ಕಲ್ಲೆಸೆದರೆ!

 

ಸಖೀ,
ಕೊಳದ ಪ್ರಶಾಂತ
ನೀರಿಗೆ ಕಲ್ಲೆಸೆದು
ನಾ ನೋಡಿದೆ,
ಅಲೆಗಳುಂಗುರಗಳು
ಈ ಮನಕೆ ಮುದ
ನೀಡಲು , ಒಂದಷ್ಟು
ಹೊತ್ತು ಮೈಮರೆತೆ;

ನನ್ನೀ ಮನದಲ್ಲಿನ
ಪ್ರಶಾಂತ ಕೊಳಕ್ಕೆ
ಅಸಂಬದ್ಧವಾದ
ವಿಷಯವೊಂದನ್ನು
ನಾನೆಸೆದು ಕೂತೆ
ಈ ಮನದಲ್ಲೆಲ್ಲಾ
ಕಿರಿಕಿರಿ, ದಿನವಿಡೀ
ಶಾಂತಿಯ ಕೊರತೆ!

2 Responses to ಕಲ್ಲೆಸೆದರೆ!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಮನಸ್ಸು ಮತ್ತು ಸುವಿಶಾಲ ಕೋಳ ಎರಡನ್ನೂ ನಿರೂಪಿಸುತ್ತಾ ಕವಿ ಮನಸ್ಸನ್ನು ನೆಮ್ಮದಿಯಾಗಿಟ್ಟುಕೊಳ್ಳಲು ಹೇಳಿರುವ ಮಾತಿಗೆ ನಮ್ಮ ಒಪ್ಪಿತವಿದೆ. 🙂

ತಮ್ಮ ಪ್ರತಿಕ್ರಿಯೆ ನೀಡಿ.