ನೀಲ ಆಗಸ ಮಲಗಿದೆ-೨!

16 ಸೆಪ್ಟೆಂ 12

ನೀಲ ಆಗಸ ಮಲಗಿದೆ… ನೀಲ ಆಗಸ ಮಲಗಿದೆ!

ಕಣ್ಣ ನೀರಲಿ ಚಂದ್ರ ಮುಳುಗಿ, ರಾತ್ರಿ ಬರಡಾಯ್ತು
ನನ್ನ ಬಾಳಿನ ಏಕಾಂತ ಮುಗಿಯದಂತಾಯ್ತು!
ನಾನುಂಡ ನೋವು ಬಲು ಕಡಿಮೆ
ನೋವನ್ನೇ ಸುರಿದಿದೆ ನಿನ್ನೊಲುಮೆ

||ನೀಲ ಆಗಸ ಮಲಗಿದೆ||

ಹಳೆಯ ಗಾಥೆ ಕೇಳಿ ಬರುತಿದೆ ನೆನಪಿನಲೆಗಳಲಿ
ಜೊತೆಗೆ ನಡೆದವರು ಅಪರಿಚಿತರಿಂದೀ ಬಾಳ ಹಾದಿಯಲಿ
ನನ್ನ ಒಲವಿನ ದಾಹ ಆರಿಲ್ಲ
ಮನದೊಳಗೆ ಉಲ್ಲಾಸವೂ ಇಲ್ಲ!||ನೀಲ ಆಗಸ ಮಲಗಿದೆ||

http://www.youtube.com/watch?v=iK9PpYnmjwY


ನೀಲ ಆಗಸ ಮಲಗಿದೆ!

16 ಸೆಪ್ಟೆಂ 12

ನೀಲ ಆಗಸ ಮಲಗಿದೆ… ನೀಲ ಆಗಸ ಮಲಗಿದೆ

ಮಂಜು ಸುರಿದು, ರಾತ್ರಿ ನೆನೆದು, ತುಟಿಗಳದುರುತಿವೆ
ಎದೆಯ ಬಡಿತ ನುಡಿಯಲೆಳಸಿ ನುಡಿಯದೇ ಉಳಿದಿದೆ
ಗಾಳಿಯ ನಿನಾದ ಹೆಚ್ಚಿಲ್ಲ, ಸಮಯದ ನಡೆಯೂ ಬಿರುಸಿಲ್ಲ

||ನೀಲ ಆಗಸ ಮಲಗಿದೆ||

ಲಜ್ಜೆಯಿಂದಾ ನಾಚುತಾ ನನ್ನ ಬಾಹುಗಳಲಿ ನೀ ಬಂದೆ
ಮೋಡಗಳ ಮರೆಯಿಂದಾ ಚಂದ್ರ ಈಚೆ ಬಂದಂತೆ
ಎಂಥಾ ಏಕಾಂತ ಬರೀ ನೀನು ಮತ್ತು ನಾನು
ನಿಶಬ್ದವಾಗಿವೆ ಈ ಬುವಿ ಮತ್ತು ಬಾನು

||ನೀಲ ಆಗಸ ಮಲಗಿದೆ||

http://www.youtube.com/watch?v=lNTtNRc32FA

ಅಬ್ಬಾ… ಅವಳ ಮಾತು!

13 ಮೇ 12

“ಅಂದು ಏಕಾಂತದಲ್ಲಿ,
ನನ್ನ ಹಸ್ತದ ಮೇಲೆ 
ನಿನ್ನ ಹಸ್ತವನ್ನು ಇಟ್ಟು,
ನೀನು ನಿನ್ನ ಮುಗ್ಧ 
ಮನಸ್ಸಿನ ಪರಿಚಯವನ್ನು
ನನಗೆ ಮಾಡಿಸಿದಾಗ,
ನಾನು ಕಿಂಚಿತ್ತೂ 
ವಿರೋಧ ವ್ಯಕ್ತಪಡಿಸದೇ, 

“ನನ್ನ ಸ್ಪರ್ಶ
ನಿನ್ನ ಪಾಲಿಗೆ 
ಓರ್ವ ಮಾತೆಯ
ಸ್ಪರ್ಶದಂತಿರಲಿ” 

ಎಂದು ಒಳಗೊಳಗೇ 
ಹಾರೈಸಿದ್ದು,
ನಿನ್ನ ಮೇಲೆ ನನಗೆ
ಪ್ರೀತಿ ಇರಲಿಲ್ಲವೆಂದಲ್ಲ,

ಆದರೆ, ನಮ್ಮ ಪ್ರೀತಿ 
ಕೆಡದೇ ಈಗಿರುವ ಹಾಗೆಯೇ
ಸದಾ ಇರಲಿ ಎಂದು ಅಷ್ಟೇ!”
********************


ಎದೆಯಲ್ಲಿ ಉರಿತ… ಕಂಗಳಲ್ಲಿ ಚಂಡಮಾರುತ!

24 ಫೆಬ್ರ 11

 

||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆ
ಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||

ಹೃದಯವಿದ್ದವರು ಮಿಡಿತಕ್ಕೆ ಕಾರಣ ಹುಡುಕಿಕೊಳ್ಳಬೇಕಿತ್ತು
ಪ್ರತಿ ಜೀವವೂ ಗರಬಡಿದ ನಿರ್ಜೀವ ಕಲ್ಲಂತೆ ಅದೇಕಾಯ್ತು

||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆ
ಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||

ಸ್ನೇಹಿತರೇ, ಹೇಳಿ ಏಕಾಂತದ ಈ ತಾಣ ಯಾವುದಿಹುದು
ನನ್ನ ದೃಷ್ಟಿ ಹೋದೆಡೆಯೆಲ್ಲಾ ಅದೇಕೆ ನಿರ್ಜನವಾಗಿಹುದು

||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆ
ಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||

ನನ್ನಲ್ಲಿ ಇಂದು ಏನಾದರೂ ಹೊಸತನವು ಕಂಡುಬರುತಿಹುದೇ
ನನ್ನನ್ನು ಕಂಡ ಕನ್ನಡಿಯೂ ಅದೇಕೆ ಈ ಪರಿ ಸುಸ್ತಾದಂತಿದೆ

||ಎದೆಯೊಳಗುರಿತ, ಕಂಗಳಲ್ಲಿ ಚಂಡಮಾರುತದಂತಿಹುದೇಕೆ
ಈ ನಗರದ ಪ್ರತಿ ವ್ಯಕ್ತಿಯೂ ಗೊಂದಲಮಯನಾಗಿಹನದೇಕೆ||
****************************

ಇದೂ ಒಂದು ಹಿಂದೀ ಚಲನ ಚಿತ್ರ ಗೀತೆಯ ಭಾವಾನುವಾದ.

ಚಿತ್ರ: ಗಮನ್
ಸಂಗೀತ: ಜಯದೇವ್
ಗಾಯಕರು: ಸುರೇಶ್ ವಾಡೇಕರ್

ಮೂಲ ಗೀತೆ:

ಸೀನೇ ಮೆ ಜಲನ್ ಆಂಖೋಂ ಮೆ ತೂಫಾನ್ ಸಾ ಕ್ಯೋಂ ಹೈ
ಇಸ್ ಶಹರ್ ಮೆ ಹರ್ ಶಕ್ಸ್ ಪರೇಶಾನ್ ಸಾ ಕ್ಯೋಂ ಹೈ

ದಿಲ್ ಹೈ ತೊ ದಢಕ್ ನೇ ಕಾ ಬಹಾನಾ ಕೋಯೀ ಡೂಂಡೇ
ಪತ್ಥರ್ ಕಿ ತರಹ್ ಬೇಹಿಸಾ ಬೇಜಾನ್ ಸಾ ಕ್ಯೋಂ ಹೈ

ತನ್ ಹಾಯಿ ಕೀ ಏ ಕೌನ್ ಸಾ ಮಂಜಿಲ್ ಹೈ ರಫೀಕೋಂ
ತಹದ್ದೇ ನಝರ್ ಏಕ್ ಬಯಾಬಾನ್ ಸಾ ಕ್ಯೋಂ ಹೈ

ಕ್ಯಾ ಕೋಯೀ ನಯೀ ಬಾತ್ ನಝರ್ ಆತೀ ಹೈ ಹಮ್ ಮೆ
ಆಯಿನಾ ಹಮೇ ದೇಖ್ ಕೆ ಹೈರಾನ್ ಸಾ ಕ್ಯೋಂ ಹೈ

********************************


ವಾಸ್ತವ!

06 ಮೇ 10

 

ಸಖೀ

ಏಕಾಂತದಲ್ಲಿದ್ದಾಗ

ನಮ್ಮ ಮನದಲೇಳುವ

ಭಾವನೆಗಳ ಅಲೆಗಳನು

ಸ್ವತಂತ್ರವಾಗಿರಲು

ಬಿಟ್ಟುಬಿಡೋಣ

ಗರಿಗೆದರಿ ಹಾರಲಿಚ್ಚಿಸುವ

ಬಯಕೆಗಳ ಹಕ್ಕಿಗಳನು

ನಮ್ಮ ಕಲ್ಪನೆಯ ಆಗಸದಲಿ

ಹಾರಬಿಡೋಣ

 

ನಿಜಕ್ಕೂ ಅದರಿಂದೊಂದು

ತೆರನಾದ ಆನಂದವಾಗುತ್ತದೆ

ಯಾವುದೇ ಭಯಾತಂಕಗಳಿಲ್ಲದೇ

ಸ್ವಚ್ಚಂದವಾಗಿ, ಎಲ್ಲೆ ಮೀರಿ

ಸುತ್ತಿ ಬರುವ ಆ ಹಕ್ಕಿಗಳು

ನಮ್ಮ ಮನಕೆ ಮುದ ನೀಡುತ್ತವೆ

 

ನಮ್ಮದೇ ಕಲ್ಪನಾ ಲೋಕ

ನಮಗಿಷ್ಟವಾದ ಜನರೇ

ಅಲ್ಲಿ, ನಮ್ಮ ಸುತ್ತ ಮುತ್ತ

ಅಲ್ಲಿ ಕೇಳಿ ಬರುತ್ತವೆ

ನಮಗಿಷ್ಟವಾದ

ಮಾತುಗಳೇ ಅತ್ತ – ಇತ್ತ

 

ಒಂದೆಡೆ ವಿರಹದ

ನೋವಿದ್ದರೂ ಆಗ

ಅದೆಂತಹ ಆನಂದ

ಆದರೆ ಮಿಲನದಲಿ

ನಮಗೆ ಬರೇ

ಭಯ – ಆತಂಕಗಳಲ್ಲದೇ

ಎಲ್ಲಿದೆ ಆನಂದ?

 

ಮುಖಾಮುಖಿಯಾದಾಗ

ಒಬ್ಬರನ್ನೊಬ್ಬರು ಮನಸಾರೆ

ನೋಡಲಿಚ್ಚಿಸುವ ಕಣ್ಣುಗಳಿಗೆ

ಸದಾ ಇರುತ್ತದೆ ಈ ಸಮಾಜದ

ಹದ್ದು ಕಣ್ಣುಗಳ ಭಯ

ಮನಬಿಚ್ಚಿ ಮಾತನಾಡಲು

ಇಚ್ಚಿಸುವ ನಮ್ಮ

ನಾಲಿಗೆಗಳಿಗೆ, ಕಿವಿಗಳಾಗಿ,

ನಮ್ಮ ಮಾತುಗಳನಾಲಿಸುವ

ಸುತ್ತಲಿನ ಗೋಡೆಗಳ ಭಯ

 

ನಿಜ ನುಡಿಯಲೇ ಸಖೀ

ಇದೇ ವಾಸ್ತವ

ಇದೇ ನಿತ್ಯ ಸತ್ಯ

ಇಂದೂ – ಮುಂದೆಂದೂ!

**************