ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ…!

 

ಚಿತ್ರಗಳಲ್ಲೆಲ್ಲೋ ಬಂಧಿಸಿ ಸ್ಥಬ್ಧವಾಗಿರಿಸಿದರೇನು
ನೀರ ಮೇಲಿನಲೆ ತರಂಗಗಳು ನಿಲ್ಲುವುದೇನು?

ಚಿತ್ರದಲಿ ಬಂಧಿಸಿ ನನ್ನ ಸ್ಥಬ್ಧವಾಗಿರಿಸಿದರೇನು
ಮನದ ತಲ್ಲಣಗಳರಿವು ತಮಗಾಗುವುದೇನು?

ಮನದೊಳಗೆ ಕೆರೆಯ ನೀರ ಮೇಲಿನಲೆಗಳಂತೆ
ತಲ್ಲಣದ ತರಂಗಗಳು ಸದಾ ಕಾಡುತಿರುವವಂತೆ

ಬಂಧಿಸಲು ನಾವೆಷ್ಟೇ ಯತ್ನಿಸಿ ಸೋತರೇನಂತೆ
ಕಣ್ಣ ಮುಚ್ಚಾಲೆಯಾಟ ಸದಾ ಸಾಗುತಿರುವುದಂತೆ

ಜೀವನದೀ ಏರು ಪೇರುಗಳು ದಾಖಲಾಗದಿವೆಲ್ಲೂ
ನಗು ಮುಖದ ಸೋಗು ಪ್ರತಿಯೊಂದು ಚಿತ್ರದಲ್ಲೂ

ಸಂತಸವಿರಲಿ ನಮ್ಮ ಚಿತ್ರಗಳ ಕಂಡವರ ನೆನಪಲ್ಲೂ
ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ
**************************

 

ಚಿತ್ರ ಕೃಪೆ: ಇಟ್ಟಿಗೆ ಸಿಮೆಂಟು (ಪ್ರಕಾಶ ಹೆಗಡೆಯವರ ಬ್ಲಾಗ್)

6 Responses to ನಮ್ಮ ನೋವು ತಾರದಿರಲಿ ನೋವಿನ್ನಾರ ಬಾಳಲ್ಲೂ…!

 1. ksraghavendranavada ಹೇಳುತ್ತಾರೆ:

  ಸು೦ದರ ಕವನ…
  ಎಲ್ಲ ಭಾವಜೀವಿಗಳ ಹಾಗೂ ದು:ಖಿಗಳ ಮಾತೊ೦ದೆ.. ನಮ್ಮ ನೋವು ಇನ್ನೊಬ್ಬರ ಬಾಳಿನಲ್ಲಿಯೂ ನೋವನ್ನು ತಾರದಿರಲಿ..!! ಭಾವಪೂರ್ಣ ಕವನಕ್ಕಾಗಿ ಕವಿಗೆ ನನ್ನ ನಮನಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. V.R.BHAT ಹೇಳುತ್ತಾರೆ:

  Nice, ವಿಶ್ರಮಿಸಬೇಡಿ, ಬರೆಯುತ್ತಲೇ ಇರಿ, ಶರೀರಕ್ಕೆ ವಯಸ್ಸಾಗಬಹುದೇ ವಿನಃ ಮನಸ್ಸಿಗೆ ವಯಸ್ಸಿಲ್ಲ, ಜಿ.ವಿ.ಯವರಂತೆ ನೂರ್ಕಾಲ ಬದುಕಿ, ಅನೇಕ ಬರಹಗಳು ಹೊರಹೊಮ್ಮಲಿ, ಕವನ ಸರಳ ಸುಂದರ, ಹಾರ್ದಿಕ ಶುಭಾಶಯಗಳು

 3. ಹೇಮಾ ಹೇಳುತ್ತಾರೆ:

  ಹೌದು ನಿಜವಾಗಿಯೂ.
  ಎಷ್ಟೋ ನಗು ಮುಖಗಳ ಹಿಂದೆ ನೋವಿರುತ್ತದೆ ಅನ್ನುವುದು ಸ್ಪಷ್ಟ.
  ತುಂಬಾ ಚೆನ್ನಾಗಿದೆ ಕವನ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: