ಇನ್ನೆಷ್ಟು ಕಾಡಲಿದ್ದಾಳೋ ವಿದೇಶೀ ಪೂತನಿ…?

07 ಜನ 11

ನಮ್ಮ ಧ್ವಜವನ್ನು ಕಂಡು ಉರಿಯುವವರೂ ನಿಜದಿ ನಮ್ಮವರೇನ್ರೀ
ಈ ಕಾಶ್ಮೀರ ಭಾರತದೊಳಗಲ್ಲದೇ ಪರದೇಶದೊಳಗೆ ಇದೆಯೇನ್ರೀ

ನಮ್ಮ ದೇಶದ ವ್ಯವಸ್ಥೆ ಇಂದು ಯಾವ ಕೀಳು ಮಟ್ಟಕ್ಕಿಳಿದಿದೆ ನೋಡಿ
ರಾಷ್ಟ್ರಧ್ವಜವನ್ನೂ ವಿರೋಧಿಸುವವರ ಸಂಖ್ಯೆ ಇಲ್ಲಿ ಅದೆಷ್ಟಿದೆ ನೋಡಿ

ಗಣತಂತ್ರ ದಿವಸದಂದು ನಮ್ಮ ನಾಡೊಳಗೆ ರಾಷ್ಟ್ರಧ್ವಜ ಹಾರಿಸಬೇಡಿ
ಧ್ವಜವನ್ನು ಕಂಡು ಉರಿಯುವ ಬಂಧುಗಳನು ಸುಮ್ಮನೇ ಕೆಣಕಬೇಡಿ

ಎಲ್ಲರನೂ ಖುಷಿ ಪಡಿಸುತ್ತಾ ಖುರ್ಚಿಗೇ ಅಂಟಿಕೊಂಡು ಇದ್ದರಾಯ್ತು
ಪ್ರಗತಿ ಹೇಗಿರಲೇಕೆ ಭ್ರಷ್ಟಾಚಾರ ಮಾತ್ರ ತಾಂಡವವಾಡಿದರಾಯ್ತು

ಆಟ ಆಡಿಸಲು ಕೂತವರೇ ಮಾಡಿದ ನಷ್ಟ ಲಕ್ಷಾಂತರ ಕೋಟಿಯಂತೆ
ಆಟ ಮುಗಿದು ತಿಂಗಳುಗಳಾದ ಮೇಲೆ ಈಗ ತನಿಖೆಯ ನಾಟಕವಂತೆ

ಅರವತ್ತು ಕೋಟಿಯ ಬೋಫೋರ್ಸ್ ತನಿಖೆಗೆ ಖರ್ಚು ಶತಕೋಟಿ
ಅಷ್ಟಾಗಿಯೂ ಶಿಕ್ಷಿಸದೇ ಅಲ್ಲೆಲ್ಲರಿಗೂ ಅಪರಾಧಿಯಲ್ಲವೆಂಬ ಚೀಟಿ

ತನ್ನವರನ್ನೆಲ್ಲಾ ಪಾರು ಮಾಡಿದ್ದಾಳೆ ಹಗರಣಗಳ ತನಿಖೆಯಿಂದ
ಈ ನಾಡಿನ ಸರಕಾರ ನಡೆಸುತ್ತಾಳೆ ಪರೋಕ್ಷ ನಿಯಂತ್ರಣದಿಂದ

ಇನ್ನೆಷ್ಟು ವರುಷ ನಮ್ಮನ್ನೆಲ್ಲಾ ಕಾಡಲಿದ್ದಾಳೋ ವಿದೇಶೀ ಪೂತನಿ
ಬಾರದಿಹನ್ಯಾಕಿನ್ನೂ ಕೃಷ್ಣ, ಕೇಳಿಸದೇ ಆತನಿಗೆ ನಾಡ ಜನದನಿ?

**********************


ನಕಲಿ ಗಾಂಧಿಯ ಮುಂದೆ ಅಡವಿಡುವುದೇಕೆ ತಮ್ಮ ಅಸಲಿ ಹಿರಿತನವ?

12 ಆಕ್ಟೋ 10

 

ಭ್ರಷ್ಟರು ರೂಪಿಸುವ ಎಲ್ಲಾ ಕಾನೂನುಗಳಲ್ಲೂ ನ್ಯೂನತೆಗಳು ನೂರಾರು

ಅವುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡು ಹಬ್ಬುವರು ಅರಾಜಕತೆ

 

ಈ ಎಲ್ಲಾ ಅರಾಜಕತೆಗೆ ಮೂಕಪ್ರೇಕ್ಷಕಿಯಾಗಿ ಸಮ್ಮತಿಯ ಸೂಚಿಸುವ

ಆ ವಿದೇಶಿ ಮಹಿಳೆಗೆ ಮಗನನ್ನು ಪ್ರಧಾನಿಯಾಗಿಸುವುದೇ ಧ್ಯೇಯವಂತೆ

 

ಆ ಮಗನೋ ಬೇಜವಾಬ್ದಾರನಾಗಿ ಮಠದ ಬಸವನಂತೆ ಊರೂರು

ಸುತ್ತಿ ಮೇಯುವುದನೇ ಮಾಡಿಕೊಂಡಂತಿದೆ ತನ್ನ ದಿನನಿತ್ಯದ ಕಾಯಕ

 

ನಾಲ್ಕು ವರುಷಗಳಲ್ಲಿ ನೋಡಿ ಆ ಬಸವನನ್ನೇ ಈ ದೇಶದ ಗದ್ದುಗೆಯಲಿ

ಕೂರಿಸಿ ವಿದೇಶಿ ಮಹಿಳೆ ಹೇಳುತ್ತಾಳೆ ಇನ್ನು ನಿಮಗೆ ಈತನೇ ನಾಯಕ

 

ಆತನ ಮುಂದೆ ಕೈಕಟ್ಟಿಕೊಂಡು ಆದೇಶಕ್ಕಾಗಿ ಕಾಯುತ್ತಾ ನಿಲ್ಲುತ್ತಾರೆ

ನಮ್ಮ ಘಟಾನುಘಟಿ ಸೂಟುಧಾರಿ ದೇಶೀ ನಾಯಕರುಗಳು ತಲೆಬಾಗಿ

 

ತಮ್ಮ ಅನುಭವ ಹಿರಿತನ ಎಲ್ಲವನ್ನೂ ನಮ್ಮ ಅಸಲಿ ದೇಶೀ ನಾಯಕರು

ನಕಲಿ ಗಾಂಧಿಮನೆತನದವರ ಮುಂದೆ ಅಡವಿಡುವುದು ಹೇಳಿ ಯಾಕಾಗಿ?

*********


ಆಟಕ್ಕುಂಟು ಊಟಕ್ಕಿಲ್ಲ ಈ ನಾಡಿನಲ್ಲಿ!

23 ಸೆಪ್ಟೆಂ 10

 

ನಮ್ಮವರಿಗೇ ಹೆದರಿ ಬಾಗಿಲು ಮುಚ್ಚಿಕ್ಕೊಂಡು ಒಳಕೂರುವ ದೇಶ
ಶಾಲಾ ಕಾಲೇಜುಗಳಿಗೆ ರಜೆಸಾರಿ ತೋರಿಸುವರು ತಮ್ಮ ಆವೇಶ

ವಿದೇಶಿಯರು ದಂಡೆತ್ತಿ ಬಂದಿರುವಂತೆ ಆಡುತ್ತಿರುವುದಾದರೂ ಏಕೆ
ನಮ್ಮವರಿಂದ ನಮ್ಮವರಿಗೇ ರಕ್ಷಣೆ ಕೊಡಲಾಗದ ಸರಕಾರಗಳೇಕೆ

ಸಾವಿರ ಸಾವಿರ ಕೋಟಿ ಖರ್ಚು ಮಾಡಿ ಕ್ರೀಡಾಕೂಟ ನಡೆಸುವರು
ರೈತರ ಭೂಮಿ ಕಿತ್ತುಕೊಂಡು ಬದಲಿಗೆ ಪುಡಿಗಾಸನ್ನಷ್ಟೇ ನೀಡುವರು

ಸತ್ತ ಯೋಧರ ಸಂಸಾರಗಳಿಗೆ ಪರಿಹಾರ ಸಹಕಾರ ಭಾಷಣಗಳಲ್ಲೇ
ಚೆಂಡಿನಾಟದಲಿ ಗೆದ್ದವರಿಗೆ ಸನ್ಮಾನ ಬಹುಮಾನ ರಾಜಧಾನಿಯಲ್ಲೇ

ಚಿತ್ರನಟ, ಕ್ರಿಕೆಟ್ ಆಟಗಾರ, ರಾಜಕೀಯ ನಾಯಕನಾದರಷ್ಟೇ ಬಾಳು
ರೈತನಾಗಿ ಹುಟ್ಟಿದವನದು ಜೀವನಪೂರ್ತಿ ಬರೀ ಬೇಗುದಿಯ ಗೋಳು

ಆಟಕ್ಕುಂಟು ಆದರೆ ಊಟಕ್ಕಿಲ್ಲ ಎಂಬಂತಾಗಿದೆ ನಮ್ಮ ಈ ನಾಡಿನಲ್ಲಿ
ಆ ವಿದೇಶೀಯಳ ಕೈಕೆಳಗೆ ಭಾರತೀಯರೆಲ್ಲಾ ಬಂಧಿಗಳು ಈಗ ಇಲ್ಲಿ!

************


ಅಮೇರಿಕಾದ ನೆರಳಿನಡಿ ಸ್ವಾತಂತ್ರ್ಯೋತ್ಸವ ಆಚರಿಸೋಣ!

20 ಆಗಸ್ಟ್ 10

 

ಎಲ್ಲಾ ವಿಷಯಗಳಲ್ಲೂ ಭಾರತ ದೇಶ
ಆಗಿರುವಾಗ ಅಮೇರಿಕಾ ದೇಶದ ಬಂಧಿ

ಅಮೇರಿಕಾದ ಹೆಣ್ಣೊಬ್ಬಳನ್ನು ಕರೆದು ಇಲ್ಲಿ
ಕೊಟ್ಟುಬಿಡುವ ಆಕೆಗೂ ಹೆಸರು ಗಾಂಧಿ

ವಿದೇಶೀ ಹೆಣ್ಣು ಮಕ್ಕಳು ನಮಗೆ ಇಷ್ಟ
ಬೆಳ್ಳಗಿದ್ದರಂತೂ ಎರಡು ಮಾತೇ ಇಲ್ಲ

ಸರಕಾರಕ್ಕೆ ಸಲಹೆ ನೀಡಲು ಆಕೆಯೂ
ಇರಲಿ, ಈಗ ಇಟಲಿಯ ಪ್ರಜೆಯಿದ್ದಾಳಲ್ಲಾ?

ಪದೇ ಪದೇ ಇಲ್ಲಿಂದ ಅಮೇರಿಕ್ಕಾಕ್ಕೆ
ಕರೆಮಾಡಿ ಸಲಹೆ ಕೇಳುವ ಅಗತ್ಯ ಇಲ್ಲ

ಇಲ್ಲೇ ಕೂತು, ಆಕೆಯೇ ನಡೆಸಲಿ ಬಿಡಿ
ಆಡಳಿತ, ನಮಗೇನೂ ಅಭ್ಯಂತರ ಇಲ್ಲ

ಪಾಕಿನ ಬಗ್ಗೆ ನೀತಿ ಏನಾಗಿರಬೇಕೆಂದು
ಅಮೇರಿಕಾನೇ ಹೇಳಬೇಕು ನಮಗೆ

ಭೋಪಾಲ ದುರಂತದ ದಾವೆಯ ಬಗ್ಗೆ
ಅಮೇರಿಕಾ ನೀಡುವುದು ಸಲಹೆ ನಮಗೆ

ಭಯೋತ್ಪಾದನೆ ತಡೆಗಟ್ಟಲು ನಾವು ಕ್ರಮ
ಕೈಗೊಳ್ಳುವುದು ಅಮೇರಿಕಾವನೇ ಕೇಳಿ

ಎಲ್ಲಾ ಅವರ ಇಚ್ಛೆಯಲೇ ನಡೆಯುತ್ತಿರಲು
ನಮ್ಮದೇನು ಉಳಿದಿದೆ ಇನ್ನು ಇಲ್ಲಿ ಹೇಳಿ

ಹಾಗಾಗಿ ಇನ್ನೊಂದು ಬಿಳೀ ತೊಗಲಿನ
ಗಾಂಧಿಯನು ಆಮದು ಮಾಡಿಕೊಳ್ಳೋಣ

ಅಮೇರಿಕಾದ ನೆರಳಿನಡಿ ನಾವು ನಮ್ಮ
ಸ್ವಾತಂತ್ರ್ಯೋತ್ಸವಾಚರಣೆ ಮಾಡೋಣ!!!
***********************


ಈ ದೇಶದ ನಾಯಕರೆಲ್ಲಾ ಭ್ರಷ್ಟರಾಗಿದ್ದರೆ ಆಕೆಗೆ ಆರಾಮ!

06 ಆಗಸ್ಟ್ 10

ನಿಜವಾಗಿಯೂ ಬಹಳ ಕಿಲಾಡಿ ಹೆಂಗ್ಸು ಕಣ್ರೀ ಈ ಪರದೇಶೀ ಗಾಂಧಿ

ನಮ್ಮನ್ನೆಲ್ಲಾ ಮಾಡಿದ್ದಾಳಾಕೆ ಭ್ರಷ್ಟಾಚಾರಿಗಳ ಅಸಹಾಯಕ ಬಂಧಿ


ದೇಶದ ಉದ್ದಗಲಕ್ಕೂ ಭ್ರಷ್ಟ ರಾಜಕಾರಣಿಗಳದ್ದೇ ಈಗ ಕಾರುಬಾರು

ಬಯಲಾಗುತ್ತಲೇ ಇರುತ್ತವೆ ಹೊಸ ಹೊಸ ಕಾಂಡ ದಿನವೂ ಐದಾರು


ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಯಾವುದೂ ಉಳಿದಿಲ್ಲ ಈಗ

ಎಲ್ಲ ಕಡೆಯೂ ಭ್ರಷ್ಟರೇ ತುಂಬಿ ಹಾಳಾಗುತ್ತಿದೆ ಈ ದೇಶದ ಜನಾಂಗ


ರಾಜ್ಯಗಳಲಿ ಭ್ರಷ್ಟರಿದ್ದರೆ ರಾಜ್ಯ ಸರಕಾರಗಳು ಕಾರ್ಯ ನಡೆಸಬೇಕು

ರಾಜ್ಯ ಸರಕಾರಗಳೇ ಭ್ರಷ್ಟರಾದಾಗ ಕೇಂದ್ರ ಮಧ್ಯ ಪ್ರವೇಶಿಸಬೇಕು


ಕೇಂದ್ರ ಸರಕಾರದಲ್ಲೇ ಭ್ರಷ್ಟರಿರಲು ಜನ ಇನ್ನು ಯಾರನ್ನು ಕೇಳಬೇಕು

ಪ್ರಧಾನ ಮಂತ್ರಿಯ ಕೇಳಲೇ, ಛೇ.. ಇಲ್ಲ…  ಆತ ಆಕೆಯನ್ನೇ ಕೇಳಬೇಕು


ಪ್ರಧಾನಿಗಳಿಗೆ ಸಲಹೆ ನೀಡಲು ಮಂತ್ರಿಮಂಡಲ ಇರಬೇಕಾದ್ದು ಸಹಜ

ಆದರೆ ಮಂತ್ರಿ ಮಂಡಲ ಆಕೆಯ ಮಾತನ್ನೇ ಕೇಳಬೇಕು ಇದೂ ನಿಜ


ಎಂದೂ ಇದ್ದಿರದ ಈ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆ ಆಕೆಯೇ

ಹಾಗಾಗಿ ದೇಶದ ಎಲ್ಲಾ ಭ್ರಷ್ಟರಿಗೂ ಸಲುಗೆ ನೀಡಿರುವವರೂ ಆಕೆಯೇ


ದೇಶದ ನಾಯಕರುಗಳೆಲ್ಲಾ ಭ್ರಷ್ಟರಾಗಿ ತಮ್ಮ ತಿಜೋರಿ ತುಂಬುತಿರಲು

ತಮ್ಮನ್ನೇನೂ ಮಾಡಲಾರಳು ಎಂಬ ದೃಢ ನಂಬುಗೆ ಇಹುದು ಎಲ್ಲರಲೂ


ಕೊಟ್ರ‍ೋಚಿ, ಆಂಡರ‍್ಸನ್ ರನ್ನೇ ಬಚಾವಾಗಲು ಬಿಟ್ಟ ಮನೆಯವಳು

ನೀವೇ ಹೇಳಿ, ಇನ್ನು ಇವರನ್ನು ಆಕೆ ಏಕೆ ತರಾಟೆಗೆ ತೆಗೆದುಕೊಂಡಾಳು


ಈ ದೇಶದ ನಾಯಕರೆಲ್ಲಾ ಭ್ರಷ್ಟರಾಗಿ ತಮ್ಮಲ್ಲೇ ಇದ್ದರೆ ಆಕೆಗೂ ಆರಾಮ

ಆಕೆಯ ಸುದ್ದಿಗೆ ಬಾರದೇ ಇದ್ದರೆ, ಆಕೆಯ ಕಾರ್ಯಗಳು ಸದಾ ಸುಕ್ಷೇಮ

**************