ಕನಸುಗಳು!

 

ನಮ್ಮ ಸುಪ್ತ ಮನಸ್ಸಿನ
ಒಂಟಿ ಯಾತ್ರೆಯದು
ನಿದ್ದೆಯಲ್ಲಿ ಕಾಡೋ ಕನಸು,

ಜಾಗೃತ ಮನಸ್ಸಿನ
ಒಂಟಿ ಯಾತ್ರೆಯದು
ನಮ್ಮೆಲ್ಲಾ ಹಗಲುಗನಸು,

ನಿದ್ದೆಯ ಕನಸುಗಳು
ಕಂಡು, ನಲಿದು – ಬೆದರಿ,
ಮತ್ತೆ ಮರೆಯುವುದಕ್ಕಾಗಿ,

ಆ ಕನಸುಗಳೆಲ್ಲಾ
ಅಲ್ಲವೇ ಅಲ್ಲ ಅವುಗಳ
ಆಳಕ್ಕಿಳಿದು ಅರಿಯಲಿಕ್ಕಾಗಿ,

ಹಗಲುಗನಸುಗಳು
ನಮಗೆ ಸಹಕಾರಿ
ನಮ್ಮ ಭವ್ಯ ಭವಿಷ್ಯವನ್ನು
ರೂಪಿಸಿಕೊಳ್ಳುವುದಕ್ಕೆ,

ತಯಾರಾಗಿರಬೇಕು
ನಾವು ಸದಾಕಾಲ
ಕೆಚ್ಚೆದೆಯಿಂದ ಅವುಗಳನ್ನು
ನನಸಾಗಿಸುವುದಕ್ಕೆ!
****

4 Responses to ಕನಸುಗಳು!

 1. ksraghavendranavada ಹೇಳುತ್ತಾರೆ:

  ಹೂ೦.. ಕನಸುಗಳೇ ಹಾಗೇ..

  ಒಬ್ಬರ ಕನಸು ಮತ್ತೊಬ್ಬರಲ್ಲಿ ಜೀವನೋತ್ಸಾಹವನ್ನು ತು೦ಬಿದರೆ
  ಕನಸು ಕ೦ಡವನಲ್ಲಿ ದಿಗಿಲು ಹುಟ್ಟಿಸುತ್ತದೆ..!
  ಕವಿಯಲ್ಲಿ ಕಾವ್ಯೋತ್ಸಾಹದ ಚಿಲುಮೆಯೇ ಉಕ್ಕಿಸಿದರೆ
  ಕನಸು ಕ೦ಡವನಲ್ಲಿ ವೃಥಾ ತಳಮಳ ಉ೦ಟು ಮಾಡುತ್ತದೆ..!

  ಕನಸುಗಳೇ ಹಾಗೆ.. ಸೊಗಸಾಗಿದೆ.. ಅರ್ಥೈಸಿಕೊ೦ಡು ಮುನ್ನಡೆಯುವ ಛಾತಿ ಬೇಕು.. ನನಸಾಗಿಸಿಕೊಳ್ಳಬೇಕು.. ಕೊನೆಗೆ ಎಲ್ಲದಕ್ಕೂ ತಯಾರಾಗಿರಬೇಕು!!
  ಉತ್ತಮ ಸ೦ದೇಶಯುಕ್ತ ಕವನ..
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ..

 2. Suneetha Prasanna ಹೇಳುತ್ತಾರೆ:

  A wonderful one as usual… Dreams are the stepping stone to reality… All the best Suresh..

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: