ಪ್ರೀತಿ-ರೀತಿ!

29 ಸೆಪ್ಟೆಂ 13

 

 

ಆಕೆಯ ಎದೆಬಡಿತದಲಿ
ಆತನ ಹೆಸರು ಕೇಳಿದರೆ
ಅದು ಆತನ ಮೇಲಿನ
ಆಕೆಯ ಪ್ರೀತಿ;
ಆತನ ಎದೆಬಡಿತದಲಿ
ಆಕೆಯ ಹೆಸರು ಕೇಳದೇ ಇದ್ದರೆ,
ಅದು ಆತ ಬದುಕುವ ರೀತಿ!

Advertisements

ಜೊತೆ ನೀಡು!

29 ಸೆಪ್ಟೆಂ 13

ಸಖೀ,
ಬಾಲ್ಯದಲಿ ನಾನು ಹಾರಿಸುತ್ತಿದ್ದಾಗ ಗಾಳಿಪಟ
ಇತ್ತೆನಗೆ ಕದಿರು ಹಿಡಿದು ನಿಂತ ನಿನ್ನ ಒಡನಾಟ
ಗಾಳಿಪಟದಂತೆನ್ನ ಬಾಳಿಂದು ಹಾರಾಡುತ್ತಿರಲು
ಬಂದು ಜೊತೆ ನೀಡಬಾರದೇ ನೀನು ಈಗಲೂ?


ಹೂಬಾಣ!

29 ಸೆಪ್ಟೆಂ 13

ಸಖೀ,
ನೀನೆಸೆದ ಹೂಬಾಣ,
ನನ್ನತ್ತ ಬರಲೂ ಇಲ್ಲ,
ನನಗದರ ಅರಿವಾಗಲೂ ಇಲ್ಲ.
ಹಾದಿಯಲ್ಲಿ  ಯಾರಾರನ್ನೋ ತಾಕಿ,
ಅವರೆಲ್ಲ ತಮ್ಮ ನಡುವೆಯೇ ಹಾರಾಡಿ,
ಕೊನೆಗೂ ಅದು ನನ್ನತ್ತ ಬರುವಾಗ,
ನಿಜದಿ, ಅದು ತನ್ನ ಮೂಲ
ರೂಪವನ್ನೇ
ಕಳೆದುಕೊಂಡಿತ್ತು!


ದಕ್ಕಲಿಲ್ಲ!

22 ಸೆಪ್ಟೆಂ 13

 

ಸಖೀ,
ಬಯಸಿದವರ ಒಲವು ದಕ್ಕಲಿಲ್ಲ
ನಿರೀಕ್ಷಿಸಿದವರ ಜೊತೆ ದಕ್ಕಲಿಲ್ಲ
ಬಲು ವಿಚಿತ್ರವೀ ಒಲವಿನಾಟ,
ಅಲ್ಲಾರಿಗೋ ಇವರು ದಕ್ಕಲಿಲ್ಲ
ಇಲ್ಲಾರೋ ಇವರಿಗೂ ದಕ್ಕಲಿಲ್ಲ!

(ಭಾವಾನುವಾದ)

Jiski aarzu thi usika hi pyar na mila
Barso jiska intazar kiya usika hi sath na mila.
Ajib khel hai ye mohabbt ka,
kisiko hum na mile aur koi hume na mila..


ಭಾವಸ್ಪಂದನ ಇಲ್ಲ!

22 ಸೆಪ್ಟೆಂ 13
ಸಖೀ,
ಇಂದೀ ಮನ ನಿನ್ನ ಸಂಗವ ಬಯಸುತ್ತಿದೆ ಆದರೆ ನೀನಿಲ್ಲ ನನ್ನ ಜೊತೆಗೆ
ಇಂದು ನಿನ್ನ ಮನದಲ್ಲಿ ಹಿಂದಿನ ಭಾವಸ್ಪಂದನ ಇಲ್ಲವೆಂದನಿಸಿದೆ ನನಗೆ
ನಿನ್ನೊಂದಿಗಿನ ಎರಡು ಮಾತುಗಳಿಗಾಗಿ ನನ್ನ ಮನದಲ್ಲಿ ಈ ಚಡಪಡಿಕೆ
ಬಹುಶಃ ನಿನ್ನಲ್ಲಿ ನನಗಾಗಿ ಸಮಯವೇ ಇಲ್ಲವೇನೋ ಅನ್ನುವ ಅನಿಸಿಕೆ! 

(ಕವಿ ಯಾರನ್ನೋ ನೆನೆದುಕೊಂಡು ಬರೆದ ಶಾಯಿರಿಯ ಭಾವಾನುವಾದ – 
ನಾನು ನನ್ನ ಸಖಿಯ ಬಿಟ್ಟು ಬರೆದರೆ ಮುನಿಸಿಕೊಂಡಾಳು ಸಖಿ)

aaj zarurat hai jiski wo pas nahi hai
ab unke dilme mere liye ehsaas nahi hai
tadapta hai dil unse do pal baat karne ke liye
par shayed ab waqt hamare liye unke pas nahi hai


ದೇವರನ್ನು ನೋಡು!

22 ಸೆಪ್ಟೆಂ 13
ಸಖೀ,
ಪಂಕ್ತಿಭೇದ, ಜಾತಿಭೇದ
ವರ್ಗಭೇದ, ವರ್ಣಭೇದ
ಸ್ಥಾನಭೇದ, ಇವೆಲ್ಲವನ್ನೂ
ಒಳಗಿರುವ ದೇವರೊಂದಿಗೆ
ಪೂಜಿಸುತ್ತಿರುವ ಎಲ್ಲಾ
ದೇವಮಂದಿರಗಳಿಂದ
ದೂರವಿದ್ದು ನೋಡು;
ಸದಾಕಾಲ ನಿನ್ನೊಳಗೇ
ಇರುವ ದೇವರಿಗಾದಷ್ಟು
ಹತ್ತಿರವಿದ್ದು ನೋಡು!

ಸಿದ್ಧಾರ್ಥ!

22 ಸೆಪ್ಟೆಂ 13

 

 

ಸಖೀ,
ಆ ಬುದ್ಧನಲ್ಲಿ 
ಈ ಜೀವನದ 
“ಅರ್ಥ” ಮೊದಲೇ 
“ಸಿದ್ಧ” ವಿತ್ತು;
ನೋಡು, 
ಆತನ ಹೆಸರೇ 
ಸಿದ್ಧಾರ್ಥ ಎಂದಿತ್ತು!