ಪ್ರೇಯಸಿಗೆ ಮರಳಿ ಗರ್ಭಿಣಿಯ ಪಟ್ಟ!!?

27 ಆಕ್ಟೋ 09

ಕೆಟ್ಟ ಗಂಡನಿಂದ ಬೇಸತ್ತು  ಬೇರ್ಪಟ್ಟ

ದಿಟ್ಟೆ ಶೃತಿಯನ್ನು ಆಕೆಯ ಸಾರ್ವಜನಿಕ

ಹುದ್ದೆಯಿಂದ ಕೆಲ ದಿನಗಳ ಹಿಂದೆಯೇ

ವಜಾಗೊಳಿಸಿ ಬಿಟ್ಟಿತ್ತು ನಮ್ಮ ಸರಕಾರ

 

ಕಟ್ಟಿಕೊಂಡ ಪತ್ನಿಗೆ ಶಾಸಕಿಯ ಪಟ್ಟವ

ನೀಡಿ  ಪ್ರೇಯಸಿಗೆ ಮರಳಿ ಗರ್ಭಿಣಿಯ

ಪಟ್ಟವ ಕರುಣಿಸಿರುವ ನಮ್ಮ ಸಂಸದನ

ಬಗ್ಗೆ  ಯಾರೂ ಎತ್ತುವುದೇ ಇಲ್ಲ ಚಕಾರ

 

ಮೊದಲ ಪತ್ನಿ ಇರುವಾಗ ಎರಡನೆಯ

ಮದುವೆ ಕಾನೂನು ಬಾಹಿರವಾಗದೇ?

ಅಲ್ಲಾ ಕರಾವಳಿಯ ಹೆಣ್ಣಿನ್ನು ಹೀಗೆಯೇ

ಹೆರುತ್ತಿರುವಳೇ ಮದುವೆಯೇ ಆಗದೇ?

 

ಹೋಟೇಲುಗಳಲ್ಲೆಲ್ಲಾ ಗುಟ್ಟಾಗಿ ನಡೆದರೆ

ಅದನ್ನು ವೇಶ್ಯಾವಾಟಿಕೆ ಎಂಬುವವರು

ದೊಡ್ಡವರ ಮನೆಯಲ್ಲಿ ಹಗಲೆಲ್ಲಾ ಹೀಗೆ

ರಾಜಾರೋಷವಾಗಿ ನಡೆದರೆ ಏನೆಂಬರು