ಪ್ರತಿಮೆಯ ಸ್ಥಾಪಿಸುವುದೇಕೆ ಪರಭಾಷಿಗರ ನೆಲದಿ!!!

ನಮ್ಮವ್ವನ ಮೂರ್ತಿಯನು ನೆರೆಮನೆಯಂಗಳದಿ ಸ್ಥಾಪಿಸಿಲೇ
ನಮ್ಮವ್ವನ ನೆರೆಮನೆಯವರು ಗೌರವಿಸಲೆಂದು ನಾ ಆಶಿಸಲೇ

ನಾನೇ ನನ್ನವ್ವಗೆ ಕೊಡಲಾಗದಿದ್ದೊಡೆ ಕೈಯಾರೆ ಮರ್ಯಾದೆ
ನೆರೆಮನೆಯವರು ಅಗೌರವ ತೋರೆ ಮಾಡಬಹುದೇ ತಗಾದೆ

ಸರ್ವಜ್ಞನ ವಚನಗಳ ನೆನಪು ಕನ್ನಡಿಗರಿಗೇ ಸಾಕಷ್ಟಿಲ್ಲ ನಿಜದಿ
ಆತನ ಪ್ರತಿಮೆಯನು ಸ್ಥಾಪಿಸುವುದೇಕೆ ಪರ ಭಾಷಿಗರ ನೆಲದಿ

ಅನ್ಯ ಭಾಷೆಯಲಿ ಬರೆದು ಹೆಸರುವಾಸಿಯಾದರೆ ನಮಗೇನು
ಅವರ ಮೂರ್ತಿಗಳನು ನಾವಿಲ್ಲಿ ಸ್ಥಾಪಿಸಿ ಮೆರೆಸಲೇ ಬೇಕೇನು

ಕಾವೇರಿ ಹರಿಯದಿದ್ದಾಗ ಅಲ್ಲಿ ಸರ್ವಜ್ಞನ ಕಾಪಾಡುವರು ಯಾರು
ಹೊಗನೇಕಲ್ ಹೊಗೆ ಕಾರಿದರೆ ತಿರುವಳ್ಳುವರ‍್ರಿಗೆ ಇಲ್ಲಿ ಯಾರು

ವ್ಯಕ್ತಿ ನೀಡಿದ ಉಪದೇಶಗಳನು ಮರೆತು ಬಾಳುವವರೇ ನಾವೆಲ್ಲ
ಆದರೆ ವ್ಯಕ್ತಿಯನೇ ಹಗಲೆಲ್ಲಾ ಪೂಜಿಸುವ ಹುಚ್ಚು ನಮಗಿದೆಯಲ್ಲ

ಮಹಾತ್ಮನ ತತ್ವಗಳನು ದೂರಿ ಆತನನೇ ಅಲ್ಲ ಎಂಬರು ಸಾಧಕ
ಆದರೆ ಮಹಾತ್ಮಾಗಾಂಧೀ ರಸ್ತೆಗಳ ಸಂಖ್ಯೆ ಇಲ್ಲಿ ನೂರಕ್ಕೂ ಅಧಿಕ

ಶ್ರೀರಾಮನನು ದೇವರೆಂದು ಕೊಂಡಾಡುವ ನಮ್ಮ ಈ ನಾಡಿನಲ್ಲಿ
ಅಪ್ಪನನು ಕೊಲ್ಲುವ ಮಕ್ಕಳು ಸಿಗುತ್ತಾರೆ ಪ್ರತಿಯೊಂದು ಊರಿನಲ್ಲಿ

ಏನು ಹೇಳಿ ಹೋದರು ಎಂಬುವುದು ಮುಖ್ಯ ಆಗಿರಬೇಕು ನಿಜದಿ
ಆದರೆ ಯಾರು ಹೇಳಿದರು ಎನ್ನುವುದೇ ಮುಖ್ಯ ಆಗಿದೆ ಈ ಜಗದಿ
************************************

3 Responses to ಪ್ರತಿಮೆಯ ಸ್ಥಾಪಿಸುವುದೇಕೆ ಪರಭಾಷಿಗರ ನೆಲದಿ!!!

  1. Athradi ಹೇಳುತ್ತಾರೆ:

    ಮುರಿದ ಮನಗಳ ಜೋಡಿಸುವ ಅಂಟು ಸುಲಭದಲಿ ಸಿಗುವುದೇ ಇಲ್ಲ
    ಹೃದಯ ಕಂಬನಿ ಮಿಡಿದು ಜೋಡಿಸಬೇಕು ಮನಗಳ ಸುಮ್ಮನೆ ಅಲ್ಲ
    🙂

  2. ವಿಜಯರಾಜ್ ಕನ್ನಂತ ಹೇಳುತ್ತಾರೆ:

    pratimegLa nillisidoDe sudhaarisuvudaadare maitri…
    nillisabahudittu pratimegaLa nooraaru pratimegaLa raatroraatri…
    manadoLage kaTTida pratimegaLu aLiyuvavarege…
    murida manasugaLu ondaaguva bage hEge?

  3. HEMALATHA ಹೇಳುತ್ತಾರೆ:

    Thumba chennagi barediddiri.innoo hige bareyuvanthagali.

Leave a reply to Athradi ಪ್ರತ್ಯುತ್ತರವನ್ನು ರದ್ದುಮಾಡಿ