ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ
ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ
ವಿಧವೆಯ ಪುತ್ರನನು ಒಲವಿಲ್ಲದೇ ನಿರ್ಲಕ್ಷ್ಯದಿ ಸಾಕಿ
ತನ್ನ ಪುತ್ರನ ಕಾಳಜಿಯಿಂದ ಬೆಳೆಸಿ ಮಾಡಿದ ಶೋಕಿ
ಹಿರಿಯ ಮಗನಾದರೆ ತನ್ನ ಬಲದಿಂದಲೇ ಜಗವ ಗೆದ್ದ
ಕಿರಿಯವನು ಸದಾ ಪರಾವಲಂಬಿಯಾಗಿಯೇ ಇರುತ್ತಿದ್ದ
ಕಿರಿಯನ ಬೆಳೆಸಿ ಚಕ್ರವರ್ತಿಯಾಗಿಸುವಾಸೆ ಆತನಿಗಿತ್ತು
ಹಿರಿಯನನು ಕೊನೆಗೆ ಒಳಸಂಚಿನಿಂದ ಮುಗಿಸಬೇಕಿತ್ತು
ತಾನೆಣಿಸಿದ ಕಾರ್ಯ ನಡೆಯಲೇ ಇಲ್ಲ ನೋಡಿ ಹೇಗೂ
ಹಿರಿಯನೆದುರು ಕಿರಿಯ ಸೋತು ಮರೆಯಾದ ಕೊನೆಗೂ
*******
ಟೈಮ್ಸ್ ಆಫ್ ಇಂಡಿಯಾ (ಆಂಗ್ಲ) ದ ಬರಿಯ ಕನ್ನಡ ಅನುವಾದ ರೂಪವಾಗಿದ್ದ ಟೈಂಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆ ಇಂದಿನಿಂದ ಪ್ರಕಟವಾಗುವುದಿಲ್ಲ ಎಂಬ ಸುದ್ದಿ ಓದಿದಾಗ ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರ ರೂಪ ತಾಳಿದ್ದು ಹೀಗೆ.