ಈ ದೇಶದ ನಾಯಕರೆಲ್ಲಾ ಭ್ರಷ್ಟರಾಗಿದ್ದರೆ ಆಕೆಗೆ ಆರಾಮ!

06 ಆಗಸ್ಟ್ 10

ನಿಜವಾಗಿಯೂ ಬಹಳ ಕಿಲಾಡಿ ಹೆಂಗ್ಸು ಕಣ್ರೀ ಈ ಪರದೇಶೀ ಗಾಂಧಿ

ನಮ್ಮನ್ನೆಲ್ಲಾ ಮಾಡಿದ್ದಾಳಾಕೆ ಭ್ರಷ್ಟಾಚಾರಿಗಳ ಅಸಹಾಯಕ ಬಂಧಿ


ದೇಶದ ಉದ್ದಗಲಕ್ಕೂ ಭ್ರಷ್ಟ ರಾಜಕಾರಣಿಗಳದ್ದೇ ಈಗ ಕಾರುಬಾರು

ಬಯಲಾಗುತ್ತಲೇ ಇರುತ್ತವೆ ಹೊಸ ಹೊಸ ಕಾಂಡ ದಿನವೂ ಐದಾರು


ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಯಾವುದೂ ಉಳಿದಿಲ್ಲ ಈಗ

ಎಲ್ಲ ಕಡೆಯೂ ಭ್ರಷ್ಟರೇ ತುಂಬಿ ಹಾಳಾಗುತ್ತಿದೆ ಈ ದೇಶದ ಜನಾಂಗ


ರಾಜ್ಯಗಳಲಿ ಭ್ರಷ್ಟರಿದ್ದರೆ ರಾಜ್ಯ ಸರಕಾರಗಳು ಕಾರ್ಯ ನಡೆಸಬೇಕು

ರಾಜ್ಯ ಸರಕಾರಗಳೇ ಭ್ರಷ್ಟರಾದಾಗ ಕೇಂದ್ರ ಮಧ್ಯ ಪ್ರವೇಶಿಸಬೇಕು


ಕೇಂದ್ರ ಸರಕಾರದಲ್ಲೇ ಭ್ರಷ್ಟರಿರಲು ಜನ ಇನ್ನು ಯಾರನ್ನು ಕೇಳಬೇಕು

ಪ್ರಧಾನ ಮಂತ್ರಿಯ ಕೇಳಲೇ, ಛೇ.. ಇಲ್ಲ…  ಆತ ಆಕೆಯನ್ನೇ ಕೇಳಬೇಕು


ಪ್ರಧಾನಿಗಳಿಗೆ ಸಲಹೆ ನೀಡಲು ಮಂತ್ರಿಮಂಡಲ ಇರಬೇಕಾದ್ದು ಸಹಜ

ಆದರೆ ಮಂತ್ರಿ ಮಂಡಲ ಆಕೆಯ ಮಾತನ್ನೇ ಕೇಳಬೇಕು ಇದೂ ನಿಜ


ಎಂದೂ ಇದ್ದಿರದ ಈ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆ ಆಕೆಯೇ

ಹಾಗಾಗಿ ದೇಶದ ಎಲ್ಲಾ ಭ್ರಷ್ಟರಿಗೂ ಸಲುಗೆ ನೀಡಿರುವವರೂ ಆಕೆಯೇ


ದೇಶದ ನಾಯಕರುಗಳೆಲ್ಲಾ ಭ್ರಷ್ಟರಾಗಿ ತಮ್ಮ ತಿಜೋರಿ ತುಂಬುತಿರಲು

ತಮ್ಮನ್ನೇನೂ ಮಾಡಲಾರಳು ಎಂಬ ದೃಢ ನಂಬುಗೆ ಇಹುದು ಎಲ್ಲರಲೂ


ಕೊಟ್ರ‍ೋಚಿ, ಆಂಡರ‍್ಸನ್ ರನ್ನೇ ಬಚಾವಾಗಲು ಬಿಟ್ಟ ಮನೆಯವಳು

ನೀವೇ ಹೇಳಿ, ಇನ್ನು ಇವರನ್ನು ಆಕೆ ಏಕೆ ತರಾಟೆಗೆ ತೆಗೆದುಕೊಂಡಾಳು


ಈ ದೇಶದ ನಾಯಕರೆಲ್ಲಾ ಭ್ರಷ್ಟರಾಗಿ ತಮ್ಮಲ್ಲೇ ಇದ್ದರೆ ಆಕೆಗೂ ಆರಾಮ

ಆಕೆಯ ಸುದ್ದಿಗೆ ಬಾರದೇ ಇದ್ದರೆ, ಆಕೆಯ ಕಾರ್ಯಗಳು ಸದಾ ಸುಕ್ಷೇಮ

**************