ಗೊತ್ತಾಯ್ತೇನೇ…?

 

ಸಖೀ,
ಹೌದು, ಬಹಳವಾಯ್ತು
ನನ್ನ ತುಂಟಾಟ,
ನಿನಗೋ ಸದಾ
ನನ್ನಿಂದ ಪೇಚಾಟ,
ಹೊತ್ತಲ್ಲದ ಹೊತ್ತಿನಲಿ
ಕಾಡುತಿಹೆ ನಾ ನಿನ್ನ
ಅದು ನನಗೆ ಗೊತ್ತು,
ಅದಕ್ಕೇ ಹೇಳುತ್ತಿದ್ದೇನೆ
ನಾನೇ ಬಾಯ್ಬಿಟ್ಟು
ಕೇಳು ನೀನೀ ಹೊತ್ತು;
ನಾನಿನ್ನು ಸಂದೇಶಗಳನು
ರವಾನಿಸುವುದಿಲ್ಲ,
ನಾನಿನ್ನು ನಿನಗೆ
ಕರೆ ಮಾಡುವುದಿಲ್ಲ,
ನಾನಿನ್ನು ನಿನಗುಪದ್ರವ
ಕೊಡುವುದೇ ಇಲ್ಲ,
ನಾನಿನ್ನು ನಿನ್ನ ನೆನಪು
ಮಾಡುವುದೇ ಇಲ್ಲ,
ನಾನಿನ್ನು ನಿನ್ನನ್ನು
ಪ್ರೀತಿಸುವುದೇ ಇಲ್ಲ,
ಅಂತೆಲ್ಲಾ
ಹೇಳಬೇಕೆನಿಸಿದರೂ,
ಅದನ್ನೆಲ್ಲಾ ನನ್ನಿಂದ
ಹೇಳಲಾಗುವುದೇ ಇಲ್ಲ,
ಗೊತ್ತಾಯ್ತೇನೇ?
**********

10 Responses to ಗೊತ್ತಾಯ್ತೇನೇ…?

 1. ksraghavendranavada ಹೇಳುತ್ತಾರೆ:

  ಹ.ಹ.ಹ.. ಖುಷಿ ಕೊಟ್ಟ ಸಖಿ-ಸಖರ ತು೦ಟ ಮಾತುಗಳು..ಬಹಳ ದಿನಗಳಾಗಿತ್ತು ಸಖಿಯನ್ನು ಕರೆದು… ಖುಷಿಯಾಯ್ತು.. ಕವನದಲ್ಲಿನ ಎ೦ದಿಗೂ ಬತ್ತದ ಅಗಾಧ ಪ್ರೀತಿಯೊರತೆಯೊ೦ದಿಗಿನ ತಿಳಿ ಹಾಸ್ಯ ಇಷ್ಟವಾಯಿತು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. VARUN ಹೇಳುತ್ತಾರೆ:

  your words are touched my heart

 3. sheshadri ಹೇಳುತ್ತಾರೆ:

  ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಈ ಕವನ.
  ಮನಸ್ಪೂರ್ತಿಯಾಗಿ ಹೇಳುತ್ತಿದ್ದೇನೆ ಧನ್ಯವಾದನ 🙂

 4. Gopinatha ಹೇಳುತ್ತಾರೆ:

  ಗೊತ್ತಾಯ್ತು ಬಿಡಿ
  ಯಾಕೆ ಏನೆಲ್ಲಾ ಮಾಡಲ್ಲ ಅಂತ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: