ಸಂಬಂಧಗಳು!!!

ಸಖೀ,

ಪರಾಮರ್ಶಿಸಿ ನೋಡಿದರೆ
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ

ಹಲವರೊಡನೆ
ನಾವು ಎಷ್ಟೇ ಬಯಸಿದರೂ
ಅವು ಗಾಢವಾಗುವುದೇ ಇಲ್ಲ

ಕೆಲವರೊಡನೆ ತಂತಾನೆ
ಬೆಳೆದು ನಮ್ಮನದೆಂತು
ಬಂಧಿಸಿಯೇ ಬಿಡುವುದಲ್ಲ

ನೂರು ಮೈಲಿಗಳಾಚೆ ಇದ್ದರೂ
ನೆನೆಸಿದಾಗಲೆಲ್ಲ ಮನ ಮಿಡಿದು
ನೋಯಿಸಿಕೊಳ್ಳುವುದು ಇದೆ

ಒಂದೇ ಸೂರಿನಡಿ ವರ್ಷಾನುವರ್ಷ
ಇದ್ದರೂ ಪರಸ್ಪರರ ಅರ್ಥೈಸಿಕೊಳ್ಳದೇ
ಕೊರಗಿ-ಕೊರಗಿಸುವುದೂ ಇದೆ

ಒಂದೇ ತಾಯಿಯ ಮಕ್ಕಳು
ಬೆಳೆದು ಕಡು ವೈರಿಗಳಾಗಿ
ಕಾದಾಡುವುದನು ಕಂಡದ್ದಿದೆ

ಬಾಳ ಬಟ್ಟೆಯಲಿ ಎದುರಾದ
ಅಪರಿಚಿತರು ಮನವ ಹೊಕ್ಕು
ನಮ್ಮವರೆಂದೆನಿಸಿಕೊಂಡುದಿದೆ

ಒಂದೆಡೆ ನಾವು ಅದೆಷ್ಟೇ
ಪ್ರಯತ್ನಿಸಿದರೂ
ಬೆಳೆಯದೇ ಇರುವ ಸಂಬಂಧ

ಇನ್ನೊಂದೆಡೆ ತಂತಾನೆ ಬೆಳೆದು
ನಮ್ಮನ್ನು ಆವರಿಸಿ ಗಾಢವಾಗುತಿರುವ
“some” ಬಂಧ

ಪರಾಮರ್ಶಿಸಿ ನೋಡಿದರೆ
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ
**********

4 Responses to ಸಂಬಂಧಗಳು!!!

 1. Athradi ಹೇಳುತ್ತಾರೆ:

  ಸಂಬಂಧೊಲು ಕಬಿತೆಡ್ದ್ ಪೊರ್ಲು ಆದ್ ಉಪ್ಪೊಡತ್ತೇ…?
  🙂 ಸೊಲ್ಮೆಲು

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  hegDere… kabite porl unDu…

 3. HEMALATHA ಹೇಳುತ್ತಾರೆ:

  ESHTO SALA EE SAMBANDAGALA BAGGE YOCHISI THALE KEDISIKONDIDDENE,KELAVARU KOOTHALLE PREETHISUVARU,KELAVARU DWESISUVARU.KAVANA CHENNAGI BAREDIDDIRI.HEEGE MUNDUVAREYALI….

 4. shyamala ಹೇಳುತ್ತಾರೆ:

  ನಮಸ್ಕಾರ ಸುರೇಶ್……
  ಕವನ ಚೆನ್ನಾಗಿದೆ….. ಸಂಬಂಧಗಳೇ ಹೀಗೆಂದು ನೀವೇ ಹೇಳಿಬಿಟ್ಟಿದ್ದೀರಿ…ಹೇಳಲು ಏನೂ ಇಲ್ಲ ಬರಿಯ ಚೆನ್ನಾಗಿದೆ ಎನ್ನುವುದ ಬಿಟ್ಟರೆ…..
  ಶ್ಯಾಮಲ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: