ಮೈಮರೆತರೂ…ಕೊನೆಗೆ!

13 ಮೇ 12


ಪ್ರಕೃತಿಯ 
ಅಚ್ಚರಿಗೆ
ನಿಬ್ಬೆರಗಾಗಿ
ಬಿಟ್ಟ ಬಾಯಿ ಬಿಟ್ಟಂತೇ
ಮೈಮರೆತು ನಿಂತು 
ಆ ಸೃಷ್ಟಿಕರ್ತನ
ಮೆಚ್ಚಿ, ಕೊಂಡಾಡಿ,
ಕ್ಷಣವೆರಡು ಕಳೆದು
ಮುಂದಡಿಯಿಡೆ 
ಈ ಮಾನವನದು 
ಮತ್ತದೇ ರಾಗ,
ತಾ ಹೆಚ್ಚು 
ತಾ ಹೆಚ್ಚು,
ತಾ ಮುಂದು 
ತಾ ಮುಂದು 
ಎಂದು, 
ಎಂದೆಂದೂ!
________

ಚಿತ್ರ ಕೃಪೆ: ಪ್ರಕಾಶ್ ಹೆಗಡೆ  


ಹಳೆಯ ಮೂರು ಕವನಗಳು!!!

08 ಮೇ 09
ಏರ್ ಕಂಡಿಷನ್ನರ್!
ಸಖೀ,
ಚಳಿಗಾಲದಲಿ
ಬಿಸಿಯಪ್ಪುಗೆಯನಿತ್ತು,
ಮತ್ತೆ ಬೇಸಗೆಯಲಿ
ತಂಪನ್ನೀಯುವ,
ನಿನ್ನ ಎದೆ
ಯಾವ ಏರ್ ಕಂಡೀಷನ್ನರಿಗೆ
ಕಡಿಮೆಯಾಗಿದೆ?!
*-*-*-*-*-*-*
೨೨ ಮಾರ್ಚ್ ೧೯೮೫
 
ರಾಗ!
ಇನಿಯಾ,
ನೀನು
ಅಂದು
ಮಿಡಿದು
ಹೋದ,
ನನ್ನ ಮನದ
ವೀಣೆ,
ಈಗ
ಹೊಮ್ಮಿಸುವುದು
ಒಂದೇ
ರಾಗ –
ಅನುರಾಗ!
*-*-*-*-*
೦೬ ಎಪ್ರಿಲ್ ೧೯೮೫
 
ಕಂಪು!
ನಲ್ಲಾ,
ನೀನು
ನಮ್ಮೂರ
ಜಾತ್ರೆಯಿಂದ
ತಂದಿದ್ದ,
ಮೈಸೂರ ಮಲ್ಲಿಗೆ,
ಈಗ
ಬಾಡಿದೆಯಾದರೂ,
ಅದರ ಕಂಪು,
ನನ್ನ
ಮನದಲಿರುವ,
ನಿನ್ನ
ನೆನಪಿನಂತೆ,
ಇನ್ನೂ
ಅಳಿದಿಲ್ಲ!
*-*-*-*-*
೦೬ ಎಪ್ರಿಲ್ ೧೯೮೫