ನೀನದೆಲ್ಲೆ ಹೋಗು ದೂರ…!

27 ಸೆಪ್ಟೆಂ 11

ನೀನದೆಲ್ಲೆ ಹೋಗು ದೂರ, ನನ್ನ ನೆರಳು ಜೊತೆಯಲಿಹುದು
ನನ್ನ ನೆರಳೂ ನನ್ನ ನೆರಳೂ  ನನ್ನ ನೆರಳೂ ನನ್ನ ನೆರಳೂ

ಒಂದೊಮ್ಮೆ ನನ್ನ ನೆನೆದು ಕಣ್ಣೀರು ಸುರಿಸೆ ನೀನು
ನನ್ನ ಕಣ್ಣ ನೀರಿನಿಂದ ಅದನಲ್ಲೇ ತಡೆವೆ ನಾನು
ನೀನದಾವ ಎಡೆಗೂ ನಡೆಯೆ, ನನ್ನ ನೆರಳು ಜೊತೆಯಲಿಹುದು

ಬೇಸರವು ಕಾಡೆ ನಿನ್ನ, ಬೇಸರವು ನನ್ನ ಮನಕೂ
ಕಂಗಳೆದುರು ಕಾಣದಿರಲೂ, ನಿನ್ನ ಸನಿಹ ನನ್ನ ಇರುವು
ನೀನದೆಲ್ಲೇ ಹೊಗಿ ನೆಲೆಸೆ, ನನ್ನ ನೆರಳು ಜೊತೆಯಲಿಹುದು

ನಾನಗಲಿ ಹೋಗೆ ದೂರ, ನನಗಾಗಿ ಕೊರಗಬೇಡ
ನನ್ನೊಲವ ನೆನೆದು ನೆನೆದು, ಕಣ್ಣು ತೇವಗೊಳಿಸಬೇಡ
ನೀನೊಮ್ಮೆ ತಿರುಗಿ ನೋಡು, ನನ್ನ ನೆರಳು ಜೊತೆಯಲಿಹುದು

ನಿನ್ನ ಕಷ್ಟ ದುಃಖಗಳಲಿ, ನನ್ನ ನೋವು ಬೆರೆತೇ ಇಹುದು
ಪ್ರತಿ ಜನುಮದಲ್ಲೂ ನಿನಗೆ, ನನ್ನೊಲವ ಜೊತೆಯು ಇಹುದು
ನೀನದಾವ ಜನುಮ ತಾಳೆ, ನನ್ನ ನೆರಳು ಜೊತೆಯಲಿಹುದು
*****

ಇನ್ನೊಂದು ಭಾವಾನುವಾದದ ಯತ್ನ

ಮೂಲ ಗೀತೆ:
ಚಿತ್ರ: ಮೇರಾ ಸಾಯಾ
ಗಾಯಕಿ: ಲತಾ ಮಂಗೇಶ್ಕರ್

ತೂ ಜಹಾಂ ಜಹಾಂ ಚಲೇಗಾ, ಮೇರ ಸಾಯಾ ಸಾಥ್ ಹೋಗಾ
ಮೇರಾ ಸಾಯಾ ಮೇರಾ ಸಾಯಾ ಮೇರಾ ಸಾಯಾ ಮೇರಾ ಸಾಯಾ

ಕಭೀ ಮುಝ್ ಕೋ ಯಾದ್ ಕರ್ ಕೇ ಜೊ ಬಹೇಂಗೇ ತೇರೇ ಆಂಸೂ
ತೊ ವಹೀ ಪೆ ರೋಖ್ ಲೇಂಗೇ ಆಕೆ ಮೇರೇ ಆಂಸೂ
ತೂ ಜಿದರ್ ಕಾ ರುಖ್ ಕರೇಗಾ ಮೇರಾ ಸಾಯಾ ಸಾಥ್ ಹೋಗಾ

ತೂ ಅಗರ್ ಉದಾಸ್ ಹೋಗಾ, ತೊ ಉದಾಸ ರಹೂಂಗೀ ಮೈ ಭೀ
ನಝರ್ ಆವೂಂ ಯಾ ನಾ ಆವೂಂ ತೇರೆ ಪಾಸ್ ರಹೂಂಗೀ ಮೆ ಭೀ
ತೂ ಕಹೀ ಭೀ ಜಾ ರಹೇಗಾ, ಮೇರಾ ಸಾಯಾ ಸಾಥ್ ಹೋಗಾ

ಮೈ ಅಗರ್ ಬಿಛಡ್ ಭೀ ಆವೂಂ, ಕಭೀ ಮೇರಾ ಗಮ್ ನ ಕರ್ ನಾ
ಮೇರಾ ಪ್ಯಾರ್ ಯಾದ್ ಕರ್ ಕೇ, ಕಭೀ ಆಂಖ್ ನಮ್ ನಾ ಕರ್ ನಾ
ತೂ ಜೊ ಮುಢ್ ಕೆ ದೇಖ್ ಲೇಗಾ ಮೇರಾ ಸಾಯಾ ಸಾಥ್ ಹೋಗಾ

ಮೇರೇ ಗಮ್ ರಹಾ ಹೈ ಶಾಮಿಲ್ ತೇರೇ ದುಖ್ ಮೆ ತೇರೆ ಗಮ್ ಮೆ
ಮೇರೆ ಪ್ಯಾರ್ ನೆ ದಿಯಾ ಹೈ ತೇರಾ ಸಾಥ್ ಹರ್ ಜನಮ್ ಮೆ
ತೂ ಕೊಯೀ ಜನಮ್ ಭೀ ಲೇಗಾ, ಮೇರಾ ಸಾಯಾ ಸಾಥ್ ಹೋಗಾ
*********


ಬಳಸೆನ್ನ ಕೊರಳ ಒಲವೇ…!

27 ಸೆಪ್ಟೆಂ 11

ಬಳಸೆನ್ನ ಕೊರಳ ಒಲವೇ ಇಂತಹ ಇರುಳು ಇನ್ನೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಅದೆಂದಿಗೋ
ಬಳಸೆನ್ನ ಕೊರಳ

ನಮಗೀ ಕ್ಷಣವು ದೊರೆತಿದೆ, ನಮ್ಮ ಸೌಭಾಗ್ಯದಿಂದ
ಕಣ್ತುಂಬ ನೋಡು ನನ್ನ ನೀನಿಂದು ಬಲು ಸನಿಹದಿಂದ
ಮತ್ತೊಮ್ಮೆ ನಿನಗೀ ಭಾಗ್ಯ ಸಿಗುವುದು ಅದೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಅದೆಂದಿಗೋ
ಬಳಸೆನ್ನ ಕೊರಳ ಒಲವೇ ಇಂತಹ ಇರುಳು ಇನ್ನೆಂದಿಗೋ

ಬಾ ಇನ್ನೂ ಸನಿಹ ನಾನು  ಬರಲಾರೆ ಪದೇ ಪದೇ
ಈ ಕೊರಳ ಬಳಸಿ ನಿಂದು ನಾನಳುವೆ ಅಳುಕದೇ
ಕಂಗಳಿಂದ ಒಲವ ಧಾರೆ ಹರಿವುದು ಇನ್ನೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಅದೆಂದಿಗೋ
ಬಳಸೆನ್ನ ಕೊರಳ ಒಲವೇ ಇಂತಹ ಇರುಳು ಇನ್ನೆಂದಿಗೋ

ಬಳಸೆನ್ನ ಕೊರಳ ಒಲವೇ ಇಂತಹ ಇರುಳು ಇನ್ನೆಂದಿಗೋ
ಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಅದೆಂದಿಗೋ
****

ಇನ್ನೊಂದು ಭಾವಾನುವಾದದ ಪ್ರಯತ್ನ

ಮೂಲ ಗೀತೆ:

ಚಿತ್ರ: ವೋ ಕೌನ್ ಥೀ?
ಗಾಯಕಿ: ಲತಾ ಮಂಗೇಶ್ಕರ್

ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ ನ ಹೋ
ಶಾಯದ್ ಫಿರ್ ಇಸ್ ಜನಮ್ ಮೆ ಮುಲಾಖಾತ್ ಹೋ ನ ಹೋ
ಲಗ್ ಜಾ ಗಲೇ ಕೀ

ಹಮ್ ಕೋ ಮಿಲೀ ಹೈಂ ಆಜ್ ಯಹ್ ಗಡಿಯಾಂ ನಸೀಬ್ ಸೇ
ಜೀ ಭರ್ ಕೇ ದೇಖ್ ಲೀಜಿಯೇ ಹಮ್ ಕೋ ಖರೀಬ್ ಸೇ
ಫಿರ್ ಆಪ್ ಕೇ ನಸೀಬ್ ಮೆ ಯೆ ಬಾತ್ ಹೋ ನ ಹೋ
ಶಾಯದ್ ಫಿರ್ ಇಸ್ ಜನಮ್ ಮೆ ಮುಲಾಖಾತ್ ಹೋ ನ ಹೋ
ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ ನ ಹೋ

ಪಾಸ್ ಆಯಿಯೇ ಕೀ ಹಮ್ ನಹೀಂ ಆಯೇಂಗೇ ಬಾರ್ ಬಾರ್
ಬಾಹೇಂ ಗಲೇ ಮೆ ಡಾಲ್ ಕೇ ಹಮ್ ರೋ ಲೇ ಝಾರ್ ಝಾರ್
ಆಂಖೋಂ ಸೆ ಫಿರ್ ಯಹ್ ಪ್ಯಾರ್ ಕೀ ಬರ‍್ಸಾತ್ ಹೋ ನ ಹೋ
ಶಾಯದ್ ಫಿರ್ ಇಸ್ ಜನಮ್ ಮೆ ಮುಲಾಖಾತ್ ಹೋ ನ ಹೋ
ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ ನ ಹೋ

ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ ನ ಹೋ
ಶಾಯದ್ ಫಿರ್ ಇಸ್ ಜನಮ್ ಮೆ ಮುಲಾಖಾತ್ ಹೋ ನ ಹೋ
ಲಗ್ ಜಾ ಗಲೇ ಕೀ


ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ!

20 ಸೆಪ್ಟೆಂ 11

 

ನಮ್ಮ ನಾಡಲ್ಲಿ ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ
ಆದರೆ ಇಲ್ಲಿ ಜ್ಞಾನಪೀಠಿಗಳೆನಿಸಿಕೊಂಡವರು ಕಮ್ಮಿ ಇಲ್ಲ;

ಕೋಟಿಗೊಬ್ಬನಿಗೂ ಮೀರಿ ಜ್ಞಾನಪೀಠಿಗಳು ಈ ನಾಡಿನಲ್ಲಿ
ದೇಶದ ಅನುಪಾತಕ್ಕೂ ಮೀರಿಹುದು ನಮ್ಮ ಕರುನಾಡಿನಲ್ಲಿ;

ಲೇಖನಿ ಹಿಡಿದವರೇ ಸರ್ವಕಾಲಕ್ಕೂ ಇಲ್ಲಿ ಬಹುಮಾನಿತರು
ಅಧಿಕಾರದ ಗದ್ದುಗೆಯೇರಿದವರು ಈಗ ಜೈಲು ಸೇರುತಿಹರು

ಜ್ಞಾನ ಹೊಂದಿರುವವರು ಅನ್ಯರಿಗದನು ಹಂಚಿ ಸುಖಿಸುವರು
ಜ್ಞಾನ ಪಡೆದವರು ನಿಸ್ವಾರ್ಥದಿ ದಾನಿಯ ಮನದಿ ಹರಸುವರು

ಹಂಚಿದ ಆಹಾರ, ಅರ್ಥವೆಲ್ಲಾ ಒಂದು ದಿನ ಕರಗಿ ಹೋಗುವುದು
ಜ್ಞಾನವು ಕರಗದೆ ಬೆಳೆದು ಮುಂದೆ ಮುಂದೆ ಸಾಗುತ್ತಲಿರುವುದು

ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರು ಡಾ. ಚಂದ್ರಶೇಖರ ಕಂಬಾರ
ಎಂಟು ಪ್ರಶಸ್ತಿಗಳಿಂದಾಗಿ ಕನ್ನಡವೀಗ ಮಿಕ್ಕೆಲ್ಲಕ್ಕಿಂತ ನಿಜದಿ ಭಾರ!
*****


ಮಾತುಗಳು ಹೇಗಿರಬೇಕು ಅನ್ನುವಿರಾ?

17 ಸೆಪ್ಟೆಂ 11

ಬರಿಯ ಮಾತುಗಳಿಗಿಂತ ಮಾತುಗಳ
ಹಿಂದೆ ಅಡಗಿರುವ ಭಾವನೆಗಳು ಮುಖ್ಯ

ಆ ಮಾತುಗಳ ಹಿಂದಿರುವ ಭಾವನೆಗಳ
ಜೊತೆಗೆ ಮಾತುಗಳಾಶಯವೂ ಮುಖ್ಯ

ಬರಿಯ ಮಾತು ಮುದನೀಡದು ಮನಕೆ
ಸ್ವೀಕೃತವಾಗುವಂತಿರಬೇಕು ಹೃದಯಕೆ!

ಕೆಲವರ ಮಾತುಗಳು ನಿಜದಿ ನಮಗೇನೂ
ನಮ್ಮಲ್ಲಿ ಏನೇನೂ ಮಾಡುವುದೇ ಇಲ್ಲ

ಕೆಲವರ ಮಾತುಗಳಂತೂ ನಮ್ಮನ್ನೇನು
ಮಾಡುತ್ತವೆ ಎಂದು ಹೇಳಲಾಗುವುದಿಲ್ಲ

ಕೆಲವರ ಸವಿ ಮಾತುಗಳ ಆಲಿಕೆಯಷ್ಟೇ
ನೀಡುವುದು ಒಮ್ಮೊಮ್ಮೆ ನಮಗೆ ಕರ್ಣಾನಂದ

ಇನ್ನು ಕೆಲವರ ಮಾತುಗಳ ತಾಳ್ಮೆಯಲಿ
ಆಲಿಸಿದರೆ ನಮ್ಮ ಮನಕ್ಕೆ ಮಹದಾನಂದ

ನಮ್ಮ ಮಾತುಗಳು ಕೇಳುಗರಲ್ಲಿ ಇನ್ನೂ
ಕೇಳುವ ಬಯಕೆಯ ಹುಟ್ಟಿಸುವಂತಿರಬೇಕು

ಕೇಳುಗನ ಭಾವವೂ ಮಾತಾಡುವವನನ್ನು
ಇನ್ನೂ ಜಾಸ್ತಿ ಮಾತನಾಡಿಸುವಂತಿರಬೇಕು
*****


ನರೇಂದ್ರ ಮಾಡುತಿಹ ಮೋಡಿ!

17 ಸೆಪ್ಟೆಂ 11

ಅಂದು ಆ ನರೇಂದ್ರ ಜ್ಞಾನವನು ಹಂಚಿ
ಅನಿಸಿಕೊಂಡಿದ್ದ ಸ್ವಾಮಿ ವಿವೇಕಾನಂದ

ಈ ನರೇಂದ್ರ ನೀಡಲಿ ಈ ನಮ್ಮ ನಾಡಿನ
ಜನತೆಯ ಮನಗಳಿಗೆಲ್ಲಾ ಮಹದಾನಂದ

ಇಂದು ನರೇಂದ್ರ ಮೋದಿ ತನ್ನತನದಿಂದ
ಮಾಡುತಿಹನು ನಾಡಿನ ಜನತೆಗೆ ಮೋಡಿ

ದೇಶವ ಕಾಡುವ ಸಮಸ್ಯೆಗಳು ಈತನಿಂದ
ಹೋಗುವಂತಾಗಲಿ ದೂರ ದೂರಕೆ ಓಡಿ

ಕತ್ತಲ ಗುಹೆಯೊಳಗೆ ಸುಳಿವ ರವಿಕಿರಣ
ನಮ್ಮ ಕಣ್ಣುಗಳನ್ನು ಕೋರೈಸುವಂತೆ

ರಾಜಕೀಯದ ಆಗಸದಲ್ಲಿ ಹೊಸ ತಾರೆಯ
ಪ್ರಭೆಯೀಗ ನಮಗೆ ಕಾಣಬರುತ್ತಿದೆಯಂತೆ

ಗ್ರಹಣ ಕಾಡದಿರಲಿ, ತನ್ನತನವನ್ನೆಂದಿಗೂ
ಕಳೆದುಕೊಳ್ಳದಿರಲಿ ಎಂಬುದೇ ನಮ್ಮಾಶಯ

ನಮ್ಮ ಮುಂದಿನ ಪೀಳಿಗೆಗೆ ಬಳುವಳಿಯಾಗಿ
ನೀಡುವಂತಾಗಲಿ ಒಂದುತ್ತಮ ಸಮಾಜವ!
*****


ಕನಸುಗಳು!

16 ಸೆಪ್ಟೆಂ 11

 

ನಮ್ಮ ಸುಪ್ತ ಮನಸ್ಸಿನ
ಒಂಟಿ ಯಾತ್ರೆಯದು
ನಿದ್ದೆಯಲ್ಲಿ ಕಾಡೋ ಕನಸು,

ಜಾಗೃತ ಮನಸ್ಸಿನ
ಒಂಟಿ ಯಾತ್ರೆಯದು
ನಮ್ಮೆಲ್ಲಾ ಹಗಲುಗನಸು,

ನಿದ್ದೆಯ ಕನಸುಗಳು
ಕಂಡು, ನಲಿದು – ಬೆದರಿ,
ಮತ್ತೆ ಮರೆಯುವುದಕ್ಕಾಗಿ,

ಆ ಕನಸುಗಳೆಲ್ಲಾ
ಅಲ್ಲವೇ ಅಲ್ಲ ಅವುಗಳ
ಆಳಕ್ಕಿಳಿದು ಅರಿಯಲಿಕ್ಕಾಗಿ,

ಹಗಲುಗನಸುಗಳು
ನಮಗೆ ಸಹಕಾರಿ
ನಮ್ಮ ಭವ್ಯ ಭವಿಷ್ಯವನ್ನು
ರೂಪಿಸಿಕೊಳ್ಳುವುದಕ್ಕೆ,

ತಯಾರಾಗಿರಬೇಕು
ನಾವು ಸದಾಕಾಲ
ಕೆಚ್ಚೆದೆಯಿಂದ ಅವುಗಳನ್ನು
ನನಸಾಗಿಸುವುದಕ್ಕೆ!
****


ಸದ್ದಿಲ್ಲದೇ…!

15 ಸೆಪ್ಟೆಂ 11

ಸದ್ದಿಲ್ಲದೇ
ಮನದೊಳಗೆ
ಲಗ್ಗೆಯಿಟ್ಟವರೊಂದಿಗೆ
ಸದ್ದಿಲ್ಲದೇ
ಬೆಳೆದುಬಿಡುವುದು
ಗಾಢ ಸ್ನೇಹ,

ಸದ್ದಿಲ್ಲದೇ
ಮನದಿಂದ
ಹೃದಯದೊಳಗೆ
ಇಳಿದವರೊಂದಿಗೆ
ಸದ್ದಿಲ್ಲದೇ
ಅಂಕುರಿಸಿಬಿಡುವುದು
ಗಾಢವಾದ ಪ್ರೀತಿ,

ಒಳ್ಳೆಯದೆಲ್ಲವೂ
ಹೀಗೆಯೇ
ಸದ್ದಿಲ್ಲದೇ
ನಡೆಯುತ್ತಿರುತ್ತವೆ;

ಆದರೆ,
ಕ್ರೋಧ,
ದ್ವೇಷ,
ಮತ್ಸರ,
ಈ ಮನದಲ್ಲಿ
ಮನೆಮಾಡಿದಾಗ,
ಅವು ಎಲ್ಲಿಲ್ಲದ
ಸದ್ದು ಮಾಡುತ್ತವೆ,
ಹಗಲಿರುಳೂ
ರಂಪ ಮಾಡುತ್ತವೆ,
ಊರಿನುದ್ದಗಲಕ್ಕೂ
ಡಂಗುರ ಸಾರುತ್ತವೆ!
***


ಯಾಕಿಷ್ಟು ಕಾಡ್ತೀಯಾ?

13 ಸೆಪ್ಟೆಂ 11

 

 “ಯಾಕಿಷ್ಟು ಕಾಡ್ತೀಯಾ,
ದೂರದಿಂದಲೇ ಕೊಲ್ತೀಯಾ,
ಹಗಲಿರುಳೂ ನೀನು ನನ್ನ
ನೆನಪಲ್ಲೇ ಇರ್ತೀಯಾ?”;
***

“ಇಂತಹ ಪ್ರಶ್ನೆಗಳಿಗೆ
ಉತ್ತರವಿಲ್ಲ ನನ್ನಲ್ಲಿ,
ಉತ್ತರವಿಲ್ಲದ ಪ್ರಶ್ನೆಗಳು
ಇಲ್ಲದಿರಲಿ ನಿನ್ನಲ್ಲಿ”;
***

“ಉತ್ತರ ನೀಡಲಾಗದಂಥ
ಪ್ರಶ್ನೆಗಳನ್ನು ಪದೇ ಪದೇ
ಕೇಳುತ್ತಾ ಇರುವಾಸೆ,
ನಿನ್ನ ಮನದ ಸಾಗರದಲ್ಲಿ
ನನ್ನ ನೆನಪಿನಲೆಗಳನ್ನು
ಜೀವಂತವಾಗಿ ಇರಿಸುವಾಸೆ”;
***

“ಹೂಂ… ನಿನ್ನ ನೆನಪು
ಎಂದಿದ್ದರೂ ಜೀವಂತವೇ…
ಅದು ಮರೆಯಾದರೆ ನಿಜದಿ
ಅದೆನ್ನ ಕೊನೆಯ ದಿನವೇ”;
***

“ನೀನು ಬೇಡವೆಂದರೆ ನಿನ್ನ
ನೆನಪೆಂದಲ್ಲ ನಿನ್ನ ಕನಸಲ್ಲೂ
ನಾನು ಸುಳಿಯುವುದೇ ಇಲ್ಲ,
ಒಂದೊಮ್ಮೆ ನಾವಳಿದರೂ
ನಮ್ಮ ಈ ಪ್ರೀತಿ ಮಾತ್ರ
ಎಂದೆಂದಿಗೂ ಅಳಿಯುವುದಿಲ್ಲ”
***

“ಅಯ್ಯೋ ಬೇಕು ಅಥವಾ ಬೇಡ
ಎಂಬ ಪ್ರಶ್ನೆಯೇ ಇಲ್ಲ ಕೇಳು,
ನಿನ್ನಯ ಮನಸ್ಸಿನ ಮೇಲೆ ನನ್ನ
ಹಿಡಿತ ಸಾಧ್ಯವೇ ನೀನೇ ಹೇಳು,
ನಿನಗೋ ಇಹುದು ಪೂರ್ತಿ ಸ್ವಾತಂತ್ರ್ಯ
ಏನು ಬೇಕಾದರೂ ಹೇಳು ನೀನು,
ನಿನ್ನ ಮಾತುಗಳಿಗೆ ಕಿವಿಯಾಗಿ ಸದಾ
ಹೀಗೆಯೇ ಆಲಿಸುತ್ತಾ ಇರುವೆ ನಾನು!”
***  


ಯುವಕರೇ, ನಾಡಿಗಾಗಿ ಹುತಾತ್ಮರಾಗೋಣ!

07 ಸೆಪ್ಟೆಂ 11

ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣ
ಬಾನು ಬುವಿಗಳೊಂದಾಗಿ ಕರೆಯುತ್ತಿವೆ ಬನ್ನಿ ಅಮರರಾಗೋಣ

ಹುತಾತ್ಮನೇ ನಿನ್ನೀ ಬಲಿಯು ನಾಡಿಗೆ ಹೊಸ ಬಾಳು ನೀಡಲಿದೆ
ನಿನ್ನ ನೆತ್ತರೇ ನೀರಾಗಿ ಹೂದೋಟಕ್ಕೆ ಹೊಸ ಕಳೆಯ ನೀಡಲಿದೆ
ಹೊಸ ಹೂವುಗಳು ಅರಳಲಿ ನೀನಿಂದು ಹುತಾತ್ಮನಾದ ಜಾಗದೆ

||ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣ||

ಗುಲಾಮರಾಗುಳಿಯದೇ ಸೇಡು ತೀರಿಸಿಕೊಳ್ಳಿ ಈ ನಾಡ ವೈರಿಗಳಲಿ
ಬೇರೆ ಕತ್ತಿ ಬೇಕೇಕೆ ನಿಮ್ಮ ಎರಡು ಬಾಹುಗಳೇ ಇಂದು ಕತ್ತಿಗಳಾಗಲಿ
ಹೂದೋಟಗಳ ರಕ್ಷಣೆಗಾಗಿ ಇಂದು ತೋಟಗಾರರೇ ಇಲ್ಲಿ ಬಲಿಯಾಗಲಿ

||ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣ||

ಪರ್ವತವೇ ಬೆಚ್ಚಿ ನಡುಗುವಂತಾಗಲಿ ನಿಮ್ಮ ಕೆಚ್ಚೆದೆಯ ಹೂಂಕಾರಕೆ
ಪ್ರತೀಕಾರವಿದು ಎಂದು ನೆತ್ತರಲೇ ಬರೆದು ಬಿಡಿ ಆಕಾಶದ ಉದ್ದಗಲಕೆ
ಬರಿಯ ನೆಲವಲ್ಲ ಆಗಸವೂ ನಿಮ್ಮದೇ, ಹುತಾತ್ಮರಾಗಿ ಏರಿ ಆಗಸಕೆ

||ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣ||

ತನ್ನ ಪ್ರಾಣಕ್ಕಿಂತಲೂ ಈ ನಾಡ ಮರ್ಯಾದೆಯೇ ತನಗೆ ಪ್ರಿಯವೆಂದ
ವೀರ ಯುವಕ ಹೆಮ್ಮೆಯ ಮುಖಭಾವದೊಂದಿಗೆ ಇಂದು ಹೊರಟುನಿಂದ
ಪ್ರತಿಯೊಬ್ಬ ಯುವಕನೂ ಹುತಾತ್ಮನಾಗಲಿ ಎಚ್ಚೆತ್ತು ಈತನ ಬಲಿಯಿಂದ

||ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣ||

ಇಂಥ ಮಗನಿಗೆ ಜನ್ಮ ನೀಡಿದ ಅದೃಷ್ಟಶಾಲಿ ಮಾತೆ ಯಾರಾಗಿರಬಹುದು
ಈತನನು ತಲೆಯ ಮುಕುಟ ಎಂದೆನುವ ಭಾಗ್ಯಶಾಲಿ ಎಲ್ಲಿ ಇದ್ದಿರಬಹುದು
ಇಂತಹ ಹುತಾತ್ಮರು ಜನಿಸಿದ ಈ ನಾಡು ಅಮರವಾಗದೇ ಹೇಗಿರಬಹುದು

||ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣ||

****************

ಇದು ಇನ್ನೊಂದು ಹಿಂದೀಗೀತೆಯ ಭಾವಾನುವಾದದ ಯತ್ನ

ಮೂಲ ಗೀತೆ:
ಚಿತ್ರ: ಶಹೀದ್
ಗಾಯಕರು: ರಫಿ, ಮಸ್ತಾನ್

ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ
ಪುಕಾರ್ ತೀ ಹೈ ಜಮೀನ್-ಒ-ಆಸ್ಮಾನ್ ಶಹೀದ್ ಹೋ

ಶಹೀದ್ ತೇರೀ ಮೌತ್ ಹೀ ತೇರೆ ವತನ್ ಕೀ ಜಿಂದಗೀ
ತೇರೇ ಲಹೂ ಸೆ ಜಾಗ್ ಉಠೇಗಿ ಇಸ್ ಚಮನ್ ಕೀ ಜಿಂದಗೀ
ಖಿಲೇಂಗೇ ಫೂಲ್ ಉಸ್ ಜಗಹ್ ಕಿ ತು ಜಹಾನ್ ಶಹೀದ್ ಹೋ

||ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ||

ಗುಲಾಮ್ ಉಠ್ ವತನ್ ಕೆ ದುಷಮ್ನ್ ಸೆ ಇಂತ್‍ಖಾಮ್ ಲೇ
ಇನ್ ಅಪ್ನೆ ದೋನೋ ಬಾಜೂವೋಂ ಸೆ ಖಂಜರ್ ಕಾ ಕಾಮ್ ಲೇ
ಚಮನ್ ಕೇ ವಾಸ್ತೆ ಚಮನ್ ಕೆ ಬಾಗ್‍ಬಾನ್ ಶಹೀದ್ ಹೋ

||ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ||

ಪಹಾಡ್ ತಕ್ ಭೀ ಪಾಂಪ್ ನೇ ಲಗೇ ತೇರೇ ಜುನೂನ್ ಸೆ
ತೂ ಆಸ್ಮಾನ್ ಪೆ ಇಂಖಿಲಾಬ್ ಲಿಖ್ ದೆ ಅಪ್ನೆ ಖೂನ್ ಸೆ
ಜಮೀನ್ ನಹೀಂ ತೇರಾ ವತನ್ ಹೈ ಆಸ್ಮಾನ್ ಶಹೀದ್ ಹೋ

||ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ||

ವತನ್ ಕಿ ಲಾಜ್ ಜಿಸ್ ಕೋ ಥಿ ಅಜೀಝ್ ಅಪ್ನಿ ಜಾನ್ ಸೇ
ವಹ್ ನೌ ಜವಾನ್ ಜಾ ರಹಾ ಹೈ ಆಜ್ ಕಿತ್ನೀ ಶಾನ್ ಸೇ
ಇಸ್ ಎಕ್ ಜವಾನ್ ಕೀ ಖಾಕ್ ಪರ್ ಹರ್ ಎಕ್ ಜವಾನ್ ಶಹೀದ್ ಹೋ

||ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ||

ಹೈ ಕೌನ್ ಖುಷ್‍ನಸೀಬ್ ಮಾ ಕಿ ಜಿಸ್ ಕಾ ಯಹ್ ಚಿರಾಗ್ ಹೈ
ವೊ ಖುಷ್‍ನಸೀಬ್ ಹೈ ಕಹಾಂ ಯಹ್ ಜಿಸ್ಕೆ ಸರ್ ಕಾ ತಾಜ್ ಹೈ
ಅಮರ್ ವೊ ದೇಶ್ ಕ್ಯೋಂ ನ ಹೋ ಕಿ ತು ಜಹಾನ್ ಶಹೀದ್ ಹೋ

||ವತನ್ ಕೀ ರಾಹ್ ಮೆ ವತನ್ ಕೆ ನೌ ಜವಾನ್ ಶಹೀದ್ ಹೋ||


ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!

01 ಸೆಪ್ಟೆಂ 11

ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ
ಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?
ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿ
ಮುಂದೆ ಬಂದು ಕೈಯ ಯಾರೂ ನೀಡದಿರೆ ಏನ ಮಾಡುವ?

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಮುಳುಗುವವಗೆ ಹುಲ್ಲು ಕಡ್ಡೀ ಆಸರೆಯೇ ಬಲು ದೊಡ್ಡದು
ಮನದ ಭಯವ ಮರೆಸುವುದಕೆ ಸಣ್ಣ ಸನ್ನೆಯೇ ದೊಡ್ಡದು
ಅಷ್ಟರಲ್ಲೇ ಮುಗಿಲಿನಿಂದ ಸಿಡಿಲು ಬಡಿದು ಬಿದ್ದರೆ
ಮುಳುಗುವವನು ಮುಳುಗದೇ ತಾ ಬೇರೆ ಏನ ಮಾಡುವ||

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಪ್ರೀತಿಸುವುದನೇ ತಪ್ಪೆನ್ನುವುದಾದ್ರೆ ತಪ್ಪು ನನ್ನಿಂದಾಗಿದೆ
ಕ್ಷಮೆಯೇ ನೀಡಲು ಆಗದಂತ ಅಪರಾಧ ಇದಾಗಿದೆ
ನಿರ್ದಯಿ ಈ ಜನತೆಯೂ, ನನ್ನ ಸಖಿಯೂ ನಿರ್ದಯೀ
ನನ್ನವರೆಂದು ಹೇಗೆ ಅನ್ನಲಿ, ಹೇಗೆ ಧೈರ್ಯ ತಾಳಲಿ||

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಇದು ಇನ್ನೊಂದು ಭಾವಾನುವಾದದ ಯತ್ನ

ಮೂಲ ಗೀತೆ:
ಚಿತ್ರ : ಶರಾಬಿ
ಗಾಯಕರು: ಕಿಶೋರ್ ಕುಮಾರ್
ಸಂಗೀತ: ಬಪ್ಪಿ ಲಹರಿ

ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್
ಜಬ್ ಕದಮ್ ಹೀ ಸಾಥ್ ನ ದೇ ತೋ ಮುಸಾಫಿರ್ ಕ್ಯಾ ಕರೇ
ಯೂಂ ತೋ ಹೈ ಹಮ್ ದರ್ದ್ ಭೀ ಔರ್ ಹಮ್ ಸಫರ್ ಭೀ ಹೈ ಮೆರಾ
ಬಡ್ ಕೇ ಕೋಯೀ ಹಾಥ್ ನಾ ದೇ ದಿಲ್ ಭಲಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||

ಡೂಭ್‍ನೇ ವಾಲೇ ಕೋ ತಿನ್ ಕೇ ಕಾ ಸಹಾರಾ ಹೀ ಬಹುತ್
ದಿಲ್ ಬಹಲ್ ಜಾಯೇ ಫಖತ್ ಇತ್ನಾ ಇಶಾರಾ ಹೀ ಬಹುತ್
ಇತ್ನೇ ಪರ್ ಭೀ ಆಸ್ಮಾನ್ ವಾಲಾ ಗಿರಾ ದೇ ಬಿಜಲಿಯಾಂ
ಕೋಯಿ ಬತ್ ಲಾದೇ ಝರಾ ಯೆಹ್ ಡೂಬ್‍ತಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||

ಪ್ಯಾರ್ ಕರ‍್ನಾ ಝುರ್ಮ್ ಹೈ ತೋ ಝುರ್ಮ್ ಹಮ್‍ ಸೇ ಹೋಗಯಾ
ಕಾಬಿಲ್-ಎ-ಮಾಫೀ ಹುವಾ ಕರ‍್ತೇ ನಹೀಂ ಐಸೇ ಗುನಾಹ್
ಸಂಗ್ ದಿಲ್ ಹೈ ಯೆಹ್ ಜಹಾಂ ಔರ್ ಸಂಗ್ ದಿಲ್ ಮೇರಾ ಸನಮ್
ಕ್ಯಾ ಕರೇ ಜೋಶ್-ಎ-ಜುನೂನ್ ಔರ್ ಹೌಸ್‍ಲಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||