ಜೊತೆಗೆ ನೀನಿದ್ದರೆ ಮುಪ್ಪು ಬರದೆನಗೆ ನೋಡ!

19 ಜುಲೈ 11

ಐವತ್ತಕ್ಕೆ ತಲುಪಿದೆ ನನ್ನಯ ಜನ್ಮದಿನಗಳ ಲೆಕ್ಕ ಬಂದು
ಜೀವನದ ಸ್ವರ್ಣ ವರುಷ ಆರಂಭವಾದ ಶುಭದಿನವಿಂದು

ಅರ್ಧಕ್ಕಿಂತಲೂ ಹೆಚ್ಚು ಮುಗಿದಿರಬಹುದೇನೋ ಆಯಸ್ಸು
ಆದರಿನ್ನೂ ಕುಂದಿಲ್ಲ ನನ್ನ ಈ ಮನದೊಳಗಿನ ಹುಮ್ಮಸ್ಸು

ಕಲೆ ಹಾಕಿ, ಕಲಿಯುವುದರಲ್ಲಿ ಕಳೆದವು ನನ್ನೆಲ್ಲಾ ದಿನಗಳು
ಹಂಚಿಕೊಂಬುದರಲ್ಲಿ ಕಳೆಯಲಿ ಇನ್ನು ಮುಂದಿನ ದಿನಗಳು

ಕಳೆದ ದಿನಗಳಲ್ಲಿ ನಾನು ಸಾಧಿಸಿದ್ದೇನೂ ಇಲ್ಲ ಬಹಳಷ್ಟು
ಸಾಧಿಸಲು ಇರಬೇಕು ನನ್ನ ಬಾಳಿನಲಿ ದಿನಗಳು ಇನ್ನಷ್ಟು

ಉಸಿರ ನಿಲ್ಲಿಸ ಬೇಡ, ದೇವ, ನನ್ನ ಆಯುಷ್ಯ ತೀರಿಸಬೇಡ
ನನ್ನ ಜೊತೆಗೆ ಸದಾ ನೀನಿದ್ದರೆ ಮುಪ್ಪು ಬರದೆನಗೆ ನೋಡ!

**********************************
ನನ್ನ ಐವತ್ತನೇ ಜನ್ಮದಿನದಂದಿನ (೧೬ ಜುಲಾಯಿ) ಮನದ ಮಾತುಗಳಿವು.