ಹಾದಿ!

10 ಸೆಪ್ಟೆಂ 12

ಸಖೀ, 

ನಿನಗಿಷ್ಟವಾದ
ಹಾದಿಯನ್ನು
ಆರಿಸಿಕೊಳ್ಳಲು
ನೀನು ಸಮರ್ಥೆ
ಎಂಬರಿವು
ನನಗಿಹುದು;

ನೀನಾರಿಸಿಕೊಂಡ
ಹಾದಿ ನಿನಗೆ ನೆಮ್ಮದಿ
ನೀಡಬಹುದೆಂಬ ಖಾತ್ರಿ
ನಿನಗಿಹುದಾದರೆ,
ಆತ್ಮ ವಿಶ್ವಾಸದ ಕೊರತೆ
ನಿನ್ನಲ್ಲಿ ಇಲ್ಲವೆಂದಾದರೆ,
ಆ ಹಾದಿಯಲ್ಲೇ  ನೀನು
ಮುಂದುವರಿಯಬಹುದು;

ಒಂದು ವೇಳೆ
ನಿನ್ನ ಮನದಲ್ಲಿ
ಕಿಂಚಿತ್ತಾದರೂ
ಅಳುಕಿದೆಯೆಂದಾದರೆ,
ಆ ಅಳುಕು
ಮಾಯವಾಗುವ
ತನಕವಾದರೂ,
ನಾನು ತೋರಿದ
ಹಾದಿಯಲ್ಲೇ ನೀನು
ನಡೆಯುತ್ತಿರಬಹುದು!


ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!

01 ಸೆಪ್ಟೆಂ 11

ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ
ಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?
ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿ
ಮುಂದೆ ಬಂದು ಕೈಯ ಯಾರೂ ನೀಡದಿರೆ ಏನ ಮಾಡುವ?

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಮುಳುಗುವವಗೆ ಹುಲ್ಲು ಕಡ್ಡೀ ಆಸರೆಯೇ ಬಲು ದೊಡ್ಡದು
ಮನದ ಭಯವ ಮರೆಸುವುದಕೆ ಸಣ್ಣ ಸನ್ನೆಯೇ ದೊಡ್ಡದು
ಅಷ್ಟರಲ್ಲೇ ಮುಗಿಲಿನಿಂದ ಸಿಡಿಲು ಬಡಿದು ಬಿದ್ದರೆ
ಮುಳುಗುವವನು ಮುಳುಗದೇ ತಾ ಬೇರೆ ಏನ ಮಾಡುವ||

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಪ್ರೀತಿಸುವುದನೇ ತಪ್ಪೆನ್ನುವುದಾದ್ರೆ ತಪ್ಪು ನನ್ನಿಂದಾಗಿದೆ
ಕ್ಷಮೆಯೇ ನೀಡಲು ಆಗದಂತ ಅಪರಾಧ ಇದಾಗಿದೆ
ನಿರ್ದಯಿ ಈ ಜನತೆಯೂ, ನನ್ನ ಸಖಿಯೂ ನಿರ್ದಯೀ
ನನ್ನವರೆಂದು ಹೇಗೆ ಅನ್ನಲಿ, ಹೇಗೆ ಧೈರ್ಯ ತಾಳಲಿ||

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಇದು ಇನ್ನೊಂದು ಭಾವಾನುವಾದದ ಯತ್ನ

ಮೂಲ ಗೀತೆ:
ಚಿತ್ರ : ಶರಾಬಿ
ಗಾಯಕರು: ಕಿಶೋರ್ ಕುಮಾರ್
ಸಂಗೀತ: ಬಪ್ಪಿ ಲಹರಿ

ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್
ಜಬ್ ಕದಮ್ ಹೀ ಸಾಥ್ ನ ದೇ ತೋ ಮುಸಾಫಿರ್ ಕ್ಯಾ ಕರೇ
ಯೂಂ ತೋ ಹೈ ಹಮ್ ದರ್ದ್ ಭೀ ಔರ್ ಹಮ್ ಸಫರ್ ಭೀ ಹೈ ಮೆರಾ
ಬಡ್ ಕೇ ಕೋಯೀ ಹಾಥ್ ನಾ ದೇ ದಿಲ್ ಭಲಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||

ಡೂಭ್‍ನೇ ವಾಲೇ ಕೋ ತಿನ್ ಕೇ ಕಾ ಸಹಾರಾ ಹೀ ಬಹುತ್
ದಿಲ್ ಬಹಲ್ ಜಾಯೇ ಫಖತ್ ಇತ್ನಾ ಇಶಾರಾ ಹೀ ಬಹುತ್
ಇತ್ನೇ ಪರ್ ಭೀ ಆಸ್ಮಾನ್ ವಾಲಾ ಗಿರಾ ದೇ ಬಿಜಲಿಯಾಂ
ಕೋಯಿ ಬತ್ ಲಾದೇ ಝರಾ ಯೆಹ್ ಡೂಬ್‍ತಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||

ಪ್ಯಾರ್ ಕರ‍್ನಾ ಝುರ್ಮ್ ಹೈ ತೋ ಝುರ್ಮ್ ಹಮ್‍ ಸೇ ಹೋಗಯಾ
ಕಾಬಿಲ್-ಎ-ಮಾಫೀ ಹುವಾ ಕರ‍್ತೇ ನಹೀಂ ಐಸೇ ಗುನಾಹ್
ಸಂಗ್ ದಿಲ್ ಹೈ ಯೆಹ್ ಜಹಾಂ ಔರ್ ಸಂಗ್ ದಿಲ್ ಮೇರಾ ಸನಮ್
ಕ್ಯಾ ಕರೇ ಜೋಶ್-ಎ-ಜುನೂನ್ ಔರ್ ಹೌಸ್‍ಲಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||


ಹಾದಿ ಎಂತಿದ್ದರೇನು?

19 ಆಗಸ್ಟ್ 10

ಸಖೀ,
ನಮ್ಮ
ಹಾದಿ
ಸುಗಮವಾಗಿ
ಕಂಡುಬಂದಲ್ಲಿ,
ಅದು
ನಮ್ಮನ್ನು
ಎಲ್ಲಿಗೆ
ಕೊಂಡೊಯ್ಯುತ್ತದೆ
ಎಂದು
ಕೇಳಿ
ನೋಡೋಣ;

ಆದರೆ,
ನಮ್ಮ
ಗುರಿಯೇ
ಸುಂದರವಾಗಿದೆ
ಎಂಬ
ಅರಿವಿದ್ದಲ್ಲಿ,
ನಮ್ಮನ್ನು

ಗುರಿಯೆಡೆಗೆ
ಕೊಂಡೊಯ್ಯುವ
ಹಾದಿ
ಎಂತಿದ್ದರೂ
ಚಿಂತಿಸದಿರೋಣ!
********