ಕನ್ನಡಪ್ರಭದವರಿಗೆ ಇಂದು ೨೭ ಸಪ್ಟಂಬರ ೧೪

26 ಸೆಪ್ಟೆಂ 14

26_09_2014_002_018

Advertisements

ಬೆಂಗಳೂರು!

26 ಸೆಪ್ಟೆಂ 14

ಸಖೀ,
ಬೆಂಗಳೂರನ್ನು ಸಿಂಗಾಪುರ ಮಾಡಲು ಹೊರಟಿದ್ದರು
ಅರ್ಧ ನಗರ ಮುಂಬಯಿಯ  ಧಾರಾವಿಯ ಹಾಗಾಗಿದೆ
ಕೋಟಿರೂಪಾಯಿಗಳಿಗೂ ಮೀರುವ ಮನಗೆಳು ಇದ್ದರೂ
ಮನೆಗಳಿಗೆ ತಲುಪುವ ದಾರಿ ತುಂಬಿದ ನದಿಯಂತಾಗಿದೆ;

ಸಮಾಜಸೇವಕರೆಲ್ಲಾ ಆಗಿಹಹರಿಲ್ಲಿ ಕೋಟ್ಯಧಿಪತಿಗಳು
ರಾಜಕೀಯ ನೇತಾರರಿಗಿಲ್ಲೆಲ್ಲಾ ಬೆಚ್ಚನೆಯ ಮನೆಗಳು
ದೂರುವುದಕೆ ಕಾಣುತ್ತವೆ ಇವರಿಗೆ ಪರಸ್ಪರರ ಬೆನ್ನುಗಳು
ಎಲ್ಲರ ಮನೆಗಳಲ್ಲೂ ಇವೆ ಕೊಳೆತ ಕುಂಬಳಕಾಯಿಗಳು!


ಎಲ್ಲವೂ ತಾತ್ಕಾಲಿಕ!

25 ಸೆಪ್ಟೆಂ 14

ಸಖೀ,
ಮಳೆ ಸುರಿದ ನಂತರದ ಕೆಲಹೊತ್ತು  ವಾತಾವರಣ ತಂಪು
ಹಾಡನ್ನು ಆಲಿಸಿದ ಗಂಟೆಗಳ ನಂತರವೂ ಕಿವಿಗಳಲಿ ಇಂಪು
ಸಂಪರ್ಕದಲ್ಲಿದ್ದಾಗ ಭಾವನೆಗಳ ಮೇಲಾಟದಲಿ ಸದಾ ನೆನಪು

ಇದಿರಲ್ಲಿ ಇದ್ದು ಆಡಿದೆಲ್ಲಾ ಮಾತುಗಳಿಗೆ ಪ್ರತಿಕ್ರಿಯೆಗಳ ಸಂಪು;

ಮತ್ತೆ ಬಿಸಿಲು ಹೆಚ್ಚಾದಾಗ ಆ ಮಳೆ ನೀಡಿದ್ದ ತಂಪಿನ ನೆನಪಿಲ್ಲ
ಗುಂಪಿನಲ್ಲಿ ವ್ಯಸ್ಥರಾಗಿದ್ದ ವೇಳೆ ಆ ಹಾಡುಗಳ ಮಾರ್ದನಿಯಿಲ್ಲ
ಸಂಪರ್ಕ ಕಡಿದುಹೋದ ಮೇಲಾವ ಭಾವನೆಗಳಿಗೂ ಜಾಗವಿಲ್ಲ

ಇದ್ದಾಗಷ್ಟೇ ಯುದ್ಧ, ಮರೆಯಾದ ಮೇಲೆ ನೆನಪೂ ಇರುವುದಿಲ್ಲ!

 


ಉಳಿಸಿಕೊಂಡಿದ್ದರೆ!

23 ಸೆಪ್ಟೆಂ 14

ಸಖೀ,
ಕವಿಯ ಶೃಂಗಾರಕಾವ್ಯಕ್ಕೆ ನೀನು ಮುನ್ನುಡಿಯಾಗಿದ್ದೆ
ಕಾವ್ಯದ ಮುಖ್ಯ ಭಾಗವನು ಅದ್ಯಾರಿಗೆ ಬಿಟ್ಟು ನಡೆದೆ?

ಆರಂಭದಾಕರ್ಷಣೆಯಯನ್ನು ಉಳಿಸಿಕೊಂಡಿರಬೇಕಿತ್ತು
ಆ ಕಾವ್ಯದಲ್ಲಿ ಆದ್ಯಂತವಾಗಿ ನೀನೇ ತುಂಬಿರಬಹುದಿತ್ತು!


“Modi”-fied Road – Good and Bad!

23 ಸೆಪ್ಟೆಂ 14

DSC_0039 DSC_0040 DSC_0041 DSC_0042


ಕಾಲಾಯ ತಸ್ಮೈ ನಮಃ!

22 ಸೆಪ್ಟೆಂ 14

 

ಸಖೀ
ಒಲವಿಲ್ಲವೇ ಎಂದನ್ನದಿರು
ನನ್ನಲ್ಲೊಲವಿರದೇ ಇರದು

ನನ್ನ ಒಳಗಿನ ಅಹಂಕಾರ
ಒಲವಿಗೂ ಮಿಗಿಲಾಗಿಹುದು

ನನ್ನೊಳಗಿನ ಷಡ್ವೈರಿಗಳಿಗೆ
ನನ್ನೀ ಆತ್ಮ ಶರಣಾಗಿಹುದು

ಕಾದಾಡಿ ಗೆಲುವ ಬಯಕೆ
ಇದೆ ನನ್ನ ಮನದೊಳಗೂ

ಸದ್ಯಕ್ಕೆ ನನ್ನ ದುರಾದೃಷ್ಟ
ಎಲ್ಲಕ್ಕೂ ಮಿಗಿಲಾಗಿಹುದು

ಈ ಕಾಲಕ್ಕೆ ನಮೋ ಅನ್ನುವೆ
ಕಾಲದ  ಬಂಧಿಯು ನಾನು

ಎಲ್ಲರೂ ಬಂಧಿಗಳೇ ಕಾಲದ
ಕೈಯಲ್ಲಿ, ನಾನೇ ಎಂದೇನು?


ನಡೆದುಬಿಡಬೇಕು!

22 ಸೆಪ್ಟೆಂ 14

ಸಖೀ,
ನಾವಿರುವ ಜಾಗ ನಮಗಿನ್ನು ಸೂಕ್ತವಲ್ಲ ಎಂದನಿಸಿದಾಗ
ಅಲ್ಲಿಂದ ನಡೆದುಬಿಡುವುದೊಳಿತು ನಾವು,

ಆತ್ಮಕ್ಕೆ ಘಾಸಿಯಾದರೂ ಇದ್ದಲ್ಲೇ ಇದ್ದು ಅನುಭವಿಸುವ
ಅನಿವಾರ್ಯ, ನಮಗೆ ಬಂದಂತೆ ಸಾವು;

ಇದ್ದಲ್ಲಿಯೇ ಇದ್ದು ಯುದ್ಧ, ಕಾದಾಟ, ವಾಗ್ವಾದ, ನಡೆಸಲು
ನಮ್ಮ ಈ ಬಾಳಿನಲ್ಲಿ ದಿನಗಳೆಷ್ಟಿವೆ ಹೇಳು,

ಹೇಡಿಯೆಂದಾಡಿಕೊಂಡರೂ ಪರವಾಗಿಲ್ಲ ಜಯಿಸಿ ಇನ್ನೇನನ್ನು
ದಕ್ಕಿಸಿಕೊಳ್ಳಬೇಕಾಗಿದೆ ಇಲ್ಲಿ ನೀನು ಹೇಳು;

ನಾನು ಹೇಡಿ ಎಂದು ಅನಿಸಿಕೊಂಡದ್ದು ಇಂದು ಮೊದಲೇನಲ್ಲ
ಹಿಂದಿನಿಂದಲೂ ಇದೆ ನನಗಿದರ ಅಭ್ಯಾಸ,

ನನ್ನೊಂದಿಗೆ ಯುದ್ಧಕ್ಕೆ ನಿಂತವರೊಂದಿಗೆಲ್ಲಾ ಮೌನವನೇ
ಅಸ್ತ್ರವನ್ನಾಗಿ ಬಳಸುವುದು ನನ್ನ ಹವ್ಯಾಸ;

ಅವರ ಗೆಲುವಿನಲ್ಲಿ ನಿಜವಾಗಿ ನನ್ನ ಗೆಲುವೂ ಇದೆಯೆಂದು
ಎಂದೆಂದೂ ತಿಳಿಯುತ್ತಿರುವವನು ನಾನು,

ಈ ಆತ್ಮವನ್ನು ಘಾಸಿಗೊಳಿಸಿಕೊಂಡು ಇರುವುದಕ್ಕಿಂತ ದೂರ
ಇರುವುದೇ ಒಳಿತು ಎಂದನ್ನುವವನು ನಾನು!