ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?

 

ಹಗಲಿಡೀ ಶ್ರಮಪಟ್ಟು ದುಡಿದು ಬರುವ ಮಗನನ್ನು ವಿಚಾರಿಸದೇ
ಕಂಠಮಟ್ಟ ಕುಡಿದು ಬರುವ ಮಗನ ನೀವು ವಿಚಾರಿಸುವುದೇಕೆ?

ನಿಮ್ಮ ಸುಖನಿದ್ದೆಗಾಗಿ ಸದಾ ತುಡಿಯುವ ಜೀವಗಳ ಪರಿಗಣಿಸದೇ
ಕುಡಿದು ಜ್ಞಾನಕಳೆದು ಬಿದ್ದವರ ಮೈಹೊದಿಕೆ ಸರಿಪಡಿಸುವುದೇಕೆ?

ನಿಮ್ಮನ್ನು ಹೊತ್ತು ಊರೆಲ್ಲಾ ತಿರುಗಲು ತಯಾರಿರುವವರ ಲಕ್ಷಿಸದೇ
ಕೊಲ್ಲಲು ಕಲ್ಲೆತ್ತಿಕೊಂಡು ಬರುವವರ ಬಗ್ಗೆ ನಿಮಗೆ ಮರುಕವದೇಕೆ?

ನಿಮ್ಮ ಬಳಿ ಇದ್ದು ಸೇವೆಗೈವ ಸೊಸೆಯ ಮೇಲೆ ಅಕ್ಕರೆಯ ತೋರದೇ
ದೂರದೂರಲ್ಲಿರುವ ಮಗಳ ಮೇಲೆ ನಿಮ್ಮ ಮಮತೆಯ ಮಳೆ ಅದೇಕೆ?

ಬಹುಷ: ಇವಕ್ಕೆಲ್ಲಾ ಉತ್ತರ ನಾ ಅರಿತುಕೊಳ್ಳಬೇಕು ನೀವು ನೀಡದೇ
ಅಮ್ಮನ ಮನದ ಒಳಗುಟ್ಟು ಯಾರಿಗೂ ಸುಲಭದಲಿ ಅರಿವಾಗದೇಕೆ?

********************

6 Responses to ಅಮ್ಮನ ಮನದ ಒಳಗುಟ್ಟು ಸುಲಭದಲಿ ಅರಿವಾಗದೇಕೆ?

 1. ksraghavendranavada ಹೇಳುತ್ತಾರೆ:

  ಸ್ವಾಗತರ್ಹ ಪ್ರಶ್ನೆಗಳು!

  ಸಾಮಾನ್ಯವಾಗಿ ನೆಟ್ಟಗಿರುವ ಮಕ್ಕಳನ್ನು ತಾಯಿಯಾಗಲೀ-ತ೦ದೆಯಾಗಲೀ ಹೆಚ್ಚು ಗಮನಿಸುವುದಿಲ್ಲ! ಹಾದಿ ತಪ್ಪಿದ ಮಕ್ಕಳ ಮೇಲೆ ತ೦ದೆ-ತಾಯಿಯರಿಗೆ ವಿಶೇಷ ಆಸ್ಥೆ.. ಉದಾಹರಣೆಗೆ ಎಲ್ಲಾ ತ೦ದೆ ತಾಯಿಗಳೂ ಹಾದಿ ತಪ್ಪಿದ ಮಕ್ಕಳ ಬಗ್ಗೆ ಮಾತಾಡುವಾಗ ಗಮನಿಸಿ.. “ ಅವನು ಒಳ್ಳೆ ಹುಡುಗ ಕಣ್ರೀ.. ಈಗ ಗ್ರಹಚಾರ ಸರಿಯಿಲ್ಲ ಅಷ್ಟೇ..!“
  ತೀರಾ ತಾವೂ ಅವನನ್ನು ಅಲಕ್ಷಿಸಿದರೆ ಮತ್ತೇನನ್ನಾದರೂ ಮಾಡಿಕೊ೦ಡಾನೆ೦ಬ ಹೆದರಿಕೆಯೂ ಅವರ ಆ ವರ್ತನೆಗೆ ಸಾಥ್ ಕೊಡುತ್ತದೆ.. ಅಷ್ಟೇ ಬೇರೇನಿಲ್ಲ… ಮಕ್ಕಳು ಹಾಗೆಯೇ ಉಳಿದುಕೊ೦ಡರೆ ತಾಯಿಯೂ ಆ ಚಿ೦ತೆಯಲ್ಲಿಯೇ ಕೊರಗುತ್ತಾಳೆ.. ಆನ೦ತರ ಅವನ ಒಡಹುಟ್ಟಿದವರನ್ನು ಕ೦ಡಾಗ ( ಅವನ ಸೋದರರು ಹಾಗೂ ಸೋದರಿಯರು) ತನ್ನ ಹಾದಿ ತಪ್ಪಿದ ಮಗನ ಈ ಪರಿಸ್ಥಿತಿಗೆ ಅವರೇ ಕಾರಣರೆ೦ಬ ರೀತಿಯಲ್ಲಿಯೇ ವ್ಯವಹರಿಸತೊಡಗುತ್ತಾಳೆ.. ಪ್ರಾಮಾಣಿಕವಾಗಿ ಹೇಳಬೇಕೆ೦ದರೆ , ಇಬ್ಬರಲ್ಲಿ ಒಬ್ಬರು ಮರಣಿಸಿದಾಗ ಮಾತ್ರವೇ ಈ ಸಮಸ್ಯೆ ಬಗೆಹರಿಯುವುದು..
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. ಹೇಮಲತಾ ದೇವಾಡಿಗ ಹೇಳುತ್ತಾರೆ:

  ನಿಜವಾಗಿಯೂ ನಮ್ಮ ಮನೆಯ ಚಿತ್ರಣ ಕಣ್ಣ ಮುಂದೆ ಬಂದು ನಿಂತಂತೆ ಆಯ್ತು.
  ತಾಯಿಂದಿರಿಗೆ ಅತಿ ಉನ್ನತ ಸ್ಥಾನ ಕೊಟ್ಟ ಈ ದೇಶಕ್ಕೆ ಇಂಥ ಅಮ್ಮಂದಿರು ಒಂದು ಸವಾಲೇ ಸರಿ.
  ಅಮ್ಮನದೇ ತಪ್ಪು ಎನ್ನಲೇ? ಅಥವಾ ಮಗ ಅಮ್ಮನನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲನಾದನೆಂದೆನ್ನಲೇ?
  ಉತ್ತರಿಸುವವರು ಯಾರು?

 3. shashijois ಹೇಳುತ್ತಾರೆ:

  ನಿಮ್ಮ ಪದ್ಯ ಮನ ಮುಟ್ಟಿತು ಸರ್…
  ನಿಜ ತಾಯಿ ಮನದ ಗುಟ್ಟು ಯಾರಿಗೂ ಅರಿವಾಗೋದು ತುಸು ಕಷ್ಟವೇ..
  ಆಕೆಯ ಕಾಳಜಿಗೆ ಏನೋ ಅಥ ಇರಬಹುದಲ್ವ??
  ಅದನ್ನು ನಾನು ತಾಯಿ ಆಗಿಯೂ ಅರಿಯೆ!!

  • ಆಸು ಹೆಗ್ಡೆ ಹೇಳುತ್ತಾರೆ:

   ಶಶಿ,
   ನಿಜ, ಕೆಲವು ಪ್ರಶ್ನೆಗಳಿಗೆ ಉತ್ತರವೇ ದೊರೆಯುವುದಿಲ್ಲ.
   ನಾವೂ ಅರಿಯಬೇಕಾದರೆ, ಬಹುಷಃ ನಾವೂ ಆ ಸ್ಥಾನದಲ್ಲಿದ್ದು, ಅಂಥಹದೇ ಪರಿಸ್ಥಿತಿಯನ್ನು ಎದುರಿಸಬೇಕು.
   ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗಳಿಗಾಗಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: