ಕನ್ನಡದ ಕಂಪ ಪಸರಿಸುವಾ…!

22 ಜೂನ್ 10

 

ಕಾಲೆಳೆದು ಕಾಲೆಳೆದು ಪಡಲು ಸಂತೋಷ

ಬಹುಕೃತ ವೇಷ ವ್ಯರ್ಥ ಆವೇಷ

ಕಾಲೆಳೆದು ಕಾಲೆಳೆದು ಸೋತವರೇ ಎಲ್ಲ

ನೆಮ್ಮದಿಯ ಪಡೆದವರು ಯಾರೂ ಇಲ್ಲಿಲ್ಲ

 

ಸಾಹಿತ್ಯ ಲೋಕದಲಿ ಬಂಧುಗಳೇ ನಾವೆಲ್ಲಾ

ಮೇಲು ಕೀಳಾರಿಲ್ಲ ಜಾತಿಯಾ ಹಂಗಿಲ್ಲ

ಎಲ್ಲರನೂ ಸಮನಾಗಿ ಕಾಣುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಪ್ರತಿಕ್ರಿಯೆಗಳು ಬರಹಕ್ಕೇ ಸೀಮಿತವಾಗಿರಲಿ

ಬರೆದಾತ ಯಾರೆಂಬ ಗೋಜಿಲ್ಲದಿರಲಿ

ಎಲ್ಲರಲೂ ಒಂದಾಗಿ ಬೆರೆಯುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡದ ಭಾಷೆಯನು ಶ್ರೀಮಂತಗೊಳಿಸಿ

ಬೆರೆತಿರುವ ಕಳೆಯನ್ನು ಒಂದಾಗಿ ಅಳಿಸಿ

ಎಲ್ಲರೂ ಒಂದಾಗಿ ಶ್ರಮಿಸುವಾ….

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

 

ಕನ್ನಡಕೆ ಕನ್ನಡವೇ ಸಾಟಿ ತಾನೆಂದು

ಜಗಕೆಲ್ಲಾ ತೋರಿಸಲು ಪಣತೊಡುವ ಇಂದು

ಕನ್ನಡದ ಕಂಪ ಪಸರಿಸುವಾ…

 

“ಕಾಲೆಳೆದು ಕಾಲೆಳೆದು ಪಡಲು ಸಂತೋಷ”

*****************************


ನಿತ್ಯ ರೋದನ!

21 ಏಪ್ರಿಲ್ 10

 

ಸತ್ತು ಅಗಲಿದವರಿಗಾಗಿ

ನಾವು ಮರುಗಿ

ಕಣ್ಣೀರಿಡುವುದು

ಬರೀ ಒಂದೆರಡು ದಿನ,

 

ಆದರೆ,

ಎಲ್ಲಾ ಸಂಬಂಧಗಳ

ಮುರಿದುಕೊಂಡು

ನಮ್ಮ ನಡುವೆ ಇದ್ದೂ

ಸತ್ತಂತೆ ಇರುವ ನಮ್ಮ 

ಕೆಲವು ಬಂಧುಗಳಿಗಾಗಿ

ಅದ್ಯಾಕೋ ನಿತ್ಯ ರೋದನ! 

*****

 


“ಲಾಡಿ” – “ಲೇಡಿ”

09 ನವೆಂ 09

“ಲಾಡಿ” – “ಲೇಡಿ”!!!

ಜಾರಿ

ಹೋಗುತ್ತಿದ್ದ

ನಿಮ್ಮ

ಪೈಜಾಮವನ್ನು

ಎತ್ತಿ ಕಟ್ಟಿದ್ದಾರೆ

ಆಕೆ ನೀಡಿ

ಹೊಸ ಲಾಡಿ,

 

ಇನ್ನೊಮ್ಮೆ

ತಪ್ಪು ಮಾಡಿ

ಎಲ್ಲೆಲ್ಲೋ

ಜಾರಿಸಿಕೊಂಡರೆ

ನೆರವಿಗೆ

ಬರಲಾರರು

ದೆಹಲಿಯ

ಆ “ಲೇಡಿ”!!!

********

 

ಖುಷಿ ಪಡದಿರಿ!!!

ಖುಷಿ ಪಡದಿರಿ

ವೈಷ್ಣೋದೇವಿ

ಮತ್ತು

ದೆಹಲಿಯ

ಸುಷ್ಮಾ

ಪಾರು

ಮಾಡಿದರೆಂದು

ನಿಮ್ಮನ್ನು

ಈ ಬಾರಿ

ಕಷ್ಟದಿಂದ,

 

ನೆರೆಪೀಡೀತ

ಪ್ರದೇಶದ

ಮಹಿಳೆಯರು

ನಿಮ್ಮನ್ನು 

ಕ್ಷಮಿಸಲಾರರು

ಪಾರು

ಮಾಡದಿದ್ದರೆ

ಅವರನ್ನು

ನೀವೀಗ

ಸಂಕಷ್ಟದಿಂದ!!!

**********

 

ನಮ್ಮೆಲ್ಲರ ಬಂಧುವಾಗಿ!!!

ಸಾರ್ವಜನಿಕವಾಗಿ

ಕಣ್ಣೀರಿಳಿಸಿ

ಇಬ್ಬರ ಬಗ್ಗೆ

ನಿಮ್ಮ

ಬಂಧು ಪ್ರೇಮದ

ಅನವಶ್ಯಕ

ಪ್ರದರ್ಶನ

ಮಾಡಿದ್ದು

ಸಾಕು

ಯಡ್ಡಿಗಳೇ

ಅಂದು,

  

ರಾಜ್ಯದೆಲ್ಲಾ

ಜನತೆಯ

ಸಮಸ್ಯೆಗಳಿಗೂ

ಸ್ಪಂದಿಸಿ

ಮರುಗಿ

ತೋರಿಸಿಕೊಡಿ

ನೀವು

ನಮ್ಮೆಲ್ಲರ

ಬಂಧುವಾಗಿ

ಮುಂದೂ!!!

******