ನಾನ್ಯಾರು?
ನಾನು ಯಾರು ಎನ್ನುವುದನ್ನು ಅರಿಯುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಸಾಗುತ್ತಲೇ ಇದೆ.
ಹೆಸರೇನು?
ಆತ್ರಾಡಿ ಸುರೇಶ ಹೆಗ್ಡೆ
ಯಾವಾಗ ಬಂದಿದ್ದು?
೧೯೬೨ರ ಕರ್ಕಾಟಕ ಸಂಕ್ರಮಣ ದಿನವಾದ ಸೋಮವಾರದಂದು, ೦೩.೩೬ ಘಂಟೆಗೆ.
ಬರಮಾಡಿಕೊಂಡವರು ಯಾರು?
ಡಾ. ಯು. ಚಂದ್ರಶೇಖರ ಮತ್ತು ಶ್ರೀಮತಿ ಅಂಬಾ ಚಂದ್ರಶೇಖರ.
ಬಂದು ಇಳಿದದ್ದು ಎಲ್ಲಿ?
ಆತ್ರಾಡಿಯಲ್ಲಿ.
ಆ ಊರು ಎಲ್ಲಿ ಇದೆ?
ಉಡುಪಿ – ಪೆರ್ಡೂರು – ಹೆಬ್ರಿ – ಆಗುಂಬೆ ರಸ್ತೆಯಲ್ಲಿ ಉಡುಪಿಯಿಂದ ಪೂರ್ವಕ್ಕೆ ಹತ್ತು ಕಿ.ಮೀ. ದೂರದಲ್ಲಿದೆ.
ಹಿಂದಿನ ಉದ್ಯೋಗ?
ಭಾರತೀಯ ವಾಯುಸೇನೆಯಲ್ಲಿ.
ಯಾವಾಗ?
೦೩ ಜನವರಿ ೧೯೮೧ ರಿಂದ ೩೧ ಜನವರಿ ೨೦೦೧ರ ವರೆಗೆ.
ಎಲ್ಲೆಲ್ಲಿ ಸೇವೆ ಸಲ್ಲಿಸಿದ್ದೆ?
ಬೆಂಗಳೂರು (ಕರ್ನಾಟಕ), ಪಠಾನ್ಕೋಟ್ (ಪಂಜಾಬ್), ಅಂಬಾಲಾ (ಹರ್ಯಾಣಾ) ಮತ್ತು ಗೋರಖಪುರ (ಉತ್ತರ ಪ್ರದೇಶ) ಗಳಲ್ಲಿ.
ಈಗಿನ ಉದ್ಯೋಗ?
ಖಾಸಗಿ ಕಂಪನಿಯೊಂದರಲ್ಲಿ.
ಎಲ್ಲಿ?
ಬೆಂಗಳೂರಿನಲ್ಲಿ
ಮದುವೆ ಆಗಿದೆಯೇ?
ಹೌದು.
ಹೆಂಡತಿ ಇದ್ದಾಳೆಯೇ?
ಒಬ್ಬಳಿದ್ದಾಳೆ.
ಮಕ್ಕಳು ಇದ್ದಾರೆಯೆ?
ಒಬ್ಬಳಿದ್ದಾಳೆ.
ಬರೆಯಲು ಆರಂಭಿಸಿದ್ದು ಯಾವಾಗ?
೧೯೭೭ರ ಮಾರ್ಚ್ ತಿಂಗಳಿನಲ್ಲಿ.
ಬರೆಯುವುದು ಏಕೆ?
ಕನ್ನಡದ ಸೇವೆ ಮಾಡುತ್ತಿದ್ದೇನೆಂಬ ಭ್ರಮೆಯೊಂದಿಗೆ, ನನ್ನ ಮನದಲ್ಲಿ ಮೂಡುವ ಸ್ಪಂದನ ಪ್ರತಿಸ್ಪಂದನಗಳನ್ನು ಮಾತುಗಳ ಮೂಲಕ ಹೊರಹಾಕುವುದಕ್ಕೆ.
ಯಾವುದರಲ್ಲಿ ಆಸಕ್ತಿ ಇದೆ?
ರಾಜಕೀಯ, ಪತ್ರಿಕೋದ್ಯಮ, ಅಧ್ಯಾತ್ಮ, ಪ್ರಚಲಿತ ವಿದ್ಯಮಾನ, ಮಾನವೀಯತೆ ಉಳ್ಳ ಸಹೃದಯರೊಂದಿಗಿನ ಸ್ನೇಹ, ಪರೋಪಕಾರ… ನಿಜ ಹೇಳಬೇಕೆಂದರೆ ಎಲ್ಲದರಲ್ಲೂ ಆಸಕ್ತಿ.
ನನ್ನನ್ನು ಸಂಪರ್ಕಿಸಬೇಕಾದಲ್ಲಿ.
ಕೊನೆಯ ಅಂಕಿಯನು ಬರೆದು,
ಅದರಲ್ಲೆರಡನ್ನು ಕಳೆದು,
ಮತ್ತೆ ನಾಲ್ಕನ್ನು ತೆಗೆದು,
ಎರಡು ಮೆಟ್ಟಿಲಿಳಿದು,
ಶೂನ್ಯವನು ಹಿಡಿದು,
ಆರಕ್ಕೇರಿ,
ಒಂದಕ್ಕಿಳಿದು,
ಎರಡು ಮೆಟ್ಟಿಲು ಏರಿ,
ಒಂದು ಹೆಜ್ಜೆ ಹಿಂತೆಗೆದು,
ಒಂದು ಕೈಯೆಲ್ಲಾ ಬೆರಳುಗಳ ಲೆಕ್ಕಿಸಿ ಬರೆದಾಗ,
ಸಿಗುವ ಹತ್ತಂಕಿಯ ಸಂಖ್ಯೆಗೆ ಕರೆಮಾಡಿ.
ಮಿಂಚಂಚೆ ವಿಳಾಸ: asuhegde@facebook.com
ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಪರಿಚಯ ಗುರುಗಳೇ… 🙂 ಇದರಿಂದ ನಿಮ್ಮ ಹಾಸ್ಯ ಪ್ರವೃತ್ತಿ, ಸರಳ ಸಜ್ಜನಿಕೆ ಅರಿಯಬಹುದು. ಕಲಿಯಲು ಆಸಕ್ತಿ ಇರುವವರಿಗೆ ಕಲಿಸುತ್ತೀರೆನ್ನುವ ವಿಷಯ ತಿಳಿದು ತುಂಬಾ ಸಂತೋಷವಾಯ್ತು. ಬರಹಲೋಕಕ್ಕೆ ಈಗಷ್ಟೇ ಕಾಲಿಟ್ಟಿರುವ ನನಗೂ ನಿಮ್ಮ ಮಾರ್ಗದರ್ಶನ ಅತ್ಯಗತ್ಯ.
sorry Nimm No. 9735065875
ಎರಡೂ ಅಲ್ಲ.
Nimma No. 9722061215
ಅಲ್ಲ. 😦
ಕೆ.ಎಂ.ವಿಶ್ವನಾಥ
ನಿಮ್ಮ ಪರಿಚಯದ ಶೈಲಿ ತುಂಬಾ ಹಿಡಿಸಿತು
ನಿಮ್ಮಂತಹ ದೊಡ್ಡವರಲ್ಲಿ ಒಂದು ಚಿಕ್ಕ ಕೋರಿಕೆ ನೀವು ಬೆಳೆದ ರಿತಿಯಲ್ಲಿ ನಿಮ್ಮನ್ನು ಅನುಸರಿಸಿ ಬರುತ್ತಿರುವ ಯುವಕರನ್ನು ಬೆಳಿಸಿ ಉಳಿಸಿ ಸಾಹಾಯ ನೀಡಿ ಬರೆಯುತ್ತೇನೆ ಕಲಿಸಿ ಎಂದು ಬಂದವರಿಗೆ ಸಾಹಾಯ ನೀಡಿ ದಾರಿ ತೋರಿಸಿ
ಧನ್ಯವಾದಗಳು.
ತಮ್ಮ ಬಗ್ಗೆ ತಮ್ಮ ಬ್ಲಾಗ್ ನಲ್ಲಿ ಓದಿದೆ.
ನಾನು ತಮ್ಮ ಮಟ್ಟದ ಬರಹಗಾರನಲ್ಲ. ನಾನಿನ್ನೂ ಕಲಿಯುತ್ತಾ ಇರುವವನೇ ಆಗಿದ್ದೇನೆ.
ಆದರೂ ತಮಗೇನು ಬೇಕೆಂದು ಕೇಳಿದರೆ ನಾನು ಸಾಧ್ಯವಾದ ಸಹಾಯ ಮಾಡಬಹುದು.
ಮಾನ್ಯರೆ ನಿಮ್ಮ ಪ್ರತಿಸ್ಪಂದನೆಗೆ ಅನಂತ ಧನ್ಯವಾದಗಳು ನಾನು ಬರೆದಿದ್ದು ತುಂಬಾ ಇದೆ ಆದರೆ ಅದನ್ನು ಜನರಿಗೆ ಮುಟ್ಟಿಸುವಲ್ಲಿ ಹಿಂದೆ ಬಿದ್ದಿದ್ದೇನೆ. ಅನಿಸುತ್ತದೆ. ಕೆಲವು ಪುಸ್ತಕ ಬರೆದೆ ಆದರೆ ಅದು ಜನರಿಗೆ ತಿಳಿಸಲು ಆಗುತ್ತಿಲ್ಲ ಆ ದಾರಿಯಲ್ಲಿ ಅನೇಕ ಜನರನ್ನು ಕೇಳಿದೆ ಆದರೆ ಇಲ್ಲಯವರೆಗೂ ಯಾರೂ ಪೂರ್ತಿಯಾಗಿ ವಿಷಯ ತಿಳಿಸಿಲ್ಲ ಯಾರೂ ಕೈಹಿಡಿದು ಈ ಬರಹದ ಕ್ಷೇತ್ರದಲ್ಲಿ ಬೆಳಿಯಲು ಸಹಾಯ ಮಾಡುತ್ತಿಲ್ಲ ಈ ಕ್ಷೇತ್ರದಲ್ಲಿ ಇರುವ ಅನೇಕ ಮಾಹಾನ್ ನಾಯಕರ ಜೊತೆಯಲ್ಲಿ ಮಾತಾಡಿದ್ದೇನೆ ಅದರ ಫಲಿತಾಂಶ ಮಾತ್ರ ಶೂನ್ಯವಿದೆ ಈ ನಿಟ್ಟಿನಲ್ಲಿ ನಿಮ್ಮ ಸಹಾಯ ಸಿಗಬಹುದೆ ತಿಳಿಸಿ
ಅನಂತ ಧನ್ಯವಾದಗಳು
ಆ ಬಗ್ಗೆ ನನಗೆ ಅನುಭವ ಇಲ್ಲ.
ನಾನಿನ್ನೂ ಒಂದೂ ಪುಸ್ತಕ ಪ್ರಕಟಿಸಿಲ್ಲ.
ಆಗಲಿ ಸರ್ ಅನಂತ ಧನ್ಯವಾದಗಳು
ಸರ್ ಇವತ್ತು ನಿಮ್ಮ ಬರಹವನ್ನು ಸು.ಟೈಮಸ್ ಆಫ್ ಕರ್ನಾಟಕದಲ್ಲಿ ಪ್ರಕಟವಾಗಿದೆ ಅಸು ಹೆಗಡೆ ಅಂತಾ ನೋಡಿ
ಧನ್ಯವಾದ. ಓದಿದ್ದೆ, ಮರೆತಿದ್ದೆ. ಇನ್ನು ಮರೆಯಲಾರೆ.
hi asu;
i m new comer to blog bt ur self introduction ws fabulous. hats off! writng process going on like dis
thaku
ನಿಮ್ಮ ಪರಿಚಯ ಆಸಕ್ತಿಕರವಾಗಿದೆ. ನಿಮ್ಮ ಮೊಬೈಲ್ ನಂ. ತಿಳಿಯಲು ಕಷ್ಟಪಡಬೇಕು. ನನ್ನ ಮೊಬೈಲ್ ನಂ. ತಿಳಿಸಿಬಿಡುವೆ: 9448501804.
ನಿಮ್ಮದು ಎಲ್ಲದರಲ್ಲೂ ವಿಶೇಷವೇ!
nice!
ಧನ್ಯವಾದಗಳು, ಸೀತಾರಾಮ್!
ನಿಮ್ಮ ಫೋನ್ ನಂಬರ್ ಕೊಟ್ಟಿರುವ ರೀತಿ ಚೆನ್ನಾಗಿದೆ
ಧನ್ಯವಾದಗಳು ಗಿರೀಶ್!
superb
ಧನ್ಯವಾದಗಳು!
its tough to write about oneself… u have done it….
the last puzzle regarding ue =r cell num is really gud…
ಧನ್ಯವಾದಗಳು ಸಂತೋಷ್!
ಸರ್, ತಮ್ಮ ಬ್ಲಾಗ್ ಲಿಂಕನ್ನು ನನ್ನ ಬ್ಲಾಗ್ ನಲ್ಲಿ ನೀಡಿದ್ದೇನೆ. ತಮಗೆ ಒಪ್ಪಿತವೆಂದು ಭಾವಿಸುವೆ.
ವಿಶ್ವಾಸಿ
ಸುಘೋಷ್ ಎಸ್. ನಿಗಳೆ.
ಸುಘೋಷ್,
ಆಸುಮನದ ಮಾತುಗಳು ಹೆಚ್ಚು ಹೆಚ್ಚು ಮನಗಳನ್ನು ತಲುಪುವುದಕ್ಕೆ ಸಹಕಾರಿಯಾಗುವ ಯಾವುದೇ ವ್ಯಕ್ತಿಯ, ಯಾವುದೇ ನಡೆಯೂ ಸದಾ ಸ್ವಾಗತಾರ್ಹ.
ಆಸುಮನದಲ್ಲಿನ ಯಾವುದೇ ಮಾತುಗಳನ್ನು ಅನ್ಯ ಓದುಗರೊಂದಿಗೆ ಹಂಚಿಕೊಳ್ಳುವುದಕ್ಕೆ ಸಂಪೂರ್ಣ ಅನುಮತಿ ಇದೆ. ಅಲ್ಲಿ ಅದರ ಜೊತೆಗೆ ಆಸುಮನದ ಉಲ್ಲೇಖ ಇದ್ದರೆ ಆಯ್ತು ಅಷ್ಟೇ.
ತಾವು ತೋರಿರುವ ಈ ಅಭಿಮಾನಕ್ಕೆ ನಾನು ಕೃತಜ್ಞನಾಗಿದ್ದೇನೆ.
ಜಂಗಮ ದೂರವಾಣಿ ಸಂಖ್ಯೆಯನ್ನು ಹೇಳಿರುವ ರೀತಿ ನಿಜಕ್ಕೂ ಹೊಸ ತರ. ಇಷ್ಟವಾಯಿತು. ನಮ್ಮ ಬುದ್ಧಿಗೆ ಚೂರು ಕಸರತ್ತು ಕೊಡಬೇಕೆಂಬ ಆಸೆ ಪ್ರಶಂಸನೀಯ…… :-)…
ಶ್ಯಾಮಲ
ಆದ್ರೂ ಇನ್ನೂ ಕರೆ ಬಂದಿಲ್ಲವಲ್ಲಾ…!
🙂
ವಿಭಿನ್ನ ರೀತಿಯ ಪ್ರವರವನ್ನು ಪ್ರಚುರಪಡಿಸುವ ಈ ಪ್ರಯತ್ನ ಖುಷಿ ತ೦ದಿತು.. ನಗುವನ್ನೂ ಮೂಡಿಸಿತು.
>>ನನ್ನನ್ನು ಸಂಪರ್ಕಿಸಬೇಕಾದಲ್ಲಿ:
ಕೊನೆಯ ಅಂಕೆಯನು ಬರೆದು,
ಅದರಲ್ಲೆರಡನ್ನು ಕಳೆದು,
ಮತ್ತೆ ನಾಲ್ಕನ್ನು ತೆಗೆದು,
ಎರಡು ಮೆಟ್ಟಿಲಿಳಿದು,
ಶೂನ್ಯವನು ಹಿಡಿದು,
ಆರಕ್ಕೇರಿ,
ಒಂದಕ್ಕಿಳಿದು,
ಎರಡು ಮೆಟ್ಟಿಲು ಏರಿ,
ಒಂದು ಹೆಜ್ಜೆ ಹಿಂತೆಗೆದು,
ಒಂದು ಕೈಯೆಲ್ಲಾ ಬೆರಳುಗಳ ಲೆಕ್ಕಿಸಿ ಬರೆದಾಗ,
ಸಿಗುವ ಹತ್ತಂಕೆಯ ಸಂಖ್ಯೆಗೆ ಕರೆಮಾಡಿ.>>
ಇದೊ೦ದು ಮೆದುಳಿಗೆ ಮೇವಿನ ಪ್ರಯತ್ನ! ಒಟ್ನಲ್ಲಿ ಏನಾದರೊ೦ದು ವಿಭಿನ್ನ ಪ್ರಯತ್ನ ಮಾಡುತ್ತಲೇ ಇರುತ್ತೀರಿ!! ನಾನ್ಯಾರು! ಇಲ್ಲಿಯವರೆಗೂ ಕಣ್ಣಾಡಿಸಿದ್ದೇನೆಯೇ ವಿನ; ಸರಿಯಾಗಿ ಓದಿರಲಿಲ್ಲ! ನಗು ಬರುತ್ತಿದೆ… ಹೆ೦ಡತಿ ಒಬ್ಬಳಿದ್ದಾಳೆ… ಸಕ್ಕತ್ ಮಾರಾಯ್ರೇ… ಆಡು ಭಾಷೆಯ ಪದಗಳಾದರೂ, ಬಳಸಬೇಕೆ೦ದಿದ್ದಲ್ಲಿ ಬಳಸಿದರೆ ಮಾತ್ರವೇ ಅದರ ಸೊಗಸು ಹಾಗೂ ಭಾವನೆಯುಕ್ತವಾಗಿರುತ್ತದೆ ಎ೦ಬುದು ಸಾಹಿತ್ಯದ ಸೊಲ್ಲು. ಅದಿಲ್ಲಿ ನಿಜಪಡಿಸಿದ್ದೀರಿ! ಖುಷಿಯಾಯಿತು.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
“ನಾನ್ಯಾರು” ಎನ್ನುವ ಈ ಪುಟವನ್ನು ಓದಿದವರಿಗೆ, ನಾನು ಯಾರು ಅನ್ನುವುದರ ಅರಿವು ಪೂರ್ತಿಯಾಗಿ ಆಗದೇ ಉಳಿದರೂ, ನಾನು ಎಂಥವನು ಅನ್ನುವ ಅರಿವು ಆಗಬಹುದೇನೋ ಅಲ್ಲವೇ!
ಧನ್ಯವಾದಗಳು!
ನಮಸ್ತೆ !
ಎಷ್ಟೋ ದಿನಗಳಿಂದ ಇಲ್ಲೊಂದು ಭೇಟಿ ಕೊಟ್ಟು ಹೋಗಬೇಕು ಅಂದ್ಕೊಂಡಿದ್ದೆ..ಕೂತು ಇಲ್ಲಿನ ಮಾತುಗಳ ಕಂತೆಯನ್ನು ನೋಡಿದ ಮೇಲೆ ಹೋಗೋಕೆ ಮನಸ್ಸಾಗುತ್ತಿಲ್ಲ…ಓದಿದ್ದು ತುಂಬಾ ಕಮ್ಮಿ ಓದೋದಕ್ಕೆ ಎಷ್ಟೆಲ್ಲಾ ಇದೆ ..
ನಿಮ್ಮ ಆಸುಮನದ ಮಾತುಗಳ ಮೇಲೆ ಓದಿದಂತೆ ಮಾಡಿ ಬರೀ ಕಣ್ಣಾಡಿಸಿದ್ದಕ್ಕೆನೇ ಇಷ್ಟು ಖುಷಿಯಾಗಿದೆ.
ಧನ್ಯವಾದಕ್ಕಿಂತ ಮತ್ತೊಂದು ಪದ ಸಿಗುತ್ತಿಲ್ಲ ..
ವಂದನೆಗಳೊಂದಿಗೆ
ವಾಣಿ ಶೆಟ್ಟಿ
ವಾಣಿಯವರೇ, ತಮ್ಮ ಅಭಿಮಾನಕ್ಕೆ, ನಾನು ಕೃತಜ್ಞನಾಗಿದ್ದೇನೆ.
ನಮಸ್ಕಾರ
ಶಿವೂ ಪುಸ್ತಕ ಬಿಡುಗಡೆ ದಿನ ನಿಮ್ಮನ್ನು ನಯನ ಸಭಾ೦ಗಣದಲ್ಲಿ ಭೇಟಿ ಆಗಿದ್ದೆ. ನೀವು ನನ್ನ ಪಕ್ಕದಲ್ಲಿ ಆಸೀನರಾಗಿದ್ದಿರಿ. ನಿಮ್ಮನ್ನು ಸ೦ಪದದಲ್ಲಿ ನಾನು ಆಗಾಗ್ಗೆ ಕಾಣುತ್ತಿದ್ದೆ. ನಿಮ್ಮ ಬ್ಲಾಗಿಗೆ ಇವತ್ತಷ್ಟೇ ಭೇಟಿ ಕೊಟ್ಟೆ, ಖುಷಿ ಆಯ್ತು,ನಾನು ಕೂಡ ದಕ ಜಿಲ್ಲೆಯವನೆ. ನಮ್ಮ ಪ್ರೀತಿ ವಿಶ್ವಾಸ ಬೆಳೆಯಲಿ, ಸ೦ಪರ್ಕದಲ್ಲಿರೋಣ. ಪರಾ೦ಜಪೆ, paraanjape@gmail.com
blog: http://www.nirpars.blogspot.com
ನನಗೂ ನೆನಪಿದೆ ತಮ್ಮೊಂದಿಗಿನ ಮಾತುಕತೆ.
ಸಂತೋಷವಾಯ್ತು.
ಹೆಗ್ಡೆಯವರೇ ನಮಸ್ಕಾರಗಳು,
ನಾನು ಬ್ಲಾಗ್ ಲೋಕಕ್ಕೆ ತೀರಾ ಹೊಸಬಳು.
ಇಂದು ನಿಮ್ಮ ಬ್ಲಾಗಿನಲ್ಲಿ ಇಣುಕಿದೆ.
ನಿಮ್ಮ ಹಿಂದಿನ ಲೇಖನ ಸಮೋಸ ವಿನಿಮಯ ತುಂಬಾ ಹೊಸದೆನ್ನಿಸಿತು.
ನಿಮ್ಮ ಪರಿಚಯ ಮಾಡಿಕೊಡುವ ರೀತಿಯೂ ಆಕರ್ಷಕವಾಗಿದೆ.
ನಿಮ್ಮ ಬರವಣಿಗೆ ಹೀಗೆಯೇ ಸಾಗಲಿ.
ಶುಭ ಹಾರೈಕೆಗಳೊಂದಿಗೆ,
ವೇದಾ.
ವೇದಾ,
ನಮಸ್ಕಾರಗಳು.
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು.
ಹೀಗೆಯೇ ಹುರಿದುಂಬಿಸುತ್ತಾ ಇರುವುದರ ಜೊತೆಗೆ ವಸ್ತುನಿಷ್ಟ ಪ್ರತಿಕ್ರಿಯೆಗಳನ್ನೂ ನೀಡುತ್ತಾ ಇರಬೇಕಾಗಿ ಕೋರಿಕೆ.
ಸುರೇಶ್,
ನಿಮ್ಮ ಬ್ಲಾಗ್ ನಲ್ಲಿ ಸುತ್ತಾಡಿದೆ. ಚೆನ್ನಾಗಿದೆ. ಪುರಸತ್ತಾದಾಗಲೆಲ್ಲಾ ಇಣುಕುವೆ. ನನ್ನ ಕೌಟುಂಬಿಕ ಬ್ಲಾಗ್ ಗೊಮ್ಮೆ ಬಂದು ಇಣುಕಿಹೋಗಿ, ಹಾಗೆಯೇ ಏನಾದರೂ ಬಿಟ್ಟು ಹೋಗಿ.
http://nammoorunammanenamjana.blogspot.com/
parichaya sooper sir…
ಧನ್ಯವಾದಗಳು ಪ್ರಸಾದ್
ಹೆಂಡತಿ ಇದ್ದಾಳೆಯೇ?
ಒಬ್ಬಳಿದ್ದಾಳೆ
ಇನ್ನೊಬ್ಬಳು ಬೇಕೇ???
ತುಂಬಾ ಸಕತ್…
ಬಶೀರ್ ಕೊಡಗು
ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಬಶೀರ್!
ಸಕತ್ ಪಂಚಿಂಗ್ ಪರಿಚಯ ಕಣ್ರೀ ಹೆಗ್ಡೇರೆ, ನೂರಾರು ಬ್ಲಾಗುಗಳನ್ನು ಸುತ್ತಿ ನೋಡಿರುವೆ, ಎಲ್ಲೂ ಈ ರೀತಿಯ ಪರಿಚಯ ಕಾಣಲಿಲ್ಲ.
ಮನಪೂರ್ವಕ ಧನ್ಯವಾದಗಳು ತಮಗೆ.
ಹೊಯ್!!!
ಹೆಗಡೆ ಅವರೇ
ತುಂಬಾ ಚೆನ್ನಾಗಿದೆ ನಿಮ್ಮ ಪರಿಚಯ ಹೇಳುವ ರೀತಿ.
ಅಂದ ಹಾಗೇ ಸಮಯವಿದ್ದಾಗ ಮಾತನಾಡಬಯಸುವಿರಾದರೆ
ನನ್ನ ನಂಬರ್ ೯೮೪೪೭೦೧೭೦೫
ಧನ್ಯವಾದಗಳು ಗೋಪೀನಾಥ್!
ಧನ್ಯವಾದಗಳು ಪ್ರಕಾಶ್.
ನೀವು ಪರಿಚಯ ಮಾಡಿಸಿದ ರೀತಿ….
ಇಷ್ಟವಾಯಿತು….