ನೀನಾರು?

19 ಮೇ 12

ಎರಡು 
ತಿಂಗಳಿಂದೀಚೆಗೆ
ಪ್ರತಿ ರಾತ್ರಿ
ನನ್ನ ಕನಸ್ಸಿನಲ್ಲಿ
ನನ್ನ ಹಿಂಬದಿಯಿಂದ
ಬಂದು ನಿಂತು,
ನನ್ನ ಕಂಕುಳಡಿಯಿಂದ
ಕೈಹಾಕಿ ನನ್ನನ್ನು
ಅದೆತ್ತಲೋ
ಎಳೆದುಕೊಂಡು
ಹೋಗಲು ಯತ್ನಿಸುವ,
ನಾನು ಬಾಯ್ಬಿಟ್ಟು
ಬೊಬ್ಬಿಡುತ್ತಲೇ
ನನ್ನನ್ನು ನನ್ನ ಪಾಡಿಗೆ
ಬಿಟ್ಟು ಮರೆಯಾಗುವ
ನೀನಾರು…
ಒಮ್ಮೆಯಾದರೂ
ಮುಖ ತೋರಿಸಿ
ಹೇಳು, ನೀನಾರು??
*********** 


ಬಿಳಿ ಯಾಕೆ ರಾಧಾ… ನಾನ್ಯಾಕೆ ಕಪ್ಪು?

22 ಆಗಸ್ಟ್ 11

 

ಯಶೋದ ಮಾತೆಯನು ಕೇಳಿದ ಗೋಪಾಲಾ
ಬಿಳಿ ಯಾಕೆ ರಾಧಾ … ನಾನ್ಯಾಕೆ ಕಪ್ಪು?

ಮುಗುಳ್ನಗು ಬೀರುತ್ತಾ, ನುಡಿದಳಾ ತಾಯಿ
ನೀನು ಬಂದ ಗಳಿಗೆ ಅದುವೇ ನಡು ರಾತ್ರಿ ಕಪ್ಪು
ಹಾಗಾಗಿ ಕಪ್ಪು

ಯಶೋದ ಮಾತೆಯನು ಕೇಳಿದ ಗೋಪಾಲಾ
ಬಿಳಿ ಯಾಕೆ ರಾಧಾ … ನಾನ್ಯಾಕೆ ಕಪ್ಪು?

ನಕ್ಕು ನಕ್ಕು ನುಡಿದಳಾ ತಾಯಿ, ಕೇಳೋ ನನ್ನ ಕಂದ
ರಾಧೆ ಬಿಳಿಯಾದರೂ ಕಣ್ಣ ಕಾಡಿಗೆಯು ಕಪ್ಪು
ಕರಿಗಣ್ಣ ರಾಧೆ ಜಾದೂ ಮಾಡಿದಾಳೆ ತಪ್ಪು
ಹಾಗಾಗಿ ಕಪ್ಪು

ಯಶೋದ ಮಾತೆಯನು ಕೇಳಿದ ಗೋಪಾಲಾ
ಬಿಳಿ ಯಾಕೆ ರಾಧಾ … ನಾನ್ಯಾಕೆ ಕಪ್ಪು?

*****************

ಇದು ಮತ್ತೊಂದು ಭಾವಾನುವಾದದ ಯತ್ನ

 

ಮೂಲ ಗೀತೆ:
ಚಿತ್ರ: ಸತ್ಯಂ ಶಿವಂ ಸುಂದರಂ
ರಚನೆ: ಆನಂದ್ ಭಕ್ಷಿ
ಸಂಗೀತ: ಲಕ್ಷ್ಮೀಕಾಂತ್ ಪ್ಯಾರೇಲಾಲ್
ಗಾಯಕಿ: ಲತಾ ಮಂಗೇಶ್ಕರ್
ಯಶೋಮತಿ ಮಯ್ಯಾ ಸೇ ಬೋಲೇ ನಂದ್ ಲಾಲಾ
ರಾಧಾ ಕ್ಯೋಂ ಗೋರಿ? ಮೈ ಕ್ಯೋಂ ಕಾಲಾ?

ಬೋಲೀ ಮುಸ್‍ಕಾತೀ ಮೈಯ್ಯಾ ಲಲನಾ ಕೋ ಬತಾಯಾ
ಕಾಲೀ ಅಂಧಿಯಾರೀ ಆಧೀ ರಾತ್ ಮೆ ತೂ ಆಯಾ
ಇಸೀ ಲಿಯೇ ಕಾಲಾ

ಯಶೋಮತಿ ಮಯ್ಯಾ ಸೇ ಬೋಲೇ ನಂದ್ ಲಾಲಾ
ರಾಧಾ ಕ್ಯೋಂ ಗೋರಿ? ಮೈ ಕ್ಯೋಂ ಕಾಲಾ?

ಬೋಲೀ ಮುಸ್‍ಕಾತೀ ಮೈಯ್ಯಾ, ಸುನೋ ಮೇರೇ ಪ್ಯಾರೇ (೨)
ಗೋರಿ ಗೋರಿ ರಾಧಿಕಾ ಕೇ ನೈನ ಕಜ್‍ರಾ ರೇ
ಕಾಲೇ ನೈನೋವಾಲೀ ನೇ ಐಸಾ ಜಾದೂ ಡಾಲಾ
ಇಸೀಲಿಯೇ ಕಾಲಾ

ಯಶೋಮತಿ ಮಯ್ಯಾ ಸೇ ಬೋಲೇ ನಂದ್ ಲಾಲಾ
ರಾಧಾ ಕ್ಯೋಂ ಗೋರಿ? ಮೈ ಕ್ಯೋಂ ಕಾಲಾ?
*****************