ನನ್ನದು ಇಂದಿನಿಂದ ಕೇಳಿ ಈ ಹೊಸ ಅಭಿಯಾನ
ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ
ಕೊಳಗೇರಿಗಳೇ ಇಲ್ಲದಿರುತ್ತಿದ್ದರೆ ಇಂದೇನಾಗುತ್ತಿತ್ತು
ಇಂದು ಇಷ್ಟೊಂದು ಪ್ರಶಸ್ತಿಗಳಲ್ಲಿ ಹೇಗೆ ಸಿಗುತ್ತಿತ್ತು
ಕೊಳಗೇರಿಗಳು ಇದ್ದುದಕೇ ಚಿತ್ರ ನಿರ್ಮಾಣವಾಯ್ತು
ನೈಜತೆ ಹೆಚ್ಚಿದುದುದಕೆ ಜನ ಮೆಚ್ಚುಗೆಯೂ ಆಯ್ತು
ಕೆಟ್ಟದ್ದು ಯಾವುದೂ ಇಲ್ಲ ಎಲ್ಲದಕೂ ಇದೆ ಇಲ್ಲಿ ಬೆಲೆ
ಇಂದಲ್ಲದಿದ್ದರೂ ಮುಂದೊಂದು ದಿನ ಸಿಗುವುದು ಬೆಲೆ
ಲಾಲ್ ಬಾಗ್, ತಾಜಮಹಲುಗಳ ಕತೆ ಎಷ್ಟಿದ್ದರೇನು
ಜನ ಮೆಚ್ಚುವುದು ಕೊಳಗೇರಿಗಳ ಕತೆಯನಲ್ಲವೇನು
ಹಾಗಾಗಿ ನಾಯಕರೇ ಈ ಕೊಳಗೇರಿಗಳ ಅಳಿಸಬೇಡಿ
ನಮ್ಮವರಿಗೇ ಇನ್ನೊಂದು ಚಿತ್ರ ಮಾಡಲವಕಾಶ ನೀಡಿ
ನನ್ನದು ಇಂದಿನಿಂದ ಕೇಳಿ ಈ ಹೊಸ ಅಭಿಯಾನ
ಕೊಳಗೇರಿಗಳ ಉಳಿಸಿ ಬೆಳೆಸಿ ಗಳಿಸಿ ಬಹುಮಾನ