ಸೂರ್ಯ-ಚಂದ್ರರ ನೀತಿ ಸಂದೇಶ!

 
ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗ
ನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗ
ಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗ
ಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾಲೆಳೆಯುತ್ತಾ…

ಬಾನಿನಲ್ಲಿ ಬಾಡಿಗೆಯ ದೀಪಕ್ಕೆ ಕನ್ನಡಿ ಹಿಡಿದ ಚಂದ್ರ
ಹಂಗಿಸಿ ನಕ್ಕ, ಸುತ್ತ ಯಾರೂ ಇರ್ಲಿಲ್ಲ ನಾನು ಮಾತ್ರ
ಎಂದರಿತು ದಿಟ್ಟಿಸಿದರೆ ನೀತಿ ಸಾರುತ್ತಾ ಕೂತಿದ್ದ ಭದ್ರ
ಆತನ ಸಂದೇಶವನ್ನು ಸ್ವೀಕರಿಸಿ ಅರಿತೆ ನಾನಗುತ್ತಾ…

ಹಗಲಲ್ಲಿ ಬಾನಿಗೆ ಒಡೆಯನಾಗಿ ಇದ್ದು ರವಿ ಮರೆಯಾದ
ಹೋಪಾಗ ಶಶಿಯ ಬಾಳಿಗೊಂದು ಅರ್ಥ ನೀಡಿ ಹೋದ
ಮಾತಾಪಿತ ಗುರುಹಿರಿಯರು ಕಿರಿಯರಿಗೆ ರವಿಯಂದದಿ
ಪ್ರಭಾವ ಬೀರುವರು ಇವರ ಬಾಳನ್ನು ಸದಾ ಬೆಳಗುತ್ತಾ…

ನಾವು ಚಂದ್ರನಂತಿರಬೇಕು ನಮ್ಮ ಹಿರಿಯರ ಸಮ್ಮುಖದಲ್ಲಿ
ನಾವು ಸೂರ್ಯನಂತಿರಬೇಕು ನಮ್ಮ ಕಿರಿಯರ ಬಾಳಿನಲ್ಲಿ
ಹಿರಿಯರ ಪ್ರಭೆಯಿಂದ ಬೆಳೆಸಿಕೊಂಡರೆ ಪ್ರತಿಭೆ ನಮ್ಮಲ್ಲಿ
ಕಿರಿಯರು ಇರುತ್ತಾರೆ ನಮ್ಮ ಪ್ರಭೆಯನ್ನು ಪ್ರತಿಫಲಿಸುತ್ತಾ…
******************

10 Responses to ಸೂರ್ಯ-ಚಂದ್ರರ ನೀತಿ ಸಂದೇಶ!

 1. parthasarathy ಹೇಳುತ್ತಾರೆ:

  ಎಲ್ಲ ಘಟನೆಯ ನೋಡಿ ಅರ್ಥೈಸಿ
  ಹೊಸದನ್ನು ಕಲಿಯಲು ಬೇಕು
  ಸದಾ ತೆರೆದ ಮನಸು ನಿಮ್ಮಂತೆ

  ಇಲ್ಲದಿದ್ದಲ್ಲಿ ಮುಚ್ಚಿದ ಬಾಗಿಲಿನ
  ಹಿಂದೆ ಕವಿದ ಕತ್ತಲೆಯಲಿ
  ಇರುವರು ಸದಾ ನನ್ನಂತೆ

  • ಪಾರ್ಥಸಾರಥಿ,

   ನಾನು ಏನು ಎಂಬುದ ನಾನು ಅರಿತರೆ
   ಅರಿಯಬಹುದು ನಾನೂ ಇನ್ನೂ ಸುಳ್ಳಲ್ಲ

   ನಾನು ಏನು? ಬೇಕು ನನಗೇನು ಎಂಬುದ
   ಅರಿಯದಲೇ ಬಾಳಿದರೆ ಅದು ಬಾಳೇ ಅಲ್ಲ

   ಓದಿ, ಮೆಚ್ಚಿ, ಕಾವ್ಯಾತ್ಮಕವಾಗಿ ಪ್ರತಿಕ್ರಿಯಿಸಿದ ತಮಗೆ ಹೃತ್ಪೂರ್ವಕ ಧನ್ಯವಾದಗಳು.

 2. Ravi Murnad ಹೇಳುತ್ತಾರೆ:

  ನಾವು ಚಂದ್ರನಂತಿರಬೇಕು ನಮ್ಮ ಹಿರಿಯರ ಸಮ್ಮುಖದಲ್ಲಿ
  ನಾವು ಸೂರ್ಯನಂತಿರಬೇಕು ನಮ್ಮ ಕಿರಿಯರ ಬಾಳಿನಲ್ಲಿ ….
  – ಈ ಬದುಕಿನ ಭಾವ ಸಾಲುಗಳು ತುಂಬಾ ಚೆನ್ನಾಗಿದೆ ಸುರೇಶ ಸರ್.ನಿಮಗೆ ಧನ್ಯವಾದಗಳು.

 3. ಹೇಮಾ ದೇವಾಡಿಗ ಹೇಳುತ್ತಾರೆ:

  ಕರೆಂಟು ನಾವು ರಸ್ತೆಯಲ್ಲಿ ಹೋಗುವಾಗ ಸಹ ಹೋಗುತ್ತದೆ ಹೆಗ್ಡೆಯವರೆ,
  ಆದರೆ ನೀವು ಗ್ರೇಟ್.
  ನಮ್ಮ ತಲೆಯಲ್ಲಿ ಇವೆಲ್ಲಾ ಹೊಳೆಯುವುದೇ ಇಲ್ಲ.
  ಬೇರೆಲ್ಲಾ ಹೊಳೆಯುತ್ತದೆ… ಹ..ಹ..ಹ..
  ಏನು ಹೊಳೆಯುತ್ತೆ ಅಂತ ಕೇಳ್ಬೇಡಿ… ಹ..ಹ..ಹ..

 4. ksrghavendranavada ಹೇಳುತ್ತಾರೆ:

  ಚೆ೦ದದ ಕವನ… ಕೊನೆಯ ಚರಣವು ಸೊಗಸಾದ, ಸ೦ದೇಶಾತ್ಮಕವಾದ ಭಾವನೆಯನ್ನು ತು೦ಬಿಕೊ೦ಡಿದೆ.
  ಕವನದ ಸ೦ದೇಶ ಅರ್ಥವತ್ತಾಗಿದೆ ಹಾಗೂ ಪ್ರಭಾವ ಬೀರುವ೦ತಿದೆ..
  ಇವೆಲ್ಲಾ ನಮ್ ತಲೆಗೇ ಹೊಳೆಯೋದೇ ಇಲ್ವಲ್ಲ!!
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 5. shamala60 ಹೇಳುತ್ತಾರೆ:

  ಹೀ…. ಸೂರ್ಯ ಚಂದ್ರರ ಸಂದೇಶ ಚೆನ್ನಾಗಿದೆ. ನಮ್ಮ ಕಿರಿಯರಲ್ಲೂ ಈಗ ಅನೇಕ ಬದಲಾವಣೆಗಳು, ಜವಾಬ್ದಾರಿಗಳು ಬಂದಿವೆ. ಒಟ್ಟಾರೆ ಸಾಮಾಜಿಕ ಬದಲಾವಣೆಯ ಒಂದು ಅಲೆ ನಿಧಾನವಾಗಿಯಾದರೂ ಎದ್ದಿದೆ. ಹಿಂದಿನ ಪದ್ಧತಿಗಳನ್ನು ಆಚರಣೆಗಳನ್ನು, ಸಂಪ್ರದಾಯವನ್ನು, ಸಂಸ್ಕೃತಿಯನ್ನು ಒಪ್ಪಿ, ಇಷ್ಟಪಟ್ಟು ಬೆಳೆಸುವ ಇಚ್ಛೆ ಅನೇಕ ಕಿರಿಯರಿಗೆ ಬಂದಿರುವುದು ತುಂಬಾ ಒಳ್ಳೆಯ ವಿಚಾರ ಅಲ್ಲವೇ ?….

  ಶ್ಯಾಮಲ

  • ಆಸು ಹೆಗ್ಡೆ ಹೇಳುತ್ತಾರೆ:

   ನಿಜ… ಸಂಪ್ರದಾಯ ಸಂಸ್ಕೃತಿಗಳಿಂದ ವಿಮುಖರಾಗಿದ್ದ ಕಿರಿಯ ಪೀಳಿಗೆ ಈಗ ಮರಳುವಂತೆ ಕಾಣುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯೇ!

   ತಮ್ಮ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: