ಕನಸಿನ ಅಂದ!

21 ಜೂನ್ 15

ಸಖೀ,
ನಿದ್ದೆಯಲಿ ನಮ್ಮ ಮನಸ್ಸು ಕಾಣುವ
ಕನಸುಗಳಿಗೆ ಕಾರಣವನು ಕೇಳದಿರು,
ಜಾಗೃತ ಮತ್ತು ಸುಪ್ತ ಮನಸ್ಸುಗಳು
ಎರಡೂ ಇವೆ ನಮ್ಮೊಳಗೆ ತಿಳಿದಿರು;

ಸುಪ್ತ ಮನಸ್ಸಿನ ಸಂಚಾರವು ಹೇಗೆ
ಎಲ್ಲೆಲ್ಲಾ ಅನ್ನುವುದರ ಅರಿವು ಇಲ್ಲ,
ಜಾಗೃತ ಮನಸ್ಸಿನ ನಿಯಂತ್ರಣವೇ
ನಮಗಿನ್ನೂ ಸಾಧ್ಯವಾಗಿಯೇ ಇಲ್ಲ;

ಸುಪ್ತ ಮನಸ್ಸಿಗೆ ಸದಾ ಆತ್ಮದ ಬಂಧ
ಆತ್ಮಕ್ಕೋ ಜನ್ಮಜನ್ಮಾಂತರದ ಬಂಧ,
ಯಾವುದೋ ಆತ್ಮದೊಂದಿಗೆ ಎಲ್ಲೋ
ಆಡಿ ಬರುವುದೇ ಈ ಕನಸುಗಳ ಅಂದ!


ಲಾಭ!

17 ಜೂನ್ 15

ಸಖೀ,
ನಾವು ಏನು ಅನ್ನುವುದರ ಅರಿವು ನಮಗೇ
ಪೂರ್ತಿ ಇರದಿರಲು,
ನಮ್ಮ ಬಗ್ಗೆ ಆಡಿಕೊಂಬವರ ಅರಿವು ಇನ್ನೂ
ಅಪೂರ್ಣವಾಗಿರಲು;

ತಲೆ ಕೆಡಿಸಿಕೊಳ್ಳುವುದು ಬರೀ ವ್ಯರ್ಥ ಇಲ್ಲ
ಕಣೇ ಕಿಂಚಿತ್ತೂ ಲಾಭ,
ಅವರ ಪದಗಳಿಂದಾಗಿ ನಮ್ಮ ಪದಭಂಡಾರ
ಬೆಳೆದರದುವೇ ಲಾಭ!


ಸಹನೆ!

17 ಜೂನ್ 15

ಸಖೀ,
ನಿನ್ನನ್ನು ನಾನು ಸಹಿಸಿಕೊಂಡದ್ದು ಹೆಚ್ಚೋ
ನನ್ನನ್ನು ನೀನು ಸಹಿಸಿಕೊಂಡದ್ದು ಹೆಚ್ಚೋ
ಇದನಳೆಯಲು ಮಾಪಕವಿಲ್ಲದಿದ್ದರೇನಂತೆ?
ನಾವಿಬ್ಬರೂ ಈಗ ಸಹನಶೀಲರಾಗಿಹೆವಂತೆ!


ಹೂವಲ್ಲ ನೀನು!

16 ಜೂನ್ 15

ಸಖೀ,
ನಿನ್ನನ್ನು ಎಂದೂ ಕಂಡೇ
ಇಲ್ಲ ಕಣೇ ಈ ಜನರು,
ಹಾಗಾಗಿ, ನಿನ್ನನ್ನು ಒಂದು
ಹೂವಿಗೆ ಹೋಲಿಸಿಹರು;

ಹೂವೂ ಮುದುಡುವುದು
ನಾಳೆ ಸಮಯದೊಂದಿಗೆ,
ನೀನೋ ನನ್ನ ಉಸಿರಿನಂತೆ
ಸದಾ ಜೀವಂತ ನನ್ನೊಂದಿಗೆ!


ಸಾಲ ಬೇಕು!

12 ಜೂನ್ 15

ಸಖೀ,
ಸಾಲ ಬೇಕಾಗಿದೆ ನನಗೆ ಸಾಲ,
ನೀಡುವೆಯಾ ನೀ ಸ್ವಲ್ಪ ಸಾಲ?

ಮಾನವೀಯತೆಯನ್ನು ಸದಾ
ಭರ್ಜರಿಯಾಗಿ ಉದಾರತೆಯಿಂದ
ಖರ್ಚು ಮಾಡಿತ್ತಿದ್ದೆ ನೋಡು,
ಖಾಲಿಯಾಗಿದೆ, ಸಾಲದಾಗಿದೆ
ನನಗೂ ಮಾನವೀಯತೆ ಈಗ,

ನೀಡುವೆಯಾ ನನಗೆ ನಿನ್ನೊಳಗಿನ
ಕಿಂಚಿತ್ ಮಾನವೀಯತೆಯ ಸಾಲ?


ಸಾಲ ಬೇಕು!

12 ಜೂನ್ 15

ಸಖೀ,
ಸಾಲ ಬೇಕಾಗಿದೆ ನನಗೆ ಸಾಲ,
ನೀಡುವೆಯಾ ನೀ ಸ್ವಲ್ಪ ಸಾಲ?

ಮಾನವೀಯತೆಯನ್ನು ಸದಾ
ಭರ್ಜರಿಯಾಗಿ ಉದಾರತೆಯಿಂದ
ಖರ್ಚು ಮಾಡಿತ್ತಿದ್ದೆ ನೋಡು,
ಖಾಲಿಯಾಗಿದೆ, ಸಾಲದಾಗಿದೆ
ನನಗೂ ಮಾನವೀಯತೆ ಈಗ,

ನೀಡುವೆಯಾ ನನಗೆ ನಿನ್ನೊಳಗಿನ
ಕಿಂಚಿತ್ ಮಾನವೀಯತೆಯ ಸಾಲ?