ನಕಲಿ ಗಾಂಧಿಯ ಮುಂದೆ ಅಡವಿಡುವುದೇಕೆ ತಮ್ಮ ಅಸಲಿ ಹಿರಿತನವ?

12 ಆಕ್ಟೋ 10

 

ಭ್ರಷ್ಟರು ರೂಪಿಸುವ ಎಲ್ಲಾ ಕಾನೂನುಗಳಲ್ಲೂ ನ್ಯೂನತೆಗಳು ನೂರಾರು

ಅವುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡು ಹಬ್ಬುವರು ಅರಾಜಕತೆ

 

ಈ ಎಲ್ಲಾ ಅರಾಜಕತೆಗೆ ಮೂಕಪ್ರೇಕ್ಷಕಿಯಾಗಿ ಸಮ್ಮತಿಯ ಸೂಚಿಸುವ

ಆ ವಿದೇಶಿ ಮಹಿಳೆಗೆ ಮಗನನ್ನು ಪ್ರಧಾನಿಯಾಗಿಸುವುದೇ ಧ್ಯೇಯವಂತೆ

 

ಆ ಮಗನೋ ಬೇಜವಾಬ್ದಾರನಾಗಿ ಮಠದ ಬಸವನಂತೆ ಊರೂರು

ಸುತ್ತಿ ಮೇಯುವುದನೇ ಮಾಡಿಕೊಂಡಂತಿದೆ ತನ್ನ ದಿನನಿತ್ಯದ ಕಾಯಕ

 

ನಾಲ್ಕು ವರುಷಗಳಲ್ಲಿ ನೋಡಿ ಆ ಬಸವನನ್ನೇ ಈ ದೇಶದ ಗದ್ದುಗೆಯಲಿ

ಕೂರಿಸಿ ವಿದೇಶಿ ಮಹಿಳೆ ಹೇಳುತ್ತಾಳೆ ಇನ್ನು ನಿಮಗೆ ಈತನೇ ನಾಯಕ

 

ಆತನ ಮುಂದೆ ಕೈಕಟ್ಟಿಕೊಂಡು ಆದೇಶಕ್ಕಾಗಿ ಕಾಯುತ್ತಾ ನಿಲ್ಲುತ್ತಾರೆ

ನಮ್ಮ ಘಟಾನುಘಟಿ ಸೂಟುಧಾರಿ ದೇಶೀ ನಾಯಕರುಗಳು ತಲೆಬಾಗಿ

 

ತಮ್ಮ ಅನುಭವ ಹಿರಿತನ ಎಲ್ಲವನ್ನೂ ನಮ್ಮ ಅಸಲಿ ದೇಶೀ ನಾಯಕರು

ನಕಲಿ ಗಾಂಧಿಮನೆತನದವರ ಮುಂದೆ ಅಡವಿಡುವುದು ಹೇಳಿ ಯಾಕಾಗಿ?

*********


ಸರ್ಕಾರಗಳ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು!

06 ಆಕ್ಟೋ 10

 

ನಮ್ಮ ಸರಕಾರಗಳು ಮಾಡಿದ
ಬಹುಮೂಲ್ಯ ಕೆಲಸವೆಂದರೆ
ಮಹಾತ್ಮ ಗಾಂಧಿಗೆ
ಭಾರತ ರತ್ನ ಪ್ರಶಸ್ತಿ
ಪ್ರದಾನ ಮಾಡದೇ ಇದ್ದುದು,
ಇಲ್ಲವಾಗಿದ್ದಲ್ಲಿ, ನೆಹರೂ,
ಇಂದಿರಾ, ಮಂಡೇಲಾ,
ಎಂಜಿಆರ್, ರಾಜೀವ ಗಾಂಧಿ,
ಲತಾರಿಗೆ, ಸರಿಸಮಾನರಾಗಿಯೇ,
ಮಹಾತ್ಮರು ಉಳಿದುಬಿಡುತ್ತಿದ್ದರು;

ನಮ್ಮ ಸರ್ಕಾರಗಳು ಮಾಡಿದ
ಅತೀ ಕೆಟ್ಟ ಕೆಲಸವೆಂದರೆ
ಹೆಚ್ಚಿನೆಲ್ಲಾ ನಗರಗಳಲ್ಲೂ
ರಸ್ತೆಗಳಿಗೆ ಮಹಾತ್ಮ ಗಾಂಧಿ ರಸ್ತೆ
ಎಂಬ ನಾಮಕರಣ ಮಾಡಿದುದು,
ಗಾಂಧಿ ತೋರಿದ ಹಾದಿಯಲ್ಲಿ
ನಡೆಯಬೇಕಾದ ಮಂದಿ ಈ
ರಸ್ತೆಗಳಲ್ಲೇ ಬೇಕಾದುದನ್ನೆಲ್ಲಾ
ಮಾಡಿ ಅದರಿಂದಲೇ ಒಳಗೊಳಗೇ
ತೃಪ್ತರಾಗಿ ಉಳಿಯುತಿಹರು!
**************


ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ!

27 ಸೆಪ್ಟೆಂ 10

ನಾಡಿನ ಸ್ವಾತಂತ್ರ್ಯಕ್ಕೆ ಹೋರಾಡಿದವರ
ಸಂಖ್ಯೆ ಲಕ್ಷದಷ್ಟಿದ್ದರೂ ನೆನೆಸುವುದಿಲ್ಲ ನಾವು ಅವರೆಲ್ಲರ

ಮರೆವು ಮನುಜನಿಗೆ ವರದಂತೆ
ಅದಕೆ ನಮ್ಮೆಲ್ಲಾ ಸರ್ಕಾರಗಳ ಕೊಡುಗೆಯೂ ಅಪಾರವಂತೆ

ಆ ಗಾಂಧಿ ಜನಿಸಿದ ನಾಡಿನಲ್ಲಿ
ನಕಲಿ ಗಾಂಧಿಗಳೇ ತುಂಬಿಕೊಂಡಿಹರಲ್ಲಾ ಸದ್ಯಕ್ಕೀಗ ಇಲ್ಲಿ

ಗಾಂಧಿ ನೆಹರೂ ಅವರುಗಳನ್ನುಳಿದು
ಅನ್ಯರ ನೆನೆಸಿದರೆ ಈ ನಾಡಿನಲ್ಲಿ ಪಾಪವೆಂದೆನಿಸುವುದು

ಭಾರತರತ್ನನಾದ ಆರೋಪಿ ರಾಜೀವ ಗಾಂಧಿ
ನಾಡಿನ ಅನ್ಯ ವೀರ ಪುತ್ರರತ್ನರ ನೆನೆಯರು ನಮ್ಮ ಮಂದಿ

ಚಿತ್ರ ನಟರ ಜನ್ಮದಿನಕ್ಕೆ ಇಲ್ಲಿ ಮೆರವಣಿಗೆ
ವೀರಯೋಧರ ನೆನಪುಗಳು ಸೀಮಿತವಾಗಿವೆ ಬರವಣಿಗೆಗೆ

ಭಗತನಂಥ ವೀರ ಇನ್ನೊಮ್ಮೆ ಹುಟ್ಟಲಾರ
ಹುಟ್ಟಿದರೂ ಭ್ರಷ್ಟರ ನಡುವೆ ನಿಷ್ಟನಾಗಿ ಹೆಚ್ಚುದಿನ ಬಾಳಲಾರ

ವೀರರ ನೆನಪಿನಲಿಂದು ಕಂಬನಿ ಮಿಡಿದು
ನಾಡಿಗಾಗಿ ಹೋರಾಡುವೆವೆನ್ನೋಣ ಸ್ವಾರ್ಥವನೆಲ್ಲಾ ತೊರೆದು!

************

ಇಂದು ಭಗತ್ ಸಿಂಗ್ ಜೀವಿಸಿದ್ದಿದ್ದರೆ ಆತನಿಗೆ ೧೦೩ ವರುಷ ತುಂಬುತ್ತಿತ್ತು!

 


ಈ ದೇಶದ ನಾಯಕರೆಲ್ಲಾ ಭ್ರಷ್ಟರಾಗಿದ್ದರೆ ಆಕೆಗೆ ಆರಾಮ!

06 ಆಗಸ್ಟ್ 10

ನಿಜವಾಗಿಯೂ ಬಹಳ ಕಿಲಾಡಿ ಹೆಂಗ್ಸು ಕಣ್ರೀ ಈ ಪರದೇಶೀ ಗಾಂಧಿ

ನಮ್ಮನ್ನೆಲ್ಲಾ ಮಾಡಿದ್ದಾಳಾಕೆ ಭ್ರಷ್ಟಾಚಾರಿಗಳ ಅಸಹಾಯಕ ಬಂಧಿ


ದೇಶದ ಉದ್ದಗಲಕ್ಕೂ ಭ್ರಷ್ಟ ರಾಜಕಾರಣಿಗಳದ್ದೇ ಈಗ ಕಾರುಬಾರು

ಬಯಲಾಗುತ್ತಲೇ ಇರುತ್ತವೆ ಹೊಸ ಹೊಸ ಕಾಂಡ ದಿನವೂ ಐದಾರು


ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಯಾವುದೂ ಉಳಿದಿಲ್ಲ ಈಗ

ಎಲ್ಲ ಕಡೆಯೂ ಭ್ರಷ್ಟರೇ ತುಂಬಿ ಹಾಳಾಗುತ್ತಿದೆ ಈ ದೇಶದ ಜನಾಂಗ


ರಾಜ್ಯಗಳಲಿ ಭ್ರಷ್ಟರಿದ್ದರೆ ರಾಜ್ಯ ಸರಕಾರಗಳು ಕಾರ್ಯ ನಡೆಸಬೇಕು

ರಾಜ್ಯ ಸರಕಾರಗಳೇ ಭ್ರಷ್ಟರಾದಾಗ ಕೇಂದ್ರ ಮಧ್ಯ ಪ್ರವೇಶಿಸಬೇಕು


ಕೇಂದ್ರ ಸರಕಾರದಲ್ಲೇ ಭ್ರಷ್ಟರಿರಲು ಜನ ಇನ್ನು ಯಾರನ್ನು ಕೇಳಬೇಕು

ಪ್ರಧಾನ ಮಂತ್ರಿಯ ಕೇಳಲೇ, ಛೇ.. ಇಲ್ಲ…  ಆತ ಆಕೆಯನ್ನೇ ಕೇಳಬೇಕು


ಪ್ರಧಾನಿಗಳಿಗೆ ಸಲಹೆ ನೀಡಲು ಮಂತ್ರಿಮಂಡಲ ಇರಬೇಕಾದ್ದು ಸಹಜ

ಆದರೆ ಮಂತ್ರಿ ಮಂಡಲ ಆಕೆಯ ಮಾತನ್ನೇ ಕೇಳಬೇಕು ಇದೂ ನಿಜ


ಎಂದೂ ಇದ್ದಿರದ ಈ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆ ಆಕೆಯೇ

ಹಾಗಾಗಿ ದೇಶದ ಎಲ್ಲಾ ಭ್ರಷ್ಟರಿಗೂ ಸಲುಗೆ ನೀಡಿರುವವರೂ ಆಕೆಯೇ


ದೇಶದ ನಾಯಕರುಗಳೆಲ್ಲಾ ಭ್ರಷ್ಟರಾಗಿ ತಮ್ಮ ತಿಜೋರಿ ತುಂಬುತಿರಲು

ತಮ್ಮನ್ನೇನೂ ಮಾಡಲಾರಳು ಎಂಬ ದೃಢ ನಂಬುಗೆ ಇಹುದು ಎಲ್ಲರಲೂ


ಕೊಟ್ರ‍ೋಚಿ, ಆಂಡರ‍್ಸನ್ ರನ್ನೇ ಬಚಾವಾಗಲು ಬಿಟ್ಟ ಮನೆಯವಳು

ನೀವೇ ಹೇಳಿ, ಇನ್ನು ಇವರನ್ನು ಆಕೆ ಏಕೆ ತರಾಟೆಗೆ ತೆಗೆದುಕೊಂಡಾಳು


ಈ ದೇಶದ ನಾಯಕರೆಲ್ಲಾ ಭ್ರಷ್ಟರಾಗಿ ತಮ್ಮಲ್ಲೇ ಇದ್ದರೆ ಆಕೆಗೂ ಆರಾಮ

ಆಕೆಯ ಸುದ್ದಿಗೆ ಬಾರದೇ ಇದ್ದರೆ, ಆಕೆಯ ಕಾರ್ಯಗಳು ಸದಾ ಸುಕ್ಷೇಮ

**************