ಅನುಮಾನದ ಕೋಪ!

01 ಸೆಪ್ಟೆಂ 12

ಸಖೀ,
ಕಿರಿಯರಿಗೆ

ನಾನು ಹೇಳುತ್ತಿರುವ
ಬುದ್ಧಿಮಾತುಗಳನ್ನು
ಅವರು ಆಲಿಸದೇ 
ಇದ್ದಾಗ, ನಾನು 
ಕೋಪಿಸಿಕೊಳ್ಳುತ್ತೇನೆ
ಎಂದಾದರೆ,
ನನ್ನ ಉದ್ದೇಶ
ಅವರನ್ನು ತಿದ್ದುವುದಷ್ಟೇ 
ಆಗಿಲ್ಲವೇನೋ 
ಅನ್ನುವ ಅನುಮಾನ 
ಮೂಡುತ್ತದೆ, ನನಗೆ!


ಬೆಳೆಯುವುದೆಂತು?

16 ಜೂನ್ 10

ಸಖೀ

ಒಳ್ಳೆಯ ಬೀಜ

ಮೊಳಕೆಯೊಡೆದು

ಬೆಳೆಯಲು

ನೆಲ-ಜಲ-ಗೊಬ್ಬರ

ಎಲ್ಲವೂ ಇರಬೇಕು

ಸರಿತೂಕದಲಿ

ನೀ ನೋಡು

 

ಕೆಟ್ಟದ್ದು ಹಾಗಲ್ಲ

ಸೊಕ್ಕೆದ್ದು ಬೆಳೆಯುವುದು

ಎಲ್ಲೆಂದರಲ್ಲಿ

ಇದ್ದರೂ ಕಾಡು ಮೇಡು

 

ಅಂತೆಯೇ

ಬೆಳೆಯುತ್ತವೆ ನಮ್ಮೊಳಗೆ

ತಂತಾನೇ ಬುದ್ಧಿಗಳು

ಹಾಳು – ಕೀಳು

 

ಒಳ್ಳೆಯದನು ಬೆಳೆಸಲು

ಅನವರತ ಶ್ರಮಬೇಕು

ಅದಕಾಗಿ

ಈ ಜೀವನವನೇ

ತಪಸ್ಸಾಗಿಸಬೇಕು

ನೀ ಕೇಳು!

*-*-*-*-*