ಮನದ ಬಯಕೆ ಅಶ್ರುವಾಗಿ ಹರಿದಿದೆ!

(ಮತ್ತೊಂದು ಭಾವಾನುವಾದದ ಯತ್ನ)

ಮನದ ಬಯಕೆ ಅಶ್ರುವಾಗಿ ಹರಿದಿದೆ
ನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆ
ಮನದ ಬಯಕೆ ಅಶ್ರುವಾಗಿ ಹರಿದಿದೆ

ನನ್ನೀ ಬದುಕು ತೃಷೆಯಂತಾಗಿ ಉಳಿದಿದೆ
ನನ್ನೀ ಬದುಕು ತೃಷೆಯಂತಾಗಿ ಉಳಿದಿದೆ
ಒಲವಿನಾ ಕಥೆ ಅಪೂರ್ಣವಾಗಿ ಉಳಿದಿದೆ
ನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆ
ಮನದ ಬಯಕೆ ಅಶ್ರುವಾಗಿ ಹರಿದಿದೆ

ಬಹುಶಃ ಇದುವೆ ಕೊನೆಯ ನೋವು ಎಂದು ನಾ
ಬಹುಶಃ ಇದುವೆ ಕೊನೆಯ ನೋವು ಎಂದು ನಾ
ಪ್ರತೀ ನೋವ ಸಹಿಸುತಾ ನಾ ಬದುಕಿಹೆ
ನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆ
ಮನದ ಬಯಕೆ ಅಶ್ರುವಾಗಿ ಹರಿದಿದೆ

ನನ್ನನೇ ನಾ ಅಳಿಸಿ ಹಾಕಿ ನೋಡಿದೆ
ನನ್ನನೇ ನಾ ಅಳಿಸಿ ಹಾಕಿ ನೋಡಿದೆ
ಆದರಿನ್ನೂ ನಡುವಿನಂತರ ಉಳಿದಿದೆ
ನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆ
ಮನದ ಬಯಕೆ ಅಶ್ರುವಾಗಿ ಹರಿದಿದೆ
*************

ಮೂಲ ಗೀತೆ:

ಚಿತ್ರ: ನಿಖಾಹ್
ಗಾಯಕಿ: ಸಲ್ಮಾ ಆಘಾ

ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ

ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ
ಹಮ್ ವಫಾ ಕರ್ ಕೇ ಭೀ ತನ್ ಹಾ ರಹ್ ಗಯೇ
ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ

ಜಿಂದಗೀ ಎಕ್ ಪ್ಯಾಸ್ ಬನ್ ಕರ್ ರಹ್ ಗಯೀ
ಪ್ಯಾರ್ ಕೇ ಕಿಸ್ಸೇ ಅಧೂರೇ ರಹ್ ಗಯೇ
ಹಮ್ ವಫಾ ಕರ್ ಕೇ ಭೀ ತನ್ ಹಾ ರಹ್ ಗಯೇ
ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ

ಶಾಯದ್ ಉನ್ ಕಾ ಆಖ್ರೀ ಹೋ ಯೆಹ್ ಸಿತಮ್
ಹರ್ ಸಿತಮ್ ಯೆಹ್ ಸೋಛ್ ಕರ್ ಹಮ್ ಸಹ್ ಗಯೇ
ಹಮ್ ವಫಾ ಕರ್ ಕೇ ಭೀ ತನ್ ಹಾ ರಹ್ ಗಯೇ
ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ

ಖುದ್ ಕೋ ಭೀ ಹಮ್ ನೇ ಮಿಠಾ ಡಾಲಾ ಮಗರ್
ಫಾಸ್‍ಲೇ ಜೊ ಧರ್ಮಿಯಾಂ ಥೆ ರಹ್ ಗಯೇ
ಹಮ್ ವಫಾ ಕರ್ ಕೇ ಭೀ ತನ್ ಹಾ ರಹ್ ಗಯೇ
ದಿಲ್ ಕೇ ಅರ್ಮಾ ಆಂಸುವೋಂ ಮೆ ಬಹ್ ಗಯೇ

8 Responses to ಮನದ ಬಯಕೆ ಅಶ್ರುವಾಗಿ ಹರಿದಿದೆ!

 1. ksraghavendranavada ಹೇಳುತ್ತಾರೆ:

  ಪ್ರತೀ ನೋವನ್ನೂ ಇದೇ ಕೊನೆಯ ನೋವೆ೦ದು ಅನುಭವಿಸುವುದು.. ವ್ಹಾ.. ಏನು ಭಾವ..!! ಬದುಕಿನ ಬಗ್ಗೆ ಇರಬೇಕಾದ ಆಶಾವಾದದ ಉತ್ತು೦ಗವಿದು..!!
  ಸೊಗಸಾದ ಭಾವಾನುವಾದ..
  ನಿಮ್ಮ ಭಾವಾನುವಾದಗಳನ್ನು ಓದುತ್ತಿದ್ದ೦ತೆಯೇ ಹಾಗೂ ಓದಿದ ನ೦ತರ ಒ೦ದು ರೀತಿಯ ಸ೦ತೃಪ್ತ ಮನೋಭಾವನೆ ನನ್ನಲ್ಲಿ ಉ೦ಟಾಗುತ್ತದೆ!

  ಏಕೆ೦ದರೆ ಮೂಲ ಕವಿಯ ಭಾವನೆಗಳನ್ನು ಅನುವಾದಿತ ಕವನದಲ್ಲಿ ಯಥಾವತ್.. ಯಾ ಅದಕ್ಕಿ೦ತಲೂ ಉತ್ತಮ ಮಟ್ಟದಲ್ಲಿ ತು೦ಬುವುದು ಹುಡುಗಾಟವಲ್ಲ… ಬಹಳ ಶ್ರಮ ಬೇಡುತ್ತದೆ.. ನಾನು ಇತ್ತೀಚೆಗೆ ಅನುವಾದಿಸಲು ಹೋಗಿ, ಮೂಲ ಭಾವವನ್ನು ಉಳಿಸಿಕೊಳ್ಳಲಾಗದೇ ಕೈ ಬಿಟ್ಟೆ…

  ಇತ್ತೀಚೆಗೆ ಒ೦ದರ ಮೇಲೊ೦ದರ೦ತೆ ನಮ್ಮ ಮನದಲ್ಲಿರುವ ಹಾಡುಗಳ ಭಾವಾನುವಾದವನ್ನು ಮಾಡಿ ನೀಡತೊಡಗಿದ್ದೀರಿ.. ನಿಮಗೆ ದೇವರು ಒಳ್ಳೆಯದನ್ನು ಕರುಣಿಸಲಿ ಎ೦ದು ಆ ದೇವರಲ್ಲಿ ಈ ಕಿರಿಯನ ಅರಿಕೆ..
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. Mohan Raj M ಹೇಳುತ್ತಾರೆ:

  ಅನುವಾದ ತುಂಬಾ ಚೆನ್ನಾಗಿದೆ ಸರ್.
  ಮನದ ಬಯಕೆ ಅಶ್ರುವಾಗಿ ಹರಿದರು
  ಕಾದ ಕಂಬನಿ ಉತ್ತರವಾಗದು ಬದುಕಿಗೆ, ಅಲ್ವ ಸರ್ …….!

 3. ಲತಾ ಹೇಳುತ್ತಾರೆ:

  ಹೆಗ್ಡೇಜೀ,
  ನಿಮ್ಮ ಈ ಭಾವಾನುವಾದ ಸೊಗಸಾಗಿ ಮೂಡಿಬಂದಿದೆ.
  ನನಗ್ಯಾಕೋ ನನ್ನ ಸಹೋದರಿಯ ನೆನಪಾಯ್ತು!

  • ಆಸು ಹೆಗ್ಡೆ ಹೇಳುತ್ತಾರೆ:

   ಧನ್ಯವಾದಗಳು ಲತಾಜೀ.
   ನೆನಪುಗಳಿಗೆ ಕಡಿವಾಣ ಇಲ್ಲ
   ನೆನಪುಗಳಿಗೆ ಸೀಮಾಪರಿಧಿಯೂ ಇಲ್ಲ
   ಯಾರ ನೆನಪು ಯಾವಾಗಲಾದರೂ ಆಗಬಹುದು
   ಯಾರ ನೆನಪೂ ಯಾರ ನೆಪದಿಂದಲಾದರೂ ಆಗಬಹುದು
   ಧನ್ಯವಾದಗಳು ತಮ್ಮ ಮೆಚ್ಚುಗೆಯ ನುಡಿಗಳಿಗಾಗಿ.

 4. ಹೇಮಲತಾ ಹೇಳುತ್ತಾರೆ:

  ವಾಹ್! ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ. ನೈಸ್ ನೈಸ್ …

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: