ನನ್ನೊಲವೇ… ಓ ನನ್ನೊಲವೇ…!

31 ಆಗಸ್ಟ್ 11

 
ನನ್ನೊಲವೇ… ಓ ನನ್ನೊಲವೇ…
ಮನಮೋಹಕ ಎಷ್ಟೊಂದು, ನೀನಿದ್ದರೆ ಈ ಜಗವು
ನೀನಿಲ್ಲದ ಈ ಜಗವು, ನನಗೇನೂ ಅಲ್ಲವೂ|

ನೀ ಜೊತೆಗಿದ್ದರೆ ಹೆಚ್ಚುವುದು ಬೆಲೆ ಪ್ರತಿ ಋತುವಿನದೂ
ಈ ನಿನ್ನ ಕಣ್ಣುಗಳಲ್ಲಿಹುದು ಇಬ್ಬನಿಯಾ ಪ್ರಭೆಯೂ
ನಾ ಸಾಯೋದು ಇನ್ನಿಲ್ಲೇ, ಇನ್ನಿಲ್ಲೇ ಬದುಕುವುದೂ|

||ನನ್ನೊಲವೇ… ಓ ನನ್ನೊಲವೇ…||

ಸುಂದರ ಸ್ವರ್ಗದ ಬಯಕೆಯದು, ಯಾರಿಗಿದೆ ಹೇಳು
ಹೂಗಳ ಹಾಸಿಗೆ ನನಗಂತೂ, ಈ ನಿನ್ನಾ ಮಡಿಲೂ
ನಿನ್ನೀ ಬಾಹುಗಳಿರುವಾ ಎಡೆಯೇ, ನನ್ನ ಪಾಲಿಗೆ ನಾಕವದೂ|

|| ನನ್ನೊಲವೇ… ಓ ನನ್ನೊಲವೇ…||

ಮಾಡಿಬಿಡು ನೀ ನನ್ನನ್ನು, ಹುಚ್ಚು ಪ್ರೇಮಿಯಂತೆ
ನೀ ಬಂದರೆ ಇನ್ನೂ ಸನಿಹ, ಕಣ್ತುಂಬ ನೋಡುವೆನಂತೆ
ಇಲ್ಲಿ ಲಕ್ಷ ಇದ್ದರೂ ನನ್ನಂತೆ, ನಿನ್ನಂತಿಲ್ಲಾ ಇಲ್ಲಾರೂ|

||ನನ್ನೊಲವೇ… ಓ ನನ್ನೊಲವೇ…||

ಇದು ಮತ್ತೊಂದು ಭಾವಾನುವಾದದ ಯತ್ನ

ಮೂಲ ಗೀತೆ:
ಚಿತ್ರ: ಪತ್ಥರ್ ಕೇ ಸನಮ್
ಗಾಯಕರು: ಮುಕೇಶ್ ಹಾಗೂ ಲತಾ ಮಂಗೇಶ್ಕರ್

ಮೆಹಬೂಬ್ ಮೇರೇ, ಮೆಹಬೂಬ್ ಮೇರೇ
ತೂ ಹೈ ತೋ ದುನಿಯಾ ಕಿತ್‍ನೀ ಹಸೀಂ ಹೈ
ಜೋ ತೂ ನಹೀಂ ತೋ ಕುಛ್ ಭೀ ನಹೀಂ ಹೈ

ತೂ ಹೋ ತೋ ಬಢ್ ಜಾತೀ ಹೈ ಕೀಮತ್ ಮೌಸಮ್ ಕೀ
ಯೇ ಜೋ ತೇರೀ ಆಂಖೇಂ ಹೈಂ  ಶೋಲಾ ಶಬ್‍ನಮ್ ಕೀ
ಯಹೀಂ ಮರ‍್ನಾ ಭೀ ಹೈ ಮುಝ್ ಕೋ, ಮುಝೆ ಜೀನಾ ಯಹೀಂ ಹೈ

ಅರ‍್ಮಾ ಕಿಸ್ ಕೋ ಜನ್ನತ್ ಕೀ ರಂಗೀನ್ ಗಲಿಯೋಂ ಕೀ
ಮುಝ್ ಕೋ ತೇರಾ ದಾಮನ್ ಹೈ ಬಿಸ್ತರ್ ಕಲಿಯೋಂ ಕಾ
ಜಹಾಂ ಪರ್ ಹೈಂ ತೇರೀ ಬಾಹೇಂ ಮೇರೀ ಜನ್ನತ್ ಭೀ ವಹೀಂ ಹೈ

ರಖ್ ದೇ ಮುಝ್ ಕೋ ತೂ ಅಪ್ನಾ ದೀವಾನಾ ಕರ್ ಕೇ
ನಝ್‍ದೀಕ್ ಆ ಜಾ ಫಿರ್ ದೇಖೂ ತುಝ್ ಕೋ ಜೀ ಭರ್ ಕೇ
ಮೇರೇ ಜೈಸೇ ಹೋಂಗೇ ಲಾಖೋಂ ಕೋಯೀ ಭೀ ತುಝ್ ಸಾ ನಹೀಂ ಹೈ


ವಾಸ್ತವ!

06 ಮೇ 10

 

ಸಖೀ

ಏಕಾಂತದಲ್ಲಿದ್ದಾಗ

ನಮ್ಮ ಮನದಲೇಳುವ

ಭಾವನೆಗಳ ಅಲೆಗಳನು

ಸ್ವತಂತ್ರವಾಗಿರಲು

ಬಿಟ್ಟುಬಿಡೋಣ

ಗರಿಗೆದರಿ ಹಾರಲಿಚ್ಚಿಸುವ

ಬಯಕೆಗಳ ಹಕ್ಕಿಗಳನು

ನಮ್ಮ ಕಲ್ಪನೆಯ ಆಗಸದಲಿ

ಹಾರಬಿಡೋಣ

 

ನಿಜಕ್ಕೂ ಅದರಿಂದೊಂದು

ತೆರನಾದ ಆನಂದವಾಗುತ್ತದೆ

ಯಾವುದೇ ಭಯಾತಂಕಗಳಿಲ್ಲದೇ

ಸ್ವಚ್ಚಂದವಾಗಿ, ಎಲ್ಲೆ ಮೀರಿ

ಸುತ್ತಿ ಬರುವ ಆ ಹಕ್ಕಿಗಳು

ನಮ್ಮ ಮನಕೆ ಮುದ ನೀಡುತ್ತವೆ

 

ನಮ್ಮದೇ ಕಲ್ಪನಾ ಲೋಕ

ನಮಗಿಷ್ಟವಾದ ಜನರೇ

ಅಲ್ಲಿ, ನಮ್ಮ ಸುತ್ತ ಮುತ್ತ

ಅಲ್ಲಿ ಕೇಳಿ ಬರುತ್ತವೆ

ನಮಗಿಷ್ಟವಾದ

ಮಾತುಗಳೇ ಅತ್ತ – ಇತ್ತ

 

ಒಂದೆಡೆ ವಿರಹದ

ನೋವಿದ್ದರೂ ಆಗ

ಅದೆಂತಹ ಆನಂದ

ಆದರೆ ಮಿಲನದಲಿ

ನಮಗೆ ಬರೇ

ಭಯ – ಆತಂಕಗಳಲ್ಲದೇ

ಎಲ್ಲಿದೆ ಆನಂದ?

 

ಮುಖಾಮುಖಿಯಾದಾಗ

ಒಬ್ಬರನ್ನೊಬ್ಬರು ಮನಸಾರೆ

ನೋಡಲಿಚ್ಚಿಸುವ ಕಣ್ಣುಗಳಿಗೆ

ಸದಾ ಇರುತ್ತದೆ ಈ ಸಮಾಜದ

ಹದ್ದು ಕಣ್ಣುಗಳ ಭಯ

ಮನಬಿಚ್ಚಿ ಮಾತನಾಡಲು

ಇಚ್ಚಿಸುವ ನಮ್ಮ

ನಾಲಿಗೆಗಳಿಗೆ, ಕಿವಿಗಳಾಗಿ,

ನಮ್ಮ ಮಾತುಗಳನಾಲಿಸುವ

ಸುತ್ತಲಿನ ಗೋಡೆಗಳ ಭಯ

 

ನಿಜ ನುಡಿಯಲೇ ಸಖೀ

ಇದೇ ವಾಸ್ತವ

ಇದೇ ನಿತ್ಯ ಸತ್ಯ

ಇಂದೂ – ಮುಂದೆಂದೂ!

**************


ಮೌನವೇ ನುಡಿಯುತ್ತದೆ!

13 ಏಪ್ರಿಲ್ 10

ನನಗೆ

ನಿನ್ನೊಡನೆ

ಮಾಮೂಲಿಗಿಂತಲೂ

ಹೆಚ್ಚು ಮಾತನಾಡುವ

ಬಯಕೆ ಆದಾಗಲೂ

ಕೆಲವೊಮ್ಮೆ

ಒಂದೇ ಒಂದು

ಮಾತನ್ನೂ

ಆಡಲಾಗದೇ

ನಾನುಳಿದು ಬಿಟ್ಟಾಗ

 ನನ್ನ ಮೌನವೇ

ನುಡಿಯುತ್ತದೆ:

“ನನಗೆ ನಿನ್ನೊಡನೆ

ಬಹಳಷ್ಟು ಮಾತಾನಾಡುವುದಿದೆ”!

*****