ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!

ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ
ಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?
ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿ
ಮುಂದೆ ಬಂದು ಕೈಯ ಯಾರೂ ನೀಡದಿರೆ ಏನ ಮಾಡುವ?

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಮುಳುಗುವವಗೆ ಹುಲ್ಲು ಕಡ್ಡೀ ಆಸರೆಯೇ ಬಲು ದೊಡ್ಡದು
ಮನದ ಭಯವ ಮರೆಸುವುದಕೆ ಸಣ್ಣ ಸನ್ನೆಯೇ ದೊಡ್ಡದು
ಅಷ್ಟರಲ್ಲೇ ಮುಗಿಲಿನಿಂದ ಸಿಡಿಲು ಬಡಿದು ಬಿದ್ದರೆ
ಮುಳುಗುವವನು ಮುಳುಗದೇ ತಾ ಬೇರೆ ಏನ ಮಾಡುವ||

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಪ್ರೀತಿಸುವುದನೇ ತಪ್ಪೆನ್ನುವುದಾದ್ರೆ ತಪ್ಪು ನನ್ನಿಂದಾಗಿದೆ
ಕ್ಷಮೆಯೇ ನೀಡಲು ಆಗದಂತ ಅಪರಾಧ ಇದಾಗಿದೆ
ನಿರ್ದಯಿ ಈ ಜನತೆಯೂ, ನನ್ನ ಸಖಿಯೂ ನಿರ್ದಯೀ
ನನ್ನವರೆಂದು ಹೇಗೆ ಅನ್ನಲಿ, ಹೇಗೆ ಧೈರ್ಯ ತಾಳಲಿ||

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಇದು ಇನ್ನೊಂದು ಭಾವಾನುವಾದದ ಯತ್ನ

ಮೂಲ ಗೀತೆ:
ಚಿತ್ರ : ಶರಾಬಿ
ಗಾಯಕರು: ಕಿಶೋರ್ ಕುಮಾರ್
ಸಂಗೀತ: ಬಪ್ಪಿ ಲಹರಿ

ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್
ಜಬ್ ಕದಮ್ ಹೀ ಸಾಥ್ ನ ದೇ ತೋ ಮುಸಾಫಿರ್ ಕ್ಯಾ ಕರೇ
ಯೂಂ ತೋ ಹೈ ಹಮ್ ದರ್ದ್ ಭೀ ಔರ್ ಹಮ್ ಸಫರ್ ಭೀ ಹೈ ಮೆರಾ
ಬಡ್ ಕೇ ಕೋಯೀ ಹಾಥ್ ನಾ ದೇ ದಿಲ್ ಭಲಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||

ಡೂಭ್‍ನೇ ವಾಲೇ ಕೋ ತಿನ್ ಕೇ ಕಾ ಸಹಾರಾ ಹೀ ಬಹುತ್
ದಿಲ್ ಬಹಲ್ ಜಾಯೇ ಫಖತ್ ಇತ್ನಾ ಇಶಾರಾ ಹೀ ಬಹುತ್
ಇತ್ನೇ ಪರ್ ಭೀ ಆಸ್ಮಾನ್ ವಾಲಾ ಗಿರಾ ದೇ ಬಿಜಲಿಯಾಂ
ಕೋಯಿ ಬತ್ ಲಾದೇ ಝರಾ ಯೆಹ್ ಡೂಬ್‍ತಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||

ಪ್ಯಾರ್ ಕರ‍್ನಾ ಝುರ್ಮ್ ಹೈ ತೋ ಝುರ್ಮ್ ಹಮ್‍ ಸೇ ಹೋಗಯಾ
ಕಾಬಿಲ್-ಎ-ಮಾಫೀ ಹುವಾ ಕರ‍್ತೇ ನಹೀಂ ಐಸೇ ಗುನಾಹ್
ಸಂಗ್ ದಿಲ್ ಹೈ ಯೆಹ್ ಜಹಾಂ ಔರ್ ಸಂಗ್ ದಿಲ್ ಮೇರಾ ಸನಮ್
ಕ್ಯಾ ಕರೇ ಜೋಶ್-ಎ-ಜುನೂನ್ ಔರ್ ಹೌಸ್‍ಲಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||

9 Responses to ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!

 1. Nagaraj ಹೇಳುತ್ತಾರೆ:

  ಶ್ರೀ ಸುರೇಶ ಹೆಗ್ಡೆಯವರೆ, ಹಿಂದಿ ಗೇತೆಗಳ ನಿಮ್ಮ ಹಲವಾರು ಸುಂದರ ಭಾವಾನುವಾದಗಳನ್ನು ನೋಡಿ ಸಂತಸವಾಗಿದೆ. ವಾಸ್ತವವಾಗಿ ಇದೇ ನನ್ನನ್ನು ನಿಮ್ಮ ಈ ತಾಣಕ್ಕೆಳೆತಂದಿದೆ. ನಾನು ಅತ್ಯಂತ ಭಾವುಕನಾಗಿ ಇಷ್ಟಪಡುವ ಹಿಂದಿ ಗೀತೆಯ ಸಾಹಿತ್ಯ ಇಲ್ಲಿದೆ. ಇದು ‘ಶಹೀದ್’ ಹಿಂದಿ ಚಲನಚಿತ್ರದಲ್ಲಿ (1948) ಭಗತ್ ಸಿಂಗ್ ಗಲ್ಲಿಗೇರಿದ ನಂತರದಲ್ಲಿ ಆತನ ಶವಯಾತ್ರೆ ನಡೆದ ಸಂದರ್ಭದಲ್ಲಿ ಹಿನ್ನೆಲೆಯಾಗಿ ಮಹಮದ್ ರಫಿ ಹೇಳಿದ ಗೀತೆ.

  SHAHEED Movie Songs Lyrics
  Watan Ki Raah Mein Lyrics Hindi Song Title: Watan Ki Raah Mein : SHAHEED
  Singer(s): RAFI, MASTAN
  Hindi Lyrics:
  Watan ki raah mein watan ke naujawan shaheed ho
  pukaarte hain ye zameen-o-aasmaan shaheed ho

  shaheed teri maut hi tere vatan ki zindagi
  tere lahu se jaag uthegi is chaman ki zindagi
  khilenge phool us jagah ki tu jahaan shaheed ho, watan ki …

  ghulam uth watan ke dushmano se intaqaam le
  in apne donon baajuon se khanjaron ka kaam le
  chaman ke vaaste chaman ke baagbaan shaheed ho, watan ki …

  pahaad tak bhi kaanpane lage tere junoon se
  tu aasmaan pe inqalaab likh de apane khoon se
  zameen nahi tera watan hai aasmaan shaheed ho, watan ki …

  watan ki laaj jisko thi ajeez apani jaan se
  wo naujavaan ja raha hai aaj kitani shaan se
  is ek jawaan ki khaak par har ik jawaan shaheed ho
  watan ki …

  hai kaun khushanaseeb maan ki jiska ye chiraag hai
  wo khushanaseeb hai kahaan ye jisake sar ka taaj hai
  amar wo desh kyon na ho ki tu jahaan shaheed ho, watan ki …
  ಇದರ ಆಡಿಯೋ ಅನ್ನು http://kavimana.blogspot.com/2011/03/youtube-video-player.html ದಲ್ಲಾಗಲೀ ಅಥವ ನೇರವಾಗಿ ಯುಟ್ಯೂಬಿನಲ್ಲಿ ಕೇಳಬಹುದು. ಇದರ ಭಾವಾನುವಾದ ಮಾಡಲು ನನ್ನ ನಮ್ರ ವಿನಂತಿ. ಪದಶಃ ಬೇಡ, ಗೀತೆಯ ಭಾವ ಸ್ಫುರಿಸಿದರೆ ಸಾಕು. ಭಾವಾನುವಾದ ಮಾಡುವಲ್ಲಿನ ನಿಮ್ಮ ಸಾಮರ್ಥ್ಯ ಕುರಿತು ನನಗೆ ವಿಶ್ವಾಸವಿದೆ. ವಂದನೆಗಳು.
  ನಿಮ್ಮವ,
  ಕ.ವೆಂ.ನಾಗರಾಜ್.

 2. Mallikarjun Melagiri ಹೇಳುತ್ತಾರೆ:

  ಚರಣದ ಎರಡನೇ ಸಾಲಿನಲ್ಲಿ, “ಕದಮ್” ಗೆ ಅತೀ ಸನಿಹವಾದ ಪರ್ಯಾಯ ಪದ….. ” ಹೆಜ್ಜೆ ” ಯನ್ನು ಬಳಸಿದ್ದರೆ…..

 3. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

  ವಾವ್,
  ಒಂದು ಅದ್ಭುತವಾದ ಭಾವಾನುವಾದ ಓದಿದ ಅನುಭವವಾಯಿತು ಸಾರ್. ಪ್ರತಿ ಸಾಲಿನಲ್ಲೂ ನಿಮ್ಮ ತದಾತ್ಮತೆ ಮತ್ತು ಮೂಲ ಭಾವನೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮನಮೆಚ್ಚಿಗೆಯಾಯಿತು.
  ಅಂದ ಹಾಗೆ “ಶರಾಬಿ” (೧೯೮೪) ಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಹಣ ನೀಡಿದವರು : ಎನ್. ಸತ್ಯೆನ್. ಒಬ್ಬ ವೃತ್ತಿನಿರತ ಛಾಯಾಗ್ರಾಹಕನಾಗಿ ನನ್ನ ಮೊದಲ ಕರ್ತವ್ಯ ಮೂಲ ಚಿತ್ರದ ಛಾಯಾಗ್ರಾಹಕನ ಹೆಸರನ್ನಾದರೂ ನೆನೆಸಿಕೊಳ್ಳುವುದು ಅಲ್ಲವೇ.

  ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
  http://www.badari-poems.blogspot.com
  http://www.badari-notes.blogspot.com
  http://www.badaripoems.wordpress.com

  Face book Profile : Badarinath Palavalli

 4. suresh nadig ಹೇಳುತ್ತಾರೆ:

  ಕಿಶೋರ್ ಹಾಡಿರುವಂತದ್ದು, ಭಾವಾನುವಾದ ಚೆನ್ನಾಗಿದೆ. ಈ ಚಿತ್ರದಲ್ಲಿನ ಎಲ್ಲಾ ಗೀತೆಗಳು ಚೆನ್ನಾಗಿದೆ.

 5. ksraghavendranavada ಹೇಳುತ್ತಾರೆ:

  ಭಾವಾನುವಾದ ಚೆನ್ನಾಗಿ ಮೂಡಿ ಬ೦ದಿದೆ..
  ಎರಡನೆಯ ಚರಣದ ಶೋಕ ಭಾವ ಸೊಗಸಾಗಿದೆ..

  ಮೂರನೆಯ ಚರಣದ ಆರ೦ಭಿಕ ಸಾಲಿನ ಪ್ರೀತಿಸೋದೆ ತಪ್ಪ೦ತಾದ್ರೆ… ಪ್ರೀತ್ರಿಸುವುದೇ ತಪ್ಪೆನ್ನುವುದಾದರೆ ಆ ತಪ್ಪು ನನ್ನಿ೦ದಾಗಿದೆ… ಎನ್ನುವುದು ಸೂಕ್ತವೇನೋ.. ಮೊದಲಿನಿ೦ದ ಪ್ರೌಢ ಪದಗಳ ಬಳಕೆಯ ನ೦ತರ ಇದ್ದಕ್ಕಿದ್ದ೦ತೆ ಆಡು ಪದದ ಬಳಕೆ ಆ ಚರಣದ ಮೌಲ್ಯವನ್ನು ಕಡಿತಗೊಳಿಸಬಹುದೆ೦ಬುದು ನನ್ನ ಅನಿಸಿಕೆ..

  ಮತ್ತೊ೦ದು ಸು೦ದರ ಭಾವಾನುವಾದಕ್ಕೆ ನಿಮಗೆ ಧನ್ಯವಾದಗಳು.

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: