಳ್ಳಬೇಕು, ಉಳಿಸಿಕೊಳ್ಳಲೇಬೇಕು
ಯಾರೆಷ್ಟೇ ತಡೆದರೂ ನಾವು ಒಂದಾಗಲೇಬೇಕು, ಒಂದಾಗಲೆಬೇಕು!

jo wada kiya woh nibhaanaa padegaa, nibhaanaa padegaa
roke zamaanaa hum ko aanaa padegaa, aana padegaa!

*****

ಈ ರೇಶಿಮೆಯಂತಹ ಕೂದಲು
ನಿನ್ನೀ ನಶೆ ತುಂಬಿಹ ಕಂಗಳು
ಇವುಗಳನ್ನೇ ಕಣ್ತುಂಬಿಕೊಂಡು
ಸಾಗಿಸುತಿಹರು ಎಲ್ಲರೂ ಬಾಳು!

*****

When people suffer on ground, our leaders go for a jolly ride on air!

Are they efficient enough to estimate the loss just by a glance?

Can’t they get the real picture from the news channels or Govt agnecies?

How do the people suffering on the gorund would ever know who was inside the aircraft?

*****

ಒಂದು ಕೊಳೆತ ಹಣ್ಣು ಬುಟ್ಟಿಯಲ್ಲಿರುವ ಉಳಿದ ಎಲ್ಲಾ ಹಣ್ಣುಗಳನ್ನೂ ನಿಶ್ಪ್ರಯೋಜಕಗೊಳಿಸುತ್ತದೆ;
ಒಂದು ವಿಶ್ವಾಸದ್ರೋಹ, ನಮ್ಮೊಳಗಿನ ವಿಶ್ವಾಸದ ತಳಹದಿಯನ್ನೇ ಬುಡಮೇಲು ಮಾಡಿಬಿಡುತ್ತದೆ!

*****

“ರೀ, ಸುತ್ತ ಮುತ್ತಲಿನ ಕಟ್ಟಡಗಳು ನೂರ್ರಾರು ಭಕ್ತರೊಂದಿಗೆ ಕೊಚ್ಚಿಹೋದರೂ ಆ ದೇವಗುಡಿಗೇನೂ ಆಗಿಲ್ಲ”

“ಹೌದು ಕಣೇ, ಅನ್ಯರ ಆತ್ಮಗಳನ್ನೆಲ್ಲಾ ಪರಮಾತ್ಮ ತನ್ನೊಳಗೆ ಸೆಳೆದುಕೊಂಡು ತಾನು ಬಲವಂತನಾಗಿಹನಲ್ಲ?”

*****

ಸಖೀ, ಮದಿರೆಯ ಅಗತ್ಯವಿಲ್ಲ ನನಗೆ ನಿನ್ನ ಪ್ರೀತಿಯ ನಶೆ ನನ್ನನ್ನು ತುಂಬಿರುವತನಕ
ನೀನೆನ್ನ ತೊರೆಯುವ ಮೊದಲೇ ಕರೆದೊಯ್ದು ಬಿಡು ನನ್ನನ್ನು ಮಧುಶಾಲೆಯ ತನಕ!

*****

Love from heart and look for hearts that are filled with selfless love.

Neither rule over nor lure, hearts.

*****

Oh God, may that be the last day of my life, when I have to seek sympathy from this society.

*****

If to err is human, then, to stick on to our errors is inhuman.

It is better to realise, leave them behind and march ahead on the right path towards our goal.

*****

ಕೆಲವು ಬಾಗಿಲುಗಳನ್ನು ಮುಚ್ಚಿಬಿಡುವುದು ಒಳ್ಳೆಯದು
ಗರ್ವ, ಅಹಂಕಾರ ಅಥವಾ ಅಶಕ್ತರೆಂಬ ಭಾವದಿಂದಲ್ಲ
ಅವು ನಮ್ಮನ್ನಿನ್ನೆಲ್ಲಿಗೂ ಕೊಂಡೊಯ್ಯಲಾರವೆಂಬುದಕ್ಕಾಗಿ!

*****

ಸಖೀ,
ಕಾಡುಹಂದಿಯಿಂದ ಹಾಯಿಸಿಕೊಂಡವನಿಗೆ ಕತ್ತಲೆಯಲ್ಲಿ ಮಡಕೆಯನ್ನು ಕಂಡರೂ ಭಯವಂತೆ
ವಿಶ್ವಾಸದ್ರೋಹಿಗಳಿಂದ ಮನನೋಯಿಸಿಕೊಂಡವನಿಗೆ ಹೊಸ ಸ್ನೇಹಿತರಿಂದಲೂ ಭಯವಂತೆ!

*****

21 ಜೂನ್ 2013

ಸಖೀ,
ಚಂದಿರನ ನೋಡುವ ನೆಪದಿಂದ ನೀ ನಿನ್ನ ಮನೆಯ ತಾರಸಿಯ ಮೇಲೇರಿ ಬಾ…!

*****

ಸಖೀ,
ನೀನು ನನ್ನಿಂದ
ಮುಖ ಮರೆಸಿ
ಸುರಿಸಿದ ಆ
ಕಣ್ಣೀರ ಹನಿಗಳು
ನನ್ನ ಪಾದದಡಿಯನ್ನು
ತೇವಗೊಳಿಸಿದ್ದವು
ನೀನತ್ತ ಸರಿದ ಮೇಲೆ

*****

ಸಖೀ,
ನಾನಾಡಿದ ಮಾತೆಲ್ಲಾ ನಿನಗರ್ಥವಾಗಬೇಕೆಂದೇನಿಲ್ಲ
ನೀನಾಡಿದ ಪ್ರತಿ ಮಾತೂ ಅರ್ಥವಾಗುವುದೆಂದೇನಿಲ್ಲ
ನಾವು ಪರಸ್ಪರರಿಗೆ ಅರ್ಥವಾದರೆ ಇನ್ನೇನೂ ಬೇಕಿಲ್ಲ!

*****

ಸಖೀ,
ನನ್ನ ಮಾತುಗಳಲ್ಲಿ ನನ್ನನ್ನು ಹುಡುಕದಿರು, ನಾನು ಇಲ್ಲವೇ ಇಲ್ಲ ಅಲ್ಲಿ
ಆದರೆ ಪರಾಮರ್ಶಿಸಿ ನೋಡು ನೀ ನನ್ನತನವಿಹುದು ಪ್ರತಿ ಮಾತಿನಲ್ಲಿ!

*****

ನಾ ನಿನ್ನಿಂದ ನೀ ನನ್ನಿಂದ ದೂರವಾದರೆ ನಷ್ಟ ಯಾರಿಗೆ
ನಿನಗೂ ಅಲ್ಲ ನನಗೂ ಅಲ್ಲ ಸ್ನೇಹವೆಂಬ ಪವಿತ್ರ ನಂಟಿಗೆ!
*****

ನೀನಗಲಿದ ದುಃಖದಲ್ಲಿ ಮರುಗಲೂ ಪುರುಸೊತ್ತು ನೀಡಲಿಲ್ಲ ದೇವರು
ದಿನ ಪ್ರತಿದಿನವೂ ಹೊಸ ಮುಖಗಳ ದರ್ಶನ ಇಲ್ಲಿ ಎಲ್ಲರೂ ನನ್ನವರು!

*****

ನಾವೆಂದಾದರೂ ರಸ್ತೆಯಲ್ಲಿ ಮುಖಾಮುಖಿಯಾದರೆ ಅಪರಿಚಿತರಂತೆ ಭೇಟಿಯಾಗೋಣ
ಆದರೆ ಮತ್ತೊಮ್ಮೆ ನಮ್ಮ ನಡುವೆ ಸ್ನೇಹ ಬೆಳೆಯದಂತೆ ಈರ್ವರೂ ಎಚ್ಚರದಿಂದಿರೋಣ!

*****

ನನ್ನನ್ನು ಉಳಿಸು ಇಲ್ಲವಾದರೆ ನೀನೇ ಅಳಿಸು
ಅಳಿದರೂ ನಾನಿನಗೆ ಒಳಿತನ್ನೇ ಬಯಸುವೆ
ಹಾರಾಡುವ ಚಿತಾಭಸ್ಮವೂ ನುಡಿದೀತು ನೋಡು
ಈ ಒಲವಿನ ನೋವ ಸಹಿಸಲು ಬಿಟ್ಟುಬಿಡು
ಒಲವಾಗಿದೆ ನಿನ್ನಲ್ಲಿ ಸುಳ್ಳಲ್ಲಾ,
ಕಣ್ರೆಪ್ಪೆಗಳ ನೆರಳಲ್ಲಿ ಇದ್ದಿರಲು ಬಿಟ್ಟುಬಿಡು!

Chahey bana chahey mita do
mar bhi gaye toh denge dhuayen
udh udh kahegi rakh sanam
yeh darde mohabbat sehne do
mujhey tumse mohabbat ho gai
mujhey palkon ki chhaon me rahene do

*****

ಸಖೀ,
ಒತ್ತಡವಿದೆ ನನಗೂ ನಿನಗೂ ಈ ಬಾಳಿನಲ್ಲಿ
ನಮ್ಮ ಒತ್ತಡಕೆ ಔಷಧಿ ನಮ್ಮದೇ ಕೈಗಳಲ್ಲಿ
ಅನ್ಯರೆಮ್ಮನು ಮೌನದಿ ಸಹಿಕೊಂಡರಾದರೆ
ದೊಡ್ಡತನ ಎಂದು ಮೆಚ್ಚಿಸಲಾಗದು ಹೊಗಳಿ!

*****

ಸಖೀ, ಸ್ನೇಹ ಮಾಡಿಕೊಳ್ಳುವ ನಮ್ಮ ಹುಚ್ಚಿನಲ್ಲಿ
ಕೆಲವು ಹುಚ್ಚರೂ ನಮ್ಮ ಸ್ನೇಹಿತರಾಗಿಬಿಡುತ್ತಾರೆ!

****

ಸಖೀ,
ಬರಹಗಾರ
ಮತ್ತು ಓದುಗ,
ಪರಸ್ಪರರಿಂದ
ದೂರ ದೂರವಾಗಿದ್ದಷ್ಟೂ,
ಅಪರಿಚಿತರಾಗಿದ್ದಷ್ಟೂ
ಒಳ್ಳೆಯದು;

ಬರಹಗಳಿಂದ
ಬರಹಗಾರನನ್ನು
ಅಳೆಯುವ ಬದಲು
ಬರಹಗಾರನಿಂದ
ಬರಹಗಳನ್ನು
ಅಳೆಯುವುದು
ತಪ್ಪುವುದು!

*****

ಸಖೀ,
ನಮ್ಮ ನಿರೀಕ್ಷೆಗಳಿರಬೇಕು ಬರಹಗಳಿಗಷ್ಟೇ ಸೀಮಿತ
ಬರಹಗಾರನು ಸದಾ ತನ್ನ ಪರಿಧಿಯೊಳಗೇ ಬಂಧಿತ!

*****

ಸಖೀ,
ಕಳಚಿಕೊಳ್ಳುವುದು ಸುಲಭವಾಗಬೇಕು ಬಂಧಗಳಿಂದ,
ಅಂಟಿಕೊಳ್ಳುವುದು ಬಂಧಗಳಿಗೆ ಅಂಟಿಸಿಕೊಳ್ಳುವುದಲ್ಲ;
ಅಪ್ಪಯ್ಯನವರ ಹಿತನುಡಿಗಳು ಸಹಕಾರಿಯಾದವೆನಗೆ
ಮನಸ್ಸು ಸಾಗುತ್ತಿರುತ್ತದೆ ಹಿಂದಿರುಗಿ ನೋಡುವುದಿಲ್ಲ!

*****

ಸಖೀ,
ನಮಗಾಗದ ಕೆಲಸಗಳ ನಾವು ಒಪ್ಪಿಕೊಳ್ಳಬಾರದು
ಜನರನ್ನು ನಮಗಾಗಿ ಎಂದೂ ಕಾಯಿಸಲೇಬಾರದು;
ಸಮಯ ಬದ್ಧತೆ ಇಲ್ಲದವನ ಮಾತಿಗೇನು ಬೆಲೆ ಇಲ್ಲಿ
ಬಿಸಿಲಿನಲ್ಲಿ ನಿಲ್ಲಿಸಿ ಕಾಯಿಸಿದರೆ ಅರಿವನವನೂ ಅಲ್ಲಿ!

*****

ಸಖೀ,
ಜನರ ಭಾವನೆಗಳಿಗೆ ಬೆಲೆ ಕೊಡದವರ ದುಷ್ಟ ವರ್ತನೆಯನ್ನು
ಮೌನವಾಗಿ ಸಹಿಸಿಕೊಳ್ಳುವುದೇ ದೊಡ್ಡತನ;
ಆ ದುಷ್ಟ ವರ್ತನೆಗಳನ್ನು ಸಾರ್ವಜನಿಕವಾಗಿ ಪ್ರತಿಭಟಿಸುವ
ಮಾತುಗಳನ್ನು ಆಡುವುದು ಆಗಿಹುದೀಗ ದಡ್ಡತನ!

*****

ಸಖೀ,
ನನ್ನ ಮಾತುಗಳನ್ನು ಸದಾ ಪ್ರತ್ಯೇಕವಾಗಿಯೇ ಓದುತ್ತಿರಬೇಕು ನೋಡ
ಕೊಂಡಿಯ ಕೊಡುತ್ತಿಲ್ಲ ನಾನಿಲ್ಲಿ, ಯಾವುದಕ್ಕೂ ನಂಟು ಬೆಸೆಯಬೇಡ!

*****

“ಅದ್ಭುತ ಕೈಚಳಕದ ಕಾವ್ಯಭಾವನೆಗಳು, ರೂಪಕ್ಕನುಗುಣವಾದ ಸೌಂದರ್ಯ ಕಲ್ಪನೆಗಳು”

ಇದರ ಉತ್ತರಾರ್ಧ ನನ್ನ ಕಿವಿಗೆ ಸದಾ ಕೇಳಿಸುವುದೇ ಹೀಗೆ:

“… ರೂಪಕ್ಕನ ಗುಣವಾದ ಸೌಂದರ್ಯ ಕಲ್ಪನೆಗಳು”

*****

ಸಖೀ,
ನಿನ್ನ ನೆನಪಾದಾಗಲೆಲ್ಲಾ ನಾ ಬರೆಯುತ್ತೇನೆ
ನಾ ಬರೆಯುವಾಗಲೆಲ್ಲಾ ನಿನ್ನ ನೆನಪಾಗುತ್ತದೆ
ಬರೆಯುವುದರಿಂದಲೇ ನನಗೆ ನಿನ್ನ ನೆನಪೇನೇ?
ಬಹುಶಃ ನಿನ್ನ ನೆನಪೇ ನನ್ನಿಂದ ಬರೆಸುತ್ತಿರುತ್ತದೆ!

*****

ಸಖೀ,
ಕೊಟ್ಟ ಸಾಲ ಮರಳಿ ಸಿಗದಿರಲೂಬಹುದು
ನೀಡಿದ ಪ್ರೀತಿ ಮರಳಿ ದಕ್ಕದಿರಲೂಬಹುದು
ಕಳೆದ ಆ ಸಮಯ ಮರಳದಿರಲೂಬಹುದು
ಆದರೆ ಉಸುರಿದ ಗುಟ್ಟು ಬಯಲಾಗಬಹುದು!

*****

ಸಖೀ,
ದೊಡ್ಡವರ ಸಣ್ಣತನವವನ್ನು ಸಹಿಸಲು ಸಣ್ಣವರಿಗೆ ದೊಡ್ಡ ಮನಸ್ಸನ್ನು ಕೊಡುವ ದೇವರು
ಸಣ್ಣವರ ದೊಡ್ಡತನವನ್ನು ಗುರುತಿಸಲು ದೊಡ್ಡವರಿಗೆ ದೊಡ್ಡ ಮನಸ್ಸು ಕೊಡಾಲಾರ ಏಕೆ?

*****

ಸಖೀ,
ಕಾಯುವುದನು ನೀನು ನಿಲ್ಲಿಸಿ ನೋಡು
ಕಾಯಿಸಿದವರು ನಿನಗಾಗಿ ಕಾಯುತ್ತಾರೆ
ಸಾಯುವುದಕೆ ತಯಾರಾಗಿ ನೋಡು
ಸಾಯಿಸುವೆನೆಂಬವರೇ ಸಾಯುತ್ತಾರೆ!

*****

ಸಖೀ,
ಅಲ್ಲಿ ತಾ ಕೊಂದವರಿಗಾಗಿ
ಇಲ್ಲಿ ಪಶ್ಚಾತ್ತಾಪ ಪಟ್ಟು
ಕಣ್ಣೀರು ಸುರಿಸಿದ ವರುಣ
ಕ್ಷಮಿಸಲೇ ಕ್ಷಮಿಸದಿರಲೇ?!

*****

ಸಖೀ,
ಒಂದೇ ಒಂದು ಮಾತು ಸಾಕು ನನ್ನನಳಿಸಲು
ಒಂದೇ ಒಂದು ಮಾತು ಸಾಕು ನನ್ನನುಳಿಸಲು
ಆ ಮಾತು ಏನೆಂಬುದನ್ನು ನೀನೇ ಅರಿತಿರುವೆ
ನಾನೇ ಹೇಳಬೇಕೆಂದು ನೀನೇಕೆ ಕಾದಿರುವೆ?

*****

ಸಾಯಂಕಾಲದ ಹೊತ್ತು:

ಅಂದು: “ನಾ ಹೊಲದ ಕಡೆ ಸ್ವಲ್ಪ ಸುತ್ತಾಡಿಕೊಂಡು ಬರ್ತೇನೆ ಕಣೇ, ನೀನೂ ಬರ್ತೀಯಾ?”

ಇಂದು: “ನಾ ಗೋಡೆಯ ಮೇಲೆ ಸುತ್ತಾಡಿಕೊಂಡು ಬರ್ತೇನೆ ಕಣೇ, ನೀನ್ಯಾಕ್ ಬರ್ತೀಯಾ?” 🙂

*****

ಸಖೀ,
ನಾವು “ಥಿಂಕ್” ಮಾಡುವುದನ್ನು “ಲೈಕ್”
ಮಾಡುವವರಿಲ್ಲಿ ಕೆಲವರಾದರೂ ಬೇಕು
ಹಾಗೇಯೇ “ಥಿಂಕಲೈಕ”ರೂ ಇರಬೇಕು!

*****

ಸಖೀ,
ಕೆಲವು ಸಂಬಂಧಗಳು ಬೆಳೆವಾಗ ಬಿಸಿಲುಗಾಲದಲ್ಲಿ ಮಳೆಯಾದಂತೆ
ಕೆಲವು ಸಂಬಂಧಗಳು ಅಳಿವಾಗ ಜೋರಾಗಿ ಸುರಿದಮಳೆ ನಿಂತಂತೆ!

*****

ಸಖೀ, ಕೆಲವೊಮ್ಮೆ
ಈ ನನ್ನ ಗೋಡೆ,
ನನಗೆ ನನ್ನ ದೇಹದಂತೆ,
ಗುಂಪು ಸಂದೇಹದಂತೆ!

*****

ಸಖೀ,
ಜೀವನದಲ್ಲಿ ನಮ್ಮದೇ ಆದ ಸಿದ್ಧಾಂತವನ್ನು ರೂಪಿಸಿಕೊಳ್ಳುವುದು,
ನಮ್ಮದೇ ಸಿದ್ಧಾಂತಕ್ಕೆ ನಮ್ಮ ಜೀವನವನ್ನು ರೂಢಿಸಿಕೊಳ್ಳುವುದು,
ಸದಾಕಾಲ ನಾವು ರೂಢಿಸಿಕೊಂಡ ಆ ಜೀವನವನ್ನೇ ಸಾಗಿಸುವುದು,
ಕಷ್ಟ ಅನ್ನುವುದು ನನಗೆ ಅರಿವಾಗುತ್ತಿದೆ, ಆದರೂ ಬದಲಾಗಲಾಗದು!

*****

ಇತ್ತೀಚೆಗೆ ಅದ್ಯಾಕೋ, ಅಂದು ಮಂತ್ರಿಯಾಗಲು ಆಹ್ವಾನ ಸ್ವೀಕರಿಸಿ ಬೆಂಗಳೂರಿಗೆ ಬಂದು, ಕೊನೆಗಳಿಗೆಯಲ್ಲಿ ಮಂತ್ರಿಗಿರಿ ತಪ್ಪಿಸಿಕೊಂಡಿದ್ದ, ಹಾಲಾಡಿ ಶ್ರೀನಿವಾಸ ಶೆಟ್ರು ತುಂಬಾ ನೆನಪಾಗುತ್ತಿದ್ದಾರೆ!

*****

ಸಖೀ,
ಅದ್ಯಾಕೋ ಅತಿಯಾದ ಪ್ರೀತಿ ಪ್ರತಿ ರಾತ್ರಿ ನಿದ್ದೆಗೆಡಿಸುತ್ತದೆ
ಪ್ರೀತಿಯ ಕೊರತೆ ಸದಾ ಅಪರಾತ್ರಿಯಲ್ಲಿ ಬೆಚ್ಚಿಬೀಳಿಸುತ್ತದೆ!

*****

ಸಖೀ, ನಾನು ಏನೂ ಅಲ್ಲ, ಅಂಟಿಕೊಳ್ಳದಿರು ಹೀಗೆ ನನಗೆ
ನಾಳೆ ಇನ್ನಾರೋ, ಏನೋ ಹೇಳಿಕೊಟ್ಟಾಗ ಕಷ್ಟ ನಿನಗೆ!

*****

ಸಖೀ,
ಈ ಜಾತ್ರೆಯೂ ಮುಗಿದು ಹೋಗುವುದು
ಜನ ಸಂದಣಿಯೂ ಕರಗಿ ಹೋಗುವುದು
ಒಂಟಿಯಾಗಿ ನಿಂತಾಗ ಮನಗಳಲಿ ಬೇನೆ
ಆಗ ಯಾರಿಲ್ಲ ನನಗೆ ನೀನು ನಿನಗೆ ನಾನೇ!

*****

ಸಖೀ,
ಅಧಿಕಾರಕ್ಕೆ ಬರಲಂದು ಭಾಜಪಾ ಬೇಕಾಯ್ತು
ಅಧಿಕಾರದಲ್ಲುಳಿಯಲು ಯಾರಾದರೂ ಸಾಕು
“ಜನತಾ”ದಿಂದ ಆರಂಭವಾಗೋ ಪಕ್ಷಗಳವರಿಗೆ
ಸ್ವಾಮಿದ್ರೋಹವಿದು ಅನುವಂಶೀಯವಿರಬೇಕು!

*****

ಸಖೀ,
ನಿನ್ನ ನೋವಿನಲ್ಲಿ ಅತ್ತ ಕಣ್ಣೀರ ಹನಿ,
ನನ್ನ ಕಣ್ಣಂಚಿನಲ್ಲಿ ಹೆಪ್ಪುಗಟ್ಟಿಕೊಂಡು
ಇದುವರೆಗೂ ಹಾಗೆಯೇ ಉಳಿದಿದೆ!

*****

ಸಖೀ,
ಇಂದು ಮುಂಜಾವಿನವರೆಗೂ ನನ್ನಲ್ಲಿ ಸಣ್ನ ನಿರೀಕ್ಷೆಯಿತ್ತು
ಇದಿರು ನಿಂತು ಈರ್ವರ ಕಣ್ಣು ತೇವಗೊಳಿಸಬಹುದೆಂದಿತ್ತು
ಹಾಗಾಗಲಿಲ್ಲ ಬಹುಶಃ ಹಾಗಾಗುವುದೂ ಇಲ್ಲ ಬೇಡ ಬಿಡು
ಈಗ, ಇನ್ನು ನನ್ನದಲ್ಲವೆಂಬ ನಿರುಮ್ಮಳ ಭಾವ ನೋಡು!

*****

ಸಖೀ,
ಇನ್ನೊಂದಷ್ಟು ದಿನ ಮಾತಿಲ್ಲದೇ ಕಳೆದರೂ ಮರುಗಲಾರೆ ನಾನು
ಇಂದಿನ ಮಾತುಕತೆಯನ್ನು ನಾನದೆಂತು ಸುಲಭದಲ್ಲಿ ಮರೆತೇನು?

*****

ಸಖೀ,
ನಿನ್ನೊಡನೆ ಮಾತಿಲ್ಲದೇ ಕಳೆದ ದಿನಗಳಾವುವೂ ನನ್ನವಾಗಿರಲಿಲ್ಲ
ನಿನ್ನೊಡನೆ ಮತ್ತೆ ಮಾತನಾಡಿದೀ ದಿನವೂ ಈಗ ನನ್ನದಾಗುಳಿದಿಲ್ಲ!

*****

ಸಖೀ,
ಘಾಸಿಗೊಂಡ ಈ ಹೃದಯ ಮತ್ತೆ ಮತ್ತೆ ನೆನಪಿಸಿದರೂ
ಮರೆಯಲೆತ್ನಿಸುತ್ತೇನೆ ನನ್ನನ್ನೇ ನಾನು ಮರೆಯುವಂತೆ
ಅಗಲಿದ ಮಾತಾಪಿತರನ್ನು ಪ್ರತಿದಿನ ನೆನಪಿಸುತ್ತಿದ್ದರೂ
ಅಳುತ್ತಿಲ್ಲ ತಾನೇ ದಿನಾ, ಅಂದು ನಾನು ಅಳುತ್ತಿದ್ದಂತೆ!

*****

ಮರೆವು ಒಂದು ವರ ಅನ್ನುತ್ತಾರೆ.ಆದರೆ, ನನ್ನ ಅನಿಸಿಕೆ ಏನೆಂದರೆ, ನೆನಪು ಮರೆವಿಗಿಂತಲೂ ಅದ್ಭುತವಾದ, ಅಮೂಲ್ಯವಾದ ವರ.ರಾತ್ರಿ ಮಲಗಿ, ಬೆಳಗೆದ್ದು ಮನೆಯಲ್ಲಿರುವ ಮಂದಿಯನ್ನು ನೀವಾರೆಂಬ ಪ್ರಶ್ನೆ ಕೇಳುವ ಇಕ್ಕಟ್ಟಿನಲ್ಲಿ ಎಂದೂ ಸಿಲುಕಿಸಿಲ್ಲ ಭಗವಂತ.ವಾಹನ ಚಲಾಯಿಸುವಾಗ ಮೊದಲನೆಯ “ಗೇರ್”ನ ನಂತರ ಎರಡು-ಮೂರು-ನಾಲ್ಕು ಗೇರು ಹಾಕುತ್ತಾ ಸಾಗುವುದನ್ನು ಬಿಟ್ಟು, ಒಮ್ಮೆಗೇ “ರಿವರ್ಸ್” ಗೇರ್ ಹಾಕದಂತೆ ನೆನಪಿರುವುದೂ ಒಂದು ಸೌಭಾಗ್ಯ.ಇಂತಹ ಉದಾಹರಣೆಗಳು ನೂರಾರು.ಇವನ್ನು ಉದಾಹರಣೆಗಳೆಂದು ಕರೆಯುತ್ತಾರೆ ಅನ್ನುವ ನೆನಪೇ, ಇಲ್ಲಿ ಒಂದು ಉದಾಹರಣೆ.ನೆನಪು ಎಂಬ ವರಪ್ರದಾನವಾಗಿರದೇ ಇದ್ದಿದ್ದರೆ, ಇಲ್ಲಿ ಇದನ್ನು ಬರೆಯುವುದೂ ಅಸಾಧ್ಯವಾಗಿರುತ್ತಿತ್ತು.

*****

ಮೊನ್ನೆಯ ತನಕ ಪೂಜೆ ಪುನಸ್ಕಾರಗಳಿಂದ ಸಮ್ಮಾನಿತವಾಗಿ ನಿಂತಿದ್ದ ಮೂರ್ತಿಗಳು, ಇಂದು ಗರ್ಭಗುಡಿಗಳೊಂದಿಗೆ, ಬುಡಮೇಲಾಗಿ ನೆರೆಯ ನೀರಿನಲ್ಲಿ ಕೊಚ್ಚಿಹೋಗಿವೆ.ಅಂತೆಯೇ ನಮ್ಮ ನಡುವಣ ಕೆಲವು ಸಂಬಂಧಗಳೂ ಕೂಡ.ಇಂದು ನಮ್ಮ ಪಾಲಿಗೆ ದೇವರಂತೆ, ಆಪದ್ಬಾಂಧವರಂತೆ ಕಂಡುಬರುವವರೂ, ನಾಳೆ ನಮ್ಮ ಅದ್ಯಾವುದೋ ಭಾವೋದ್ವೇಗದ ಅನಿರೀಕ್ಷಿತ ಬಿರುಗಾಳಿಯಲ್ಲಿ, ನಮ್ಮ ಆಚರಣೆಯ ಆವೇಶದ ನೆರೆಯ ಸುಳಿಯಲ್ಲಿ ಸಿಲುಕಿ ಕೊಚ್ಚಿಹೋಗಬಹುದು.ನಮ್ಮ ನೆನಪಿಂದಲೇ ಅವರು ಮರೆಯಾಗಿಹೋಗಿಬಿಡಬಹುದು.ತಪ್ಪು ಯಾರದು?ಆ ಬಿರುಗಾಳಿಯದೋ?ನೆರೆಯ ನೀರಿನದ್ದೋ?ನಂಬಿಕೆಯ ಭದ್ರ ಬುನಾದಿಯ ನೀಡಿ, ಉಳಿಸಿಕೊಳ್ಳಲಾಗದ ನಮ್ಮದ್ದೋ?ಅಲ್ಲೂ – ಇಲ್ಲೂ – ಹಿಂದೂ – ಮುಂದೂ?

*****

ಅವಕಾಶವಾದಿಗಳ ಮೂಗು ಸದಾ ಉದ್ದ
ಇದರ ಅರಿವು ಇರುವಾತನೆ ನಿಜವಾಗಿ ಗೆದ್ದ,
ಹೊಗೆ ಕಂಡಲ್ಲಿ ಬೀಡಿ ಹೊತ್ತಿಸಿಕೊಂಬಾಸೆ
ಹೊಗೆ ಹಾಕಿದವರಿಗಿದೆ ಜ್ಞಾನ ಬಿಡಿ ಈ ಆಸೆ!

*****

ಸಖೀ,
ನನ್ನ ಪ್ರತಿ ಮಿಡಿತದಲ್ಲೂ ಮಿಳಿತವಾಗಿರುವ ನೀನು
ನನ್ನ ಪ್ರತಿ ಮಾತಿನಲ್ಲೂ ಎದ್ದು ಕಾಣುತ್ತಿರುವೆಯಲ್ಲೇ
ನಾನೇನ ಬರೆದರೂ ಅದು ನಿನಗಾಗಿಯೇ ಎಂದೀಗ
ನಾನಷ್ಟೇ ಅಲ್ಲ ನೀನು ಕೂಡ ಅರಿತುಬಿಡುವೆಯಲ್ಲೇ?

*****

“ಸಖೀ, ಯಾರೂ ಇಲ್ಲದಾಗ ಮಾತ್ರ ನಿನಗೆ ನಾನೇ ಬೇಕಾಗುತ್ತೇನೆ ಅಲ್ಲವೇನೆ?”

“ಹೂಂ… ಅದೂ ನಿಜಾ ಕಣ್ರೀ… ಎಲ್ಲಾ ಇರುವಾಗ, ನಿಮಗೆ ನಾನು ಸುಮ್ಮನೇ ತೊಂದರೆ ಕೊಡಬೇಕು ಯಾಕ್ರೀ?”

*****

ನಿದ್ದೆಗೆ ಜಾರುವ ಮುನ್ನ, ಮಂದ ದೀಪದಡಿಯಲ್ಲಿ, ವಿವಿಧಭಾರತಿಯ ಛಾಯಾಗೀತ್ ಕಾರ್ಯಕ್ರಮದ ಮೂಲಕ ಪ್ರಸಾರವಾಗುವ ಹಳೆಯ ಹಿಂದೀ ಚಿತ್ರಗೀತೆಗಳನ್ನು ಆಲಿಸುವ ಅಭ್ಯಾಸ ಅದೆಷ್ಟೇ ಹಳೆಯದಾದರೂ, ಇಂದಿಗೂ ಅಂದಿನಷ್ಟೇ ಆನಂದ ನೀಡುತ್ತಿದೆ!
ಶುಭರಾತ್ರಿ!

*****

ಇಷ್ಟು ಸುದೀರ್ಘಕಾಲದ ಕುಟುಂಬ ನಿಷ್ಠೆ
ಬದಲಿಗೆ ಈ ಆಸ್ಕರ್‍‍‍ಗೂ ಕ್ಯಾಬಿನೆಟ್ಟೇ!

*****

ಖರ್ಗೆಯವರು ಇನ್ನು ಮುಂದೆಯೂ ರೈಲು ಬಿಡುತ್ತಾರೆ!

*****

Quite often, we are compelled to hide the real reasons for our unhappiness from public, for, we know that making them public, would hurt others more than us!

ಹಲವೊಮ್ಮೆ, ನಾವು ನಮ್ಮ ಅಸಮಾಧಾನಕ್ಕೆ ನಿಜವಾದ ಕಾರಣಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಗೊಳಿಸದೇ ಇರಬೇಕಾಗುತ್ತದೆ. ಏಕೆಂದರೆ, ನಿಜವಾದ ಕಾರಣಗಳನ್ನು ಬಹಿರಂಗಗೊಳಿಸುವುದರಿಂದ ಇತರರಿಗೆ ಆಗುವ ನೋವು ನಮಗಾಗುವ ನೋವಿಗಿಂತ ಅಧಿಕವಾಗಿರುತ್ತದೆ ಎಂಬ ಅರಿವು ನಮಗಿರುತ್ತದೆ!

*****

ಗೋಡೆಯ ಮೇಲೆ ಇರುವ ಹಲ್ಲಿ ಬೀದಿಗೆ ಇಳಿಯದಿರಲಿ
ಅಲ್ಲಾರದೋ ಕಾಲಡಿ ಸಿಲುಕಿ ಅನಾಥ ಶವವಾಗದಿರಲಿ!

*****
ಸಖೀ,
ಬಲೂನಿಗೆ ಗಾಳಿ ಊದಿ ದೊಡ್ಡದಾಗಿಸಿ ಕೊನೆಗೆ ನೀನೇ ಮುಳ್ಳು ಚುಚ್ಚಿ ಆನಂದಿಸುವ ಈ ಮನವೇಕೆ?
ಇಲ್ಲದ ಆಸೆಯ ಹುಟ್ಟಿಸಿ ಕನಸಿನ ಲೋಕದಲ್ಲಿ ಸುತ್ತಾಡಿಸಿ ಕೊನೆಗೆ ಕೈಬಿಟ್ಟು ಹೋಗುವೀ ನಡೆಯೇಕೆ?
*****
ಸಂಬಂಧ ಮುರಿದ ಮೇಲೆ!
****************
ಸಂಬಂಧ ಚೆನ್ನಾಗಿರುವತನಕ ಎಲ್ಲದಕ್ಕೂ ಇತ್ತಲ್ಲಿ ಸ್ವಾಗತ
ಬಂಧ ಮುರಿದ ಮರುಕ್ಷಣ ಎದೆಯೊಳಗೇಕೆ ಈ ಪರಿ ಕುದಿತ
ನಿನ್ನೆಯ ತನಕ ನೀತಿವಂತನಾಗಿದ್ದ ನಿತೀಶ ಕುಮಾರನೂ
ಇಂದು ಭಾಜಪವನ್ನು ತೆಗಳುವಲ್ಲಿ ಆತನಾಗಿಹ ಮೊದಲಿಗನುನರೇಂದ್ರನನ್ನು ಅಂದು ಬಾಯ್ತುಂಬಾ ಹೊಗಳುತ್ತಿದ್ದನಾತ
ಇಂದಾತನ ಹೆಸರಿನಿಂದಲೇ ಬರುತ್ತಿರುವಂತಿದೆ ದುರ್ನಾತ
ರಾಜಕೀಯ ಎನ್ನುವುದು ಅನುಕೂಲಕ್ಕೆ ಬಳಸುವಂಥ ಅಸ್ತ್ರ
ಜೊತೆಗಿರುವಾಗೊಂದು ದೂರವಾದಾಗ ಇನ್ನೊಂದು ಶಾಸ್ತ್ರ

*****

While timely silence helps relationships grow, untimely silence breaks them!

*****
ನನಗೆ ನಗುವುದನ್ನು ಕಲಿಸಿದವಳು ನೀನು, ಅಳು ಎಂದರೆ ಅತ್ತುಬಿಡುತ್ತೇನೆ
ನನ್ನ ಕಣ್ಣೀರಿನ ಚಿಂತೆ ನಿನಗೆ ಬೇಡ, ಹರಿಯುತ್ತಿದೆ, ಹರಿಯಲು ಬಿಟ್ಟುಬಿಡು
ಒಲವಾಗಿದೆ ನಿನ್ನಲ್ಲಿ ಸುಳ್ಳಲ್ಲಾ, ಕಣ್ರೆಪ್ಪೆಗಳ ನೆರಳಲ್ಲಿ ಇದ್ದಿರಲು ಬಿಟ್ಟುಬಿಡು

tum ne mujhko has na sikhaayaa rone kahoge toh rolenge ab
aansoo ka hamaare gam na karo, jo behataa hai use behne do
mujhe tum se mohabbat hogayi hai mujhe palkon ki chaav mein rehne do

*****

ಸಕಾಲಿಕ ಮೌನ ಸಂಬಂಧಗಳನ್ನು ಉಳಿಸಿ ಬೆಳೆಸುತ್ತದೆ
ಅಕಾಲಿಕ ಮೌನ ಬಂಧಗಳನ್ನು ಕಳಚಿ ಅಳಿಸಿಬಿಡುತ್ತದೆ!

*****

Some guests think that it is their privilege to arrive late to any function, and make audience wait.Surprisingly some do it repeatedly without any shame.

ಸಭೆಗೆ ನಿರ್ಧಾರಿತ ಸಮಯಕ್ಕಿಂತ ತಡವಾಗಿ ಬರುವುದನ್ನು, ಕೆಲವು ಅತಿಥಿಗಳು, ತಮ್ಮ ವಿಶೇಷ ಹಕ್ಕು ಎಂದು ತಿಳಿದುಕೊಂಡಿರುತ್ತಾರೆ ಹಾಗೂ ಸಭಿಕರನ್ನು ಗಂಟೆಗಟ್ಟಳೆ ಕಾಯಿಸುತ್ತಾರೆ.ವಿಚಿತ್ರ ಅಂದರೆ, ಕೆಲವರು ಅದನ್ನು ಕಿಂಚಿತ್ತೂ ನಾಚಿಕೆಯಿಲ್ಲದೇ, ಪದೇ ಪದೇ ಮಾಡುತ್ತಿರುತ್ತಾರೆ.

*****

ಸಖೀ,
ಪ್ರೀತಿ ತುಂಬಿದ ಮನ ಪ್ರೀತಿಯ ಮಾತನಾಡಬಹುದು
ಬೇಸರಗೊಂಡ ಮನ ಬೇಸರವ ಹೊರಗೆಡಹಬಾರದು
ಕುಪಿತಗೊಂಡ ಮನ ಕೋಪವನ್ನು ತೋರಿಸಬಾರದು
ಇದ್ಯಾವ ನ್ಯಾಯ ಇದನು ಹೇಗೆ ಒಪ್ಪಿಕೊಳ್ಳಬಹುದು?

*****

ಸಖೀ, ನಿನ್ನಿಂದಾಗಿ ನನ್ನೊಳಗಿರುವ ಬೇಸರ ಅಷ್ಟೇ ಇಷ್ಟೇ?
ಅದನ್ನು ಹೊರಗೆಡಹಿ ನಿನ್ನನ್ನು ಬೇಸರಿಸಲಿಷ್ಟವಿಲ್ಲ, ಅಷ್ಟೇ!

*****
ನಾನು ನಿಷ್ಠಾವಂತನಾಗಿಯೇ ಇದ್ದೆ, ಆದರೆ ನಿಷ್ಠೆಯ ನಿಭಾಯಿಸುವುದು ಹೇಗೆಂದು ಅರಿಯದೇ ಸೋತೆ!
ಯಾವ ಅಪರಾಧವನ್ನೆಸಗದೇ ಇದ್ದರೂ, ನಾನೆಸಗದ ಅಪರಾಧಗಳಿಗಾಗಿ ನಾನಿಂದೀ ಪರಿ ಶಿಕ್ಷಿತನಾದೆ!
Hum bewafa hargiz na the Par hum wafa kar naa sake
Humko mili uski sazaa Hum jo khata kar naa sake
Hum bewafa hargiz na the Par hum wafa kar naa sake
*****
ಸ್ನೇಹ
ಎಂಬುದೂ
ಈಗೀಗ
ಬಾಳೆಯ
ಎಲೆಯಂಗಾ;
ಹಾಸುಂಡು
ಬೀಸಿ
ಒಗೆದಂಗಾ!

*****

The word “SORRY” not attached with the feeling of guilt, pains more than the act itself!

*****

ಓರ್ವರ ಹೃದಯವನ್ನು ವಿನಾಕಾರಣ ಘಾಸಿಗೊಳಿಸಿ, ಆ ಹೃದಯದ ನೋವಿನ ಗೋರಿಯ ಮೇಲೆ ಅನ್ಯರ ಸಂಭ್ರಮದ ವಿಜಯ ಪತಾಕೆಯೇ?

*****

ಗೋಡೆಗಳ ನಡುವೀಗ ಉಳಿದಿರುವ ಸಂಬಂಧಗಳು ಕಡಿಮೆ
ಗೋಡೆಗಳ ಮೇಲಷ್ಟೇ ಬೆಳೆಯುತ್ತಿದೆ ಸಂಬಂಧಗಳ ಒಲುಮೆ!

*****

ಬೆಳಕಿಂದ ಬೆಳಕ ಬೆಳಗುತ್ತಾ ಸಾಗೋಣ
ಪ್ರೇಮ ಗಂಗೆಯ ಹರಿಸುತ್ತಾ ಸಾಗೋಣ
ಹಾದಿಯಲಿ ಎದುರಾದರೆ ದೀನ ದಲಿತರು
ಎಲ್ಲರನೂ ಒಂದಾಗಿಸಿಕೊಂಡು ಸಾಗೋಣ

jyot se jyot jalaate chalo, prem ki ganga bahaate chalo
raah men aaye jo din dukhi, sab ko gale se lagaate chalo

*****

ನಮ್ಮಲ್ಲಿ ಮುಂದೊಂದು ದಿನ ಪಶ್ಚಾತ್ತಾಪ ಮೂಡಿಸುವಂತಹ ಇಂದಿನ ನಮ್ಮ ನಡೆಯನ್ನು ನಾವು ಎಂದಿಗೂ ನಮ್ಮ ಆದರ್ಶ ಎಂದು ಕರೆಯಲಾಗದು. ಆದರ್ಶ ಅನ್ನುವುದು ಸದಾಕಾಲ ಎಲ್ಲರೂ ತಲೆಯೆತ್ತಿ ನೋಡುವಂತಹದು.

*****

ಪಾಪದ ಹಣದಿಂದ ಅದೆಷ್ಟು ದಾನಧರ್ಮ ಮಾಡಿದರೂ ಪುಣ್ಯ ಸಂಪಾದನೆ ಕಷ್ಟ
ದಾನಮಾಡುವ ಸಂಪತ್ತನ್ನು ಗಳಿಸಿದ ಮಾರ್ಗ ಭಗವಂತನಿಗೂ ಆಗಿರಬೇಕು ಇಷ್ಟ!

*****

ವಿಮರ್ಶೆ, ವಿಡಂಬನೆಗಳಿಗಿಂತ ಟೀಕೆಗಳಿಗೇ ಪ್ರಾಶಸ್ತ್ಯ
ವಿಮರ್ಶೆಗಳನ್ನೂ ಜನರೀಗ ಟೀಕೆಗಳೆಂಬುವುದೂ ಸತ್ಯ!

*****

ಸಖೀ,
ಕೆಲವರಿಗಂತೂ ಹೆಸರುವಾಸಿಗಳಿಗೇ ಜೋತುಬಿದ್ದು ಹೆಸರು ಪಡೆಯುವ ಯತ್ನ
ಕೇಳುವರಾರು ಹೃದಯವಾಸಿ ತನಗಾದ ಅವಮಾನದಿಂದ ನಕ್ಕನಾ ಅತ್ತನಾ!

*****

ಜೈಲಿನಲ್ಲಿರುವ ಕೈದಿಗಳನ್ನು ಭೇಟಿಮಾಡುವವರಂತೆ, ಅನ್ಯರ ಬಂಧನದಲ್ಲಿರುವ ದೇವರುಗಳನ್ನು ಭೇಟಿಮಾಡಲು ನಾನು ಎಂದೂ ಹೋಗುವುದಿಲ್ಲ.”ನನ್ನನ್ನು ಇಲ್ಲಿಂದ ಬಿಡಿಸಿಕೊಂಡು ಹೋಗು” ಎಂದು ದೇವರು ದುಂಬಾಲು ಬಿದ್ದರೆ ನಾನೇನು ಮಾಡಲಿ? ಅನ್ನುವ ಪ್ರಶ್ನೆಯೂ ಇದೆ.

*****

ಸಖೀ,
ನನ್ನ ಈ ಭಾವಚಿತ್ರವನ್ನು ಮತ್ತೆ ಮತ್ತೆ ದಿಟ್ಟಿಸುತಿಹೆ ಇಂದು
ನಿನ್ನೆಯ ತನಕ ನಗುತಿತ್ತು ಆದರೆ ಅಳುವಂತಿಹುದು ಇಂದು
ಬಲಗಣ್ಣಿನ ಕೆಳಗೆ ಕಣ್ಣೀರ ಹನಿಯೊಂದು ಹೆಪ್ಪುಗಟ್ಟಿದಂತಿದೆ
ಒಟ್ಟಾರೆ ಮುಖದ ಹಿಂದೆ ನೋವು ಅಡಗಿ ಕೂತಿರುವಂತಿದೆ!

(ಇಂದು ನನ್ನ ಫ್ರೊಫೈಲ್ ಚಿತ್ರ ನೋಡಿದಾಗ ಅನಿಸಿದ್ದು)

*****

We distance ourselves from Him by our deeds.
He never leaves us, but, just makes us feel that He is at a distance from us.
Our deeds will only change that feeling.

*****

Those, who, we think, understand us well, hurt us much by their silly acts of ignorance.

*****

We seldom take interest in correcting people unrelated to us.We often take extra interest to guide those who respect us as their elders and address us as brothers or sisters.It is totally left to them whether to accept or reject our advice.

*****

ಸಖೀ,
ಅಧ್ಯಾತ್ಮ ಪಂಡಿತರ, ಪ್ರಚಂಡ ವಿಚಾರವಾದಿಗಳ ಸೋಗಿನಲ್ಲಿ, ತಮ್ಮ ಮೇಲೆ ನಂಬಿಕೆ ಇರಿಸಿದವರನ್ನು ಮೋಸಮಾಡುವರು, ಸತತ ನಟನೆಯಿಂದ, ರಾಜನಾದವನು ಅಡಿಯಾಳುಗಳನ್ನು ಬಳಸಿಕೊಳ್ಳುವಂತೆ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವವರು, ಮಠಗಳಲ್ಲಷ್ಟೇ ಅಲ್ಲ, ಇಲ್ಲೂ ಅಂತರ್ಜಾಲ ತಾಣಗಳಲ್ಲೂ ಇದ್ದಾರೆ ಎಂದು ಅನಿಸುತ್ತಿದೆ, ಈಗೀಗ!

*****

ಇನ್ನು ಮನೆಯ ಸಾಕುನಾಯಿ ಸತ್ತಾಗ
ದೂರದಲ್ಲಿರುವ ಮಗನಿಗೆ ಮಾತಾಪಿತರು
“Raju died, start immediately”
ಎಂದು ತಂತಿ ಸಂದೇಶ ರವಾನಿಸುವಂತಿಲ್ಲ!
ಏಕೆಂದರೆ ಇನ್ನು ಮುಂದೆ ಟೆಲಿಗ್ರಾಮ್ ಇಲ್ಲ!

*****

ಸಖೀ, ನಾನು ನಿನಗಾಗಿ ಬರೆದುದರಲ್ಲೆಲ್ಲಾ ನೀನಿದ್ದೆ
“ಹಾಗಾದರೆ ನೀನೆಲ್ಲಿದ್ದೆ?” ಅನ್ನಬೇಡ ನಾನಿನ್ನಲ್ಲಿದ್ದೆ!

*****

ಸಖೀ, ನೀನಿಲ್ಲದಾಗ ವಿರಹದಲಿ ಬರೆಯಲಾಗಲಿಲ್ಲ
ನೀನು ಇರುವಾಗ ಸಂತಸದಲೂ ಬರೆಯಲಾಗುತ್ತಿಲ್ಲ!

*****

ಕೆಲವು ಓದು ಮನಕೆ ಸ್ಪೂರ್ತಿ ನೀಡಿ ಬರೆಸುತ್ತದೆ
ಇನ್ನು ಕೆಲವು ಮನದಲ್ಲಿ ಇದ್ದುದನ್ನೂ ಒರೆಸುತ್ತದೆ!

*****

ಸ್ತ್ರೀಪರ ಚಿಂತಕಿಯರು/ಚಿಂತಕರು, ದಲಿತಪರ ಚಿಂತಕಿಯರು/ಚಿಂತಕರು, ಪ್ರಗತಿಪರ ಚಿಂತಕಿಯರು/ಚಿಂತಕರು ಇನ್ನು ಯಾವುದು ಯಾವುದರದೆಲ್ಲಾ ಪರ ಪರ ಪರ ಚಿಂತಕ/ಚಿಂತಕಿಯರು ನಮ್ಮ ಸಮಾಜದಲ್ಲಿ ಸಾವಿರದಷ್ಟು ಸಂಖ್ಯೆಯಲ್ಲಿ ಇದ್ದಾರೆ.ಒಂದು ವರ್ಗದ ಪರ ಇರುವವನು ಸಾಮಾನ್ಯವಾಗಿ ಇನ್ನೊಂದು ವರ್ಗದ ವಿರುದ್ಧ ಅನ್ನುವ ಅರ್ಥವೂ ಬರುತ್ತದೆ ಎಂದು ನನ್ನ ಅನಿಸಿಕೆ.ಮಾನವೀಯತೆಯ ಪರ ಅಥವಾ ಮಾನವಜನಾಂಗದ ಪರವಾದ ಚಿಂತಕರು ಎಲ್ಲಾದರೂ, ಯಾರಾದರೂ ಇದ್ದಾರೆಯೇ?ಸ್ತ್ರೀ ವಿರೋಧಿ, ದಲಿತ ವಿರೋಧಿ ಹಾಗೂ ಪ್ರಗತಿ ವಿರೋಧಿ ಚಿಂತಕರು ಇದ್ದಾರೆಯೇ?

*****

ಕೆಲವರಿಗೆ ಬೆವರಿಳಿಸಿ ದುಡಿಯದೇ ಉಂಡರೆ ನೆಮ್ಮದಿಯಿಲ್ಲ
ಕೆಲವರಿಗೆ ಹೊಲಸು ಸೇರಿಸದೇ ಬರೆದರೆ ನೆಮ್ಮದಿಯಿಲ್ಲ!

*****

ಜವಾಬ್ದಾರಿ ಹೆಚ್ಚಿನ ಸಂಬಂಧಗಳನ್ನು ಬೆಳೆಸುತ್ತದೆ
ಅಸಹಾಯಕತೆ ಸಂಬಂಧಗಳನ್ನು ಉಳಿಸುತ್ತದೆ!

*****

ಮನೆಯ ಇತರ ಸದಸ್ಯರು ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ತಿಳಿದುಕೊಳ್ಳುವ ವೃದ್ಧರು, ದಿನದಲ್ಲಿ ಹಲವು ಬಾರಿ ಜೋರಾಗಿ ಕೆಮ್ಮುತ್ತಾ, ಮನೆಯಲ್ಲಿ ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳುತ್ತಿರುತ್ತಾರೆ.

*****

ಸಖೀ,
ಬ್ರಾಹ್ಮಣರಲ್ಲಿನ ಬ್ರಾಹ್ಮಣಿಕೆ ಕಡಿಮೆಯಾದರೂ,
ನನ್ನಂತಹ ಶೂದ್ರನಲ್ಲಿನ ಶೂದ್ರತನವೆನ್ನುವುದು
ಎಂದಿಗೂ ಕಿಂಚಿತ್ತೂ ಕಡಿಮೆಯಾಗುವುದೇ ಇಲ್ಲ!

*****

ತನ್ನ ಗಂಡ ಅವನ ಅಪ್ಪನಂತೆ ಆಡುವುದನ್ನು ವಿರೋಧಿಸುತ್ತಿದ್ದಾಕೆ, ತನ್ನ ಅಮ್ಮನ ಎಲ್ಲಾ ಗುಣಗಳನ್ನೂ ಮೈಗೂಡಿಸಿಕೊಂಡಿದ್ದಳು!

*****

ಸಖೀ,
ಅನ್ಯರನ್ನು ಬೆಳೆಸಲಿಚ್ಛಿಸುವವರು ಸ್ವಲ್ಪವಾದರೂ ಬೆಳೆದಿರಬೇಕು
ಒಂದು ವರುಷದ ಮಗುವಿಗೆ ಕೈಹಿಡಿದು ನಡಿಗೆ ಕಲಿಸುವವನು ತಾ
ಮೂರು ನಾಲ್ಕು ವರುಷವಾದರೂ ಸರಾಗವಾಗಿ ನಡೆದಿರಬೇಕು!

*****

ಬೆರೆತ ಹೃದಯಗಳ ದೇಹಗಳೂ ಬೆರೆಯಬೇಕು ಎಂದೇನಿಲ್ಲ
ಬೆರೆತ ದೇಹಗಳ ಹೃದಯಗಳೂ ಬೆರೆಯುತ್ತವೆ ಎಂದೇನಿಲ್ಲ!

*****

I pity those people who take me for granted

*****
ಎರಡು ವಾರಗಳ ಹಿಂದೆ ಫೇಸ್‍ಬುಕ್ ಸ್ನೇಹಿತರೊಬ್ಬರ ಭೇಟಿ ಮೊಟ್ಟಮೊದಲ ಬಾರಿಗೆ ಆಗಿತ್ತು.”ನಮಸ್ಕಾರ” ಅಂದೆ.”ನಮಸ್ಕಾರ” ಅಂದರು”ನಾನು ಯಾರು ಗೊತ್ತಾಯ್ತಾ?”
“ಇಲ್ಲವಲ್ಲಾ ಯಾರು…?”
“ನಾನು ಆತ್ರಾಡಿ ಸುರೇಶ ಹೆಗ್ಡೆ”
“ಓಹ್ ಹೌದಾ… ಸಂತೋಷ… ನೀವು ಇನ್ನೂ ಯುವಕರಾಗಿ ಇದ್ದೀರಿ ಅಂದುಕೊಂಡಿದ್ದೆ ನಾನು”
“ಅಂದರೆ…?”
“ನೀವು ಮೂವತ್ತು ವರುಷಗಳ ಆಸುಪಾಸಿನವರಾಗಿರಬಹುದೆಂದು ತಿಳಿದಿದ್ದೆ ನಾನು”
“ಓಹ್ ಹಾಗಾದರೆ ತಮಗೆ “Dispappointment” ಆಯ್ತಾ…?”
“ಇಲ್ಲ ಹಾಗೇನಿಲ್ಲ …”
ಮಾತು ಮುಗಿಯಿತು.ಇದರಿಂದ ನಾನು ಏನು ತಿಳಿದುಕೊಳ್ಳಬೇಕು?ನನ್ನ ಮಾತುಗಳಲ್ಲಿ ಯೌವನ ಇದೆ,ಆದರೆ, ನನ್ನ ವ್ಯಕ್ತಿತ್ವದಲ್ಲಿ ಇಲ್ಲ…!
ಇದು ಟೀಕೆಯೋ… ಮೆಚ್ಚುಗೆಯ ನುಡಿಯೋ?
*****
ಮಹದುಪಕಾರವಾದೀತು ನನ್ನ ಮೇಲೆ
ಈ ಮನ ಬಯಸಿದ್ದನ್ನು ಹೇಳಲು ಬಿಡು
ಒಲವಾಗಿಹುದೀಗ ನನಗೆ ನಿನ್ನ ಮೇಲೆ
ನಿನ್ನ ಕಣ್ರೆಪ್ಪೆಗಳ ನೆರಳಲ್ಲಿರಲು ಬಿಟ್ಟುಬಿಡು!
ehsaan tera hogaa mujh par
dil chahta hai jo kehne do
mujhe tum se mohabbat ho gayi hai
mujhe palkon ke chaanv mein rehne do

*****

Moonlight is like the light from a torch to brighten our path, in the hands of sun who had been with us all day through and now hinding!ಬೆಳದಿಂಗಳೆನ್ನುವುದು, ದಿನವಿಡೀ ನಮ್ಮೊಡನಿದ್ದ ಸೂರ್ಯ, ರಾತ್ರಿ ಮರೆಯಲ್ಲಿ ಕೂತು ದೀವಟಿಗೆ ಹಿಡಿದು ನಮಗೆ ದಾರಿ ತೋರುತ್ತಿರುವಂತೆ!

*****

An egoist and an arrogant Anun Sagar will have to pay for making her cry, with reason or without!

*****

ಥಟ್ ಅಂತ ಹೇಳಿ: ಕರೆದರೆ ಬರುವ ದ್ರವರೂಪಿ ವಸ್ತು ಯಾವುದು!  (ಹಾಲು)
*****
In the quietness of the night, moon’s laughter fills my ears!ಈ ರಾತ್ರಿಯ ನೀರವತೆಯಲ್ಲಿ, ಆ ಶಶಿಯ ನಗು ನನ್ನ ಕಿವಿ ತುಂಬುತ್ತದೆ!

*****

ನಿಶೆ ತನ್ನ ಸೆರಗನ್ನು ಓಲಾಡಿಸಿರಲು
ಜಗವೆಲ್ಲಾ ನಿದ್ರೆಯ ವಶವಾಗಿರಲು
ನೀನು ನನ್ನನ್ನು ಭೇಟಿಯಾಗಲು
ಕೈಯಲ್ಲಿ ದೀಪ ಹಿಡಿದುಕೊಂಡು
ತಾಜಮಹಲಿನ ಬಳಿ ಬಂದುಬಿಡು
ನೀನು ನನ್ನನ್ನು ಭೇಟಿಯಾಗಲು
ಕೈಯಲ್ಲಿ ದೀಪ ಹಿಡಿದುಕೊಂಡು
ತಾಜಮಹಲಿನ ಬಳಿ ಬಂದುಬಿಡು!
ನಿಶೆ ತನ್ನ ಸೆರಗನ್ನು ಓಲಾಡಿಸಿರಲು!
Jab aanchal raat ka lehraye,
Aur saara aalam so jaaye,
Tum mujhse milne, samaa jalakar,
Tajmahal mein aa jana.
Tum mujhse milne, samaa jalakar,
Tajmahal mein aa jana,
Jab aanchal raat ka lehraye..
ಜಬ್ ಆಂಚಲ್ ರಾತ್ ಕಾ ಲೆಹರಾಯೇ
ಔರ್ ಸಾರಾ ಆಲಮ್ ಸೋ ಜಾಯೇ
ತುಮ್ ಮುಝ್ ಸೇ ಮಿಲ್ ನೇ ಶಮಾ ಜಲಾ ಕರ್
ತಾಜಮಹಲ್ ಮೆ ಆ ಜಾನಾ
ತುಮ್ ಮುಝ್ ಸೇ ಮಿಲ್ ನೇ ಶಮಾ ಜಲಾ ಕರ್
ತಾಜಮಹಲ್ ಮೆ ಆ ಜಾನಾ
ಜಬ್ ಆಂಚಲ್ ರಾತ್ ಕಾ ಲೆಹರಾಯೇ
*****
ನಸುಕಿನ ಈ ನೀರವತೆಯಲ್ಲಿ
ಮೌನವೂ ಕಿವಿಗಪ್ಪಳಿಸುತ್ತದೆ!

*****

ನಿನ್ನ ಸೆರಗಿನಂತೆ ಈ ಸಂಜೆಯೂ ವರ್ಣಮಯವಾಗಿದೆ
ನಿನ್ನ ಕಂಗಳ ಕಾಡಿಗೆಯಂತೆ ಇದೂ ಕೃಷ್ಣ್ಯ ವರ್ಣವಾಗಿದೆ
ನನ್ನ ಸೆರಗಿನಂತೆಯೇ ನನ್ನ ಹೃದಯಕ್ಕೆ ನಿನ್ನ ಸಾಮಿಪ್ಯವಿದೆ
ಕಾಡಿಗೆಯಂತೆ ನೀನೂ ನನ್ನೀ ಕಂಗಳಲ್ಲಿ ಒಂದಾಗಿರುವಂತಿದೆ!

ಶಾಮ್ ರಂಗೀನ್ ಹುಯೀ ಹೈ ತೇರೆ ಆಂಚಲ್ ಕೀ ತರಹ
ಸುರ್ಮಯೀ ರಂಗ್ ಸಜಾ ಹೈ ತೇರೆ ಆಂಚಲ್ ಕೀ ತರಹ
ಪಾಸ್ ಹೋ ತುಮ್ ಮೇರೇ ದಿಲ್ ಕೇ ಮೇರೇ ಆಂಚಲ್ ಕೀ ತರಹ
ಮೇರೀ ಆಂಖೋಂ ಮೇಂ ಬಸೇ ಹೋ ಮೇರೇ ಕಾಜಲ್ ಕೀ ತರಹ

haam ra.ngiin huii hai tere aa.Nchal kii tarah
surma_ii ra.ng sajaa hai tere kaajal kii tarah
paas ho tum mere dil ke mere aa.Nchal kii tarah
merii aa.Nkho.n me.n base ho mere kaajal kii tarah

*****

ನನಗೆ ಈ ಬರೆಯುವ ಅಭ್ಯಾಸ ಇಲ್ಲದೇ ಇರುತ್ತಿದ್ದರೆ, ನಾನು ಇನ್ನೇನು ಮಾಡುತ್ತಿದ್ದೆ ಅನ್ನುವ ಪ್ರಶ್ನೆಯೂ ಕಾಡುತ್ತದೆ ನನ್ನನ್ನು ಒಮ್ಮೊಮ್ಮೆ!

*****

ಕೀಳರಿಮೆಯಿಂದಲೇ ಮನವೆಲ್ಲಾ ಮುಸುಕಿರಲು ಮೇಲರಿಮೆಯಾ ಸೋಗು ನಮಗೇತಕೆ…!

*****

ಮಳೆಗೆ ಈ ಇಳೆ ತಣಿದಿತ್ತು
ಮನ ತನ್ನೊಳಗೆ ಕುಣಿದಿತ್ತು;
ಪ್ರಕೃತಿಯ ಸೆರೆಯಾಳು ನಾ,
ಸತತವಾದ ಏರುಪೇರುಗಳು
ಮನದಲ್ಲೂ ಅಲ್ಲಿಯಂತೇನಾ?

*****

ಬಿಸಿಲಲ್ಲೂ ನೀನು, ಮಳೆಯಲ್ಲೂ ನೀನು
ನಮ್ಮೂರ ಜನರಿಗೆ ನೆನಪಾಗುವವನು
ಆಗಲೂ “ಓ ಮೈ ಗಾಡ್”,
ಈಗಲೂ “ಓ ಮೈ ಗಾಡ್”
ನೀನಲ್ಲದೇ ಮತ್ತಿನ್ನೇನು?

*****
ಬಾಲ್ಯದಲಿ ಶಾಲೆಯ ಬೆಂಚಿನ ಮೇಲೆ ಕೂತ ಪರಸ್ಪರರ ಬಟ್ಟೆಗಳಿಂದ ಬರುತ್ತಿತ್ತು ಹೊಗೆವಾಸನೆ
ಈಗ ಕಛೇರಿಗಳಲ್ಲಿ ಅಕ್ಕಪ್ಪಕ್ಕದವರ ಉಸಿರು ಉಸಿರಿನಿಂದಲೂ ಬರುವುದು ಬೇರೆ ಹೊಗೆವಾಸನೆ!

*****

ನಮ್ಮ ಮಾನಸಿಕ ಖಿನ್ನತೆಗೆ ನಮ್ಮಲ್ಲಿರುವ ಅತಿಯಾದ ನಿರೀಕ್ಷೆ ಹಾಗೂ ಅನವಶ್ಯಕ ಅನುಮಾನಗಳು ಕಾರಣವಾಗುತ್ತವೆ ಅಂತ ಅನಿಸುತ್ತಿದೆ.

*****

ನಮ್ಮಿಂದ ಅನ್ಯರಿಗೆ ಕೊಡಿಸುವವನೂ ಅವನೇ.

ಅವರಿಂದ ಮರಳಿ ತರಿಸುವವನೂ ಅವನೇ.

ಕಲಿಕೆಗೆ ಹಲವೊಂದು ಮಾರ್ಗಗಳಿವೆ. 

ನಮಗೆ ಸದಾ ಕಲಿಸುತ್ತಿರುವವನೂ ಅವನೇ

ಗಳಿಸಿ ಕಲಿತ ಕಲಿಕೆಗಿಂತ, ಇದ್ದುದನ್ನು ಕಳೆದುಕೊಂಡು ಕಲಿತ ಕಲಿಕೆಯೇ ವಾಸಿ!

ಇಲ್ಲ ಅನ್ನುವುದರ ಚಿಂತೆ ಅನಗತ್ಯ.

ನಮ್ಮಲ್ಲಿ ಈಗ ಇಲ್ಲದಿರುವುದು ನಮ್ಮದಲ್ಲದಿರಬಹುದು.

ನಮ್ಮಲ್ಲಿ ಈಗ ಇರುವುದು ಹಿಂದೆ ನಮ್ಮದಲ್ಲವಾಗಿತ್ತು, ಮುಂದೆಂದೋ ನಮ್ಮದಲ್ಲವಾಗಬಹುದು.

ಅದು ಇದ್ದಿದ್ದರೆ ಇದು ಆಗಬಹುದಿತ್ತು, ಅನ್ನುವುದು ನಮ್ಮ ಮನಸ್ಸಿನ ಅನಿಸಿಕೆ ಅಷ್ಟೇ.

ಅದು ಹಾಗೆಯೇ ಆಗುತ್ತಿತ್ತೋ ಇಲ್ಲವೋ ಅನ್ನುವುದು ವಿಧಿಲಿಖಿತ.

ಇದು ಹೀಗಾಗಿದೆಯಾದರೂ ಅದು ವಿಧಿ ಲಿಖಿತ.

ಆದರೆ ಅಪಾತ್ರರಿಗೆ ದಾನವೂ ಸಲ್ಲ, ಸಾಲವೂ ಸಲ್ಲ.

ಪಾತ್ರರಾರು ಅಪಾತ್ರರಾರು ಅನ್ನುವುದನ್ನು ನಿರ್ಧರಿಸುವುದು ನಮ್ಮ ವಿವೇಕ.

*****

ನಮ್ಮಲ್ಲಿ ಆಲಿಸುವ ಗುಣವನ್ನು ಹುಟ್ಟುಹಾಕಿ ಬೆಳೆಸಿದ್ದು, ಬಾಲ್ಯದಲ್ಲಿ ನಮ್ಮನ್ನು ಲಾಲಿಸಿದವರು!

*****

ಚಿಕ್ಕ ಮಕ್ಕಳೊಂದಿಗೆ ಸದಾ ಮೆದುದನಿಯಲ್ಲಿ ಮಾತಾಡಿದರೆ ಅವರ ಶ್ರವಣ ಶಕ್ತಿಯನ್ನು ಸುಧಾರಿಸಬಹುದು.
ಸದಾ ನಮ್ಮ ಕಿರುಚಾಟಕ್ಕೇ ಅವರ ಕಿವಿಗಳು ಒಗ್ಗಿಕೊಂಡರೆ, ಮುಂದೆ ಯಾರೇ ನಿಧಾನವಾಗಿ ಮಾತಾಡಿದರೂ ಅವರಿಗೆ ಕೇಳಿಸದೇ ಇರಬಹುದು.

*****

ಮಕ್ಕಳು ಮಾತನಾಡುವಾಗ ಅವರನ್ನು ಆಲಿಸುತ್ತಿರುವವರ ಮುಖಗಳನ್ನು ಹಾಗೂ ಅವರು ಆಲಿಸುವಾಗ ಅವರೊಂದಿಗೆ ಮಾತನಾಡುತ್ತಿರುವವರ ಮುಖಗಳನ್ನು ನೋಡುವ ಕಲೆಯನ್ನು ಮಕ್ಕಳಲ್ಲಿ ಹುಟ್ಟುಹಾಕಿ, ಬೆಳೆಸಬೇಕು!

ಎತ್ತೆತ್ತಲೋ ನೋಡಿಕೊಂಡು, ಮಾತನಾಡುವ ಕಲೆ ರೂಢಿಯಾದರೆ ಕಷ್ಟ!

*****

ಹಣವಂತನ ಮಕ್ಕಳು ಹಣವಂತಾರಗಬಹುದು. ಗುಣವಂತನ ಮಕ್ಕಳು ಗುಣವಂತರಾಗಲೇಬೇಕೆಂದೇನೂ ಇಲ್ಲ. ಹಣವಂತ ತನ್ನ ಹಣವನ್ನು ಮಕ್ಕಳಿಗಾಗಿ ಉಳಿಸಿಹೋಗಬಹುದು. ಗುಣವಂತನ ಗುಣವನ್ನು ಮಕ್ಕಳು ಹಂಚಿಕೊಳ್ಳುತ್ತಾರೆಂದೇನೂ ಇಲ್ಲ. ಅಪ್ಪ ಅಮ್ಮ ನೆಟ್ಟಗಿದ್ದರೆ ಮಕ್ಕಳು ನೆಟ್ಟಗಿರಲೇಬೇಕೆಂದೇನಿಲ್ಲ. ಅಪ್ಪ ಅಮ್ಮ ನೆಟ್ಟಗಿರದಿದ್ದರೂ ಮಕ್ಕಳು ನೆಟ್ಟಗಿರಲಾರರೆಂದೇನೂ ಇಲ್ಲ.

ತಾವೆಷ್ಟೇ ಸರಿ ಇದ್ದರೂ, ಮಾತಾಪಿತರು ಮಕ್ಕಳಿಗೆ ಸಂಸ್ಕಾರ ನೀಡುವ ಕಲೆಯನರಿತಿರಬೇಕು. ಪ್ರತಿ ಹೆಜ್ಜೆಯಲ್ಲೂ, ಪ್ರತಿ ನಡೆಯಲ್ಲೂ ಶಿಕ್ಷಣ ನೀಡುವ ಮಾತಾಪಿತರಾಗಿರಬೇಕು. ಶಿಕ್ಷಣ ನಿರಂತರವಾಗಿರಬೇಕು.

ತಮ್ಮೆಲ್ಲಾ ಜವಾಬ್ದಾರಿಯ ನಿಭಾಯಿಸಿದ ಮೇಲೂ, ಮಕ್ಕಳು ಕೆಟ್ಟರೆ ಅವರ ಪ್ರಾರಬ್ಧ ಎಂದೆನ್ನಬಹುದು. ಅಲ್ಲಿ ಮಾತಾಪಿತರ ಜವಾಬ್ದಾರಿ ಇರದು. ತಾವು ಏನೂ ಮಾಡದೇ ಅದು ಅವರ ಪ್ರಾರಬ್ಧ ಎಂದು ಕೈಚೆಲ್ಲಿ ಕೂತರೆ ಅದರಲ್ಲಿ ಅರ್ಥವೇ ಇರದು!

*****

ಸಖೀ,
ದಯವಿಟ್ಟು ನನಗೆ ನಿನ್ನ ಉಪದೇಶದ ಅಗತ್ಯ ಇಲ್ಲ ಅನ್ನುವ ನನ್ನ ಮಾತಿನಿಂದ, ನಾನು ಎಲ್ಲವನ್ನೂ ಅರಿತವನೋ, ಅರಿತವನಲ್ಲವೋ ಅನ್ನುವುದು ಸಾಬೀತು ಆಗಿರದಿದ್ದರೂ, ನನ್ನ ಆ ಮಾತಿನಿಂದ ನೀನು ಕೋಪಿಸಿಕೊಂಡಾಗ, ನೀನು ನನಗೆ ಉಪದೇಶ ಮಾಡಲು ಬಂದಿದ್ದಿ ಅನ್ನುವುದಂತೂ ಸಾಬೀತಾಗಿಬಿಟ್ಟಿತ್ತು!

ದೇವರು ಮುನ್ಸೂಚನೆ ನೀಡಿ ನನ್ನನ್ನು ಬಚಾವು ಮಾಡಿದರು. ಇಲ್ಲವಾದರೆ ನಾನು ನಿನ್ನಂಥವನಾಗಬೇಕಿತ್ತು. ನಾನು ನನ್ನತನವನ್ನೇ ಕಳೆದುಕೊಳ್ಳಬೇಕಾಗುತ್ತಿತ್ತು!

*****

ಯಕ್ಷಗಾನದಲ್ಲಿ ಪ್ರಸಂಗ ಮುಗಿದ ಮೇಲೆ ಪಾತ್ರಧಾರಿಗಳು ತಾವೇ ಬಣ್ಣ ಕಳೆಯುತ್ತಾರೆ
ಜೀವನದಲ್ಲಿ ಕೆಲವರು ತಮ್ಮ ಅಧಿಕಪ್ರಸಂಗಿತನದಿಂದ ತಮ್ಮ ಬಣ್ಣ ಕಳೆದುಕೊಳ್ಳುತ್ತಾರೆ!

*****

ಅವರವರ ಪಾಪ, ಅವರವರ ಮನದೊಳಗೆ-ಮನೆಯೊಳಗೆ, ಬೆಳೆಯುತ್ತಾ ಇರುತ್ತದೆ!

 

*****

ಸಖೀ,
“ನಾವು ಏನು ಅನ್ನುವುದು ನಮಗೆ ಅರಿತಿದ್ದರೆ ಸಾಕು. ನಾವು ಮಾಡುತ್ತಿರುವುದು ಸರಿಯೆಂದು ನಾವು ಅರಿತಿರುವಾಗ, ಅನ್ಯರಿಗೆ ಭಯಪಡುವ ಅಗತ್ಯ ಏನಿದೆ?” ಅನ್ನುವ ನೀನು ಕೇಳು ನನ್ನೀ ಮಾತನ್ನು.ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕತೆ, ಆ ರಾಮಾಯಣದಲ್ಲಿ ನಮ್ಮ ನಿತ್ಯಜೀವನದ ಬಗ್ಗೆ ಹಲವಾರು ಸಂದೇಶಗಳಿವೆ.ನಾವು ಮಾಡುತ್ತಿರುವುದು ಅದೆಷ್ಟೇ ಸರಿಯೆಂದು ನಾವು ಅರಿತಿದ್ದರೂ, ಸಮಾಜದ ದೃಷ್ಟಿಯಲ್ಲಿ ಅನುಮಾನಕ್ಕೆ ಎಡೆಮಾಡಿಕೊಡದಂತೆ ಬಾಳಬೇಕಾಗಿರುವುದೂ ಮುಖ್ಯ. ಅದಲ್ಲವಾಗಿದ್ದಿದ್ದರೆ, ಸೀತಾಮಾತೆಯನ್ನು ಮತ್ತೆ ಅಡವಿಗೆ ಅಟ್ಟುತ್ತಿರಲಿಲ್ಲ ಶ್ರೀರಾಮ.ರಾಮಾಯಣ ಮಹಾಭಾರತಗಳು, ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ನಮಗೆ ಮಾರ್ಗದರ್ಶನ ಮಾಡುವ ಹಲಾವರು ಸೂಚನೆಗಳನ್ನು ಒಳಗೊಂಡಿವೆ.

*****

ಒಂಬತ್ತು ವರುಷಗಳ ಹಿಂದೆ 2004ರ ಮೇ 25 ರ ರಾತ್ರಿ ನಾನು ಮನೆಯಲ್ಲಿ ನಿದ್ದೆಯಲ್ಲಿದ್ದರೆ, ಅತ್ತ ಮಾರತ್ತಹಳ್ಳಿಯ ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿ ಸುರೇಶ್ ರೆಡ್ಡಿ ಕಟ್ಟಡದ ಮೊದಲ ಮಹಡಿಯಲ್ಲಿದ್ದ ನೆಟ್ ಪಾಯಿಂಟ್ ಅನ್ನುವ ಇಂಟರನೆಟ್ ಸರ್ವಿಸ್ ಸೆಂಟರ್‍ನ ಬಾಗಿಲು ಒಡೆದು, ಅಲ್ಲಿದ್ದ ಐದು ಕಂಪ್ಯೂಟರ್ ಮತ್ತವುಗಳ ಪರಿಕರಗಳನ್ನೆಲ್ಲಾ ದೋಚಿಕೊಳ್ಳುವುದರಲ್ಲಿ ಕಳ್ಳರು ತಮ್ಮನ್ನು ತೊಡಗಿಸಿಕೊಂಡಿದ್ದರು.

ನಾನು ಮಾರನೇ ದಿನ ಬೆಳಿಗ್ಗೆ ಏಳೂವರೆಗೆ ಹೋಗಿ ನೋಡಿದರೆ ಎಲ್ಲಾ ಖಾಲಿ ಖಾಲಿ.

ಮೂರು ವರುಷಗಳ ಕಾಲ ಮುಂಜಾನೆ 7.30 ರಿಂದ ರಾತ್ರಿ 11 ರವರೆಗೆ ಒಂದೇ ಕಡೆ ಕೂತು ಕೊಳೆಯುತ್ತಿದ್ದ ನನ್ನನ್ನು ಅಲ್ಲಿಂದ ಹೊರಗೋಡಿಸುವ ಮಹತ್ಕಾರ್ಯವನ್ನು ಭಗವಂತ ಅಂದು ಆ ಕಳ್ಳರಿಗೆ ವಹಿಸಿಕೊಟ್ಟಿದ್ದರು.

ಆ ಕಳ್ಳರಿಗೆ ಇಂದು ನಾನು ಧನ್ಯವಾದ ಹೇಳಲು ಬಯಸುತ್ತೇನೆ.

*****

ತಮ್ಮ ಮಾತಿನ ಮೇಲೆ ತಮಗೇ ದೃಢತೆ ಇಲ್ಲದವರ ಸಲಹೆಗಳನ್ನು ಸ್ವೀಕರಿಸಿದರೆ, ನಾವು ನಿಂತ ನೆಲ ಕುಸಿಯಬಹುದು!

*****

ಇದುವರೆಗೆ ಕೇಳಿದ್ದು:

 

“ತುಂಬಿದ ಕೊಡ ತುಳುಕುವುದಿಲ್ಲ”.

 

ಈಗ ಅನಿಸುತ್ತಿರುವುದು:

 

“ತುಂಬದ ಕೊಡ ತುಳುಕುತ್ತದೆ, ಸದ್ದೂ ಮಾಡುತ್ತದೆ ಅಲ್ಲದೇ, ಅಕ್ಕ ಪಕ್ಕದವರನ್ನು ಒದ್ದೆ ಕೂಡ ಮಾಡುತ್ತದೆ”.

 

***** 

 ನಾನಿದುವರೆಗೂ ನನ್ನ ಜಾತಿಯ ಮಾತು ತೆಗೆದು ವ್ಯವಹರಿಸಿದ್ದೇ ಇಲ್ಲ.

ನಮ್ಮ ಜಾತಿಯ ಸಂಘಕ್ಕೆ, ಸರ್ವೋದಯ ಚಳುವಳಿಯಲ್ಲಿ ಸಕ್ರಿಯರಾಗಿದ್ದ, ನಮ್ಮ ಅಪ್ಪಯ್ಯನವರೂ ಸೇರಿರಲಿಲ್ಲ, ನನ್ನ ಸಹೋದರ ಮತ್ತು ನಾನೂ ಸೇರಿಲ್ಲ.

ಆದ್ರೆ, ದಿನ ಪ್ರತಿದಿನ, ನನಗೆ ಈ ಜಾತೀಯತೆಯ ನೆನಪು ಮಾಡುವವರು ನನ್ನ ಸುತ್ತಮುತ್ತಲೂ ಸಾಕಷ್ಟು ಮಂದಿ, ಇದ್ದಾರೆ.

ನನಗೆ ಅನಿಸುವುದೇನಂದರೆ, ಈ ಜಾತೀಯತೆಯ ವಿರುದ್ಧ

೦೪ ಮಾರ್ಚ್ ೨೦೧೩

ಕಣ್ಮನ ತುಂಬುವಷ್ಟು ಇಂದು ನೋಡಿಬಿಡು ನನ್ನನ್ನು
ಯಾರೂ ಮರಳುವುದಿಲ್ಲ ಬಿಟ್ಟು ಸಾವಿನ ಮನೆಯನ್ನು!

dekh lo aaj hamko jee bharke,
koyee aata nahee hai phir marke

೨೫ ಜನವರಿ ೨೦೧೩

ವೈರಿಗಳನೂ, ವೈರಿಗಳನೂ ಮೀರಿಸುವ ಸ್ನೇಹಿತರಂತೆ
ಮರೆಯದಂಥ ನೋವ ನಮಗೆ ನೀಡುವರಂತೆ!

ನಮ್ಮವರೇ ಕೆಡವುತ್ತಾರೆ ಇಲ್ಲಿ ನಮ್ಮ ಮನೆಗಳ, ಇಲ್ಲಿ ನಮ್ಮ ಮನೆಗಳ
ಇನ್ನಾರೋ ಬಂದು, ಇನ್ನಾರೋ ಬಂದು,ಆಸರೆಯ ನೀಡುವರಂತೆ!

ಮೂಲ: 

ದುಶ್ಮನ್ ನ ಕರೇ ದೋಸ್ತ್ ನೇ ವಹ್ ಕಾಮ್ ಕಿಯಾ ಹೈ
ಉಮ್ರ್ ಭರ್ ಕಾ ಗಮ್ ಹಮೇ ಇನಾಮ್ ದಿಯಾ ಹೈ

ಅಪ್ನೇ ಹೀ ಗಿರಾತೇ ಹೈಂ ನಶೇಮನ್ ಪೆ ಬಿಜಲಿಯಾಂ, ನಶೇಮನ್ ಪೆ ಬಿಜಲಿಯಾಂ
ಗೈರೋ ನೇ ಆಕೆ ಫಿರ್ ಭೀ ತುಮೆ ಥಾಮ್ ಲಿಯಾ ಹೈ!

೨೪ ಜನವರಿ ೨೦೧೩

ಕನಿಷ್ಠ ನೀ ಇಷ್ಟಾದರೂ ಹೇಳಬಹುದಾಗಿತ್ತು
ನನ್ನ ಮೇಲೆ ನಿನಗೆ ಒಲವು ಮೂಡಿದೆ ಒಲವು ಮೂಡಿದೆ ಒಲವು ಮೂಡಿದೆ

ಅದು ಹೇಗೆ ನಾನಿನಗೆ ಹೇಳಬಹುದಿತ್ತು
ವರುಷಗಳಿಂದೀ ಹೃದಯ ನಿನಗಾಗಿ ಕಾದಿದೆ ನಿನಗಾಗಿ ಕಾದಿದೆ ನಿನಗಾಗಿ ಕಾದಿದೆ!

ಮೂಲ: 
ಕಮ್ ಸೆ ಕಮ್ ಇತ್ನಾ ಕಹಾ ಹೋತಾ
ಕಿ ಹೋನೆ ಲಗಾ ಮುಝ್‍ಸೇ ಪ್ಯಾರ್ ಹೈ
ಮುಝ್‍ಸೇ ಪ್ಯಾರ್ ಹೈ ಮುಝ್‍ಸೇ ಪ್ಯಾರ್ ಹೈ

ಐಸೆ ಕೈಸೆ ಮೈ ಸನಮ್ ತುಮ್‍ಸೇ ಕೆಹತೀ ಬಲಾ
ಕಿ ಮೆರಾ ದಿಲ್ ಸದಿಯೋಂ ಸೇ ತುಮ್ಹಾರೇ ಲಿಯೆ
ಬೇಕರಾರ್ ಹೈ ಬೇಕರಾರ್ ಹೈ ಬೇಕರಾರ್ ಹೈ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: