ನ್ಯಾಯ ಸಮ್ಮತ ದಾನ!

01 ಸೆಪ್ಟೆಂ 12

ಸಖೀ,
ಸಾಮಾಜಿಕ
ಸೇವೆಗಳಿಗಾಗೋ,
ಯಾವುದೇ
ಸತ್ಕರ್ಮಗಳಿಗಾಗೋ,
ದೇವಸ್ಥಾನಗಳ
ಹುಂಡಿಗಳಿಗೋ,
ನಮ್ಮಲ್ಲಿರುವ
ಧನವನ್ನು ನಾವು
ದಾನ ಮಾಡುವುದರಿಂದ, 
ನಮಗೆ ಪುಣ್ಯಫಲ
ಲಭಿಸಬೇಕು ಎಂದಾದರೆ,
ನಾವು ದಾನ 
ಮಾಡುವ ಆ ಧನವನ್ನು, 
ಧರ್ಮ ಹಾಗೂ ನ್ಯಾಯ
ಸಮ್ಮತವಾಗಿಯೇ 
ಸಂಪಾದಿಸಿರಬೇಕು!


ಹೊಸದನ್ನು ಹುಟ್ಟುಹಾಕುವ ಇಚ್ಛಾಶಕ್ತಿ ನಮ್ಮಲ್ಲಿಲ್ಲ!!!

08 ಮೇ 09
 

 

ಹೊಸದನ್ನು ಹುಟ್ಟು ಹಾಕುವ ಶಕ್ತಿ-ಯುಕ್ತಿ-ಇಚ್ಚಾಶಕ್ತಿ ನಮ್ಮಲ್ಲಿಲ್ಲ
ಅದಕ್ಕೇ ಹಳೆಯದನ್ನು ಕೆಡವದೇ ಉಳಿಸಿ ಎನ್ನುತಿರುವೆವೆಲ್ಲಾ
 
ಕೆಟ್ಟಿದೆ ಕಾಲ ಈಗ ಹೊಸದು ಅಷ್ಟು ಬೇಗ ಹುಟ್ಟುವುದೇ ಇಲ್ಲ
ಹುಟ್ಟಿದರೂ ಬೆಳೆದು ಮರವಾಗಲು ಅದಕೆ ನೀರೇ ಸಿಗುವುದಿಲ್ಲ
 
ಗಿಡಗಳನ್ನು ಪೋಷಿಸಿ ಮರಗಳನಾಗಿಸುವುದಕೆ ನಮಗೆಲ್ಲಿ ಸಮಯ
ಅದಕೇ ಹಳೆಯ ಮರಗಳನ್ನು ಅಪ್ಪಿಕೊಂಡು ನೀಡುತ್ತೇವೆ ಅಭಯ
 
ನಾವು ಎಲ್ಲದಕ್ಕೂ ರಸ್ತೆಗಿಳಿದು ಮಾಡುತ್ತೇವೆ ಪ್ರತಿಭಟನೆ ಚಳುವಳಿ
ವಿರೋಧಿಸುವ ಹಕ್ಕಷ್ಟೇ ನಮ್ಮ ಮಕ್ಕಳಿಗೆ ನಮ್ಮಿಂದ ಸಿಗೋ ಬಳುವಳಿ
 
ನನ್ನಪ್ಪಯ್ಯನವರ ಮಾತು ಎಲ್ಲಾ ದಾನಕ್ಕೂ ದೊಡ್ದದು ಸಮ್ಮತಿ ದಾನ
ಒಳ್ಳೆಯ ಕಾರ್ಯಗಳಿಗೆ ಯಾವಾಗಲೂ ವ್ಯಕ್ತಪಡಿಸಬೇಕು ಸಮಾಧಾನ