ನಮಸ್ಕಾರ

 

 

ಸಹೃದಯಿ ಓದುಗರೇ,

ನನ್ನ ಕಣ್ಣು ಕಿವಿಗಳಿಗೆ ವಿಷಯಗಳು ದೊರೆತಾಗ ನನ್ನ ಮನ ಸ್ಪಂದಿಸುತ್ತದೆ.

ಆ ಸ್ಪಂದನಗಳೇ ಅಕ್ಷರ ರೂಪ ತಳೆದು  ಆಸುಮನದಲ್ಲಿ ಮೂಡುತ್ತಿರುತ್ತವೆ.

ಪ್ರಾಸಬದ್ಧ ದ್ವಿಪದಿಗಳು, ನಾನು ಮೆಚ್ಚಿ, ಒಪ್ಪಿ, ಕಾಯ್ದುಕೊಂಡು ಬಂದ ಶೈಲಿ.

ಹಾಗಾಗಿ, ಆಸುಮನದಲ್ಲಿನ ಹೆಚ್ಚಿನೆಲ್ಲಾ ಮಾತುಗಳು, ಆ ಶೈಲಿಯಲ್ಲೇ ಇವೆ.

ಬರೇ ಪ್ರಾಸಕ್ಕಾಗಿ ಶಬ್ದಗಳನ್ನು ಪೋಣಿಸಿದರೆ ಅಪಾರ್ಥವಾಗಬಹುದು, ಅಲ್ಲದೆ,  ವಿಷಯ ಗಾಂಭೀರ್ಯ ಕುಗ್ಗಲೂ ಬಹುದು, ಎಂಬ ಜಾಗ್ರತೆ ವಹಿಸಿಕೊಂಡೇ, ಸ್ವಲ್ಪ ತ್ರಾಸವಾದರೂ, ಸರ್ವರಿಗೆ ಗ್ರಾಸವಾಗುವಂತೆ, ಪ್ರಾಸಬದ್ಧ ಪದಗಳ ಜೋಡಣೆ ನಡೆಸುತ್ತಿರುತ್ತೇನೆ.

ಆಸುಮನದಲ್ಲಿ ಮಾತುಗಳ ಬಗ್ಗೆ ಪ್ರಸ್ತುತವೆನಿಸುವ, ಅಸಂಬದ್ಧವಲ್ಲದ, ಅನಿಸಿಕೆಗಳಿಗೆ ಅಥವಾ ಪ್ರತಿಕ್ರಿಯೆಗಳಿಗೆ, ಮಾತುಗಳು ಪ್ರಕಟಗೊಂಡ ಪುಟಗಳಲ್ಲಿ ಮಾತ್ರ ಸದಾ ಮುಕ್ತ ಮನಸ್ಸಿನ ಸ್ವಾಗತ ಇದೆ.

ಆದರೆ, ಅಪ್ರಸ್ತುತ ಮತ್ತು ಅಸಂಬದ್ಧ ಅನಿಸುವ ಯಾವುದೇ ಪ್ರತಿಕ್ರಿಯೆಗಳನ್ನು ಪ್ರಕಟಿಸಲಾಗುವುದಿಲ್ಲ.

ನಾನು ನಿಜವಾಗಿಯೂ ಬಯಸುವುದಿಲ್ಲ ಓದುಗರಿಂದ ಹೆಚ್ಚೇನೂ ಅನ್ಯ

ಓದುಗರ ಮನದಲ್ಲೂ ಅಲ್ಪ ಸ್ವಲ್ಪ  ಸ್ಪಂದನವಾದರೆ ನಾ ನಿಜಕೂ ಧನ್ಯ !!!

– ಆತ್ರಾಡಿ ಸುರೇಶ ಹೆಗ್ಡೆ, ಬೆಂಗಳೂರು.

ಟಿಪ್ಪಣಿಗಳನ್ನು ನಿಲ್ಲಿಸಲಾಗಿದೆ.

%d bloggers like this: