ಕೋಟು ಕೊಳ್ಳಿರಯ್ಯಾ ಕೋಟು…!

02 ಫೆಬ್ರ 11

ಬನ್ನಿ ಕೋಟು ಕೊಳ್ಳಿರಯ್ಯಾ ಕೋಟು

ಅಂಥಿಂಥ ಕೋಟುಗಳಿಲ್ಲ ಇಲ್ಲಿ, ಅದೆಂಥೆಂಥವರ ಕೋಟುಗಳಿವೆಯಯ್ಯಾ

 

ಹಿರಿಯ ಸಾಹಿತಿವರ್ಯರ ಕೋಟು

ಸಾಹಿತ್ಯ ಸಮ್ಮೇಳನದಲ್ಲವರು ಧರಿಸಿದ್ದ ಅತ್ಯಮೂಲ್ಯ ಕೋಟು ಇದಯ್ಯಾ

 

ಬಂಡಾಯಕ್ಕೆ ಹೆಸರಾದವರ ಕೋಟು

ಕಂಡ ಕಂಡವರನ್ನೆಲ್ಲಾ ಬಂಡಾಯವೇಳಲು ಪ್ರೇರೇಪಿಸುವ ಕೋಟಿದಯ್ಯಾ

 

ನವ್ಯ ನವೀನ ಎಂದೇ ಹೆಸರಾದ ಕೋಟು

ಹೋದ ಹೋದಲ್ಲೆಲ್ಲಾ ಹೊಸ ಛಾಪುಗಳ ಮೂಡಿಸಿ ಬಂದಿಹ ಕೋಟಿದಯ್ಯಾ

 

ಗೊಂದಲಮಯವಾಗಿಹ ವಿಚಿತ್ರ ಕೋಟು

ಎತ್ತ ಕೈ, ಎತ್ತ ಕಿಸೆ, ಕತ್ತು ಎಂದರಿಯಲಾಗದ ವಿಚಿತ್ರವಾಗಿಹ ಕೋಟಿದಯ್ಯಾ

 

ರಾಜಕೀಯ ಮುಖಂಡರದೀ ಕೋಟು

ಚುನಾವಣೆಯ ದಿನಗಳಲಿ ಭರವಸೆ ತುಂಬುತ್ತಿದ್ದ ಮಹಾನ್ ಕೋಟಿದಯ್ಯಾ

 

ಎಡ ಪಂಥೀಯ ನಾಯಕರದೀ ಕೋಟು

ಅದ್ಯಾವುದೋ ಚಳುವಳಿಯ ಭಾಗವಾಗಿ ಧೂಳು ತುಂಬಿಸಿದ ಕೋಟಿದಯ್ಯಾ

 

ಇಲ್ಲ ಇಲ್ಲ ನನ್ನ ಸ್ವಂತದ್ದು ಅಲ್ಲವೀ ಕೋಟು

ಅಲ್ಲಿಲ್ಲಿಂದೆತ್ತಿ-ಬಳಸದೇ-ಕೆಡಿಸದೇ ಮುಂದೆ ಸಾಗಹಾಕುವ ಕೋಟುಗಳಿವಯ್ಯಾ

 

ನನ್ನಲ್ಲದೇನಿದ್ದರೂ ಅವರಿವರ ಕೋಟು

ಬೆಲೆ ಅರಿಯದೇ, ಬಲ ತಿಳಿಯದೇ, ಮುಂದಕ್ಕೆ ರವಾನಿಸುವ ಕೋಟುಗಳಯ್ಯಾ

 

ಬನ್ನಿ ಕೋಟು ಕೊಳ್ಳಿರಯ್ಯಾ ಕೋಟು

ಅಂಥಿಂಥ ಕೋಟುಗಳಲ್ಲ ಇಲ್ಲಿ ಅದು ಎಂಥೆಂಥವರ ಕೋಟುಗಳಿವೆಯಯ್ಯಾ

********************************

Click here if you want to read this post in English Fonts

 


ಇದುವೇ ಜೀವನ!

24 ಜನ 11

 

“ಇಂದವನ ಜನ್ಮ ದಿನ
ಅವನ ನೆನಪಿನಲೆಯಲ್ಲಿ ಸಾಗಿದೆ ಈ ಮನ
ಮರೆತೆನೆಂದರೂ ಮರೆಯಲಾಗದು ಆತನೊಂದಿಗೆ ಕಳೆದ ದಿನ”

*****

“ಸಖೀ, ಇದುವೇ ಜೀವನ
ಆಗುವುದಿಲ್ಲ ಏನೂ ಎಣಿಸಿದಂತೆ ಈ ಮನ
ಎಲ್ಲೆಂದರಲ್ಲಿ ಯಾರ್ಯಾರೊಂದಿಗೋ ಹೆಣೆದುಕೊಳ್ಳುವುದು ಮನ

ಅಂದಿಗೆ ಅದುವೇ ಸತ್ಯ
ಇಂದು ನಿಜದಿ ಆಗಿಲ್ಲವಾದರೂ ಅದು ಮಿಥ್ಯ
ಅದಕ್ಕೇ ಅಂಟಿಕೊಂಡಿರಲಾಗದು ಜೀವನ ಸಾಗುತಿರಬೇಕು ನಿತ್ಯ

ಜೀವನದ ಪುಟಗಳಲಿ
ಅಧ್ಯಾಯಗಳ ನಂತರ ಅಧ್ಯಾಯಗಳು ಇರಲಿ
ಒಂದಕ್ಕೊಂದು ಸಂಬಂಧಿಸದಿದ್ದರೂ ಜೀವನದಲಿ ದಾಖಲೆಗಳಿರಲಿ

ಒಂದು ಅಧ್ಯಾಯದ
ಪ್ರಭಾವ ಇನ್ನೊಂದರ ಮೇಲಿರದೇ ಆ ಭಾಗದ
ಪರಿಧಿಯಲೇ ಅರ್ಥ ನೀಡಿ,  ಅಳಿಸಲಾಗದ ಭಾಗವಾಗಿರಲಿ ಸದಾ

ನೆನಪುಗಳು ನೀರಿನಂತೆ
ಬೆಳೆಯುತಿರುವ ಈ ಜೀವನಕೆ ಸಹಕಾರಿಯಂತೆ
ನೆನಪುಗಳಿಂದಲೇ ಶಕ್ತಿ ತುಂಬಿಸಿಕೊಂಡು ಸದಾ ಸಾಗುತಿರಬೇಕಂತೆ

ಆತನಿಂದೆಲ್ಲಾದರೂ ಇರಲಿ
ಆತನ ಜೀವನದಲೂ ಸದಾಕಾಲ ನೆಮ್ಮದಿ ಇರಲಿ
ಆತನ ಜೀವನಕ್ಕೆ ಶಕ್ತಿ ತುಂಬುತ್ತಾ ನಿನ್ನ ನೆನಪುಗಳು ಅಲ್ಲಿ ಜೊತೆಗಿರಲಿ”
***********************


ನೀನು ಇಲ್ಲದೇ ಇದ್ದರೆ…!

19 ಜನ 11

ನನಗೆ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ನಿನ್ನ ನೋಡಿದಾಗ ಅನಿಸುತ್ತೆ ನನಗೆ
ಸಂತಸದ ದಿನಗಳು ಮರಳಿರುವ ಹಾಗೆ
ಏನೂ ಕಾಣದೇ ನಾ ಕತ್ತಲಲ್ಲೇ ಇರ್ತಿದ್ದೆ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ನನಗೆ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ನಿನ್ನ ಆಸರೆ ನನಗೆ ದೊರಕದೇ ಇದ್ದಿದ್ರೆ
ದಡ ಸೇರದೇ ನಡುವಲ್ಲೇ ನಾ ಉಳೀತಿದ್ದೆ
ದಡದಲ್ಲೂ ತೆರೆಗಳು ಮುಳುಗಿಸುತ್ತಾ ಇದ್ದವು
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ನನಗೆ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ಏನ ಹೇಳಲಿ ನೀನು ನನಗೆ ಯಾರು ಎಂದು
ನನ್ನೀ ಜೀವನಕೆ ಆಸರೆ ನೀನಿಂದು
ಅಶಾಗೋಪುರ ನಾ ಕಟ್ತಾನೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ನನಗೆ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ನಿನ್ನೆಲ್ಲಾ ನೋವ ನಾ ಸಹಿಸಿಕೊಳ್ಳಬಲ್ಲೆ
ಯಾರಲ್ಲೂ ನಾನ್ಯಾವ ದೂರೂ ನೀಡಲೊಲ್ಲೆ
ಜಗ ನೋಡಿ ನಕ್ಕರೆ, ಖುಷಿಯೇ ಅಳುತ್ತಿತ್ತು
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ನನಗೆ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ಇಂದ್ಯಾಕೆ ಮನದಿಂದ ಈ ಮಾತು ಬಂತು
ಮಿಲನಕ್ಕಿಂತ ನಿನ್ನ ವಿರಹವೇ ಹೆಚ್ಚಾಯ್ತು
ಕಣ್ಣೀರ ಹನಿಗಳೂ ಮುತ್ತಾಗೋದಿಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

ನನಗೆ ಬದುಕುವಾಸೇನೇ ಇರ್ತಿರ್ಲೇ ಇಲ್ಲ
ನೀನಿಲ್ದೇ ಇದ್ರೆ, ನೀನಿಲ್ದೇ ಇದ್ರೆ

“ಅಗರ್ ತುಮ್ ನ ಹೋತೇ” ಹಿಂದೀ ಚಿತ್ರದ ಗೀತೆಯ ಭಾವಾನುವಾದದ ಪ್ರಯತ್ನ ಇದು.

Lyrics
Kishore Kumar Version:
Hamein Aur Jeene Ki Chaahat Na Hoti -2
Agar Tum Na Hote, Agar Tum Na Hote

(Tumhen Dekhke To Lagta Hai Aise
Bahaaron Ka Mausam Aaya Ho Jaise) -2
Dikhaayi Na Deti Andheron Mein Jyoti
Agar Tum Na Hote, Agar Tum Na Hote
Hamein Aur Jeene Ki..

(Hamein Jo Tumhaara Sahaara Na Miltaa
Bhanvar Mein Hi Rehte Kinaara Na Miltaa) -2
Kinaare Pe Bhi To Leher Aa Duboti
Agar Tum Na Hote, Agar Tum Na Hote
Hamein Aur Jeene Ki..

Lata Mangeshkar Version:
Hamein Aur Jeene Ki Chaahat Na Hoti -2
Agar Tum Na Hote, Agar Tum Na Hote

(Tumhen Kyaa Bataaoon Ke Tum Mere Kyaa Ho
Meri Zindagi Ka Tum Hi Aasra Ho) -2
Main Aasha Ki Ladiyaan, Na Rah Rah Piroti
Agar Tum Na Hote, Agar Tum Na Hote
Hamein Aur Jeene Ki..

(Har Ik Gham Tumhaara Sahenge Khushi Se
Karenge Na Shikwaa Kabhi Bhi Kisi Se) -2
Jahaan Mujh Pe Hastaa, Khushi Mujhpe Roti
Agar Tum Na Hote, Agar Tum Na Hote
Hamein Aur Jeene Ki..

Sad Version (Kishore Kumar):
Na Jaane Kyoon Dil Se Ye Aawaz Aayi
Milan Se Hai Badhke Tumhaari Judaai
In Aankhon Ke Aansoo, Na Kehlaate Moti.
Agar Tum Na Hote, Agar Tum Na Hote -2


ಮಕರಜ್ಯೋತಿ ಮಾನವ ನಿರ್ಮಿತ ಅನ್ನುವುದನ್ನು ಒಪ್ಪುವುದಿಲ್ಲವೇ “ವಾರ್ತಾಭಾರತಿ” ದಿನಪತ್ರಿಕೆಯ ಸಂಪಾದಕರು?

18 ಜನ 11

ಮಕರ ಜ್ಯೋತಿ ಮಾನವ ನಿರ್ಮಿತ ಎನ್ನುವುದನ್ನು ಕೇರಳ ಸರಕಾರ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ಒಪ್ಪಿಕೊಂಡು ಎರಡು ವರಷಗಳ ಮೇಲಾಯ್ತು.

ಆದರೂ ವಾರ್ತಾಭಾರತಿ ದಿನಪತ್ರಿಕೆಯ ಸಂಪಾದಕರು ಅದನ್ನು ನಂಬುತ್ತಿಲ್ಲ ಅಂತ ಅನಿಸುತ್ತಿದೆ.

ಇದು ಆ ದಿನಪತ್ರಿಕೆಯಲ್ಲಿನ ನಿನ್ನೆಯ (ಸೋಮವಾರ, ೧೭ ಜನವರಿ ೨೦೧೧ರ) ಸಂಪಾದಕೀಯ.

ಆ ದಿನಗಳಲ್ಲಿ ಪ್ರಕಟವಾದ ಸುದ್ದಿಗಳ ಕೊಂಡಿಗಳು ಇಲ್ಲಿವೆ:

http://mangaloreantimes.com/news/viewers/display_news.php?news_id=513

http://www.dnaindia.com/india/report_sabarimala-authorities-say-divine-light-is-man-made_1167382


ಮಾತಾಡುವಾಸೆ ಇಲ್ಲವೆಂದೇನಲ್ಲ!

14 ಜನ 11

 

“ದಿನ ಪ್ರತಿದಿನ ಮಾತನಾಡಲು
ನಿಜದಿ ವಿಷಯಗಳು ಇರಬೇಕಲ್ಲಾ?”

*

“ವಿಷಯ ಏನೂ ಇಲ್ಲದಿದ್ದರೇನು
ಮಾತಾಡುವಾಸೆ ಇಲ್ಲವೆಂದೇನಲ್ಲ”

*

“ನಿನ್ನ ದನಿ ಕಿವಿಗಳಿಗೆ ಬಿದ್ದರೆ
ಅಂದಿನ ದಿನ ಸಾರ್ಥಕವಾಗುವುದಲ್ಲ”

*

“ನಿನಗಾಗಿ ಅಲ್ಲ ನಿಜವಾಗಿಯೂ
ನನಗಾಗಿಯೇ ಕರೆಮಾಡುವೆ ಸುಳ್ಳಲ್ಲ”

*

“ಸರಿ ದಿನಕ್ಕೊಂದು ಕರೆಮಾಡು
ನಿನ್ನಾಣೆಗೂ ಬೇರೇನೂ ಬೇಡುವುದಿಲ್ಲ”

*

“ಆಣೆಯ, ಬೇಡುವ ಮಾತೇಕೆ
ನನಗೂ ಇದೆ ಆಸೆ ನಾ ಮುಚ್ಚಿಡುವುದಿಲ್ಲ”

*

“ನಿನ್ನ ಮನದೊಲವ ಅರಿತಿರುವೆ
ಸರಿ ಬಿಡು ಇಂದಿನ ಮಾತು ಮುಗಿಯಿತಲ್ಲಾ?”

*

“ನಾಳೆ ಹೊಸತೊಂದು ರಾಗದಲಿ
ಹೊಸ ನೆವದೊಂದಿಗೆ ಮಾತಾಡಿದರಾಯ್ತಲ್ಲಾ?”
****************


ವಿವೇಕಾನಂದರೇ ನೀಡಲಿ ಸ್ಪೂರ್ತಿ ಈ ಮನಕೆ!

12 ಜನ 11

ಇಂದು ನಿರ್ಧರಿಸಿದ್ದೆ ನಾನು
ಈ ಏಕತಾನತೆಯಿಂದ ಬಿಡುಗಡೆ ಹೊಂದಬೇಕೆಂದು,
ಆಸುಮನದ ಮಾತುಗಳಲ್ಲಿನ
ಏಕತಾನತೆಯನ್ನೂ ಆದಷ್ಟು ಕಿತ್ತೊಗೆಯಬೇಕೆಂದು;

ಮುಂಜಾನೆ ಐದಕ್ಕೆ ಬದಲಾಗಿ
ಏಳರವರೆಗೆ ಮಲಗಿದ್ದೆ ಬದಲಾವಣೆ ಇರಲೆಂದು,
ಮುಂಜಾನೆಯ ನಡಿಗೆಗೆ ರಜಾ
ಘೋಷಿಸಿ ತಯಾರಾದೆ ನಾನು ಹಲ್ಲುಜ್ಜಿ ಮಿಂದು;

ರಾಗಿ ದೋಸೆಗೆ ಬದಲಾಗಿ ಅಕ್ಕಿ
ದೋಸೆಯ ತಿಂದೆ ಸಕ್ಕರೆ ಹೆಚ್ಚಾದರೆ ಆಗಲೆಂದು,
ಕಛೇರಿಗೆ ದ್ವಿಚಕ್ರಿಯ ಬದಲಾಗಿ
ಬಸ್ಸಿನಲೇ ಪಯಣಿಸಿದೆ ಭಿನ್ನತೆ ಇರಲಿ ಇಂದೆಂದು;

ಆದರೇನು ಮಾಡಲಿ ಕೆಲಸದಲಿ
ಅದೇ ಏಕತಾನತೆ ಅಲ್ಲೇನೂ ಬದಲಾವಣೆ ಸಾಧ್ಯವಿಲ್ಲ,
ಪತ್ರಿಕೆಗಳ ಸುದ್ದಿಗಳಲೂ ಅದೇ
ಏಕತಾನತೆ ಅಲ್ಲೂ ಹೊಸಸುದ್ದಿಗಳ ಸುಳಿವಂತೂ ಇಲ್ಲ;

ವಿಧಾನಮಂಡಲದೊಳಗೆ ಅದೇ
ಕಬಡ್ಡಿಯಾಟ, ಈರುಳ್ಳಿ ಬೆಲೆಯಲ್ಲಿ ಎಂದಿನ ಏರುಪೇರು,
ಸ್ವಾಮಿ ವಿವೇಕಾನಂದರ ಜನುಮ
ದಿನದಂದು ಹೊಸತು ಬರಲೆಂದೀ ಮನಕ್ಕೆ ಕೊಟ್ಟೆ ಜೋರು;

ಅದೇಕೋ ನನ್ನೀ ಮನವೂ
ಜಡವಾಗಿದೆ ಬೆಂಗಳೂರಿನ ಸೋಮಾರಿ ವಾತಾವರಣದಂತೆ,
ವಿವೇಕಾನಂದ ಸ್ವಾಮಿಯೇ ನನ್ನ
ಈ ಮನಕೆ ಸ್ಪೂರ್ತಿಯ ನೀಡಿ ಹೊಸ ಹೊಸತನ್ನು ಬರೆಸಲಂತೆ!
**********************


ಇನ್ನೆಷ್ಟು ಕಾಡಲಿದ್ದಾಳೋ ವಿದೇಶೀ ಪೂತನಿ…?

07 ಜನ 11

ನಮ್ಮ ಧ್ವಜವನ್ನು ಕಂಡು ಉರಿಯುವವರೂ ನಿಜದಿ ನಮ್ಮವರೇನ್ರೀ
ಈ ಕಾಶ್ಮೀರ ಭಾರತದೊಳಗಲ್ಲದೇ ಪರದೇಶದೊಳಗೆ ಇದೆಯೇನ್ರೀ

ನಮ್ಮ ದೇಶದ ವ್ಯವಸ್ಥೆ ಇಂದು ಯಾವ ಕೀಳು ಮಟ್ಟಕ್ಕಿಳಿದಿದೆ ನೋಡಿ
ರಾಷ್ಟ್ರಧ್ವಜವನ್ನೂ ವಿರೋಧಿಸುವವರ ಸಂಖ್ಯೆ ಇಲ್ಲಿ ಅದೆಷ್ಟಿದೆ ನೋಡಿ

ಗಣತಂತ್ರ ದಿವಸದಂದು ನಮ್ಮ ನಾಡೊಳಗೆ ರಾಷ್ಟ್ರಧ್ವಜ ಹಾರಿಸಬೇಡಿ
ಧ್ವಜವನ್ನು ಕಂಡು ಉರಿಯುವ ಬಂಧುಗಳನು ಸುಮ್ಮನೇ ಕೆಣಕಬೇಡಿ

ಎಲ್ಲರನೂ ಖುಷಿ ಪಡಿಸುತ್ತಾ ಖುರ್ಚಿಗೇ ಅಂಟಿಕೊಂಡು ಇದ್ದರಾಯ್ತು
ಪ್ರಗತಿ ಹೇಗಿರಲೇಕೆ ಭ್ರಷ್ಟಾಚಾರ ಮಾತ್ರ ತಾಂಡವವಾಡಿದರಾಯ್ತು

ಆಟ ಆಡಿಸಲು ಕೂತವರೇ ಮಾಡಿದ ನಷ್ಟ ಲಕ್ಷಾಂತರ ಕೋಟಿಯಂತೆ
ಆಟ ಮುಗಿದು ತಿಂಗಳುಗಳಾದ ಮೇಲೆ ಈಗ ತನಿಖೆಯ ನಾಟಕವಂತೆ

ಅರವತ್ತು ಕೋಟಿಯ ಬೋಫೋರ್ಸ್ ತನಿಖೆಗೆ ಖರ್ಚು ಶತಕೋಟಿ
ಅಷ್ಟಾಗಿಯೂ ಶಿಕ್ಷಿಸದೇ ಅಲ್ಲೆಲ್ಲರಿಗೂ ಅಪರಾಧಿಯಲ್ಲವೆಂಬ ಚೀಟಿ

ತನ್ನವರನ್ನೆಲ್ಲಾ ಪಾರು ಮಾಡಿದ್ದಾಳೆ ಹಗರಣಗಳ ತನಿಖೆಯಿಂದ
ಈ ನಾಡಿನ ಸರಕಾರ ನಡೆಸುತ್ತಾಳೆ ಪರೋಕ್ಷ ನಿಯಂತ್ರಣದಿಂದ

ಇನ್ನೆಷ್ಟು ವರುಷ ನಮ್ಮನ್ನೆಲ್ಲಾ ಕಾಡಲಿದ್ದಾಳೋ ವಿದೇಶೀ ಪೂತನಿ
ಬಾರದಿಹನ್ಯಾಕಿನ್ನೂ ಕೃಷ್ಣ, ಕೇಳಿಸದೇ ಆತನಿಗೆ ನಾಡ ಜನದನಿ?

**********************


ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ …!

06 ಜನ 11

ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ
ನಿನಗಲ್ಲಿ ಸುಖೀ ಸಂಸಾರವೇ ಸಿಗಲಿ,
ತವರಿನ ನೆನಪೆಂದೂ ಕಾಡದಿರುವಂತೆ
ಸದಾ ಪ್ರೀತಿಯ ವರ್ಷಾಧಾರೆಯೇ ಇರಲಿ;

ಮುದ್ದು ಮುದ್ದಾದ ಹೂವಿನಂಥ ನಿನ್ನನ್ನು
ಬಲು ಜೋಪಾನವಾಗಿ ಬೆಳೆಸಿದ್ದೆ ನಾನು,
ಈ ಬಾಹುಗಳನ್ನೇ ತೊಟ್ಟಿಲಾಗಿಸಿಕೊಂಡು
ಹಲವೊಮ್ಮೆ ತೂಗಿಸಿ ಮಲಗಿಸಿದ್ದೆ ನಾನು,
ನನ್ನ ಹೂದೋಟದ ಕೋಮಲ ಲತೆಯೇ
ನಿನ್ನ ಬಾಳಲ್ಲಿ ಸದಾ ವಸಂತ ಚೈತ್ರವಿರಲಿ;

|| ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ
ನಿನಗಲ್ಲಿ ಸುಖೀ ಸಂಸಾರವೇ ಸಿಗಲಿ||

ನೀನು ಹೋಗಿ ಸೇರುತಿರುವಾ ಮನೆಯಲ್ಲಿ
ಕಂದಾ, ನಿನ್ನ ಮಾತಿಗೆಂದೂ ಬೆಲೆ ಇರಲಿ,
ನಿನ್ನಾ ತುಟಿಗಳಲ್ಲಿ ನಗುವಿನ ಹೊಂಬಿಸಿಲು
ನಿನ್ನ ಹಣೆಯಲಿ ಖುಷಿಯ ಸಿಂಧೂರವಿರಲಿ,
ಎಂದಿಗೂ ಕಳೆಗುಂದದ ಸುಂದರ ರೂಪ
ಶೃಂಗಾರದ ಸೌಭಾಗ್ಯವು ನಿನ್ನದಾಗಿರಲಿ,

|| ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ
ನಿನಗಲ್ಲಿ ಸುಖೀ ಸಂಸಾರವೇ ಸಿಗಲಿ||

ನಿನ್ನ ಜೀವನದ ಪ್ರತಿಯೊಂದೂ ಕ್ಷಣವೂ
ಆರಾಮದ ತಂಪು ನೆರಳಿನಲ್ಲೇ ಕಳೆಯಲಿ,
ನನ್ನ ಮುದ್ದಿನ ಮರಿಯೇ ನಿನ್ನ ಕೋಮಲ
ಪಾದಗಳಿಗೆ ಮುಳ್ಳುಗಳೆಂದೂ ಚುಚ್ಚದಿರಲಿ,
ನೀನು ಹಾದು ಹೋಗುವ ಬಾಗಿಲುಗಳಿಂದ
ಕಷ್ಟಕಾರ್ಪಣ್ಯಗಳೆಲ್ಲಾ ಸದಾ ದೂರವಿರಲಿ!

|| ಈ ಅಪ್ಪನ ಹಾರೈಕೆಗಳಿಲ್ಲಿವೆ ಮಗಳೇ
ನಿನಗಲ್ಲಿ ಸುಖೀ ಸಂಸಾರವೇ ಸಿಗಲಿ||

******************

 


Hindi Song: Baabul Kee Duwaaye Letee Ja
Movie or Album: Neel Kamal
Singer(s): Mohammad Rafi
Music Director(s): Ravi
Lyricist(s): Sahir Ludhiyanvi

Hindi Lyrics

baabul kee duwaaye letee ja, ja tujhako sukhee sansaar mile
mayake kee kabhee naa yaad aaye, sasuraal me itana pyaar mile
naajo se tujhe paala maine, kaliyo kee tarah phulo kee tarah
bachapan me julaaya hain tujhako, baaho ne meree julo kee tarah
mere baag kee ai naajuk daalee, tuje harpal nayee bahaar mile

jis ghar se bandhe hain bhaag tere, uss ghar me sada teraa raaj rahe
haothon pe hansee kee dhup khile, maathe pe khushee kaa taaj rahe
kabhee jisakee jyot naa ho fikee, tuje aisa rup singaar mile

bite tere jivan kee ghadiya, aaram kee thhandee chhanv me
kaanta bhee naa chubhane paaye kabhee, meree ladalee tere paanv me
uss dwaar se bhee dukh dur rahe, jis dwaar se teraa dwaar mile


ದೇವರ ಹುಂಡಿಗಳನೆಲ್ಲಾ ಬಡವರಲಿ ಹಂಚಿಬಿಡಿ…!

04 ಜನ 11

 

 

ದೇವರುಗಳಿಗೆ ಭಕ್ತ ಜನರು ಸಲ್ಲಿಸುವ ಪೂಜೆ ಪುನಸ್ಕಾರಗಳಿಗೆ,
ಪೂಜಾರಿಗಳೇ ದರ ನಿಗದಿಮಾಡಿ ಕಿತ್ತುಕೊಳ್ಳುತ್ತಿಹರಲ್ಲಾ ಇಲ್ಲಿ;

ತಮ್ಮ ಪ್ರಿಯ ದೇವರುಗಳು ಇನ್ನೂ ಬಹು ಪ್ರಿಯರಾಗುತಿಹರೆಂಬ,
ಮೂಢನಂಬಿಕೆಯಲ್ಲಿಯೇ ಭಕ್ತ ಜನರು ಇನ್ನೂ ಇದ್ದಿಹರಲ್ಲಾ ಇಲ್ಲಿ;

ಮಧ್ಯವರ್ತಿಗಳ ಜೋಳಿಗೆಗಳ ನಾನು ತುಂಬಿಸಿದರೆ ಆ ದೇವರು,
ಒಲಿಯುವರು ಎಂಬ ಭ್ರಮೆ ನನ್ನಲ್ಲಿ ಎಳ್ಳಷ್ಟೂ ಇಲ್ಲವೇ ಇಲ್ಲ ನಿಜದಿ;

ನನ್ನ ನಡೆ ನುಡಿಯ ಸ್ವತಃ ತಾನೇ ಅರಿಯರಾದೊಡೆ ಆ ದೇವರು,
ನನ್ನನ್ನು ಕಾಪಾಡುತಿಹರೆಂಬ ನಂಬಿಕೆ ಹೇಗಿರಬಹುದು ಈ ಮನದಿ;

ನಮ್ಮ ಈ ನಾಡಿನ ಸಾವಿರಾರು ದೇವಾಲಯಗಳ ಹುಂಡಿಗಳಲಿ,
ಅದೆಷ್ಟೋ ಸಂಪತ್ತು ಕೊಳೆತುಬಿದ್ದಿಹುದಲ್ಲಾ ಈ ಪರಿ ವ್ಯರ್ಥವಾಗಿ;

ಆ ಹುಂಡಿಗಳ ಬಗೆದು, ಬಡವರ ಗುಂಡಿಗೆಗಳಿಗೆ ತಂಪನ್ನೀಯುವ,
ಕಾರ್ಯ ನಡೆಸಿದರೆ ಯಾರೂ ಉಳಿಯರೀ ನಾಡಿನಲಿ ಬಡವರಾಗಿ!
***************************


ನನಗೇನು ಬೇಕು ಎಂಬುದ ನಾ ಅರಿತರೆ…!

22 ಡಿಸೆ 10

ನಿನ್ನ – ನನ್ನ ಭೇಟಿಗೆ ತೊಡಕುಗಳು ಕಂಡು ಬಂದಾಗ
ನನ್ನ ಈ ಮನ ನೊಂದು ಮುದುಡಿ ಹೋಗಿದ್ದೂ ಇದೆ

ಛೇ! ಇದೆಂಥಾ ಜೀವನವಪ್ಪಾ! ಎಂದು ಜಿಗುಪ್ಸೆ ಮೂಡಿ
ನಾ ಒಳಗೊಳಗೇ ಮರುಗುತ್ತಾ ಕೂತುಬಿಟ್ಟಿದ್ದೂ ಇದೆ

ಆದರೂ ನನ್ನೊಳಗಿನ ನಿನ್ನ ನೆನಪು ಮರೆಯಾಗಿರಲಿಲ್ಲ
ನಿನ್ನನ್ನು ನೋಡುವ ಹಂಬಲ ಕಡಿಮೆಯಾದದ್ದೇ ಇಲ್ಲ

ತೊಡಕುಗಳ ಪರಿಹಾರಕ್ಕೆ ಹೊಸ ಹೊಸ ಹಾದಿಗಳ
ಕಂಡುಕೊಳ್ಳುವ ಪ್ರಯತ್ನವನ್ನು ನಾ ನಿಲ್ಲಿಸಿರಲೇ ಇಲ್ಲ

ನಿನ್ನ ಮುಖ ದರುಶನವಾಗದ ದಿನಗಳು ನನಗೆ ರೂಢಿ
ಆಗುತ್ತಿದೆ ಎಂದೆನಿಸಿದಾಗ ಸಿಡಿದೆದ್ದೆ ನಾ ಸೈನಿಕನಂತೆ

ಏನೇ ಗಂಡಾಂತರ ಬಂದರೂ ಎದುರಿಸೋಣ ಎಂದು
ಉಪಾಯವ ಕಂಡು ಹಿಡಿದು ನಕ್ಕೆ ವಿಜಯಶಾಲಿಯಂತೆ

ಅವರಿವರ ಅವಲಂಬಿಸಿ ಕೂತರೆ ನನ್ನ ಸಮಸ್ಯೆಗೆ ನಾ
ಪರಿಹಾರ ಕಂಡುಕೊಳ್ಳಲಾಗದೆಂಬುದರ ಅರಿವಾಯ್ತು

ನನಗೇನು ಬೇಕೆಂಬುದ ಅರಿತು ನಾ ಯತ್ನವ ಮಾಡಿ
ಮುನ್ನುಗ್ಗಿದರಷ್ಟೇ ನನ್ನೀ ಜೀವನವೂ ಸಫಲ ಆದೀತು
*****************************