ನನ್ನೊಲವೇ… ಓ ನನ್ನೊಲವೇ…!

31 ಆಗಸ್ಟ್ 11

 
ನನ್ನೊಲವೇ… ಓ ನನ್ನೊಲವೇ…
ಮನಮೋಹಕ ಎಷ್ಟೊಂದು, ನೀನಿದ್ದರೆ ಈ ಜಗವು
ನೀನಿಲ್ಲದ ಈ ಜಗವು, ನನಗೇನೂ ಅಲ್ಲವೂ|

ನೀ ಜೊತೆಗಿದ್ದರೆ ಹೆಚ್ಚುವುದು ಬೆಲೆ ಪ್ರತಿ ಋತುವಿನದೂ
ಈ ನಿನ್ನ ಕಣ್ಣುಗಳಲ್ಲಿಹುದು ಇಬ್ಬನಿಯಾ ಪ್ರಭೆಯೂ
ನಾ ಸಾಯೋದು ಇನ್ನಿಲ್ಲೇ, ಇನ್ನಿಲ್ಲೇ ಬದುಕುವುದೂ|

||ನನ್ನೊಲವೇ… ಓ ನನ್ನೊಲವೇ…||

ಸುಂದರ ಸ್ವರ್ಗದ ಬಯಕೆಯದು, ಯಾರಿಗಿದೆ ಹೇಳು
ಹೂಗಳ ಹಾಸಿಗೆ ನನಗಂತೂ, ಈ ನಿನ್ನಾ ಮಡಿಲೂ
ನಿನ್ನೀ ಬಾಹುಗಳಿರುವಾ ಎಡೆಯೇ, ನನ್ನ ಪಾಲಿಗೆ ನಾಕವದೂ|

|| ನನ್ನೊಲವೇ… ಓ ನನ್ನೊಲವೇ…||

ಮಾಡಿಬಿಡು ನೀ ನನ್ನನ್ನು, ಹುಚ್ಚು ಪ್ರೇಮಿಯಂತೆ
ನೀ ಬಂದರೆ ಇನ್ನೂ ಸನಿಹ, ಕಣ್ತುಂಬ ನೋಡುವೆನಂತೆ
ಇಲ್ಲಿ ಲಕ್ಷ ಇದ್ದರೂ ನನ್ನಂತೆ, ನಿನ್ನಂತಿಲ್ಲಾ ಇಲ್ಲಾರೂ|

||ನನ್ನೊಲವೇ… ಓ ನನ್ನೊಲವೇ…||

ಇದು ಮತ್ತೊಂದು ಭಾವಾನುವಾದದ ಯತ್ನ

ಮೂಲ ಗೀತೆ:
ಚಿತ್ರ: ಪತ್ಥರ್ ಕೇ ಸನಮ್
ಗಾಯಕರು: ಮುಕೇಶ್ ಹಾಗೂ ಲತಾ ಮಂಗೇಶ್ಕರ್

ಮೆಹಬೂಬ್ ಮೇರೇ, ಮೆಹಬೂಬ್ ಮೇರೇ
ತೂ ಹೈ ತೋ ದುನಿಯಾ ಕಿತ್‍ನೀ ಹಸೀಂ ಹೈ
ಜೋ ತೂ ನಹೀಂ ತೋ ಕುಛ್ ಭೀ ನಹೀಂ ಹೈ

ತೂ ಹೋ ತೋ ಬಢ್ ಜಾತೀ ಹೈ ಕೀಮತ್ ಮೌಸಮ್ ಕೀ
ಯೇ ಜೋ ತೇರೀ ಆಂಖೇಂ ಹೈಂ  ಶೋಲಾ ಶಬ್‍ನಮ್ ಕೀ
ಯಹೀಂ ಮರ‍್ನಾ ಭೀ ಹೈ ಮುಝ್ ಕೋ, ಮುಝೆ ಜೀನಾ ಯಹೀಂ ಹೈ

ಅರ‍್ಮಾ ಕಿಸ್ ಕೋ ಜನ್ನತ್ ಕೀ ರಂಗೀನ್ ಗಲಿಯೋಂ ಕೀ
ಮುಝ್ ಕೋ ತೇರಾ ದಾಮನ್ ಹೈ ಬಿಸ್ತರ್ ಕಲಿಯೋಂ ಕಾ
ಜಹಾಂ ಪರ್ ಹೈಂ ತೇರೀ ಬಾಹೇಂ ಮೇರೀ ಜನ್ನತ್ ಭೀ ವಹೀಂ ಹೈ

ರಖ್ ದೇ ಮುಝ್ ಕೋ ತೂ ಅಪ್ನಾ ದೀವಾನಾ ಕರ್ ಕೇ
ನಝ್‍ದೀಕ್ ಆ ಜಾ ಫಿರ್ ದೇಖೂ ತುಝ್ ಕೋ ಜೀ ಭರ್ ಕೇ
ಮೇರೇ ಜೈಸೇ ಹೋಂಗೇ ಲಾಖೋಂ ಕೋಯೀ ಭೀ ತುಝ್ ಸಾ ನಹೀಂ ಹೈ


ದೇವಾ, ನೈವೇದ್ಯ ಸಿಗದಿದ್ದರೆ ಬೇಡ ಕೋಪ!

30 ಆಗಸ್ಟ್ 11

 

ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು

ಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯ
ನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್ತವ್ಯ

ನಮ್ಮ ಸತ್ಕರ್ಮಗಳೇ ನಮ್ಮನ್ನು ಕಾಪಾಡಬೇಕು ಎಂಬ ನಂಬಿಕೆ
ನಮ್ಮ ಕುಕರ್ಮಗಳಿಂದಲೇ ನಮಗೆ ಶಿಕ್ಷೆ ಎಂಬುವುದೂ ನಂಬಿಕೆ

ನಾವು ಏನೆಂಬುದ ನೀನು ಅರಿತಿರುವೆ ಹಾಗಾಗಿ ನಮಗಿಲ್ಲ ಭಯ
ನಮ್ಮ ಅರ್ಹತೆಗೆ ತಕ್ಕುದಾದುದೇ ದಕ್ಕುವುದು ಅದು ನಿನ್ನ ನ್ಯಾಯ

ಎಲ್ಲವೂ ನಮ್ಮ ಆಚಾರ ವಿಚಾರಗಳಿಂದಲೇ ಆಗಬೇಕು ನಿರ್ಧಾರ
ಹಾಗಾಗಿ ನಿನಗೆ ಲಂಚ ನೀಡಲಾರೆವಿನ್ನು, ಇದು ನಮ್ಮ ನಿರ್ಧಾರ

ಇನ್ನು ನಿನಗೆ  ಪೂಜೆ, ನೈವೇದ್ಯ, ಕಾಣಿಕೆ, ಸಿಗದಿದ್ದರೆ ಬೇಡ ಕೋಪ
ಅಣ್ಣರ ಕಣ್ಣುಗಳಿಗೆಲ್ಲಾದರೂ ಬಿದ್ದರೆ ನಮ್ಮಿಬ್ಬರ ಗತಿ, ಅಯ್ಯೋ ಪಾಪ

ಏಕೆಂದರೆ ಲಂಚ ಪಡೆಯುವುದೂ ತಪ್ಪು, ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು!
************************


ಇನಿಯಾ… ಇನಿಯಾ…!

24 ಆಗಸ್ಟ್ 11

ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂ
ನಮ್ಮ ಮಿಲನದ ಆಸೆಯಷ್ಟೇ ನನ್ನ ಮನದಲಿಹುದಿಂದು
ನಾ ನಿನ್ನವಳು…ಇನಿಯಾ
ನೀನು ನನ್ನವನು…
ಇನಿಯಾ… ಇನಿಯಾ…!

ಪ್ರೀತಿಯಲಿ ನೀನು ನನ್ನನ್ನೊಮ್ಮೆ ಸ್ಪರ್ಶಿಸಲು
ನಿರಾಯಾಸದಿ ನಾನು ಪ್ರಾಣ ಬಿಡುವೆ
ನೀನು ನನ್ನ ಬಾಹುಗಳಲ್ಲಿ ಬಂದರೆ
ನಿನ್ನಲ್ಲೇ ನಾನು ಹುದುಗಿ ಹೋಗುವೆ
ನಿನ್ನ ಹೆಸರಲ್ಲೇ ಕಳೆದು ಹೋಗುವೆ
ಇನಿಯಾ… ಇನಿಯಾ…!

ನನ್ನ ಹಗಲುಗಳು ಖುಷಿಯಲ್ಲಿ ಕುಣಿದಿವೆ
ನನ್ನ ರಾತ್ರಿಗಳೂ ಹಾಡುತ್ತಲಿವೆ
ಕ್ಷಣ ಕ್ಷಣವೂ ಮೋಡಿ ಮಾಡುತ್ತಿವೆ ಸಾಗುತಿಹ ಈ ದಿನಗಳು
ನಿನ್ನನ್ನು ಪಡೆದು ನಾ ಕಳೆದುಕೊಳ್ಳಲೇ
ನಿನಗಾಗಿ ನಾನು ಪ್ರಾಣ ನೀಡಲೇ
ನಿನಗಾಗಿ ನಾನೇನೇನು ಮಾಡಲಿ
ನಾನಿನ್ನ ಪೂಜೆಯನು ಮಾಡಲೇ
ನಿನ್ನ ಹೆಸರಿನೊಂದಿಗೇ ಬೆಸೆದಿದೆ ನನ್ನೆಲ್ಲಾ ಸಂಬಂಧವೂ
ಇನಿಯಾ… ಇನಿಯಾ…!

ಮುದ ನೀಡುವ ಈ ಮತ್ತು ಏರುತ್ತಾ ಸಾಗಿದೆ
ಒಲವಿಂದ ಯಾರೋ ತಲೆಯ ಸೆರಗ ಸರಿಸಿದಂತಿದೆ
ಈ ಮನವೀಗ ಪೂರ್ತಿ ಸೋತಿದೆ, ನನ್ನ ಜಗವೀಗ ನೋಡು ಬೆಳಗಿದೆ
ಈ ನವ ನವೀನ ಮದುಮಗಳು,ನಿನ್ನ ಜೋಗಿನಿಯಾದಂತಾಗಿದೆ
ಯಾರೋ ಪ್ರೇಮದ ಪೂಜಾರಿ ದೇವಾಲಯವ ಅಣಿಗಳಿಸುವಂತಿದೆ
ಇನಿಯಾ… ಇನಿಯಾ…!

ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂ
ನಮ್ಮ ಮಿಲನದ ಆಸೆ ನನ್ನ ಮನದಲಿಹುದಿಂದು
ಅರಿಯೆ ನಾನು
ಅರಿತಿಹೆ ನೀನು
ನಾನು ನಿನ್ನವಳು…
ನೀನು ನನ್ನವನು…
ಅರಿಯೆ ನಾನು
ಅರಿತಿರಿವೆ ನೀನು
ನಾ ನಿನ್ನವಳು…ನೀನು ನನ್ನವನು…
ಇನಿಯಾ… ಇನಿಯಾ…!
**************

ಇನ್ನೊಂದು ಭಾವಾನುವಾದದ ಯತ್ನ
ಮೂಲ ಹಿಂದೀ ಗೀತೆ:
ಗಾಯಕರು: ಕೈಲಾಶ್ ಖೇರ್
ಹೀರೇ ಮೋತೀ ಮೈ ನಾ ಚಾಹೂಂ
ಮೈ ತೋ ಚಾಹೂಂ ಸಂಗಮ್ ತೇರಾ
ಮೈ ತೋ ತೇರೀ ಸೈಯ್ಯಾಂ
ತೂ ಹಿ ಮೇರಾ
ಸೈಯ್ಯಾಂ… ಸೈಯ್ಯಾಂ…

ತೂ ಜೋ ಚೂಲೇ ಪ್ಯಾರ್ ಸೇ
ಆರಾಮ್ ಸೆ ಮರ್ ಜಾವೂಂ
ಆಜಾ ಚಂದಾ ಬಾಹೋಂ ಮೆ
ತುಜ್ ಮೆ ಹೀ ಗುಮ್ ಹೋ ಜಾವೂಂ ಮೈ
ತೇರೇ ನಾಮ್ ಮೆ ಖೋ ಜಾವೂಂ
ಸೈಯ್ಯಾಂ… ಸೈಯ್ಯಾಂ…

ಮೇರೇ ದಿನ್ ಖುಷೀ ಸೇ ಝೂಮೇ, ಗಾಯೇ ರಾತೇಂ
ಪಲ್ ಪಲ್ ಮುಝೆ ದುಬಾಯೇ ಜಾತೇ ಜಾತೇ
ತುಝೆ ಜೀತ್ ಜೀತ್ ಹಾರೂಂ
ಯೆಹ್ ಪ್ರಾಣ್ ಪ್ರಾಣ್ ವಾರೂಂ
ಹೈ ಐಸೆ ಮೈ ನಿಹಾರೂಂ
ತೇರೀ ಆರತೀ ಉತಾರೂಂ
ತೇರೇ ನಾಮ್ ಸೇ ಜುಡೇ ಹಈಮ್ ಸಾರೇ ನಾತೇ
ಸೈಯ್ಯಾಂ… ಸೈಯ್ಯಾಂ…

ಯೆಹ್ ನರ್ಮ್ ನರ್ಮ್ ನಶಾ ಹೈ ಬಡ್ ತಾ ಜಾಯೇ
ಕೋಯೀ ಪ್ಯಾರ್ ಸೇ  ಘೂಂಘಟ್ ದೇತಾ ಉಟಾಯೇ
ಅಬ್ ಭಾವ್‍ರಾ ಹುವಾ ಮನ್
ಜಗ್ ಹೋ ಗಯಾ ಹೈ ರೋಶನ್
ಯೆಹ್ ನಯೀ ನಯೀ ಸುಹಾಗನ್
ಹೊ ಗಯೀ ಹೈ ತೇರೀ ಜೋಗನ್
ಕೋಯೀ ಪ್ರೇಮ್ ಕೀ ಪುಜಾರನ್ ಮಂದಿರ್ ಸಜಾಯೇ
ಸೈಯ್ಯಾಂ… ಸೈಯ್ಯಾಂ…
ಸೈಯ್ಯಾಂ… ಸೈಯ್ಯಾಂ…

ಹೀರೇ ಮೋತೀ ಮೈ ನಾ ಚಾಹೂಂ
ಮೈ ತೋ ಚಾಹೂಂ ಸಂಗಮ್ ತೇರಾ
ಮೈ ನಾ ಜಾನೂ
ತೂ ಹೀ ಜಾನೇ
ಮೈ ತೋ ತೇರೀ
ಮೈ ತೋ ತೇರೀ
ತೂ ಹಿ ಮೇರಾ
ಮೈ ನಾ ಜಾನೂ
ತೂ ಹೀ ಜಾನೇ
ಮೈ ತೋ ತೇರೀ
ತೂ ಹಿ ಮೇರಾ
ಮೈ ತೋ ತೇರೀ
ತೂ ಹಿ ಮೇರಾ
***********


ಬಿಳಿ ಯಾಕೆ ರಾಧಾ… ನಾನ್ಯಾಕೆ ಕಪ್ಪು?

22 ಆಗಸ್ಟ್ 11

 

ಯಶೋದ ಮಾತೆಯನು ಕೇಳಿದ ಗೋಪಾಲಾ
ಬಿಳಿ ಯಾಕೆ ರಾಧಾ … ನಾನ್ಯಾಕೆ ಕಪ್ಪು?

ಮುಗುಳ್ನಗು ಬೀರುತ್ತಾ, ನುಡಿದಳಾ ತಾಯಿ
ನೀನು ಬಂದ ಗಳಿಗೆ ಅದುವೇ ನಡು ರಾತ್ರಿ ಕಪ್ಪು
ಹಾಗಾಗಿ ಕಪ್ಪು

ಯಶೋದ ಮಾತೆಯನು ಕೇಳಿದ ಗೋಪಾಲಾ
ಬಿಳಿ ಯಾಕೆ ರಾಧಾ … ನಾನ್ಯಾಕೆ ಕಪ್ಪು?

ನಕ್ಕು ನಕ್ಕು ನುಡಿದಳಾ ತಾಯಿ, ಕೇಳೋ ನನ್ನ ಕಂದ
ರಾಧೆ ಬಿಳಿಯಾದರೂ ಕಣ್ಣ ಕಾಡಿಗೆಯು ಕಪ್ಪು
ಕರಿಗಣ್ಣ ರಾಧೆ ಜಾದೂ ಮಾಡಿದಾಳೆ ತಪ್ಪು
ಹಾಗಾಗಿ ಕಪ್ಪು

ಯಶೋದ ಮಾತೆಯನು ಕೇಳಿದ ಗೋಪಾಲಾ
ಬಿಳಿ ಯಾಕೆ ರಾಧಾ … ನಾನ್ಯಾಕೆ ಕಪ್ಪು?

*****************

ಇದು ಮತ್ತೊಂದು ಭಾವಾನುವಾದದ ಯತ್ನ

 

ಮೂಲ ಗೀತೆ:
ಚಿತ್ರ: ಸತ್ಯಂ ಶಿವಂ ಸುಂದರಂ
ರಚನೆ: ಆನಂದ್ ಭಕ್ಷಿ
ಸಂಗೀತ: ಲಕ್ಷ್ಮೀಕಾಂತ್ ಪ್ಯಾರೇಲಾಲ್
ಗಾಯಕಿ: ಲತಾ ಮಂಗೇಶ್ಕರ್
ಯಶೋಮತಿ ಮಯ್ಯಾ ಸೇ ಬೋಲೇ ನಂದ್ ಲಾಲಾ
ರಾಧಾ ಕ್ಯೋಂ ಗೋರಿ? ಮೈ ಕ್ಯೋಂ ಕಾಲಾ?

ಬೋಲೀ ಮುಸ್‍ಕಾತೀ ಮೈಯ್ಯಾ ಲಲನಾ ಕೋ ಬತಾಯಾ
ಕಾಲೀ ಅಂಧಿಯಾರೀ ಆಧೀ ರಾತ್ ಮೆ ತೂ ಆಯಾ
ಇಸೀ ಲಿಯೇ ಕಾಲಾ

ಯಶೋಮತಿ ಮಯ್ಯಾ ಸೇ ಬೋಲೇ ನಂದ್ ಲಾಲಾ
ರಾಧಾ ಕ್ಯೋಂ ಗೋರಿ? ಮೈ ಕ್ಯೋಂ ಕಾಲಾ?

ಬೋಲೀ ಮುಸ್‍ಕಾತೀ ಮೈಯ್ಯಾ, ಸುನೋ ಮೇರೇ ಪ್ಯಾರೇ (೨)
ಗೋರಿ ಗೋರಿ ರಾಧಿಕಾ ಕೇ ನೈನ ಕಜ್‍ರಾ ರೇ
ಕಾಲೇ ನೈನೋವಾಲೀ ನೇ ಐಸಾ ಜಾದೂ ಡಾಲಾ
ಇಸೀಲಿಯೇ ಕಾಲಾ

ಯಶೋಮತಿ ಮಯ್ಯಾ ಸೇ ಬೋಲೇ ನಂದ್ ಲಾಲಾ
ರಾಧಾ ಕ್ಯೋಂ ಗೋರಿ? ಮೈ ಕ್ಯೋಂ ಕಾಲಾ?
*****************


ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ?!

11 ಆಗಸ್ಟ್ 11

||ನಾ ನನ್ನ ಕಥೆಯ ಹೇಳಿಕೊಂಡರೆ
ಅಳುವೆ ನೀನೇಕೆ
ನನ್ನೀ ಹೃದಯದ ದುರವಸ್ಥೆ ಹೀಗಾಗಿರೆ
ಅಳುವೆ ನೀನೇಕೆ||

ಈ ನೋವು ಈ ಕಷ್ಟ ನನ್ನದಾದರೂ
ಸಹಿಸುವೆ ನೀನೇಕೆ
ಈ ಕಣ್ಣೀರು ನನ್ನದಾದರೂ ನಿನ್ನ ಕಣ್ಣಿಂದ
ಹರಿದಿದೆ ಇಂದೇಕೆ
ನನ್ನೀ ನೋವಿನಗ್ನಿಯನು ನಾನೇ ಹಚ್ಚಿರೆ
ಅಳುವೆ ನೀನೇಕೆ
||ನಾ ನನ್ನ ಕಥೆಯ ಹೇಳಿಕೊಂಡರೆ
ಅಳುವೆ ನೀನೇಕೆ||

ಬಹಳಷ್ಟು ಕಣ್ಣೀರು ಹರಿಸಿಯಾಗಿದೆ
ಬಿಡು ನಾನಿನ್ನು ಅಳಲಾರೆ
ನಾ ನೆಮ್ಮದಿಯ ಕೆಡಿಸಿಕೊಂಡು
ನಿನ್ನ ನೆಮ್ಮದಿಯನೂ ಕೆಡಿಸಲಾರೆ
ಕಣ್ಣೀರು ವಿನಾಶದ ಸೂಚನೆ ನೀಡುತಿರೆ
ಅಳುವೆ ನೀನೇಕೆ
||ನಾ ನನ್ನ ಕಥೆಯ ಹೇಳಿಕೊಂಡರೆ
ಅಳುವೆ ನೀನೇಕೆ||

ಈ ಅಶ್ರುಧಾರೆ ನಿಲ್ಲದಿರೆ ಕೇಳು
ನಾನೂ ಅತ್ತು ಬಿಡುವೆ
ನನ್ನ ಕಣ್ಣೀರಿನಲ್ಲಿ ಆ ಚಂದ್ರ
ತಾರೆಯರ ಮುಳುಗಿಸಿಬಿಡುವೆ
ಈ ಸೃಷ್ಟಿಯ ವಿನಾಶವಾಗಬಹುದು
ಅಳುವೆ ನೀನೇಕೆ
||ನಾ ನನ್ನ ಕಥೆಯ ಹೇಳಿಕೊಂಡರೆ
ಅಳುವೆ ನೀನೇಕೆ||
******
ಇದು ಇನ್ನೊಂದು ಭಾವಾನುವಾದದ ಯತ್ನ!
ಮೂಲ ಗೀತೆ:

ಚಿತ್ರ: ವೊ ಕೌನ್ ಥೀ
ಗಾಯಕರು: ಲತಾ ಮಂಗೇಶ್ಕರ್
ಜೋ ಹಮ್‍ ನೇ ದಾಸ್ತಾನ್ ಅಪ್ನೀ ಸುನಾಯೀ ಆಪ್ ಕ್ಯೋಂ ರೋಯೇಂ
ತಬಾಹಿ ತೊ ಹಮಾರೇ ದಿಲ್ ಪೆ ಆಯೀ ಆಪ್ ಕ್ಯೋಂ ರೋಯೇಂ

ಹಮಾರಾ ದರ್ದ್-ಒ-ಘಮ್ ಹೈ ಯಹ್ ಇಸೆ ಕ್ಯೋಂ ಆಪ್ ಸಹ್ ತೇ ಹೈಂ
ಯಹ್ ಕ್ಯೋಂ ಆಂಸೂ ಹಮಾರೇ ಆಪ್ ಕೀ ಆಂಖೋಂ ಸೇ ಬಹತೀ ಹೈಂ
ಘಮೋಂ ಕೀ ಆಗ್ ಹಮ್ ನೇ ಖುದ್ ಲಗಾಯೀ ಆಪ್ ಕ್ಯೋಂ ರೋಯೇ
ಜೋ ಹಮ್‍ ನೇ ದಾಸ್ತಾನ್ ಅಪ್ನೀ ಸುನಾಯೀ ಆಪ್ ಕ್ಯೋಂ ರೋಯೇಂ

ಬಹುತ್ ರೋಯೇ ಮಗರ್ ಅಬ್ ಆಪ್ ಕೀ ಖಾತಿರ್ ನ ರೋಯೆಂಗೇ
ನ ಅಪ್ನಾ ಚೈನ್ ಖೋಕರ್ ಆಪ್ ಕಾ ಹಮ್ ಚೈನ್ ಖೋಯೇಂಗೇ
ಖಯಾಮತ್ ಆಪ್ ಕೇ ಅಶ್ಕೋಂ ನೇ ಡಾಯೀ ಆಪ್ ಕ್ಯೋಂ ರೋಯೇ
ಜೋ ಹಮ್‍ ನೇ ದಾಸ್ತಾನ್ ಅಪ್ನೀ ಸುನಾಯೀ ಆಪ್ ಕ್ಯೋಂ ರೋಯೇಂ

ನ ಯಹ್ ಆಂಸೂಂ ರುಖೆ ತೋ ದೇಖಿಯೇ ಫಿರ್ ಹಮ್ ಭೀ ರೋಯೇಂಗೇ
ಹಮ್ ಅಪ್ನೆ ಆಂಸೂವೋಂ ಮೆ ಚಾಂದ್ ತಾರೋಂ ಕೋ ಡುಬಾ ದೇಂಗೇ
ಫನಾಹ ಹೋ ಜಾಯೆಗೀ ಸಾರಿ ಖುದಾಯಿ ಆಪ್ ಕ್ಯೋಂ ರೋಯೇ
ಜೋ ಹಮ್‍ ನೇ ದಾಸ್ತಾನ್ ಅಪ್ನೀ ಸುನಾಯೀ ಆಪ್ ಕ್ಯೋಂ ರೋಯೇಂ
***************************


ನಾನೂ ಕವಿಯಾದೆ ನೋಡು!

10 ಆಗಸ್ಟ್ 11

ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ

ನನ್ನ ಮನದ ದರ್ಪಣದಲಿ, ನಿನ್ನ ನಾ ಮತ್ತೆ ಮತ್ತೆ ಕಂಡೆ
ನಿನ್ನ ಕಂಗಳಲ್ಲಿ ನಾನು, ತುಳುಕಾಡೋ ಒಲವ ಕಂಡೆ
ನಿನ್ನ ಕಣ್ಣ ನೋಟದಿಂದ, ನಾನು ಹೇಗೆ ಘಾಸಿಗೊಂಡೆ

||ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ ||

ನಿನ್ನ ಮೈಯ ಬಣ್ಣ ಚಂದ, ಅದಕ್ಕಿಂದ ಅಂದ ಒನಪು
ನಿನ್ನ ಮಾತಲ್ಲಿಹುದು ಜಾದು, ನಿನ್ನ ನುಡಿಗಳು ಕಿವಿಗಳಿಂಪು
ನಿನ್ನ ಪ್ರತಿ ನಡೆಯಲ್ಲೂ ಪ್ರೀತಿ, ಭೂಮೀಲಿ ನೀನಾಗಸದ ಸೊಂಪು

||ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ ||

ನನ್ನನ್ನು ಮೋಡಿ ಮಾಡಿಹುದು, ನಿನ್ನ ಸೀದಾ ಸಾದಾ ರೂಪ
ನಿನ್ನ ಮೋಹಕ ನೋಟದಿಂದ, ಹೆಚ್ಚಿಹುದು ಒಲವಿನ ತಾಪ
ನಿನಗಾಗಿ ಪ್ರಾಣ ಕೊಡುವೆ, ಎನ್ನುವುದೇ ನನ್ನ ಆಲಾಪ

||ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ ||
*****

ಇದೊಂದು ಭಾವಾನುವಾದದ ಯತ್ನ

ಮೂಲ ಗೀತೆ:
ಚಿತ್ರ: ಪ್ಯಾರ್ ಹೀ ಪ್ಯಾರ್

ಗಾಯಕರು: ಮಹಮ್ಮದ್ ರಫಿ

ಮೈ ಕಹೀಂ ಕವೀ ನ ಬನ್ ಜಾವೂ
ತೇರೆ ಪ್ಯಾರ್ ಮೆ ಓ ಕವಿತಾ

ತುಝೆ ದಿಲ್ ಕೆ ಆಯಿನೇ ಮೆ,
ಮೈನೆ ಬಾರ್ ಬಾರ್ ದೇಖಾ
ತೇರೆ ಅಖಡಿಯೋಂ ಮೆ ದೇಖಾ,
ತೊ ಝಲಕ್‍ತಾ ಪ್ಯಾರ್ ದೇಖಾ
ತೇರಾ ತೀರ್ ಮೈನೇ ದೇಖಾ,
ತೊ ಜಿಗರ್ ಕೆ ಪಾರ್ ದೇಖಾ

ತೇರಾ ರಂಗ್ ಹೈ ಸಲೋನಾ
ತೇರೆ ಅಂಗ್ ಮೆ ಲಚಕ್ ಹೈ
ತೇರಿ ಬಾತ್ ಮೆ ಹೈ ಜಾದೂ
ತೇರೆ ಬೋಲ್ ಮೆ ಖನಕ್ ಹೈ
ತೇರಿ ಹರ್ ಅದಾ ಮೊಹಬ್ಬತ್
ತೂ ಜಮೀ ಕಿ ಧನಕ್ ಹೈ

ಮೆರಾ ದಿಲ್ ಲುಬಾ ರಹಾ ಹೈ
ತೇರಾ ರೂಪ್ ಸೀದಾ ಸಾದಾ
ಯೆ ಝುಕೀ ಝುಕೀ ನಿಗಾಹೇಂ
ಕರೆ ಪ್ಯಾರ್ ದಿಲ್ ಮೆ ಜ್ಯಾದಾ
ಮೈ ತುಜೀ ಪೆ ಜಾನ್ ದೂಂಗಾ
ಹೈ ಯಹೀ ಮೇರಾ ಇರಾದಾ
************


ಮಳೆ ಬಂದರೇನು…ಬಾ…!

03 ಆಗಸ್ಟ್ 11

ಹಗಲಿರುಳು ನಾ ಕಾದರೂ
ಬರುತ್ತಿಲ್ಲ ನೀನು ಮನೆಯಿಂದಾಚೆಗೆ
ಮಳೆಯ ಸಬೂಬು ನೀಡಿ
ಕೂತಿಹೆ ಯಾಕೋ ಒಳಗೇ ನೀ ಬೆಚ್ಚಗೆ

ಮಳೆಗಾಲದ ಈ ಬವಣೆಯಿಂದ
ಬಚಾವಾಗಲು ಇಲ್ಲಿದೆ ಉಪಾಯ,
ನನ್ನ ಮಾತ ನೀ ಕೇಳಿದರೆ
ಒಂದಿಷ್ಟೂ ನೆನೆಯದೆಮ್ಮ ಕಾಯ;

ಎತ್ತರದ, ಹೂಂ…ಎಲ್ಲಕ್ಕಿಂತಲೂ
ಎತ್ತರದ ಮೇಘಗಳ ಮೇಲೇರಿ,
ಎಲ್ಲರ ಕಣ್ ತಪ್ಪಿಸಿ ನಾವು
ಮಾಡೋಣ ಪುಕ್ಕಟೆ ಸವಾರಿ!
********


ಬಾರದಿರು ಸಖೀ ತೆರೆದ ಆಗಸದಡಿಗೆ!

02 ಆಗಸ್ಟ್ 11

 

ಬೆಳದಿಂಗಳ ರಾತ್ರಿಯಲ್ಲಿ
ಬಾರದಿರು ಸಖೀ ನೀನು
ತೆರೆದ ಆಗಸದ ಅಡಿಗೆ
ನಿನ್ನಂದವನ್ನು ಕಂಡು
ಕಣ್ಣು ಮಿಟುಕಿಸುತ್ತವೆ
ಆ ತಾರೆಗಳು ಅಡಿಗಡಿಗೆ;

ನಗುವನು ಆ ಚಂದಿರ
ಹೆಚ್ಚಿಸಿ ತನ್ನ ಬೆಳಕಿನಿಂದ
ನಿನ್ನ ಸೌಂದರ್ಯವನ್ನು,
ಆದರೆ ತಾರೆಗಳ ಕಣ್ಣಾಟ
ಆ ಕಳ್ಳಾಟ ಹೆಚ್ಚಿಸುತ್ತದೆ
ನನ್ನೀ ಮನದ ದುಗುಡವನ್ನು!
******