ಕಣ್ಮುಚ್ಚಿ ಪ್ರಾರ್ಥಿಸಲು ಮೂರ್ತಿ ಏಕೆ ಬೇಕು?!!

29 ಆಕ್ಟೋ 09

ನ್ಯಾಯಾಧೀಶ ಮತ್ತು ಜನ ಸಾಮಾನ್ಯರ

ನಡುವೆ ನ್ಯಾಯವಾದಿಗಳು ಇರುವಂತೆ

ದೇವರು ಮತ್ತು ಜನ ಸಾಮಾನ್ಯರೆಲ್ಲರ

ನಡುವೀ ಪೂಜಾರಿಗಳು ಇರಬೇಕಂತೆ

 

ಕಾನೂನಿನ ಕ್ಲಿಷ್ಟ ಭಾಷೆಯನು ಅರಿಯದ

ಮುಗ್ಧರಾದ ಜನ ಸಾಮಾನ್ಯರಿರಬಹುದು

ಜನ ಸಾಮಾನ್ಯರ ಸರಳ ಭಾಷೆಯನೂ

ಅರಿಯದ ನ್ಯಾಯಾಧೀಶರು ಇರಬಹುದು

 

ದೇವರನು ನೆನೆ ನೆನೆದು ತಮ್ಮ ಮನದ

ಮಾತುಗಳ ಒಪ್ಪಿಸಲಾಗದ ಜನರಿಹರೇ

ಜನ ಸಾಮಾನ್ಯರ ಮನದ ಮಾತುಗಳ

ಅರ್ಥೈಸಿಕೊಳ್ಳಲಾಗದ ದೇವರು ಇಹರೇ

 

ಈ ತರ್ಕವ ಮುಂದಿಟ್ಟ ಆ ಪೂಜಾರಿಗಳು

ನಿಜವಾಗಿಯೂ ದೇವರನ್ನು ಅರಿತಿಹರೇ

ಆ ದೇವರನ್ನು ನ್ಯಾಯಾಧೀಶರ ಮಟ್ಟಕ್ಕೆ

ತಂದಿಳಿಸಿ ಅಗೌರವವ ತೋರಿಸುತಿಹರೇ

 

ಪ್ರಾರ್ಥನೆಯನು ಸಲ್ಲಿಸಲು ನಿಜವಾಗಿಯೂ

ಕಣ್ಣುಗಳೆದುರು ದೇವರ ಮೂರ್ತಿ ಏಕಿರಬೇಕು

ಪ್ರಾರ್ಥಿಸುವಾಗ ತೆರೆದಿರದ ಕಣ್ಣುಗಳ ಮುಂದೆ

ಮೂರ್ತಿ ಬೇಡ ಮನಸ್ಸು ನಿರ್ಮಲವಿದ್ದರೆ ಸಾಕು

Advertisements

ಯಡ್ಡಿ ಇನ್ನೂ ಶೋಭಾಯಮಾನ!!!

29 ಆಕ್ಟೋ 09

ರೆಡ್ಡಿ

ಬಂಧುಗಳು

ಹಿಡಿದೆಳೆದು

ಜಗ್ಗಾಡುತ್ತಿದ್ದರೆ

ಯಡ್ಡಿಯ

ಚಡ್ಡಿ,

 

ಯಡ್ಡಿ

ಈಗಲೂ

ಹಿಂದಿನಂತೆಯೇ

ಶೋಭಾಯಮಾನ

ತನಗೇನೂ

ಆಗದೆಂಬಂತೆ

ಅಡ್ಡಿ!!!

 ******

 

ಪಕ್ಷಾಧ್ಯಕ್ಷ

ರಾಜನಾಥರೇ

ಈತನಿಗೆ

ಬೆಲೆಕೊಡದೇ

ಮಾಡುತ್ತಿರಲು

ಪದೇ ಪದೇ

ಮುಖ ಭಂಗ,

 

ದಿಲ್ಲಿಯಿಂದಿಲ್ಲಿಗೆ

ಸಂಧಾನ

ಮಾಡಿಸಲು

ಬಂದಿರುವ

ಆ ಅರುಣ ಜೇಟ್ಲಿ

ಹಿಂತಿರುಗುವನೇ

ಆಗಿ ಮಂಗ?!

 ********

 

ಬಾಯಿಯಲಿ

ಸಮಾಜಸೇವೆಯ

ಮಂತ್ರ

ಮನದೊಳಗೊಳಗೆ

ಅಧಿಕಾರ ದಾಹದ

ಕುತಂತ್ರ,

 

ಯಡ್ಡಿಯಾದರೇನು

ರೆಡ್ಡಿಯಾದರೇನು

ಗೌಡರಾದರೇನು

ಶೆಟ್ಟರಾದರೇನು

ಈಗ ಎಲ್ಲರದೂ

ಜಾಹೀರು ಸರ್ವತ್ರ!!!

************

 

ಸದಾಕಾಲ

ನಿದ್ರೆಯಲ್ಲಿರುತಿದ್ದ

ದೊಡ್ಡ ಗೌಡರ

ಮುಖದಲ್ಲೂ

ಮೊನ್ನೆ ನಾನು

ಮಂದಹಾಸವ ಕಂಡೆ,

 

ಮಾಜೀ ಮುಖ್ಯಮಂತ್ರಿಯ

ಸಹೋದರನನ್ನೂ

ಮುಖ್ಯ ಅಲ್ಲದಿದ್ದರೂ

ಉಪ ಮುಖ್ಯಮಂತ್ರಿ

ಮಾಡಿಸಬಹುದೇ

ಎಂಬ ಅನುಮಾನ

ನಾ ಮನದಲ್ಲಿ

ಮೂಡಿಸಿಕೊಂಡೆ!!!

****************


ಪ್ರೇಯಸಿಗೆ ಮರಳಿ ಗರ್ಭಿಣಿಯ ಪಟ್ಟ!!?

27 ಆಕ್ಟೋ 09

ಕೆಟ್ಟ ಗಂಡನಿಂದ ಬೇಸತ್ತು  ಬೇರ್ಪಟ್ಟ

ದಿಟ್ಟೆ ಶೃತಿಯನ್ನು ಆಕೆಯ ಸಾರ್ವಜನಿಕ

ಹುದ್ದೆಯಿಂದ ಕೆಲ ದಿನಗಳ ಹಿಂದೆಯೇ

ವಜಾಗೊಳಿಸಿ ಬಿಟ್ಟಿತ್ತು ನಮ್ಮ ಸರಕಾರ

 

ಕಟ್ಟಿಕೊಂಡ ಪತ್ನಿಗೆ ಶಾಸಕಿಯ ಪಟ್ಟವ

ನೀಡಿ  ಪ್ರೇಯಸಿಗೆ ಮರಳಿ ಗರ್ಭಿಣಿಯ

ಪಟ್ಟವ ಕರುಣಿಸಿರುವ ನಮ್ಮ ಸಂಸದನ

ಬಗ್ಗೆ  ಯಾರೂ ಎತ್ತುವುದೇ ಇಲ್ಲ ಚಕಾರ

 

ಮೊದಲ ಪತ್ನಿ ಇರುವಾಗ ಎರಡನೆಯ

ಮದುವೆ ಕಾನೂನು ಬಾಹಿರವಾಗದೇ?

ಅಲ್ಲಾ ಕರಾವಳಿಯ ಹೆಣ್ಣಿನ್ನು ಹೀಗೆಯೇ

ಹೆರುತ್ತಿರುವಳೇ ಮದುವೆಯೇ ಆಗದೇ?

 

ಹೋಟೇಲುಗಳಲ್ಲೆಲ್ಲಾ ಗುಟ್ಟಾಗಿ ನಡೆದರೆ

ಅದನ್ನು ವೇಶ್ಯಾವಾಟಿಕೆ ಎಂಬುವವರು

ದೊಡ್ಡವರ ಮನೆಯಲ್ಲಿ ಹಗಲೆಲ್ಲಾ ಹೀಗೆ

ರಾಜಾರೋಷವಾಗಿ ನಡೆದರೆ ಏನೆಂಬರು


ಸಖಿಯೇ ನನಗೆ ಸಕಲ!!!

23 ಆಕ್ಟೋ 09

ಸಖೀ,

ನನ್ನ ಹೆಚ್ಚಿನೆಲ್ಲಾ 

ಕವನಗಳಲಿರುವ

ನಿನ್ನನ್ನು ಕಂಡು

ಸಹೃದಯಿ

ಓದುಗನೋರ್ವ

ಹೀಗಂದ:

 

“ಒಟ್ಟಾರೆಯಾಗಿ,

ಸಖಿಯೇ

ನಿಮಗೆ ಸಕಲ?”

 

ನಾನಂದೆ:

 

“ನಿಜಕೂ

ನನ್ನ ಸಖಿಯೇ

ನನಗೆ ಸಕಲ,

ಸಖಿಯೇ ಇಲ್ಲದಿರೆ

ನನ್ನ ಅಂಗಾಂಗಗಳು

ಆಗಲಾರವೇ ವಿಕಲ?”


ಭಾರತೀಯ ಜನತಾ ಪಕ್ಷಕ್ಕಾಗಿ ಚರಮ ಗೀತೆಯೇ?!

23 ಆಕ್ಟೋ 09

ಮೂರು ರಾಜ್ಯಗಳಲ್ಲಿ ಅತ್ಯಧಿಕ ಸ್ಥಾನಗಳನ್ನು

ಪಡೆದು ಇಂದಿರಾ ಕಾಂಗ್ರೇಸ್ ಗೆದ್ದಾಗ ಮತ್ತೆ

ಇಂದು ನಿಜವಾಗಿಯೂ ಹಾಡಿದಂತೆ ಆಗುತ್ತಿದೆ

ಭಾರತೀಯ ಜನತಾ ಪಕ್ಷಕ್ಕಾಗಿ ಚರಮ ಗೀತೆ

 

ಭಾಜಪ ಇನ್ನೊಮ್ಮೆ ಮೈ ಕೊಡವಿ ಎದ್ದು ನಿಂತು

ಕಾದಾಡಿ ಗೆಲ್ಲುವುದೇನಿದ್ದರೂ ಸ್ವಲ್ಪ ಕಷ್ಟ ಸಾಧ್ಯ

ತನ್ನ ಮನೆಯೊಳಗೆ ತುಂಬಿಕೊಂಡಿರುವ ಕೊಳಕ

ತೊಳೆಯಲು ಅದಕೆ ಆಗಿಲ್ಲವಲ್ಲಾ  ಇನ್ನೂ ಸಾಧ್ಯ

 

ಅಟಲ್ ಬಿಹಾರಿ ವಾಜಪೇಯಿ ದೀರ್ಘ ರಾಜಕೀಯ

ಜೀವನದಿಂದ ಆಗಲೇ ಸನ್ಯಾಸ ಸ್ವೀಕರಿಸಿ ಆಗಿದೆ

ಲಾಲ ಕೃಷ್ಣ ಆದ್ವಾನಿಯವರು ತನ್ನೆಲ್ಲಾ ಬೇಕಾಬಿಟ್ಟಿ

ಮಾತಿನಿಂದಾಗಿ ವರ್ಚಸ್ಸನ್ನೇ  ಕೆಡಿಸಿಕೊಂಡಾಗಿದೆ

 

ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಮರಳಿದರೂ

ಅದು ತನ್ನೊಳ್ಳೆಯ ಕೆಲಸಗಳಿಂದಂತೂ ಅಲ್ಲವೇ ಅಲ್ಲ

ಏಕೆಂದರೆ ವಿರೋಧ ಪಕ್ಷವಾಗಿ ಕೂತಿದ್ದು ಅದು ಇನ್ನು

ಏನೂ ಒಳ್ಳೆಯ ಕೆಲಸಗಳನ್ನು ಮಾಡಲಾಗುವುದೇ ಇಲ್ಲ

 

ಇಂದಿರಾ ಕಾಂಗ್ರೇಸು ಕುಲಗೆಟ್ಟು ಕೆಟ್ಟ ಆಡಳಿತ ನೀಡಿ

ಒಂದು ಪಕ್ಷ ಜನತೆಯ ಕೋಪದ ಉರಿಗೆ ಗುರಿ ಆದಲ್ಲಿ

ಆ ಪಕ್ಷದ ವಿರುದ್ಧವಾಗಿ ಬೀಳುವ ಮತಗಳನ್ನೆಲ್ಲಾ ತಾನು

ಬಾಚಿಕೊಂಡರೆ ಭಾಜಪದಿಂದ ದೂರವಾಗುಳಿಯದು ದಿಲ್ಲಿ

 

ರಾಜ ಠಾಕರೇ ಮರಿ ಸೇನೆಯ ಕಟ್ಟಿಕೊಂಡು ಹೋರಾಡಿ

ಗಳಿಸಿದ್ದು ನಗಣ್ಯ ಅನ್ನುವಷ್ಟು ಕಡಿಮೆಯಾಗಿ ಕಾಣುತ್ತಿದೆ

ಕರಾವಳಿ ಕರ್ನಾಟಕದೈದು ಕನ್ನಡಿಗರೇ ಮುಂಬಯಿಯ

ನಿವಾಸಿಗಳ ಮನಸ್ಸನ್ನು  ಅರಿತು ಗೆದ್ದುಕೊಂಡ ಹಾಗಿದೆ

 

ದೇಶದಲ್ಲಿ ಎರಡೇ ಪಕ್ಷಗಳು ಇರಬೇಕು ಎನ್ನುವ ವಾದಕ್ಕೆ

ಮತ್ತೆ ಸಿಕ್ಕಿದಂತೆ ಆಗಿದೆ ಇದೀಗ ಮತದಾರನ ಬೆಂಬಲ

ಅದು ಯಾವಾಗ ಕಾರ್ಯರೂಪಕ್ಕೆ ಬಂದು ನಮ್ಮ ದೇಶ

ಅಭಿವೃದ್ಧಿ ಹೊಂದೀತೆಂದು ಎದುರು ನೋಡುವ ಹಂಬಲ


ಮುತ್ತು – ತೊತ್ತು!!!

22 ಆಕ್ಟೋ 09

 

ಅಂದು,

ಎನ್ನ ನಗುವಿಗೆ

ಬೇಕಿತ್ತು ನಿಮ್ಮ ಮುತ್ತು

ಎನ್ನ ಅಳುವಿನಲೂ

ಸಾಕಿತ್ತು ನಿಮ್ಮ ಮುತ್ತು

ನಾ ಗೆದ್ದಾಗ, ಬಿದ್ದಾಗ

ನಿಂತಾಗ, ಕುಂತಾಗ

ಮತ್ತದೇ ಮುತ್ತು

ಅಮ್ಮ,

ನೀವು ಕೊಡುತ್ತಿದ್ದ

ಪ್ರೀತಿಯ ಮುತ್ತು

 

ಇಂದು,

ಮುತ್ತನೀಯಲು

ನಿಮಗೆ ತ್ರಾಣವಿಲ್ಲ

ಇಂದು ಎನಗದು

ಬೇಕೆಂದೂ ಇಲ್ಲ

ನೀವು ಬಿದ್ದಾಗ

ಎದ್ದಾಗ ನಿಂತಾಗ

ಕುಂತಾಗ ಅತ್ತಾಗ

ಆಧರಿಸಲೆನಗೆ

ಇಲ್ಲ ವ್ಯವಧಾನ

ಇಲ್ಲ ಪುರುಸೊತ್ತು

 

ಅದಕ್ಕಾಗಿ ನಿಮ್ಮ

ಯೋಗ ಕ್ಷೇಮ

ವಿಚಾರಿಸಲು,

ನಾನಂದಂತೆ

ಕೇಳಿ ದುಡಿಯಲು,

ಸದಾ ಸಿದ್ಧಳಿದ್ದಾಳೆ

ಈಗ ನಮ್ಮ

ಮನೆಯಲ್ಲೊಂದು

ತೊತ್ತು!

 ಆತ್ರಾಡಿ ಪೃಥ್ವಿರಾಜ್ ಹೆಗ್ಡೆ


ಇದು ನ್ಯಾಯವೇ?

16 ಆಕ್ಟೋ 09
asu013
 
ಹಬ್ಬಗಳು ಬಂದವೆಂದರೆ ಸಾವಿರ ಸಾವಿರ ಬಾಳೆ ಗಿಡಗಳು ಹೀಗೆ ತಮ್ಮ ಜೀವನದ ಕೊನೆಗಾಣುತ್ತವೆ.
 
ಇದು ನ್ಯಾಯವೇ? ಇದು ಯಾವ ದೇವರಿಗೆ ಪ್ರಿಯ?
 
ಪರಿಸರವಾದಿಗಳು, ಪ್ರಕೃತಿ ಪ್ರೇಮಿಗಳು, ಹಸಿರು ಕ್ರಾಂತಿಯ ರೂವಾರಿಗಳು, ಈ ಬಗ್ಗೆ ಯಾಕೆ ಚಕಾರ ಎತ್ತುವುದಿಲ್ಲ?
 
ಪ್ರಾಣಿಗಳ ಬಲಿ ಕೊಡುವುದನ್ನು  ತಪ್ಪು ಎಂದನ್ನಬಹುದಾದರೆ, ಇದನ್ನು ಯಾಕೆ ತಪ್ಪು ಎಂದನ್ನುವುದಿಲ್ಲ ಯಾರೂ?
 
asu012
 
 
ಕಲ್ಲನ್ನು ಕಲ್ಲು ಎಂದು ಭಾವಿಸಿದರೆ, ಅದು ಕಲ್ಲಿಗೆ ಸಲ್ಲುವ ಪೂಜೆ.
 
ಗಿಡ ಮರಗಳನ್ನು ಗಿಡ ಮರಗಳೆಂದು ಭಾವಿಸಿದರೆ, ಅದು ಗಿಡ ಮರಗಳಿಗೆ ಸಲ್ಲುವ ಪೂಜೆ.
 
ದೇವರನ್ನು ದೇವರು ಎಂದು ಭಾವಿಸಿದರೆ, ಅದು ದೇವರಿಗೆ ಸಲ್ಲುವ ಪೂಜೆ.
 
ಮನುಜನನ್ನು ಮನುಜನೆಂದು ಭಾವಿಸಿದರೆ, ಅದು ಮನುಜನಿಗೆ ಸಲ್ಲುವ ಪೂಜೆ.
 
ಆದರೆ ದುರದೃಷ್ಟವಶಾತ್ ಇಲ್ಲಿ ದೇವರು ಕಲ್ಲಾಗಿ ಕಡೆಗಣಿಸಲ್ಪಟ್ಟಿದ್ದಾರೆ. 
 
ಅಲ್ಲದೆ, ಕಲ್ಲುಗಳು ದೇವರುಗಳಾಗಿ ಪೂಜಿಸಿಕೊಳ್ಳುತ್ತಿವೆ.