ಸಂಪದದ ನಾಡಿ ಪರೀಕ್ಷಿಸಲು ನಾಡಿಗರೇ ಯೋಗ್ಯ!!!

03 ಸೆಪ್ಟೆಂ 09
 
 

ಸಂಪದಕ್ಕೆ ವಕ್ರಿಸಿದ ರಾಹು ಇನ್ನೂ ಬಿಟ್ಟ ಹಾಗಿಲ್ಲ
ವಾರವಾಗುತ್ತಾ ಬಂದರೂ ಸರಿ ಆಗುತ್ತಲೇ ಇಲ್ಲ
 
ದೆವ್ವಜ್ಞರ ಕರೆದು ಕೇಳಿದೆನಿದಕೆ ಮಾಡೋದೇನು
ಅಂದರು ಕೆಟ್ಟ ಕಾಲ ಪರಿಹಾರ ಹೇಳುವೆ ನಾನು
 
“ವೋಂ” ಎಂಬ ಅಸಹ್ಯ ಉದ್ಘಾರ ಮಾಡಿ ಆತ
ಕರೆ ಮಾಡಿದ ಕಾಲವೇ ಕೆಟ್ಟದೆಂದು ಬೈದರಾತ
 
ಹೋಮ ಹವನಗಳಿಂದ ಆಗದೀ ಸಮಸ್ಯೆ ಶಮನ
ಮಹಾಯಾಗ ಮಾಡಿಸುವತ್ತ ಹರಿಸಬೇಕು ಮನ
 
ಮಹಾಯಾಗ ಮಾಡಿಸಬಹುದು ಆದರೆ ಎಲ್ಲಿ ಹೇಳಿ
ನಿಮ್ಮ ಮನೆಯಲ್ಲೇ ಆದರೆ ಲಾಭ ಯಾರಿಗೆ ಹೇಳಿ
 
ಯಾಗದ ಹೊಗೆಗೆ ಓಡಿ ಹೋಗಬಹುದೆಲ್ಲಾ ಸೊಳ್ಳೆ
ನಮ್ಮ ಕಿಸೆಗಳ ನೀವು ಹೊಡೆಯಬಹುದು ಕೊಳ್ಳೆ
 
ಶುದ್ಧಿ ಆದರೆ ವಾತಾವರಣ ನಿಮ್ಮ ಮನೆಯ ಸುತ್ತ
ನಿಮ್ಮ ಮನೆ ಮಂದಿ ಆಗಬಹುದು ರೋಗ ಮುಕ್ತ
  
ಬೇಡ ಬಿಡಿ ನಾವೇ ನೋಡಿಕೊಳ್ತೇವೆ ನಮ್ಮ ಭಾಗ್ಯ
ಸಂಪದದ ನಾಡಿ ಪರೀಕ್ಷಿಸಲು ನಾಡಿಗರೇ ಯೋಗ್ಯ
******************************

ಸಂಪದ