ಅಸ್ತಮಿಸಿದ ನಂತರ…!

 

 

ಇಲ್ಲಿ
ಇರುವಷ್ಟು
ದಿನವೂ
ಎಲ್ಲರೊಂದಿಗೆ
ಒಡನಾಟ
ಕಿತ್ತಾಟ
ಹಾರಾಟ

ಅನವಶ್ಯಕ
ಹೋರಾಟ
ನೀಕೀಳು
ತಾಮೇಲು
ಎಂದು
ಉಚ್ಚಸ್ತರದಲ್ಲಿ
ಕೂಗಾಟ

ಹಲವರ
ಮನಗಳಿಗೆ
ಪ್ರೀತಿಯ
ನೆರಳು
ಕೆಲವರ
ಮನಗಳಿಗೆ
ವೈರತ್ವದ
ಬಿಸಿಲು

ಮುಂದೊಂದು
ದಿನ ಥಟ್ಟನೇ
ಹೊರಟು
ಹೋದಮೇಲೆ
ಉಳಿದವರ
ಮನಗಳಲಿ
ಆಗದಿರಲಿ
ನೆನಪು
ಬರಿಯ
ಕತ್ತಲು

ಪಡುವಣದಿ
ಸೂರ್ಯ
ಮರೆಯಾದ
ಮೇಲೂ
ಆಗಸದಲಿ
ಕೆಂಪನೆಯ
ಪ್ರಭೆ
ಉಳಿದಿರುವಂತೆ

ನಾವಳಿದ
ಮೇಲೂ
ಉಳಿದವರ
ಮನಗಳಲಿ
ನಮ್ಮ
ಸವಿನೆನಪುಗಳ
ಪ್ರಭೆಯು
ಉಳಿದಿರಲಂತೆ!
*******

ಚಿತ್ರಕೃಪೆ: ಸುಮಾ ನಾಡಿಗ್

8 Responses to ಅಸ್ತಮಿಸಿದ ನಂತರ…!

 1. Sitaram ಹೇಳುತ್ತಾರೆ:

  ಚೆಂದ ಆಶಯದ ಕವನ

 2. Ravi Tirumalai ಹೇಳುತ್ತಾರೆ:

  ‘ಮನದಾಳದ ಮಾತು’ ಇದು ನಿಮ್ಮ ‘ಸುಮನಸ್ಸನ್ನು’ ತೋರುತ್ತದೆ. ದಯಮಾಡಿ ನಿಮ್ಮ ಹೆಸರನ್ನು’ಅಸುಮನ’ಕ್ಕೆ ಬದಲು ‘ ಸುಮನ’ ಎಂದು ಇಟ್ಟುಕೊಳ್ಳಿ.

 3. ಹೇಮಾ ದೇವಾಡಿಗ ಹೇಳುತ್ತಾರೆ:

  ಹೆಗ್ಡೆಯವರೇ,
  ಬದುಕಿರುವಷ್ಟು ದಿನ ಇನ್ನೊಬ್ಬರಿಗೆ ನೋವು ಕೊಡದೇ ಬದುಕಬೇಕು ಎನ್ನುವ ಮನಸ್ಸು ಮಾಡಿದರೆ ನಿಮ್ಮ ಕವನದ ಕೊನೆಯ ಸಾಲಿನ ಮಟ್ಟಕ್ಕೆ ಏರಬಹುದೇನೋ.
  ಚೆನ್ನಾಗಿ ಮೂಡಿಬಂದಿದೆ ಕವನ.

 4. ravi murnad ಹೇಳುತ್ತಾರೆ:

  ಅತ್ತ್ಯುತ್ತಮ ಭಾವಾರ್ಥದ ಕವಿತೆಯಿದು.ಸರಳ ಮತ್ತು ಮನಸ್ಸಿಗೆ ಕಚ್ಚಿಕೊಳ್ಳುತ್ತವೆ.

 5. ksraghavendranavada ಹೇಳುತ್ತಾರೆ:

  ಎಷ್ಟೊಳ್ಳೆಯ ಚಿ೦ತನೆ ತಮ್ಮದು!

  ಸರಳ ಪದಗಳಾದರೂ ಬೀರುವ ಪರಿಣಾಮ ಅಪಾರ.. ಆಸು ಮನದ ಇತ್ತೀಚಿನ ನಿತ್ಯ ನೂತನ, ವಿಭಿನ್ನ ಚಿ೦ತನೆಗಳು ಓದುಗರ ಚಿತ್ತವನ್ನು ಆಕರ್ಷಿಸುವಲ್ಲಿ ಅವುಗಳ ಒಳಗೇ ಪೈಪೋಟಿ ನಡೆಸುತ್ತಿವೆಯೇನೋ ಎ೦ಬ೦ತೆ ಉತ್ತಮವಾದ ಮಾತುಗಳು ಹೊರಬರುತ್ತಿವೆ! ಧನ್ಯವಾದಗಳು…

  ನಾ ಅಳಿದ ಮೇಲೂ ನನ್ನ ಪಾದಗುರುತುಗಳಿಯದಿರಲಿ…
  ನನ್ನತನದ ಹೆಮ್ಮೆಯ ಪ್ರತೀಕ…

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  • ಆಸು ಹೆಗ್ಡೆ ಹೇಳುತ್ತಾರೆ:

   ರಾಘವೇಂದ್ರ,
   ನನ್ನ ಚಿಂತನೆಗಳು ಓದುಗರನ್ನು ಆಕರ್ಷಿಸುವಲ್ಲಿ, ಓದುಗರಲ್ಲೂ ಕಿಂಚಿತ್ ಚಿಂತನೆಗೆ ಕಾರಣವಾದರೆ ನನಗೆ ಸಂತೋಷವೇ.
   ಅದರೆ, ಅನ್ಯರನ್ನು ಆಕರ್ಷಿಸುವುದೇ ನನ್ನ ಚಿಂತನೆಗಳ ಮತ್ತು ಮಾತುಗಳ ಮೂಲ ಉದ್ದೇಶವಲ್ಲ.
   ಹಲವು ಬಾರಿ ನಮ್ಮ ಬರಹಗಳು ನಮಗರಿವಿಲ್ಲದಂತೆಯೇ ಮೂಡಿರುತ್ತವೆ ಹಾಗೂ ನಮಗೆ ಅತೀವ ಆನಂದ ನೀಡಿರುತ್ತವೆ.
   ತಮ್ಮ ಮೆಚ್ಚುಗೆಯ ಮಾತುಗಳಿಗಾಗಿ ಧನ್ಯವಾದಗಳು.
   -ಆಸು ಹೆಗ್ಡೆ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: