ನರ್ಸಮ್ಮನ ಸಿಡಿಯ ನಕಲು ಇನ್ನೂ ಇದೆ ಆತುರ ಬೇಡ!

08 ಆಕ್ಟೋ 10

 

ಯಡ್ಡಿ ನಿನ್ನೆ ರೇಣುವಿನ ಕಿವಿಗಳಲ್ಲಿ ಒಂದು ಮಂತ್ರವನ್ನು ಉಸುರಿದರಲ್ಲಾ
ರೇಣುವಿನ ಉಸಿರೇ ನಿಂತುಹೋಗಿ ಸ್ವರವೇ ಬದಲಾಗಿ ಬಿಟ್ಟಿದೆಯಂತಲ್ಲಾ

ರಾತ್ರಿಯಿಡೀ ಯೋಚಿಸುತ್ತಾ ಮಲಗಿದ್ದೆ ಮುಂಜಾವಿಗೆ ಜ್ಞಾನೋದಯವಾಯ್ತು
ಯಡ್ಡಿ ಹೆಚ್ಚೇನೂ ಹೇಳಿರಲಿಕ್ಕಿಲ್ಲ ಹೇಳಿರಬಹುದು ಇಲ್ಲಿರುವ ಇದಿಷ್ಟೇ ಮಾತು

ನರ್ಸಮ್ಮ ಐದುಕೋಟಿ ಹೊತ್ಕೊಂಡು ಹೋಗಿದ್ದು ಸತ್ಯವೇ ಕಣೋ ಮೂಢ
ಆದ್ರೆ ಆಕೆ ಕೊಟ್ಟು ಹೋದ ಸಿಡಿಯ ನಕಲು ಇನ್ನೂ ನನ್ನಲ್ಲಿದೆ ಆತುರ ಬೇಡ

****

ಕುಮಾರ ಕಳೆದ ಬಾರಿ ಮೋಸ ಮಾಡಿದ್ದು ಬರೀ ಯಡ್ಡಿಗೆ ಮತ್ತು ಭಾಜಪಕ್ಕೆ
ಇಂದು ಹಾಗಲ್ಲ ಇಡೀ ರಾಜ್ಯಕ್ಕೇ ದ್ರೋಹ ಬಗೆದು ಪಡಬೇಕಾಗಿದೆ ನಾಚಿಕೆ

ತಮ್ಮ ಪಾತ್ರವೇನೂ ಇಲ್ಲ ಎನ್ನುತ್ತಲೇ ಗೋವಾಕ್ಕೆ ತೆರಳಿದನಾದರೂ ಏಕೆ
ಭಿನ್ನರ ರಕ್ಷಣೆಗೆ ಹೋಗುವೆನೆಂದವನು ಜೊತೆಗೆ ಪೋಲೀಸರ ಒಯ್ದಿಲ್ಲ ಏಕೆ

ಹದಿಮೂರು ಶಾಸಕರ ರಕ್ಷಣೆ ಓರ್ವನೇ ಮಾಡಲು ಈತನೇನು ದಾದಾನೇ
ಗೋವಾ ಪೋಲೀಸರಿಗೆ ಕರೆ ಮಾಡಿ ಹೇಳಿದ್ದರೆ ಸಿಗ್ತಿತ್ತು ರಕ್ಷಣೆ ತಂತಾನೇ

****

ಸೋನಿಯಾ ಸಿದ್ದನ ಕೇಳಿದಳು “ಓಹ್ ಆರ್ ಯೂ ಸಿದ್ಧ?” ಎಂದು ದಿಲ್ಲಿಯಲ್ಲಿ
“ಹೌದು ನಾನು ಸಿದ್ಧ, ನಾಲ್ಕು ವರ್ಷಗಳಿಂದ ಮುಖ್ಯಮಂತ್ರಿಯಾಗಲು ಇಲ್ಲಿ”

ಮುಖಕ್ಕೆ ಮಂಗಳಾರತಿ ಮಾಡಿ ಹೊರಗಟ್ಟಿದ್ದಾಳೆ ಸೋನಿಯಾ “ಹೋಗು
ಒಂದಾದರೂ ಕ್ಷೇತ್ರದಲ್ಲಿ ನಮ್ಮವರ ಗೆಲ್ಲಿಸಿ ಬಾ ಆಲಿಸುತ್ತೇನೆ ನಿನ್ನ ಕೂಗು

ವಿರೋಧದ ನಡುವೆಯೂ ವಿರೋಧಪಕ್ಷದ ನಾಯಕನ ಪಟ್ಟ ನೀಡಿದ್ದೇ ಹೆಚ್ಚು
ನಿಜಕ್ಕೂ ಹೇಳುತ್ತೇನೆ ಕರ್ನಾಟಕದಲ್ಲಿ ನನಗೆ ಆಸ್ಕರ್ ಮಾತ್ರ ಅಚ್ಚುಮೆಚ್ಚು”

****


ಈ ನರ್ಸಮ್ಮನ ಬಗ್ಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ!

14 ಏಪ್ರಿಲ್ 10

 

 ಈ ನರ್ಸಮ್ಮನ ಬಗ್ಗೆ ನನಗೆ ಮೊದ್ಲಿಂದಾನೂ ಅನುಮಾನ ಇತ್ತು ಕಣ್ರೀ**

ಮಾನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡೀಗ ರಾಜೀ ಆಗಿದಾಳಲ್ರೀ

 

ದಾವೆಯಲಿ ಅವಗುಣವಾದರೆ ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಸಮಸ್ಯೆ

ನರ್ಸಮ್ಮನಿಗೆ ಮಾನ ಹೋದರೆ ಹೋಗಲಿ ಕಾಸಾದರೂ ಸಿಗಲಿ ಎಂಬಾಸೆ

 

ಮಠಾಧೀಶರು ಹೇಳಿದ ಕೂಡ್ಲೇ ಈ ನರ್ಸಮ್ಮನ ಹೋದ ಮಾನ ಬಂತೇ

ಅಲ್ಲಾ ಅಬಕಾರಿ ಸಚಿವರ ಕಡೆಯಿಂದ ಕೊಟ್ಯಾನುಕೋಟಿ ಕೈವಶವಾಯ್ತೇ

 

ಅಂದು ಜನತೆಯ ಮುಂದೆ ಗೋಳಾಡಿ ಈಗ ಗುಟ್ಟಿನಲ್ಲಿ ರಾಜಿ ಆಗಿದ್ದೇಕೆ

ಸಹಾನುಭೂತಿ ತೋರಿದ್ದ ಜನತೆಗೆ ಸಮಜಾಯಿಷಿ ನೀಡುತ್ತಿಲ್ಲವಲ್ಲ ಏಕೆ

 

ನ್ಯಾಯಾಲಯದಲ್ಲಿ ದಾವೆ ಹೂಡಿ ಈಗ ರಾಜಿ ಆಗುವುದೆಂದರೆ ಅದಕ್ಕೇನರ್ಥ

ದಂಡ ವಿಧಿಸಬಾರದೇ ನ್ಯಾಯಾಲಯದ ಸಮಯ ಮಾಡಿರುವುದಕ್ಕೆ ವ್ಯರ್ಥ

 

ದೂರದರ್ಶನದಲ್ಲಿ ಬಂದು ಕೂಗಾಡಿ ಗುಟ್ಟಲ್ಲಿ ರಾಜೀ ಮಾಡಿಕೊಳ್ಳುವ ಈ ಶೈಲಿ

ಹೊಸದೇನೂ ಅಲ್ಲ ಮೊನ್ನೆ ಮೊನ್ನೆ ಆಡಿದ್ದರು ಐಂದ್ರಿತಾ ರೇ ಮತ್ತು ನಾಗತೀಹಳ್ಳಿ!!!

*************

**ನರ್ಸಮ್ಮ ನಿಂದದ್ಯಾಕೋ ಅತಿಯಾಯ್ತು ಅಲ್ವಾ..?

 

 


ನರ್ಸಮ್ಮ ನಿಂದದ್ಯಾಕೋ ಅತಿ ಆಯ್ತು ಅಲ್ವಾ?

07 ಜನ 10

ನರ್ಸಮ್ಮ ನಿನ್ನದು ಅದ್ಯಾಕೋ ಅತಿ ಆಯ್ತು ಅಲ್ವಾ?

ನ್ಯಾಯಾಲಯದಲ್ಲಿ ಕಟ್ಲೆ ಹೂಡಿ ರಸ್ತೆಗಿಳಿದಿದಿಯಲ್ವಾ?

 

ದಾವೆ ಹೂಡಿದಾಕೆಯೇ ನ್ಯಾಯಾಲಯದಲಿ ಇರಲಿಲ್ಲ

ನಿನಗೂ ಸಮನ್ಸ್ ಜಾರಿ ಅಲ್ಲಿ ಬೇರೆ ದಾರಿ ಇರಲಿಲ್ಲ

 

ದೂರದರ್ಶನಕೆ ಸಂದರ್ಶನ ನೀಡಲು ಸಮಯ ಇತ್ತು

ನ್ಯಾಯಾಲಯಕೆ ನೀ ಏಕೆ ಗೈರು ಹಾಜರಾಗ ಬೇಕಿತ್ತು

 

ಆತನೊಂದಿಗೆ ಅಂದಾಡಿದ ಆಟಕ್ಕೆ ಒಪ್ಪಿಗೆ ಪಡೆದಿಲ್ಲ

ಈಗ ಎಲ್ಲದಕ್ಕೂ  ಜನರ ಬೆಂಬಲ ಕೇಳುತಿಹೆಯಲ್ಲ

 

ಮುಚ್ಚಿದ ಕೋಣೆಯೊಳಗೆ ಬೆಚ್ಚಗೆ ಆ ಆಟವಾಡಿದ್ದೇಕೆ

ಚುಂಬಿಸಲು ಬಂದವಗೆ ತನ್ನ ಗಲ್ಲವನು ತಾ ಒಡ್ಡಿದ್ದೇಕೆ

 

ಕೈಯೊಂದು ತಾನೆಷ್ಟು ಆಡಿದರೂ ಚಪ್ಪಾಳೆ ಕೇಳಿಸದು

ಕೈಜೋಡಿಸಿದಾಕೆ ನೀ ಮರುಗಿದರೆ ಕನಿಕರವೇ ಬಾರದು

 

ಚಿತ್ರ ಪ್ರದರ್ಶಿಸಿ ಮರ್ಯಾದೆಯ ಮಾಡಿ ಮೂರಾಬಟ್ಟೆ

ಈಗ್ಯಾಕೆ ಹತ್ತಿ ಕೂತಿದ್ದೀಯ ಊರ ಪಂಚಾಯತಿ ಕಟ್ಟೆ

 

ನೈತಿಕತೆಯನು ಗಾಳಿಗೆ ತೂರಿ ಬಾಳನ್ನು ಮಾಡಿ ಚಿಂದಿ

ಈಗ ಅಳು ಏಕೆ, ನಿನ್ನಡುಗೆಯನ್ನೇ ತಾನೇ ನೀ ತಿಂದಿ

 

ನಿನ್ನ ಕರ್ಮಗಳಿಗೆ ನೀನೇ ಜವಾಬ್ದಾರಿ ನಾವ್ಯಾರೂ ಅಲ್ಲ

ನೀನು ಗಳಿಸಿದ ಆಸ್ತಿಯಲಿ ನಾವೇನೂ ಪಾಲುದಾರರಲ್ಲ!!!

*************************************