ಮುನಿಸೇಕೆ ದೇವಿ ಸರಸ್ವತಿ?

06 ಸೆಪ್ಟೆಂ 12

ಸರಸ್ವತಿ ಹೇಳಮ್ಮ ನೀ ಯಾಕೆ ಹೀಗೆ
ಒಂದೊಮ್ಮೆ ಹೀಗೆ, ಇನ್ನೊಮ್ಮೆ ಹಾಗೆ?
ನಿನ್ನ ಅನುಗ್ರಹ ಇಲ್ಲದಿರೆ ನಾನೇನನ್ನೂ
ಬರೆಯಲಾರೆ, ಈ ಮನ ಮೆಚ್ಚುವ ಹಾಗೆ;

ಪುರುಸೊತ್ತಿಲ್ಲದ ಕೆಲಸದ ನಡುವೆ ನನ್ನೀ
ತಲೆಯೊಳಗೆ ಮಿಂಚು ಹರಿಸುವ ನೀನು,
ಮುನಿದು ದೂರ ಕುಳಿತು ಬಿಡುವೆಯೇಕೆ
ಪುರುಸೊತ್ತಿನಲ್ಲಿ ಬರೆಯ ಕೂತರೆ ನಾನು?

ಈ ಮಸ್ತಿಷ್ಕದಲಿ ಬಂದು ನೆಲೆಯೂರು ನೀನು
ಅರಿವಿಲ್ಲದ ಈ ಅಜ್ಞನಿಗೆ ಜ್ಞಾನದೀವಿಗೆಯಂತೆ
ಮತ್ತೆ ನೋಡು ನಾ ಬರೆವೆ ಬರೆದುದೆಲ್ಲವನೂ
ನಿನ್ನ ಚರಣಕಮಲಕ್ಕೆ ತಂದರ್ಪಿಸುವೆನಂತೆ!
*********


ಯಾಕೆ? … ಸಂಪರ್ಕ!!!… ಹಳಸುತ್ತವೆ!!!

04 ಮಾರ್ಚ್ 10

ಯಾಕೆ?

ಸಖೀ,

ನನ್ನ

ಮೇಲಿನ

ಮುನಿಸಿಗೆ

ಅನ್ಯರ

ನೆಪ

ಯಾಕೆ?

 

ಮುನಿಸಿದ್ದರೆ

ಇದೆಯೆನ್ನು

ಅದಕ್ಕೆ

ಮುಜುಗರ

ಯಾಕೆ?

********

 

ಸಂಪರ್ಕ!!!

ಸಖೀ,

ಹೃದಯಗಳ

ನಡುವೆ

ಇದ್ದರೂ

ಪ್ರೀತಿಯ

ಒರತೆ,

 

ಇರಬಾರದು

ಎಂದಿಗೂ

ಸಂಪರ್ಕದ

ಕೊರತೆ;

 

ಸಂಪರ್ಕ

ಆದರೆ

ಒಂದು

ವೇಳೆ

ವಿರಳ,

 

ಉಳಿಯದು

ಪ್ರೀತಿಯೂ

ವರ್ಷಗಳು

ಬಹಳ!!!

*******

 

ಹಳಸುತ್ತವೆ!!!

ಸಖೀ,

ಸಂಬಂಧಗಳೂ

ಹಳಸುತ್ತವೆ

ದಿನ

ಕಳೆದಂತೆ,

 

ದಿನಗಳು

ಕಳೆದರೆ

ಹಳಸುವ

ಆಹಾರದಂತೆ;

 

ಸಂಬಂಧಗಳಿಗೆ

ಬೇಕು

ಒಲವಿನ

ಒಡನಾಟ

ತಿಕ್ಕಾಟ

ಆಗಾಗ,

 

ಬಿಸಿಯಾಗಿ

ಅಥವಾ

ತಂಪಾಗಿರಿಸಿ

ಇರಿಸಿದರೆ

ಆಹಾರವೂ

ಕೆಡುವುದಿಲ್ಲ

ನೋಡು

ನೀನಾಗ!!!

*******