ಒಳ್ಳೆಯವರೆನಿಸುತ್ತಾರೆ ನನಗೆ ಆ ಪರದೇಶಿಗಳು!

13 ಆಗಸ್ಟ್ 10

ಪರದೇಶಿಗಳ ದಾಸ್ಯದಿಂದ
ಸಿಕ್ಕಿತೆನಗೆ ಅಂದು ಮುಕ್ತಿ,
ಕೊನೆಗೂ ಸಫಲವಾಗಿತ್ತು
ನನ್ನ ಎಲ್ಲಾ ಮಕ್ಕಳ ಯುಕ್ತಿ;

ನವ ವಧುವಿನಂತೆ ನನ್ನನ್ನು
ಶೃಂಗಾರ ಮಾಡಿದರಂದು,
ನನ್ನ ಮಕ್ಕಳ ಸ್ವಾಧೀನಕ್ಕೆ
ಒಪ್ಪಿಸಿಬಿಟ್ಟರು ನನ್ನನಂದು;

ಮುದುಕನಲ್ಲದಿದ್ದರೂ ಆತನಿದ್ದ
ಯುವಕನಾಗಿರದ ಸ್ಪುರದ್ರೂಪಿ,
ಗದ್ದುಗೆಯೇರಿದ ಮೇಲೆ ಅರಿತೆ
ಆತ ನಿಜವಾಗಿಯೂ ಬಹುರೂಪಿ;

ದಾಸ್ಯದಿಂದ ನನ್ನನ್ನು ಬಿಡಿಸಿದರೂ
ಸೋತಿದ್ದ ವಿದೇಶಿಯಳ ಲಾಸ್ಯಕ್ಕೆ,
ವಿಷಯ ಸಾರ್ವಜನಿಕವಾಗಿ ಆತ
ಆಗಾಗ ಒಳಪಟ್ಟಿದ್ದ ಅಪಹಾಸ್ಯಕ್ಕೆ;

ತನ್ನೆಲ್ಲಾ ಚತುರತೆಯಿಂದ ಆತ
ಮೆರೆದ ತಾನು ಸಾಯೋ ತನಕ,
ಆತನಳಿದ ಮೇಲೆ ಬಂದಿದ್ದ  ಲಾಲ
ಬಹದ್ದೂರ ಆತ ನಿಜದಿ ಜನಸೇವಕ;

ಆದರೆ, ಅಳಿದವನ ಮಗಳ ಪಾಲಿಗೆ
ಆಗಿತ್ತು ಆ ವಿಷಯ ಅಸಹನೀಯ,
ಹೆಸರು ಬಹದ್ದೂರನಾದರೂ ಆತ
ಸಾಯಬೇಕಾದುದು ವಿಶಾದನೀಯ;

ಬಹದ್ದೂರ ಅನುಮಾನಾಸ್ಪದವಾಗಿ
ಸತ್ತಿದ್ದು ದೂರದ ಆ ತಾಷ್ಕೆಂಟಿನಲ್ಲಿ,
ಈ ದೇಶದಲ್ಲಿ ಭ್ರಷ್ಟಾಚಾರದ ಬೀಜ
ಬಿತ್ತನೆಯಾಯ್ತು ಆ ವಿಷಗಳಿಗೆಯಲ್ಲಿ;

ಮತ್ತೇನಿಲ್ಲ,  ಶುರು ಆಯ್ತು ಅಲ್ಲಿಂದ
ಅಧಿಕಾರಕ್ಕೇರಿದವಳ ಸರ್ವಾಧಿಕಾರ,
ಒಳ್ಳೆಯದು ಕಡಿಮೆ, ಆಕೆ ಬೀಜ ಹಾಕಿ
ಹೋದ ಕೆಟ್ಟ ರೂಢಿಗಳೇ ಅಪಾರ;

ವಂಶವನು ಮೆರೆಸುವ ಹೆಬ್ಬಯಕೆಯಲಿ
ಆಕೆ ನನ್ನ ಕ್ಷೇಮಾವೃದ್ಧಿಯ ನಿರ್ಲಕ್ಷಿಸಿ,
ತಾಂಡವನೃತ್ಯವನೇ ಮಾಡಿದಳು ಈ
ನಾಡಲಿ ದುರ್ಗೆಯ ರೂಪವನು ಧರಿಸಿ;

ನ್ಯಾಯಾಂಗವನ್ನು ತನ್ನಡಿಯಾಳಾಗಿಸಿ
ಶಾಸಕಾಂಗವ ಅಮಾತಿನಲ್ಲಿಡಿಸಿದಳು,
ಕಿರಿಮಗನೊಂದಿಗೆ ಸೇರಿ ತನ್ನ ಮಿತಿ
ಮೀರಿ ಅನಾಚರ ನಡೆಸಿ ಮೆರೆದಳು;

ಅಂದಿನಿಂದ ಇಂದಿಗೂ ಮುಕ್ತಿ ಸಿಕ್ಕಿಲ್ಲ
ಭ್ರಷ್ಟಾಚಾರ ಮತ್ತು ಅನಾಚಾರಗಳಿಂದ,
ಏನು ಸಾಧಿಸಿದರೋ ಮಕ್ಕಳು ನನ್ನನ್ನು
ಬಿಡಿಸಿ ಆ ಪರದೇಶಿಯರ ದಾಸ್ಯದಿಂದ;

ಇಂದಿಗೂ ಇಲ್ಲಿ ಅಧಿಕಾರ ವಿದೇಶಿಯದ್ದೇ
ಆಕೆಯ ಸೆರಗಿನ ಹಿಂದೆ ಭ್ರಷ್ಟಾಚಾರಿಗಳು,
ಒಂಟಿಯಾಗಿ  ಅಳುತ್ತೇನೆ ನನಗಿವರಿಗಿಂತ
ಒಳ್ಳೆಯವರೆನಿಸುತ್ತಾರೆ ಆ ಪರದೇಶಿಗಳು!
******************