ನಿದಿರಾದೇವಿ!

23 ಜನ 14

 

ಸಖೀ,
ಕಣ್ಣರೆಪ್ಪೆಗಳ ಮೇಲೆ ಕುಳಿತು ಕವಿತೆ ಬರೆಸುತ್ತಾಳೆ
ತಪ್ಪುಗಳಾದರೂ ಅವನ್ನೆಲ್ಲ ತಾನೇ ಅಳಿಸುತ್ತಾಳೆ
ಬರೆಯುವುದ ನಾ ಮುಗಿಸುವ ತನಕ ಕಾಯುತ್ತಾಳೆ
ಆಯ್ತೆಂದರೆ ಸಾಕು ಬರಸೆಳೆದು ಅಪ್ಪಿಕೊಳ್ಳುತ್ತಾಳೆ!

Advertisements

ಧನ್ಯನಾದೆ ನಾನು!

23 ಜನ 14

 

ಸಖೀ,
ನನ್ನಿಂದ ನಾಲ್ಕು ಚೌಪದಿಗಳ ಬರೆಸಿದೆ
ನೀನು ಇದೀಗ ಈ ಅರ್ಧ ಘಂಟೆಯೊಳಗೆ
ಧನ್ಯನಾದೆ ನಾನು ನಿನ್ನನ್ನು ನನ್ನ ಓರ್ವ
ಸಖಿಯಾಗಿ ಪಡೆದು ಈ ಲೋಕದೊಳಗೆ!


ಸ್ನೇಹ ಪ್ರೀತಿಯದೇ ರೂಪ!

23 ಜನ 14

ಸಖೀ,
ಸ್ನೇಹ ಪ್ರೀತಿಯದೇ ರೂಪ ಅಂತ ಒಪ್ಪುತ್ತೀಯಾ?
ನಮ್ಮ ನಡುವೆ ಪ್ರೀತಿಯೇ ಇಲ್ಲ ಅಂತ ಹೇಳ್ತೀಯಾ?
ಪ್ರೀತಿಯನ್ನು ಅವಮಾನ ಮಾಡಿದ್ದಾರೆ ಸ್ವಲ್ಪ ಮಂದಿ
ಅದಕ್ಕೇ ನೀನಿಂದು ಮುಂಜಾನೆ ಆ ಮಾತನ್ನು ಅಂದಿ!


ಮನದ ಹಾದಿ!

23 ಜನ 14

ಸಖೀ
ನಿನ್ನ ಮನದ ಹಾದಿ ನಿನ್ನ ಕಣ್ಣುಗಳ ಮೂಲಕ
ನನ್ನ ಮನದ ಹಾದಿ ನನ್ನ ಮಾತಿನ ಮೂಲಕ
ಯಾವ ಹಾದಿ ಬಳಸಿದರೆ ಸೇರುವೆವೋ ಬೇಗ
ಸ್ಪರ್ಧೆಗಿಳಿದು ನೋಡಬೇಕಿದೆ ಕಣೇ ನಾವೀಗ!


ನನ್ನ ಬಿಂಬವೇ!

23 ಜನ 14

 

ಸಖೀ,
ನಿನ್ನ ಕಂಗಳು ನನ್ನನ್ನು ನೋಡುವಾಗೆಲ್ಲಾ
ನನ್ನನ್ನೇ ನಾನು ನೋಡಿಕೊಂಡಂತೆ ಕಣೇ
ಏಕೆಂದರೆ ನಿನ್ನ ಆ ಕಣ್ಣುಗಳೊಳಗೆ ನನಗೆ
ಕಾಣುತ್ತಾ ಇರುವುದು ನನ್ನ ಬಿಂಬವೇ ಕಣೇ!


ಮಾತು ಕವಿತೆಯಾಗುತ್ತದೆ!

23 ಜನ 14

 

ಸಖೀ,
ನಿನ್ನ ನನ್ನ ಸ್ನೇಹದಿಂದ ನಮ್ಮಲ್ಲಿ ಯಾರೂ
ಹುಚ್ಚರಾಗಬೇಕಿಲ್ಲ ಹುಚ್ಚರಾಗುವುದೂ ಇಲ್ಲ
ಆದರೆ ಮಾತಿನಿಂದ ಮಾತು ಬೆಳೆಯುತ್ತದೆ
ಮಾತುಕತೆಯಾಗುತ್ತದೆ ಕವಿತೆಯಾಗುತ್ತದೆ!


ಪ್ರೀತಿ – ಸ್ನೇಹ!

23 ಜನ 14

 

“ಸ್ನೇಹ ಎಂದೂ ಹಳತಾಗುವುದಿಲ್ಲ.
ಸ್ನೇಹಕ್ಕಿಂತ ದೊಡ್ಡ ಆಸ್ತಿಯೂ ಇಲ್ಲ.
ಸ್ನೇಹವು ಪ್ರೀತಿಗೂ ಮಿಗಿಲಾದದ್ದು.
ಏಕೆಂದರೆ, ಪ್ರೀತಿಯಲ್ಲಿ ಹುಚ್ಚರಾದಂತೆ,
ಸ್ನೇಹದಲ್ಲಿ ಯಾರೂ ಹುಚ್ಚರಾಗುವುದಿಲ್ಲ”

“ತಮ್ಮ ಮಾತು ಸ್ವಲ್ಪ ಸರಿಯಾಗಿದೆ.
ಆದರೆ, ಪ್ರೀತಿಗೆ ಇರುವುದು ಒಂದೇ ರೂಪವಲ್ಲ.

ಪ್ರೀತಿಗೆ ಸಾವಿರಾರು ರೂಪಗಳಿವೆ, ಸ್ನೇಹವೂ
ಪ್ರೀತಿಯದ್ದೇ ಒಂದು ರೂಪವಲ್ಲಾ?”