ಕನಸಲ್ಲಿ ವಾಸ್ತವ!

01 ಸೆಪ್ಟೆಂ 12

ಸಖೀ,
ರಾತ್ರಿಯೆಲ್ಲಾ
ನಿನ್ನ 
ಕನವರಿಕೆಯಲ್ಲೇ
ಕಳೆದು, 
ಬೆಳಗಾಗಲೆದ್ದು
ಕೂತಾಗ,

ಬಳಿಯಲ್ಲಿ 
ಕೂತು 
ನಗುತ್ತಿದ್ದ 
ನಿನ್ನನ್ನು 
ಕಂಡಾಗ
ಅನಿಸಿತು:
“ನಮ್ಮ
ಜೀವನವೇ 
ಹೀಗೆ,
ವಾಸ್ತವವನ್ನು
ಕನಸಿನಲ್ಲಿ
ಹಾಗೂ
ಕನಸನ್ನು
ವಾಸ್ತವದಲ್ಲಿ
ತಡಕುತ್ತಾ
ಹುಡುಕುತ್ತಾ
ಇರುತ್ತೇವೆ
ನಾವು!”