ಸದ್ದಿಲ್ಲದೇ…!

ಸದ್ದಿಲ್ಲದೇ
ಮನದೊಳಗೆ
ಲಗ್ಗೆಯಿಟ್ಟವರೊಂದಿಗೆ
ಸದ್ದಿಲ್ಲದೇ
ಬೆಳೆದುಬಿಡುವುದು
ಗಾಢ ಸ್ನೇಹ,

ಸದ್ದಿಲ್ಲದೇ
ಮನದಿಂದ
ಹೃದಯದೊಳಗೆ
ಇಳಿದವರೊಂದಿಗೆ
ಸದ್ದಿಲ್ಲದೇ
ಅಂಕುರಿಸಿಬಿಡುವುದು
ಗಾಢವಾದ ಪ್ರೀತಿ,

ಒಳ್ಳೆಯದೆಲ್ಲವೂ
ಹೀಗೆಯೇ
ಸದ್ದಿಲ್ಲದೇ
ನಡೆಯುತ್ತಿರುತ್ತವೆ;

ಆದರೆ,
ಕ್ರೋಧ,
ದ್ವೇಷ,
ಮತ್ಸರ,
ಈ ಮನದಲ್ಲಿ
ಮನೆಮಾಡಿದಾಗ,
ಅವು ಎಲ್ಲಿಲ್ಲದ
ಸದ್ದು ಮಾಡುತ್ತವೆ,
ಹಗಲಿರುಳೂ
ರಂಪ ಮಾಡುತ್ತವೆ,
ಊರಿನುದ್ದಗಲಕ್ಕೂ
ಡಂಗುರ ಸಾರುತ್ತವೆ!
***

8 Responses to ಸದ್ದಿಲ್ಲದೇ…!

 1. ksraghavendranavada ಹೇಳುತ್ತಾರೆ:

  ಬಹಳ ಮರ್ಮಾರ್ಥವಿರುವ ಸು೦ದರ ಮಾತುಗಳಿಗಾಗಿ ಧನ್ಯವಾದಗಳು.. ತು೦ಬಿದ ಕೊಡ ತುಳುಕುವುದಿಲ್ಲ.. ಉನ್ನತ ಮೌಲ್ಯಗಳು ಉನ್ನತ ವ್ಯಕ್ತಿಯಲ್ಲಿ ಯಾವಾಗಲೂ ತೆರೆಯ ಮರೆಯಲ್ಲಿಯೆ ಇರುತ್ತವೆ. ಆದರೆ ಒಬ್ಬ ಅಹ೦ಕಾರಿಯಲ್ಲಿ, ಎಲ್ಲಾ ತಾಮಸ ಗುಣಗಳು ತಾ೦ಡವವಾಡುತ್ತಿರುವುದನ್ನು ಆತನ ಪ್ರತಿ ಚಲನೆಯಲ್ಲಿಯೂ ಕಾಣಬಹುದು. ಅತ್ಯ್ತ್ತಮ ಸಾಲುಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. Prakash Hegde ಹೇಳುತ್ತಾರೆ:

  ಬಹಳ ಸುಂದರ ಸಾಲುಗಳು !!

 3. Suneetha Prasanna ಹೇಳುತ್ತಾರೆ:

  So true and beautiful….. Yes, Love and friendship grow in silence but the negative qualities make lot of noise like empty vessels… Thanks you and All the best Suresh…

 4. azad ಹೇಳುತ್ತಾರೆ:

  ಆಸು, ನಿಜ ನಿಮ್ಮ ಮಾತು…ಒಳ್ಲೆಯದೆಲ್ಲವೂ ಮೌಲ್ಯವುಳ್ಲದೆಲ್ಲವೂ ಸದ್ದಿಲ್ಲದೇ ಇರುತ್ತದೆ..ಬರುತ್ತದೆ… ಎಲ್ಲ ಅನೈಚ್ಛಿಕಗಳು ಬರುವಾಗ್ಲೂ ಇರುವಾಗ್ಲೂ ಮತ್ತು ಹೋಗುವಾಗ್ಲೂ ಬರೀ ಸದ್ದೇ ಸದ್ದೇ..ಸರಳವಾಗಿ ವ್ಯಕ್ತವಾಗಿದೆ ಗಾಢಾರ್ಥ…

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: