ಶುಷ್ಕ ನಗು!

01 ಸೆಪ್ಟೆಂ 12

ಸಖೀ,
ನಾನು ಹೊರಟು 
ನಿಂತಿಹೆನೆಂಬ 
ದು:ಖವನು ನೀನು
ಅದೆಷ್ಟು ಯತ್ನಿಸಿದರೂ 
ಮುಚ್ಚಿಡಲಾಗದು;

ನಿನ್ನೀ ಶುಷ್ಕ ನಗು 
ನಿನ್ನೆಲ್ಲಾ ಶಕ್ತಿಗೂ 
ಮೀರಿ ನಿನ್ನೊಳಗಿನ
ವೇದನೆಯನ್ನು
ಹೊರ ಹೊಮ್ಮಿಸುತಿದೆ,
ನನ್ನಿಂದ ಸಹಿಸಲಾಗದು!

ಚಿತ್ರ ಕೃಪೆ: ಪ್ರಕಾಶ ಹೆಗಡೆ