ಈ ಹೃದಯ ಕವಿಯಾಗಿ…!

 

(ಮತ್ತೊಂದು ಭಾವಾನುವಾದದ ಯತ್ನ)

ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆ
ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆ
ಅವರಿವರ ಗೀತೆಗಳ ಕೇಳುತ್ತಾ ಇರುವವಳೇ, ನನ್ನನ್ನೂ ನೀ ಆಲಿಸೇ

ಒಮ್ಮೆ ನೀ ಬಂದು ನೋಡಿಲ್ಲಿ ನಿನಗಾಗಿ, ನಾ ಹೇಗೆ ಬಾಳುತ್ತಲಿರುವೆ
ಒಮ್ಮೆ ನೀ ಬಂದು ನೋಡಿಲ್ಲಿ ನಿನಗಾಗಿ, ನಾ ಹೇಗೆ ಬಾಳುತ್ತಲಿರುವೆ
ನೀ ಮಾಡಿ ಹೋದ ಘಾಯಗಳನ್ನೆಲ್ಲಾ, ಕಣ್ಣೀರಿಂದ ಹೊಲಿಯುತ್ತಿರುವೆ
ನಿನ್ನ ವಿರಹದ ನೋವ ಹಿಡಿದು ನಾನನ್ನ ಅದೃಷ್ಟದ ಜೊತೆಗೆ ಜೂಜಾಡಿದೆ
ಜಗವನ್ನು ಜಯಿಸಿ, ನಿನ್ನಿಂದ ಸೋತೆ, ನನ್ನ ಆಟ ಹೀಗಾಗಿದೆ

ನಾ ಪ್ರೀತಿ ಮಾಡಿದ್ದು ಹೇಗೆಂದು ಕೇಳಿದರೆ ಅದಕ್ಕಿಲ್ಲ ಉತ್ತರ ಏನೂ
ನಾ ಪ್ರೀತಿ ಮಾಡಿದ್ದು ಹೇಗೆಂದು ಕೇಳಿದರೆ ಅದಕ್ಕಿಲ್ಲ ಉತ್ತರ ಏನೂ
ಧೂಳ ಕಣವಾಗಿದ್ದ ನಾ ನಿನ್ನ ಜ್ವಾಲೆಯಲ್ಲಿ ಉರಿದು ಆಗಿಹೆನೀಗ ಭಾನು
ನನ್ನಿಂದಾಗಿಯೇ ಇಲ್ಲಿ ವಿಶ್ವಾಸ ಉಳಿದಿಹುದು, ನೀನಿರುವೆ ಜೀವಂತವಿನ್ನೂ
ನಾನಿಲ್ಲದಾಗ ಕಣ್ಣೀರು ಸುರಿಸಿ, ಜಗ ಹುಡುಕಬಹುದೆನ್ನ ಗುರುತು

ಈ ಪ್ರೀತಿ ಒಂದು ಆಟಿಕೆಯು ಅಲ್ಲ, ಯಾರಾದರೂ ಖರೀದಿಸಲು
ಈ ಪ್ರೀತಿ ಒಂದು ಆಟಿಕೆಯು ಅಲ್ಲ, ಯಾರಾದರೂ ಖರೀದಿಸಲು
ನನ್ನಂತೆ ಬಹಳಷ್ಟು ಪರಿತಪಿಸಿ ನೀವು, ಆಮೇಲೆ ಬನ್ನಿ ಪ್ರೀತಿಸಲು
ನಾ ಅಲೆಮಾರಿ, ಎಲ್ಲಿಯದೋ ಪಯಣ, ನಾನಂತೂ ಸಾಗಿ ಬಿಡುವೆ
ಆದರೂ ನಾನು ಕಟ್ಟಿರುವ ಬಾಜಿಯನು, ನಾ ಗೆದ್ದು ಬಂದೇ ಬರುವೆ
ನಾ ಗೆದ್ದು ಬಂದೇ ಬರುವೆ
ನಾ ಗೆದ್ದು ಬಂದೇ ಬರುವೆ
**********
 

ಮೂಲ ಗೀತೆ:
ಚಿತ್ರ: ಗ್ಯಾಂಬ್ಲರ್
ಗಾಯಕ: ಕಿಶೋರ್ ಕುಮಾರ್

ದಿಲ್ ಆಜ್ ಶಾಯರ್ ಹೈ ಗಮ್ ಆಜ್ ನಗ್ಮಾ ಹೈ ಶಬ್ ಯೆ ಘಝಲ್ ಹೈ ಸನಮ್
ದಿಲ್ ಆಜ್ ಶಾಯರ್ ಹೈ ಗಮ್ ಆಜ್ ನಗ್ಮಾ ಹೈ ಶಬ್ ಯೆ ಘಝಲ್ ಹೈ ಸನಮ್
ಗೈರೋಂ ಕೇ ಶೇರೋಂ ಕೊ ಓ ಸುನ್ ನೇ ವಾಲೇ ಹೋ ಇಸ್ ತರಫ್ ಭೀ ಕರಮ್

ಆಕೇ ಝರಾ ದೇಖ್ ತೋ ತೇರಿ ಖಾತಿರ್ ಹಮ್ ಕಿಸ್ ತರಹ್ ಸೇ ಜೀಯೆ
ಆಕೇ ಝರಾ ದೇಖ್ ತೋ ತೇರಿ ಖಾತಿರ್ ಹಮ್ ಕಿಸ್ ತರಹ್ ಸೇ ಜೀಯೆ
ಆಂಸೂ ಕೆ ದಾಗೇ ಸೇ ಸೀತೇ ರಹೇ ಹಮ್ ಜೊ ಜಖ್ಮ್ ತೂನೆ ದಿಯೇ
ಚಾಹತ್ ಕಿ ಮೆಹ್ ಫಿಲ್ ಮೆ ಗುಮ್ ತೆರಾ ಲೇಕರ್ ಕಿಸ್ಮತ್ ಸೆ ಖೇಲಾ ಜುಂವಾ
ದುನಿಯಾ ಸೇ ಜೀತೆ, ತುಜ್‍ಸೇ ಹಾರೆ, ಯು ಖೇಲ್ ಅಪ್ನಾ ಹುವಾ

ಹೈ ಪ್ಯಾರ್ ಹಮ್ನೇ ಕಿಯಾ ಕಿಸ್ ತರಹ್ ಸೆ, ಉಸ್ಕಾ ನಾ ಕೊಯೀ ಜವಾಬ್
ಹೈ ಪ್ಯಾರ್ ಹಮ್ನೇ ಕಿಯಾ ಕಿಸ್ ತರಹ್ ಸೆ, ಉಸ್ಕಾ ನಾ ಕೊಯೀ ಜವಾಬ್
ಝರ್ರತ್ ಹೈ ಲೇಕಿನ್ ತೇರಿ ಲವೂ ಮೆ ಜಲ್‍ಕರ್ ಹುಮ್ ಬನ್ ಗಯೇ ಅಫ್‍ತಾಬ್
ಹಮ್ ಸೆ ಹೈ ಜಿಂದಾ ವಫಾ ಔರ್ ಹಮೀ ಸೆ ಹೈ ತೆರಿ ಮೆಹಫಿಲ್ ಜವಾಂ
ಹುಮ್ ಜಬ್ ನ ಹೋಂಗೇ ತೊ ರೋ ರೋ ಕೆ ದುನಿಯಾ ಡೂಂಡೇಗೀ ಮೇರೆ ನಿಶಾನ್

ಎ ಪ್ಯಾರ್ ಕೊಯಿ ಖಿಲೋನಾ ನಹೀ ಹೈ ಹರ್ ಕೊಯಿ ಲೆ ಜೊ ಖರೀದ್
ಎ ಪ್ಯಾರ್ ಕೊಯಿ ಖಿಲೋನಾ ನಹೀ ಹೈ ಹರ್ ಕೊಯಿ ಲೆ ಜೊ ಖರೀದ್
ಮೇರಿ ತರಹ್ ಜಿಂದಗೀ ಭರ್ ತಡಪ್ ಲೊ ಫಿರ್ ಆನಾ ಉಸ್ ಕೆ ಖರೀಬ್
ಹುಮ್ ತೊ ಮುಸಾಫಿರ್ ಹೈಂ ಕೊಇ ಸಫರ್ ಹೋ ಹುಮ್ ತೊ ಗುಜರ್ ಜಾಯೇಂಗೇ ಹೀ
ಲೇಕಿನ್ ಲಗಾಯಾ ಹೈ ಜೊ ದಾಂವ್ ಹುಮ್ ನೇ ವೊ ಜೀತ್ ಕರ್ ಆಯೇಂಗೇ ಹೀ
ವೊ ಜೀತ್ ಕರ್ ಆಯೇಂಗೇ ಹೀ
ವೊ ಜೀತ್ ಕರ್ ಆಯೇಂಗೇ ಹೀ

9 Responses to ಈ ಹೃದಯ ಕವಿಯಾಗಿ…!

 1. ಲತಾ ಶೆಣೈ ಹೇಳುತ್ತಾರೆ:

  ಹೆಗ್ಡೆಜೀ,
  ಪದ್ಯ ಕೇಳಿದ್ದೇನೆ, ಆದರೆ, ರಾಗ ಮರೆತು ಹೋಗಿದೆ.
  ನಿಮಗೆ ಹಳೆಯ ಹಾಡುಗಳ ಮೇಲಿರುವ ಒಲವು ತಿಳಿದು ತುಂಬಾ ಖುಷಿಯಾಯ್ತು.
  ಇನ್ನು ಮುಂದೆಯೂ ಇಂತಹ ಪ್ರಯತ್ನ ನಡೆಯುತ್ತಿರಲಿ ಎಂದು ಆಶಿಸುತ್ತೇನೆ.

 2. ಹೇಮಾ ದೇವಾಡಿಗ ಹೇಳುತ್ತಾರೆ:

  ನಾನೂ ಕೂಡ ರಾಘವೇಂದ್ರ ನಾವಡರವರ ಮಾತಿಗೆ ಸಹಮತಳಾಗಿದ್ದೇನೆ.
  ನಿಜ ಹೆಗ್ಡೆಯವರೇ, ಪ್ರತಿಯೊಂದು ಶಬ್ದವೂ ಹೃದಯದಿಂದ ಮೂಡಿ ಬಂದಿದೆ. ಗೀತೆ ಮನ ಸ್ಪರ್ಶಿಸಿತು.

 3. ThoteGowda ಹೇಳುತ್ತಾರೆ:

  wah wah wah… so nice translation, loved it.

 4. ksraghavendranavada ಹೇಳುತ್ತಾರೆ:

  ಈ ಹಿ೦ದೆಯೇ ಹೇಳಿದ್ದೆ.. ಮತ್ತೊಮ್ಮೆ ನನ್ನ ಅಭಿಪ್ರಾಯವನ್ನು ಇಲ್ಲಿ ಪುನರಾವರ್ತಿಸುತ್ತಿದ್ದೇನೆ.. ನೀವು ಭಾವಾನುವಾದದಲ್ಲಿ ಪಳಗುತ್ತಿದ್ದೀರಿ!

  ಒ೦ದು ಸು೦ದರ ಹಾಡಿನ ಸು೦ದರ ಭಾವಾನುವಾದ.. ಅದರಲ್ಲಿಯೂ ಶೋಕ ಗೀತೆಗಳ ಭಾವಾನುವಾದವನ್ನು ಅದ್ಭುತವಾಗಿ ಮಾಡುತ್ತೀರಿ..!! ಮನಸಿನ ಮಾತಿದು.

  ಧೂಳ ಕಣವಾಗಿದ್ದ ನಾ ನಿನ್ನ ಜ್ವಾಲೆಯಲ್ಲಿ ಉರಿದು ಆಗಿಹೆನೀಗ ಭಾನು
  ನನ್ನಿಂದಾಗಿಯೇ ಇಲ್ಲಿ ವಿಶ್ವಾಸ ಉಳಿದಿಹುದು, ನೀನಿರುವೆ ಜೀವಂತವಿನ್ನೂ
  ನಾನಿಲ್ಲದಾಗ ಕಣ್ಣೀರು ಸುರಿಸಿ, ಜಗ ಹುಡುಕಬಹುದೆನ್ನ ಗುರುತು

  ಈ ಸಾಲುಗಳು ಭಾವನೆಗಳ ಮಹಾಪೂರವನ್ನೇ ಹರಿಸುವ೦ತಿವೆ.. ಮೂಲ ಸಾಹಿತ್ಯವೂ ಉತ್ತಮ ಭಾವಾಬಿವ್ಯಕ್ತಿಯೇ.. ಮಾತೃಭಾಷೆಯಲ್ಲಿ ಅದಿನ್ನೂ ಹೆಚ್ಚಿನ ಭಾವವನ್ನು ತು೦ಬಿಕೊ೦ಡಿದೆ.
  ಭಾವಾನುವಾದದ ಕೊನೆಯ ಚರಣವ೦ತೂ ಬಹಳ ಸೊಗಸಾಗಿದೆ.. ಆತ್ಮವಿಶ್ವಾಸವನ್ನು ಬಡಿದೆಬ್ಬಿಸುವ ಸಾಲುಗಳು.

  ವ೦ದನೆಗಳು ನಿಮಗೆ.

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  • ಆಸು ಹೆಗ್ಡೆ ಹೇಳುತ್ತಾರೆ:

   ರಾಘವೇಂದ್ರ,
   ಭಾವನೆಗಳೆಲ್ಲವೂ ಮೂಲಗೀತೆಯಲ್ಲೇ ಅಡಗಿವೆ.
   ಆದರೆ ಅವನ್ನೆಲ್ಲಾ ನಮ್ಮ ಭಾಷೆಯಲ್ಲಿ ತಮ್ಮ ಹೃದಯಳಿಗೆ ತಲುಪಿಸುವ ಯತ್ನ ನನ್ನದು ಅಷ್ಟೇ.
   ನನ್ನ ಈ ಪ್ರಯತ್ನ ಸಾರ್ಥಕವಾಯಿತೆಂಬ ಅರಿವು ತಮ್ಮ ಮಾತಿನಿಂದ ನನಗಾಗಿದೆ.
   ಹೃತ್ಪೂರ್ವಕ ಕೃತಜ್ಞತೆಗಳು.

 5. ವಿಜಯರಾಜ್ ಕನ್ನಂತ ಹೇಳುತ್ತಾರೆ:

  ಚೆನ್ನಾಗಿದೆ ಸಾರ್ ಅನುವಾದ… ಸಿಕ್ಕಾಪಟ್ಟೆ ಇಷ್ಟ ಪಟ್ಟೆ…:-)

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: