ಒಲವಿನ ಹಣತೆ!

13 ಮೇ 12

ಮುಂಜಾನೆಯ
ನಸುಕಿನಲ್ಲಿ
ಒಲವಿನ ಕಡ್ಡಿ ಗೀರಿ,
ಆಸುಮನದೊಳಗಿನ
ಹಣತೆಯ
ಹಚ್ಚಿ ಹೋದವಳು
ನೀನು,
ಈಗ ನೋಡು
ಆಸುಮನದಿಂದ
ಹೊರಬರುತ್ತಲೇ
ಸಾಗುತ್ತಿದೆ
ಭಾವಗಳ
ಮಹಾಪೂರ
ಆಶ್ಚರ್ಯಪಡುವಂತೆ
ನಾನು!