ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ!

 

ನಮ್ಮ ನಾಡಲ್ಲಿ ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ
ಆದರೆ ಇಲ್ಲಿ ಜ್ಞಾನಪೀಠಿಗಳೆನಿಸಿಕೊಂಡವರು ಕಮ್ಮಿ ಇಲ್ಲ;

ಕೋಟಿಗೊಬ್ಬನಿಗೂ ಮೀರಿ ಜ್ಞಾನಪೀಠಿಗಳು ಈ ನಾಡಿನಲ್ಲಿ
ದೇಶದ ಅನುಪಾತಕ್ಕೂ ಮೀರಿಹುದು ನಮ್ಮ ಕರುನಾಡಿನಲ್ಲಿ;

ಲೇಖನಿ ಹಿಡಿದವರೇ ಸರ್ವಕಾಲಕ್ಕೂ ಇಲ್ಲಿ ಬಹುಮಾನಿತರು
ಅಧಿಕಾರದ ಗದ್ದುಗೆಯೇರಿದವರು ಈಗ ಜೈಲು ಸೇರುತಿಹರು

ಜ್ಞಾನ ಹೊಂದಿರುವವರು ಅನ್ಯರಿಗದನು ಹಂಚಿ ಸುಖಿಸುವರು
ಜ್ಞಾನ ಪಡೆದವರು ನಿಸ್ವಾರ್ಥದಿ ದಾನಿಯ ಮನದಿ ಹರಸುವರು

ಹಂಚಿದ ಆಹಾರ, ಅರ್ಥವೆಲ್ಲಾ ಒಂದು ದಿನ ಕರಗಿ ಹೋಗುವುದು
ಜ್ಞಾನವು ಕರಗದೆ ಬೆಳೆದು ಮುಂದೆ ಮುಂದೆ ಸಾಗುತ್ತಲಿರುವುದು

ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರು ಡಾ. ಚಂದ್ರಶೇಖರ ಕಂಬಾರ
ಎಂಟು ಪ್ರಶಸ್ತಿಗಳಿಂದಾಗಿ ಕನ್ನಡವೀಗ ಮಿಕ್ಕೆಲ್ಲಕ್ಕಿಂತ ನಿಜದಿ ಭಾರ!
*****

3 Responses to ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ!

  1. Bharatiya ಹೇಳುತ್ತಾರೆ:

    Bahala sogasagidhe.dhanyavadhagalu

  2. Shiela ಹೇಳುತ್ತಾರೆ:

    ಅಸುವರೇ, ಬಹಳ ಅರ್ಥಪೂರ್ಣವಾಗಿದೆ ಕವನ… ಮನದಳಿದು ಹೃದಯ ಸೇರಿತೀನುಡಿ!
    ಶೀಲಾ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: