ಹಗಲೂ ಇರುಳೂ ಮರೆಯಲ್ಲಿ ನಿಂತು…!

(ಇನ್ನೊಂದು ಭಾವಾನುವಾದದ ಯತ್ನ)

ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದೆಲ್ಲಾ ನೆನಪಿದೆ
ನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆ
ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆ

ಪರದೆಯ ಕೊನೆಯ ಹಿಡಿದು ಒಮ್ಮೆಗೇ ಜಗ್ಗಿ ಎಳೆದಾಡಿದುದೂ
ದುಪ್ಪಟ್ಟದಿಂದ ಮತ್ತಾ ಮುಖವ ಮುಚ್ಚಿಕೊಂಡಿದ್ದಿನ್ನೂ ನೆನಪಿದೆ
ನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆ
ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆ

ಉರಿಬಿಸಿಲಲ್ಲೂ ಬರೀ ನನ್ನ ಒಂದು ಕರೆಗೆ ಓಗೊಟ್ಟು ನೀನು
ಬರಿಗಾಲಿನಲ್ಲಿ ನಡೆದು ನನ್ನಲ್ಲಿಗೆ ಬರುತ್ತಿದ್ದುದಿನ್ನೂ ನೆನಪಿದೆ
ನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆ
ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆ

ಮೂಲ ಗೀತೆ:
ಚಿತ್ರ: ನಿಖಾಹ್
ಗಾಯಕ: ಗುಲಾಮ್ ಅಲಿ

ಚುಪ್ ಕೆ ಚುಪ್ ಕೇ ರಾತ್ ದಿನ್ ಆಂಸೂ ಬಹಾನಾ ಯಾದ್ ಹೈ
ಹಮ್‍ ಕೋ ಅಬ್ ತಕ್ ಆಶಿಖೀ ಕಾ ವೋ ಜಮಾನಾ ಯಾದ್ ಹೈ
ಚುಪ್ ಕೆ ಚುಪ್ ಕೇ ರಾತ್ ದಿನ್ ಆಂಸೂ ಬಹಾನಾ ಯಾದ್ ಹೈ

ಖೇಂಚ್ ಲೇನಾ ವೊ ಮೆರಾ ಪರ್ದೇ ಕ್ ಕೊನಾ ದಫತ್ತನ್
ಔರ್ ದುಪ್ಪಟ್ಟೇ ಸೇ ತೆರಾ ವೊ ಮುಹ್ ಚುಪಾನಾ ಯಾದ್ ಹೈ
ಹಮ್‍ ಕೋ ಅಬ್ ತಕ್ ಆಶಿಖೀ ಕಾ ವೋ ಜಮಾನಾ ಯಾದ್ ಹೈ
ಚುಪ್ ಕೆ ಚುಪ್ ಕೇ ರಾತ್ ದಿನ್ ಆಂಸೂ ಬಹಾನಾ ಯಾದ್ ಹೈ

ದೋ ಪಹರ್ ಕೀ ಧೂಪ್ ಮೆ ಮೇರೇ ಬುಲಾನೇ ಕೆ ಲಿಯೆ
ವೊ ತೆರಾ ಕೋಟೇ ಪೆ ನಂಗೇ ಪಾಂವ್ ಆನಾ ಯಾದ್ ಹೈ
ಹಮ್‍ ಕೋ ಅಬ್ ತಕ್ ಆಶಿಖೀ ಕಾ ವೋ ಜಮಾನಾ ಯಾದ್ ಹೈ
ಚುಪ್ ಕೆ ಚುಪ್ ಕೇ ರಾತ್ ದಿನ್ ಆಂಸೂ ಬಹಾನಾ ಯಾದ್ ಹೈ

8 Responses to ಹಗಲೂ ಇರುಳೂ ಮರೆಯಲ್ಲಿ ನಿಂತು…!

 1. ksraghavendranavada ಹೇಳುತ್ತಾರೆ:

  ಉರಿಬಿಸಿಲು.. ಬರಿಗಾಲು.. ಸೊಗಸಾದ ಭಾವಾನುವಾದ..
  ಭಾವಾನುವಾದವನ್ನು ಓದುತ್ತಾ ಹೋದ೦ತೆ.. ಪ್ರೇಮಿಗಳಿಬ್ಬರು ಕಣ್ಮು೦ದೆ ಬ೦ದು ನಿ೦ತ೦ತಾಗುತ್ತದೆ..!

  ಹೀಗೆ ನೀಡುತ್ತಿರಿ..
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ

 2. ಲತಾ ಹೇಳುತ್ತಾರೆ:

  ಹೆಗ್ಡೆಜೀ,
  ಎಲ್ಲಾ ಕ್ಷೇತ್ರಗಳಲ್ಲಿಯೂ, ಎಲ್ಲಾ ವಿಷಯಗಳಲ್ಲಿಯೂ ಇರುವ ಆಸಕ್ತಿ ಕಂಡು ನಿಜವಾಗಿಯೂ ಖುಷಿಯಾಯ್ತು.
  ಯಾವ ಚಾನೆಲ್ ತಿರುಗಿಸಿದರೂ ಇಂತಹ ಗಾನಸುಧೆ ಹರಿದುಬರುವುದಿಲ್ಲ ಕಣ್ರೀ, ಇದಕ್ಕೇನು ಮಾಡೋಣ ಹೇಳಿ!

 3. Shashi Jenny ಹೇಳುತ್ತಾರೆ:

  Suresh,
  This is a beautiful translation!
  Good attempt!
  Well done!

 4. HEMA ಹೇಳುತ್ತಾರೆ:

  ಹೆಗ್ಡೆಯವರೇ,
  ಸುಂದರವಾದ ಹಾಡು.
  ಓದುತ್ತಾ ಹೋದಂತೆ ಆ ಹಿಂದಿನ ದಿನಗಳು ಮರುಕಳಿಸಬೇಕು ಅನಿಸುವಂತಿದೆ.
  ಭಾವಾನುವಾದ ಚೆನ್ನಾಗಿ ಮೂಡಿಬಂದಿದೆ.
  ನಿಜಕ್ಕೂ ಖುಷಿಯಾಯ್ತು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: