ಸ್ತಬ್ಧ ಚಿತ್ರ!

10 ಸೆಪ್ಟೆಂ 12

ಸಖೀ,
ಆ ದಿನಗಳಲಿ
ಗಂಜಿ
ಉಪ್ಪಿನಕಾಯಿ
ಹುರುಳಿ ಸಾರು
ಕುಚ್ಚಲಕ್ಕಿ ಅನ್ನ;

ಉಂಬಾಗೆಲ್ಲಾ
ಜೊತೆಗಿದ್ದರು 
ತಮ್ಮ ತಂಗಿ
ಅಕ್ಕ ಅಣ್ಣ;

ಇಂದು
ನೋಡು
ಈ ತಿನಿಸುಗಳ
ಹೆಸರುಗಳೇ
ವಿಚಿತ್ರ;

ಮೌನದಲಿ
ಉಣುತಿಹುದು
ಅಲ್ಲೊಂದು 
ಇಲ್ಲೊಂದು 
ಜೀವ,
ಮನೆಯೊಂದು
ಸ್ಥಬ್ಧ ಚಿತ್ರ!
*****


ಉಪ್ಪಿನಕಾಯಿ!!!

10 ಜೂನ್ 09
ಸಖೀ,
ಕೇಳಿದೆಯಾ ನೀ
ನನ್ನ ಕತೆ
ಕವಿತೆಗಳಿಗೆ
ಕಿವಿಗೊಟ್ಟು ಸೋತು
ನನ್ನಾಕೆ ನನಗೆ
ನೀಡಿದ ಈ ಕಿವಿಮಾತು:

ನಿಮ್ಮ ಈ
ಕತೆ – ಕವಿತೆಗಳೆಲ್ಲಾ
ಬರೇ ಪುಸ್ತಕದ
ಬದನೆಕಾಯಿ

ಇದಕೆ ನೀವು
ಮಾಡಿದ ಖರ್ಚಿನಲಿ
ತಂದಿದ್ದರೆ ನಾಲ್ಕು
ಕೇಜಿ ನಿಂಬೇಗಾಯಿ

ಹಾಕುತ್ತಿದ್ದೆ ನಾನು
ಮಳೆಗಾಲವಿಡೀ
ತಿನ್ನಲಾಗುವಷ್ಟು
ಉಪ್ಪಿನಕಾಯಿ!
*-*-*-*-*-*-*